ರಾಕಿಂಗ್ ಸ್ಟಾರ್ ಯಶ್ ಜೊತೆ ಗೂಗ್ಲಿ ಚಿತ್ರದಲ್ಲಿ ನಟಿಸಿ ಕನ್ನಡಿಗರ ಕ್ರಷ್ ಆದ ಸ್ವಾತಿ ಉರುಫ್ ಕೃತಿ ಕರಬಂಧ(Kriti Kharbanda) ಸಿಂಗಲ್ ಲೈಫ್ಗೆ ಗುಡ್ ಬೈ ಹೇಳಿದ್ದಾರೆ. ತಮ್ಮ ಬಹುಕಾಲದ ಗೆಳೆಯ ಪುಲ್ಕಿತ್ ಸಾಮ್ರಾಟ್ (Pulkit Samrat) ಜೊತೆ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಯಸ್, ಬಾಲಿವುಡ್ನ ಪ್ರಣಯ ಪಕ್ಷಿಗಳ ಪೈಕಿ ಒಂದಾಗಿದ್ದ ಈ ಜೋಡಿ ವೈವಾಹಿಕ ದಾಂಪತ್ಯಕ್ಕೆ ಕಾಲಿಟ್ಟಿದ್ದೆ. ದೆಹಲಿಯಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದೆ. ಕುಟುಂಬಸ್ಥರು, ಆಪ್ತರು ಮಾತ್ರವಲ್ಲದೇ ಬಾಲಿವುಡ್ ಅನೇಕ ಸ್ಟಾರ್ ನಟ ನಟಿಯರು ಕೃತಿ ಹಾಗೂ ಪುಲ್ಕಿತ್ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ನವಜೋಡಿಗೆ ಶುಭಹಾರೈಸಿದ್ದಾರೆ.
ಕೃತಿ ಹಾಗೂ ಪುಲ್ಕಿತ್ ಇಬ್ಬರು ಪ್ರೇಮಿಗಳು. ಪಾಗಲ್ಪಂತಿ ಸೆಟ್ನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಆ ಪ್ರೀತಿನಾ ಜೋಪಾನ ಮಾಡ್ಕೊಂಡ ಈ ಜೋಡಿ ಈಗ ಬಾಳಪಯಣದಲ್ಲಿ ಒಂದಾಗಿದೆ. ಪರಸ್ಪರ ಪ್ರೀತಿಸಿದ ಒಂದಾದ ಖುಷಿಯಲ್ಲಿರೋ ಈ ಕ್ಯೂಟ್ ಕಪಲ್ಸ್, ಸೋಷಿಯಲ್ ಮೀಡಿಯಾದಲ್ಲಿ ಮ್ಯಾರೇಜ್ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಅಭಿಮಾನಿಗಳಿಂದ ಬೆಸ್ಟ್ ವಿಶಸ್ ಹರಿದುಬರುತ್ತಿದ್ದು, ಪುಲ್ಕಿತ್ ಹಾಗೂ ಕೃತಿ ದಿಲ್ ಖುಷ್ ಆಗಿದ್ದಾರೆ. ವಿಶೇಷ ಅಂದರೆ ಇಬ್ಬರು ದೆಹಲಿ ಮೂಲದವರು. ಅಲ್ಲೇ ಹುಟ್ಟಿ ಬೆಳೆದಿದ್ದರಿಂದ, ಎರಡು ಕುಟುಂಬಗಳು ದೆಹಲಿಯಲ್ಲೇ ನೆಲೆಸಿದ್ದರಿಂದ, ಈಗ ಮದುವೆ ಕೂಡ ದೆಹಲಿ ಅಂಗಳದಲ್ಲೇ ವಿಜೃಂಭಣೆಯಿಂದ ಮಾಡ್ಕೊಂಡಿದ್ದಾರೆ.
ಅಂದ್ಹಾಗೇ, ಕೃತಿ ತೆಲುಗು ಸಿನಿಮಾದಿಂದ ಕರಿಯರ್ ಶುರು ಮಾಡಿದವರು. ಚಿರು ಚಿತ್ರದ ಮೂಲಕ ಕನ್ನಡಕ್ಕೆ ಬಂದರು. ಪ್ರೇಮ್ ಅಡ್ಡ, ಗಲಾಟೆ, ಗೂಗ್ಲಿ, ಸೂಪರ್ ರಂಗ, ಬೆಳ್ಳಿ, ಮಾಸ್ತಿಗುಡಿ. ದಳಪ̧ತಿ ಹೀಗೆ ಅನೇಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದರು. ಅದರಲ್ಲಿ ಯಶ್ ಜೊತೆಗಿನ ಗೂಗ್ಲಿ ಸಿನಿಮಾ ಕೃತಿಗೆ ಬಿಗ್ ಬ್ರೇಕ್ ನೀಡ್ತು. ಅಷ್ಟಕ್ಕೂ, ಕೃತಿ ಬರೀ ಕನ್ನಡಕ್ಕೆ ಸೀಮಿತವಾಗದೇ ಎಲ್ಲಾ ಭಾಷೆಯ ಸಿನಿಮಾಗಳಿಗೂ ಬಣ್ಣ ಹಚ್ಚಿದರು. ಕೊನೆಗೂ ಬಿಟೌನ್ ಅಂಗಳದಲ್ಲಿ ಸೆಟಲ್ ಆದರು. ಅಲ್ಲೇ ಪುಲ್ಕಿತ್ನ ಪ್ರೀತಿಸಿ ಈಗ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ. ಹೊಸಬಾಳಿನ ಹೊಸಿಲಲ್ಲಿ ನಿಂತಿರೋ ಈ ಜೋಡಿಗೆ ಶುಭವಾಗಲಿ.