ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ʻಸಲಾರ್ʼ ಆರ್ಭಟಕ್ಕೆ ಲೋಕಲ್ ಮಾರ್ಕೆಟ್ ಅಲ್ಲ ಗ್ಲೋಬಲ್ ಮಾರ್ಕೆಟ್ ಕೂಡ ಶೇಕ್ ಶೇಕ್ ಆಗ್ತಿದೆ. ರೆಬೆಲ್ ಸ್ಟಾರ್ ಪ್ರಭಾಸ್ ಉರುಫ್ ಡೈನೋಸಾರ್ ಕೊಟ್ಟ ಹೊಡೆತಕ್ಕೆ ಗ್ಲೋಬಲ್ ಗಲ್ಲಾಪೆಟ್ಟಿಗೆಯೂ ಚೆಲ್ಲಾಪಿಲ್ಲಿಯಾಗ್ತಿದೆ. ಇದಕ್ಕೆ ಸಾಕ್ಷಿ 625 ಕೋಟಿ ಕಲೆಕ್ಷನ್ ರಿಪೋರ್ಟ್. ಯಸ್, ಸಲಾರ್ ಸಿನಿಮಾ ರಿಲೀಸ್ ಆಗಿ ಒಂಭತ್ತು ದಿನ ಕಳೀತು. ಈ ಒಂಭತ್ತು ದಿನದಲ್ಲಿ ವಿಶ್ವಮಾರುಕಟ್ಟೆಯಲ್ಲಿ ಒಟ್ಟು 625 ಕೋಟಿ ಗಳಿಕೆ ಕಂಡಿದೆಯಂತೆ. ಈ ಬಗ್ಗೆ ಖುದ್ದು ಸಲಾರ್ ಟೀಮ್ ಪೋಸ್ಟರ್ ಹರಿಬಿಟ್ಟಿದೆ.
ಮೊದಲ ದಿನವೇ ವರ್ಲ್ಡ್ ವೈಡ್ ಮಾರ್ಕೆಟ್ನಲ್ಲಿ 176.52 ಕೋಟಿ ಲೂಟಿ ಮಾಡಿ ಕೇಕೆಹಾಕಿದ್ದ ಸಲಾರ್ ಸಿನಿಮಾ, ಎರಡನೇ ದಿನ 101.39 ಕೋಟಿ ಕಲೆಕ್ಷನ್ ಮಾಡಿ ಸೀಟಿ ಹೊಡೆದಿತ್ತು. ಮೂರನೇ ದಿನ 95.24 ಕೋಟಿ, ನಾಲ್ಕನೇ ದಿನ 76.91 ಕೋಟಿ ಹೀಗೆ ಕೋಟಿ ಕೋಟಿ ಜೇಬಿಗಿಳಿಸಿಕೊಂಡು ಗಹಗಹಿಸಿತ್ತು. ಇದೀಗ, ಒಂಭತ್ತು ದಿನ ಕಳೆಯುವಷ್ಟರಲ್ಲಿ ಟೋಟಲ್ 625 ಕೋಟಿ ಉಡೀಸ್ ಮಾಡಿದೆ. ಬಾಕ್ಸ್ ಆಫೀಸ್ನಲ್ಲಿ ʻಸಲಾರ್ʼ ಅಬ್ಬರ ಆರ್ಭಟ ಎರಡನೇ ವಾರವೂ ಮುಂದುವರೆದಿದ್ದು, ಈ ವಾರಾಂತ್ಯದಲ್ಲಿ 1000 ಕೋಟಿ ಕ್ಲಬ್ ಸೇರುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಪ್ರಭಾಸ್, ಪ್ರಥ್ವಿರಾಜ್ ಸುಕುಮಾರನ್, ಶ್ರುತಿಹಾಸನ್, ಜಗಪತಿಬಾಬು, ಬಾಬಿ ಸಿಂಹ, ಟಿನ್ನು ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ತಾರಾಬಳಗದ ಈ ಚಿತ್ರಕ್ಕೆ ಜಾಗತಿಕ ಮೆಚ್ಚುಗೆ ವ್ಯಕ್ತವಾಗ್ತಿದೆ.
ಕೆಜಿಎಫ್ ಮಾಸ್ಟರ್ ಮೈಂಡ್ ಪ್ರಶಾಂತ್ ನೀಲ್ ಹಾಗೂ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕಾಂಬೋ ಕ್ಲಿಕ್ ಆಗಿದೆ. ಸೋಲಿನ ಸುಳಿಗೆ ಸಿಕ್ಕಿ ಒದ್ದಾಡಿದ್ದ ಡಾರ್ಲಿಂಗ್ ಪ್ರಭಾಸ್ಗೆ ಗೆಲುವು ದಕ್ಕಿದೆ. ಕೆಜಿಎಫ್ ನಷ್ಟೇ ಮ್ಯಾಸೀವ್ ಹಿಟ್ ಕೊಡುವ ನೀಲ್ ಕನಸು ನನಸಾಗಿದೆ. ಇತ್ತ ಹೊಂಬಾಳೆಯ ನಿರೀಕ್ಷೆ ಕೂಡ ನಿಜವಾಗಿದೆ. ರೆಕಾರ್ಡ್ ಬ್ರೇಕಿಂಗ್ ಬ್ಲಾಕ್ಬಸ್ಟರ್ ಸಲಾರ್ನಿಂದ ವಿಜಯ್ ಕಿರಗಂದೂರ್ ಖಜಾನೆ ಕೇಕೆ ಹೊಡೆಯುತ್ತಿದೆ. 270 ಕೋಟಿ ಬಂಡವಾಳ ಹೂಡಿ ಖಾನ್ಸಾರ್ ಕೋಟೆ ಕಟ್ಟಿದ ಮಾಲೀಕರಿಗೆ ಹೆಸರು ದುಡ್ಡು ಕೀರ್ತಿ ಎಲ್ಲವೂ ದಕ್ಕಿದೆ. ಕೆಜಿಎಫ್, ಕಾಂತಾರ ನಂತರ ಸಲಾರ್ ಸಿನಿಮಾದಿಂದನೂ ದೊಡ್ಡ ಮಟ್ಟದ ಗೆಲುವು ಕಂಡಿರೋ ಹೊಂಬಾಳೆ, ಮತ್ತಷ್ಟು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ಗಳತ್ತ ಚಿತ್ತ ನೆಟ್ಟಿದೆ. ಬಘೀರ, ಯುವ, ಟೈಸನ್, ರಘು ತಾತಾ, ಕಾಂತಾರ-1, ರಿಚರ್ಡ್ ಆಂಟನಿ ಸೇರಿದಂತೆ ಹಲವು ಸಿನಿಮಾಗಳು ನಿರ್ಮಾಣದ ಹಂತದಲ್ಲಿವೆ. ಈ ವರ್ಷ ಒಂದೊಂದಾಗಿ ತೆರೆಗೆ ಬರಲು ಭರದಿಂದ ಸಜ್ಜಾಗುತ್ತಿವೆ