Ranveer Singh: ಬಾಲಿವುಡ್ ಸಿನಿದುನಿಯಾದಲ್ಲಿ ಸೌತ್ ಸಿನಿರಂಗದ ಟ್ಯಾಲೆಂಟೆಡ್ ನಿರ್ದೇಶಕರ ಹವಾ ಜೋರಾಗಿ ನಡೆಯುತ್ತಿದೆ. ಆಫ್ಟರ್ ಕೊರೋನಾ ಬಿಟೌನ್ನಲ್ಲಿ ಅಲ್ಲೊಂದು ಇಲ್ಲೊಂದು ಹಿಟ್ ಸಿನಿಮಾಗಳು ಸೌಂಡ್ ಮಾಡಿದ್ದು ಬಿಟ್ಟರೆ ಹೇಳಿಕೊಳ್ಳೋ ಗೆಲುವು ಸಿಕ್ಕಿಲ್ಲ. ಆದ್ರಿಂದ ಸೌತ್ ನಿರ್ದೇಶಕರ ಮೊರೆ ಹೋಗುತ್ತಿದ್ದಾರೆ ಸ್ಟಾರ್ ನಟರು. ಅದಕ್ಕೀಗ ಲೇಟೆಸ್ಟ್ ಎಕ್ಸಾಂಪಲ್ ರಣವೀರ್ ಸಿಂಗ್(Ranveer Singh).
ಶಾರೂಕ್ ಖಾನ್ ‘ಜವಾನ್’, ರಣಬೀರ್ ‘ಅನಿಮಲ್’ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದ ಬೆನ್ನಲ್ಲೇ ಸೌತ್ ನಿರ್ದೇಶಕರಿಗೆ ಬಿಟೌನ್ನಿಂದ ಡಿಮ್ಯಾಂಡ್ ಹೆಚ್ಚಾಗಿದೆ. ಟಾಲಿವುಡ್, ಕಾಲಿವುಡ್ ನಿರ್ದೇಶಕರ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಕಮಾಲ್ ಮಾಡುತ್ತಿದ್ದಂತೆ ಬಿಟೌನ್ನಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ. ಇದೀಗ ಹೊಸ ಕಾಂಬಿನೇಶನ್ ಬಿಟೌನ್ನಲ್ಲಿ ಸೌಂಡ್ ಮಾಡ್ತಿದೆ. ಖ್ಯಾತ ನಟ ರಣವೀರ್ ಸಿಂಗ್(Ranveer Singh) ‘ಹನು-ಮಾನ್’(Hanu-Man) ನಿರ್ದೇಶಕ ಪ್ರಶಾಂತ್ ವರ್ಮಾ(Prasanth Varma) ಜೊತೆ ಹೊಸ ಚಿತ್ರಕ್ಕೆ ಕೈ ಜೋಡಿಸಿದ್ದಾರೆ ಎನ್ನಲಾಗ್ತಿದೆ.
‘ಹನು-ಮಾನ್’(Hanu-Man) ಚಿತ್ರ ಬ್ಲಾಕ್ಬಸ್ಟರ್ ಹಿಟ್ ಕಂಡ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ(Prasanth Varma)ಗೆ ಬೇಡಿಕೆ ಹೆಚ್ಚಾಗಿದೆ. ಬಿಟೌನ್ ಸ್ಟಾರ್ ನಟ ರಣವೀರ್(Ranveer Singh) ಸಿನಿಮಾ ನೋಡಿ ಥ್ರಿಲ್ ಆಗಿದ್ದಾರೆ. ಪ್ರಶಾಂತ್ ವರ್ಮಾ ನಿರ್ದೇಶನಕ್ಕೆ ಫಿದಾ ಆಗಿದ್ದಾರೆ. ಅವರ ಜೊತೆ ಸಿನಿಮಾ ಮಾಡಲು ಒಂದೆರಡು ಸುತ್ತಿನ ಮಾತಿಕತೆಯೂ ಆಗಿದೆಯಂತೆ. ಪ್ರಶಾಂತ್ ವರ್ಮಾ ಕೂಡ ಇದಕ್ಕೆ ಓಕೆ ಎಂದಿದ್ದಾರೆ. ರಣವೀರ್ಗೆಂದು ಪ್ರಶಾಂತ್ ಕಥೆಯೊಂದನ್ನು ಹೇಳಿದ್ದಾರಂತೆ. ನಿರ್ದೇಶಕರ ನರೇಶನ್ ಸ್ಟೈಲ್, ವಿಶ್ಯುವಲೈಸೇಶನ್ಗೆ ರಣವೀರ್ ಫಿದಾ ಆಗಿದ್ದು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗ್ತಿದೆ.
ಈ ಇಬ್ಬರ ಕಾಂಬಿನೇಶನ್ನಲ್ಲಿ ಮೈತಲಾಜಿಕಲ್ ಪಿರಿಯಡ್ ಡ್ರಾಮ ಸಬ್ಜೆಕ್ಟ್ ಮೂಡಿ ಬರಲಿದ್ದು, ಚಿತ್ರಕ್ಕೆ ಬಿಗ್ ಬಜೆಟ್ ಅವಶ್ಯಕತೆಯಿದೆ ಎನ್ನಲಾಗ್ತಿದೆ. ಸದ್ಯ ರಣವೀರ್(Ranveer Singh) ಹಲವು ನಿರ್ಮಾಣ ಸಂಸ್ಥೆ ಜೊತೆ ಮಾತುಕತೆ ನಡೆಸುತ್ತಿದ್ದು, ಇದೆಲ್ಲ ಫೈನಲ್ ಆದ ನಂತರ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎನ್ನುತ್ತಿದೆ ಬಿಟೌನ್ ಮೂಲಗಳು.