ʻಹನುಮಾನ್ʼ… ಶೀರ್ಷಿಕೆಯಿಂದನೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಸಿನಿಮಾ. ಆಂಜನೇಯನ ಪರಮ ಭಕ್ತರನ್ನ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾ ಪ್ರೇಮಿಗಳು ಕಣ್ಣರಳಿಸಿ ಕಾಯುವಂತೆ ಮಾಡಿದ್ದ ಚಿತ್ರ. ಕೊನೆಗೂ ಈ ಚಿತ್ರ ತೆರೆಕಂಡಿದೆ. ಸಂಕ್ರಾಂತಿ ಹಬ್ಬಕ್ಕೆ ಸ್ಪೆಷಲ್ಲಾಗಿ ಬೆಳ್ಳಿಭೂಮಿಗೆ ಬಂದಿರೋ ʻಹನುಮಾನ್ʼ ಸಿನಿಮಾ ಪ್ರೇಕ್ಷಕರ ಮಹಾಷಯರಿಂದ ಬಹುಪರಾಕ್ ಹಾಕಿಸಿಕೊಂಡಿದೆ. ಫಸ್ಟ್ ಡೇ ಫಸ್ಟ್ ಶೋ ಹನುಮಾನ್ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ನೋಡಿದರೆ, ಬಾಕ್ಸ್ ಆಫೀಸ್ ಅಖಾಡದಲ್ಲಿ ಟಿಟೌನ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ನಟನೆಯ ಗುಂಟೂರು ಖಾರಂ ಹಾಗೂ ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಅಭಿನಯದ ಕ್ಯಾಪ್ಟನ್ ಮಿಲ್ಲರ್ ಸಿನಿಮಾಗಳಿಗೆ ಪೈಪೋಟಿ ಕೊಟ್ಟು, ಕೋಟಿ ಕೋಟಿ ಕೊಳ್ಳೆಹೊಡೆಯೋದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬರ್ತಿದೆ.
ಹೌದು, ಸಂಕ್ರಾಂತಿ ಹಬ್ಬಕ್ಕೆ ಗುಂಟೂರು ಕಾರಂ, ಕ್ಯಾಪ್ಟನ್ ಮಿಲ್ಲರ್, ಮೇರಿ ಕ್ರಿಸ್‌ಮಸ್ ಸೇರಿದಂತೆ ಹಲವು ಬಿಗ್‌ಸ್ಟಾರ್‌ಗಳ ಸಿನಿಮಾಗಳು ತೆರೆಕಂಡಿವೆ. ಇದರ ಜೊತೆಗೆ ಅಖಾಡಕ್ಕಿಳಿದಿರೋ ತೆಲುಗು ಹೀರೋ ತೇಜ ಸಜ್ಜಾ ನಟನೆಯ ʻಹನುಮಾನ್ʼ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಪ್ರಶಾಂತ್ ವರ್ಮಾ ಕೆತ್ತಿ ನಿಲ್ಲಿಸಿರೋ ಹನುಮಾನ್ ನೋಡಿ ಕಲಾಭಿಮಾನಿಗಳು ಕೈ ಎತ್ತಿ ಮುಗಿಯುತ್ತಿದ್ದಾರೆ. ಸ್ಟೋರಿ, ಸ್ಕ್ರೀನ್ ಪ್ಲೇ, ವಿಷ್ಯೂಯಲ್ ಎಫೆಕ್ಟ್, ಬಿಜಿಎಂ, ಕ್ಲೈಮ್ಯಾಕ್ಸ್ ಎಲ್ಲವೂ ಸೂಪರ್ ಅಂತ ಸಾರಿ ಸಾರಿ ಹೇಳ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿಕೊಂಡು ಬಂದ ನೆಟ್ಟಿಗರು ತಮ್ಮ ತಮ್ಮ ಸೋಷಿಯಲ್ ಪುಟದಲ್ಲಿ ʻಹನುಮಾನ್ʼ ಬಗ್ಗೆ ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.
https://twitter.com/Apple80272767/status/1745640794491359555?ref_src=twsrc%5Etfw%7Ctwcamp%5Etweetembed%7Ctwterm%5E1745640794491359555%7Ctwgr%5Eec8e964338fd07455501780fc782087f51d55d27%7Ctwcon%5Es1_&ref_url=https%3A%2F%2Fwww.pinkvilla.com%2Fentertainment%2Fsouth%2Fhanuman-movie-twitter-review-heres-what-audience-has-to-say-about-teja-sajja-starrer-superhero-film-1270996
ಅಂದ್ಹಾಗೇ, ʻಹನುಮಾನ್ʼ ದೇವರ ಬಗ್ಗೆ ಇರುವ ಸಿನಿಮಾವಲ್ಲ. ಬದಲಾಗಿ ಒಬ್ಬ ವ್ಯಕ್ತಿಗೆ ಹನುಮಾನ್ ಪವರ್ ಬಂದ್ರೆ ಆತ ಸೂಪರ್ ಹೀರೋ ಹೇಗೆ ಆಗುತ್ತಾನೆ ಅನ್ನೋದು ಸಿನಿಮಾ. ಇದೊಂದು ಫ್ಯಾಂಟಸಿ ಮೂವೀಯಾದ್ರೂ ಕಂಟೆಂಟ್ ತುಂಬಾ ಚೆನ್ನಾಗಿದೆ. ಕಾಮಿಡಿ , ಆಕ್ಷನ್ , ಪ್ರೀತಿ ಎಲ್ಲವನ್ನೂ ಒಳಗೊಂಡಿರೋ ʻಹನುಮಾನ್ʼ ಸಿನಿಮಾ ಚಿತ್ರಪ್ರೇಮಿಗಳ ಮನಸೂರೆಗೊಳ್ತಿದೆ. ಹೀಗಾಗಿ, ನೆಟ್ಟಿಗರು ತಮ್ಮ ತಮ್ಮ ಖಾತೆಯಲ್ಲಿ ಹನುಮಾನ್ ಕುರಿತು ಬರೆದುಕೊಳ್ತಿದ್ದಾರೆ. ‘ಮೊದಲಾರ್ಧ ಉತ್ತಮವಾಗಿದೆ. ಸಿನಿಮಾ ಅನುಭವ ಬೇರೆಯದೇ ಲೆವೆಲ್ನಲ್ಲಿ ಸಿಗುತ್ತದೆ. ವಿಎಫ್ಎಕ್ಸ್, ಬಿಜಿಎಂ ಗೂಸ್ಬಂಪ್ಸ್ ಸಿಗುತ್ತದೆ’ ಅಂತ ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಇದು ಈ ‘ವರ್ಷದ ಸಿನಿಮಾʼ ಅಂತಲೇ ಬಣ್ಣಿಸಿದ್ದಾರೆ. ಈ ಚಿತ್ರವನ್ನು ಇಷ್ಟಪಟ್ಟೆ. ಕ್ಲೈಮ್ಯಾಕ್ಸ್ ನಿಮ್ಮನ್ನು ಕಾಡುತ್ತದೆ. ಲವ್ ಯೂ ಹನುಮಾನ್’ ಎಂದು ಕೆಲವರು ಹಂಚಿಕೊಂಡಿದ್ದಾರೆ.
https://twitter.com/Prabhas_Striker/status/1745488583799247276?ref_src=twsrc%5Etfw%7Ctwcamp%5Etweetembed%7Ctwterm%5E1745488583799247276%7Ctwgr%5Eec8e964338fd07455501780fc782087f51d55d27%7Ctwcon%5Es1_&ref_url=https%3A%2F%2Fwww.pinkvilla.com%2Fentertainment%2Fsouth%2Fhanuman-movie-twitter-review-heres-what-audience-has-to-say-about-teja-sajja-starrer-superhero-film-1270996
‘ಹನುಮಾನ್’ ಚಿತ್ರದಲ್ಲಿ ತೇಜ ಸಜ್ಜಾ, ವರಲಕ್ಷ್ಮೀ ಶರತ್ಕುಮಾರ್, ಅಮೃತಾ ಅಯ್ಯರ್, ವಿನಯ್ ರಾಯ್ ಮೊದಲಾದವರು ನಟಿಸಿದ್ದಾರೆ. ಹನುಮಂತು (ತೇಜ) ಸಣ್ಣಪುಟ್ಟ ಕಳ್ಳತನ ಮಾಡಿಕೊಂಡು ಸಹೋದರಿ (ವರಲಕ್ಷ್ಮಿ) ಜೊತೆ ವಾಸವಾಗಿರುತ್ತಾನೆ. ಅಂಜನಾದ್ರಿ ಎನ್ನುವ ಕಾಲ್ಪನಿಕ ಊರಲ್ಲಿ ಕಥೆ ನಡೆಯುತ್ತದೆ. ಆ ಊರಲ್ಲಿ ಹನುಮಂತನ ದೊಡ್ಡದಾದ ಮೂರ್ತಿ ಇರುತ್ತದೆ. ಆ ಬಳಿಕ ಹನುಮಂತುಗೆ ದೇವ ಹನುಮಾನ್ ಆಶೀರ್ವಾದ ಸಿಗುತ್ತದೆ. ನಂತರ ಏನೆಲ್ಲ ಆಗುತ್ತದೆ ಅನ್ನೋದು ಸಿನಿಮಾದ ಕಥೆ. ಇನ್ನೂ ಯುವ ಹಾಗೂ ಪ್ರತಿಭಾವಂತ ಸಂಗೀತ ನಿರ್ದೇಶಕರಾದ ಗೌರಹರಿ, ಅನುದೀಪ್ ದೇವ್ ಮತ್ತು ಕೃಷ್ಣ ಸೌರಭ್ ಸಂಗೀತ ನಿರ್ದೇಶನ, ದಶರಧಿ ಶಿವೇಂದ್ರ ಕ್ಯಾಮೆರಾ ವರ್ಕ್, ಎಸ್. ಬಿ ರಾಜು ತಲರಿ ಸಂಕಲನ ಚಿತ್ರಕ್ಕಿದೆ. ಭಾರತೀಯ ವಿವಿಧ ಭಾಷೆಗಳಾದ ತೆಲುಗು, ಕನ್ನಡ, ಮರಾಠಿ, ತಮಿಳು, ಮಲಯಾಳಂ, ಇಂಗ್ಲೀಷ್, ಸ್ಯಾನೀಶ್, ಚೈನೀಸ್, ಜಪಾನೀಸ್ ಮತ್ತು ಕೊರಿಯನ್ ಭಾಷೆಯಲ್ಲಿ ʻಹನುಮಾನ್ʼ ದರ್ಶನವಾಗಿದೆ. ಪೊಂಗಲ್ ಹಬ್ಬಕ್ಕೆ ಭರ್ಜರಿ ಟ್ರೀಟ್ ಕೊಟ್ಟಿರೋ ಹನುಮಾನ್, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬೆಳೆಬೆಳೆಯುವ ಲಕ್ಷಣಗಳು ಕಾಣ್ತಿದೆ.
THE BEST ichavu @PrasanthVarma anna… Thank you so much🙏🏼….
Must Watch👌🏼🔥❤️మాటల్లో చెప్పలేం 🫡❤️#HanumanOnJan12th #HanumanReview #HanuManEverywhere
Will be waiting for #JaiHanuman pic.twitter.com/FJGmU9wdAn— Rishi👑💥 (@RishiJanasainik) January 11, 2024