Ram Charan: ʻಆರ್‌ಆರ್‌ಆರ್ʼ ಸಿನಿಮಾ ಮೂಲಕ ಗ್ಲೋಬಲ್ ಲೆವೆಲ್‌ನಲ್ಲಿ ಖ್ಯಾತಿ ಗಳಿಸಿಕೊಂಡಿರುವ ನಟ ರಾಮ್ ಚರಣ್(Ram Charan). ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಗ್ಲೋಬಲ್ ಸ್ಟಾರ್ ಹೊಸದೊಂದು ಸಿನಿಮಾ ಅನೌನ್ಸ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆದ ಫೋಟೋ ಅಂಡ್ ಪೋಸ್ಟ್ ನೋಡಿ ಮೆಗಾ ಪವರ್ ಸ್ಟಾರ್ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಇದಕ್ಕೆ ಕಾರಣ ʻರಂಗಸ್ಥಳಂʼ ಸಿನಿಮಾ.
ರಾಮ್ ಚರಣ್(Ram Charan) ಹೊಸ ಸಿನಿಮಾ ಒಪ್ಪಿಕೊಂಡಿರುವ ಪೋಸ್ಟ್ ಹಂಚಿಕೊಂಡಿದ್ದಾರೆ. ನಿರ್ದೇಶಕ ಸುಕುಮಾರ್(Sukumar) ಜೊತೆ ಇರುವ ಫೋಟೋ ಶೇರ್ ಮಾಡಿ ತಮ್ಮ 17ನೇ ಸಿನಿಮಾದ ಅಪ್‌ಡೇಟ್ ನೀಡಿದ್ದಾರೆ. ಈ ಮೂಲಕ ʻರಂಗಸ್ಥಳಂʼ ಜೋಡಿ ಮತ್ತೆ ಒಂದಾಗಿದೆ. ʻರಂಗಸ್ಥಳಂʼ ಸಿನಿಮಾ ನೋಡಿದವರಿಗೆ ಇವರ ಪವರ್ ಗೊತ್ತಿರುತ್ತೆ. ಇದೀಗ ಮತ್ತೆ ಇಬ್ಬರು ಒಂದಾಗಿರೋದು ಟಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಇದು ʻರಂಗಸ್ಥಳಂʼ ಸೀಕ್ವೆಲ್ ಆಗಲಿದೆಯಾ ಎಂಬ ಚರ್ಚೆ ಕೂಡ ನಡೆಸುತ್ತಿದ್ದಾರೆ ಮೆಗಾ ಪವರ್ ಸ್ಟಾರ್ ಅಭಿಮಾನಿಗಳು.
ಸದ್ಯ, ಸುಕುಮಾರ್ ʻಪುಷ್ಪ-2ʼ(Pushpa-2) ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಇತ್ತ ರಾಮ್ ಚರಣ್ ಕೂಡ ʻಗೇಮ್ ಚೇಂಜರ್ʼ(Game Changer) ಸಿನಿಮಾದಲ್ಲಿ ಬ್ಯುಸಿ ಇದ್ದಾರೆ, ಇದಾದ ನಂತರದಲ್ಲಿ ಸುಕುಮಾರ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ. ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್(Mythri Movie Makers) ಈ ಪವರ್ ಫುಲ್ ಜೋಡಿ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಸದ್ಯದಲ್ಲೇ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರ ಬೀಳಲಿದೆ.