ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಕಥಾಹಂದರದ ನಮ್ಮ ನಡುವೆ ಘಟಿಸುವ ಸಂಗತಿಗಳನ್ನೇ ಹೇಳುವ,ಸಾಮಾಜಿಕ ಸಂದೇಶ ಸಾರುವ, ಜಾಗೃತಿ ಮೂಡಿಸುವ ಚಿತ್ರಗಳು ಬರ್ತಿವೆ. ಇತ್ತಿಚಿಗಂತೂ ಭಿನ್ನ ವೆನಿಸೋ ಪ್ರಯೋಗಾತ್ಮಕ , ಫ್ಯಾಮಿಲಿ ಸೆಂಟಿಮೆಂಟ್,ಥ್ರಿಲ್ಲರ್, ಹೀಗೆ ಸಾಕಷ್ಟು ಬಗೆಯಲ್ಲಿ ಚಿತ್ರಗಳು ಸೆಟ್ಟೇರ್ತಿವೆ. ಹೀಗೆ ತಯಾರದಾದ ವಿಭಿನ್ನ ಕಥಾಹಂದರದ ‘ಗ್ರೇ ಗೇಮ್ಸ್ ಚಿತ್ರದ ಟೀಸರ್ ರಿಲೀಸ್ ಆಗಿದೆ.ಬಿಡುಗಡೆಯಾಗಿರುವ ಟೀಸರ್ ನಲ್ಲಿ ತಂತ್ರಜ್ಞಾನದ ಯುಗದಲ್ಲಿ ಆನ್ ಲೈನ್ ಗೇಮ್ ಗಳಿಂದ ಆಗುವ ನಿಜ,ಸುಳ್ಳಿನ ಅರಿವನ್ನ ತುಂಬಲಾಗಿದೆ.

ಇದೊಂದು ರೋಮಾಂಚಕ ಕೌಟುಂಬಿಕ ಸಿನ್ಮಾ. ಇದ್ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್ ರಾಘವೇಂದ್ರ ಮನಶಾಸ್ತ್ರಜ್ಞರ ಪಾತ್ರಕ್ಕೆ , ಶ್ರುತಿ ಪ್ರಕಾಶ್ ಚಿತ್ರ ನಟಿಯಾಗಿ, ಭಾವನಾ ರಾವ್ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ , ಅಪರ್ಣಾ, ರವಿ ಭಟ್ ಮತ್ತು ಪ್ರಮುಖ ಪಾತ್ರ ಅಂದ್ರೆ ಗೇಮರ್ ಪಾತ್ರದಲ್ಲಿ ಜೈ ನಟಿಸಿದ್ದಾರೆ.

ಗ್ರೇ ಗೇಮ್ಸ್ ಚಿತ್ರವನ್ನ ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಗಂಗಾಧರ ಸಾಲಿಮಠ್ ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಆನ್ಲೈನ್ ಗೇಮಿಂಗ್ ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಬೆಳಕು ಚೆಲ್ಲಲಾಗಿದೆ. ರಿಯಾಲಿಟಿ ಮತ್ತು ವರ್ಚುವಾಲಿಟಿ ಜಗತ್ತಿನ ಕಥೆಯುಳ್ಳ, ನುರಿತ ಕಲಾವಿದರು ಅಭಿನಯಿಸಿರುವ ಈ ಚಿತ್ರ, ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ ಅವರ ವಾಸ್ತವದ ಗ್ರಹಿಕೆಗೆ ಸವಾಲು ಹಾಕುತ್ತದೆ ಎಂಬ ವಿಶ್ವಾಸವಿದೆ ಎನ್ನುತ್ತಾರೆ ನಿರ್ದೇಶಕ ಗಂಗಾಧರ ಸಾಲಿಮಠ.ವರುಣ ಡಿಕೆ ಛಾಯಾಗ್ರಾಹಣ ಚಿತ್ರದಲ್ಲಿದ್ದು, ಆನಂದ ಹೆಚ್.ಮುಗದ್ ನಿರ್ಮಿಸಿದ್ದಾರೆ. ಹಾಗು ಸತೀಶ ಗ್ರಾಮಪುರೋಹಿತ, ಅರವಿಂದ ಜೋಶಿ, ಮತ್ತು ಡೋಲೇಶ್ವರ್ ರಾಜ್ ಸುಂಕು ಸಹ-ನಿರ್ಮಾಣ ಮಾಡಿದ್ದಾರೆ. ಈಗಿನ ತಂತ್ರಜ್ಞಾನ ಯುಗ ನಮ್ಮನ್ನ ಎಂಥಹ ಗೊಂದಲಕ್ಕೀಡು ಮಾಡಿದೆ? ಮತ್ತು ನಾವು ಅದಕ್ಕೆ ಹೇಗೆ ದಾಸರಾಗಿದ್ದೇವೆ,ಅದ್ರಿಂದ ನಮಗಾಗ್ತಿರೋ ತೊಂದರೆಗಳೇನು ಅನ್ನೋದನ್ನ ಅರ್ಥವಾಗುವಂತೆ ಹೇಳುವ ಪ್ರಯತ್ನ ಗ್ರೇ ಗೇಮ್ಸ್ ಚಿತ್ರದಿಂದ ನಡೆದಂತಿದೆ.

ಟೀಸರ್ ನೋಡಿ ಮೆಚ್ಚಿದ ಸಿನಿಪ್ರಿಯರಿಗೆ ಚಿತ್ರದ ಮೇಲಿನ ಭರವಸೆ,ನಿರೀಕ್ಷೆಗಳು ಹೆಚ್ಚಿವೆ.