ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್(Shivarajkumar)ನಾಯಕ ನಟನಾಗಿ ಅಭಿನಯಿಸಿಬೇಕಿದ್ದ ಚಿತ್ರ `ಅಶ್ವತ್ಥಾಮ'(Ashwatthama). ಇದರ ಸೂತ್ರದಾರ ಸಚಿನ್ ರವಿ(Sachin B Ravi). ಇವ್ರು ಬೇರಾರು ಅಲ್ಲ `ಅವನೇ ಶ್ರೀಮನ್ನಾರಾಯಣ`(Avane Shrimannarayana) ಸಿನಿಮಾ ನಿರ್ದೇಶಕ. ಅವನೇ ಶ್ರೀಮನ್ನಾರಾಯಣ ಬಾಕ್ಸ್ ಆಫೀಸ್ ನಲ್ಲಿ ಸೋತ್ರು ಸಚಿನ್ ರವಿ(Sachin B. Ravi) ಟ್ಯಾಲೆಂಟ್ ಪ್ರಶಂಸೆಗೆ ಪಾತ್ರವಾಗಿತ್ತು. ಅದೇ ಖುಷಿಯಲ್ಲಿ ಅಶ್ವತ್ಥಾಮನಿಗೆ ಹ್ಯಾಟ್ರಿಕ್ ಹೀರೋ ಅಸ್ತು ಎಂದಿದ್ರು. ಅದಾದ ಮೇಲೆ ಇಲ್ಲಿವರೆಗೆ `ಅಶ್ವತ್ಥಾಮ’ನ ಬಗ್ಗೆ ಸದ್ದಿರಲಿಲ್ಲ. ಅಂದುಕೊಂಡಂತೆ ಎಲ್ಲ ನಡೆದಿದ್ರೆ ಇಷ್ಟೊತ್ತಿಗೆ ಸಿನಿಮಾ ಬಿಡುಗಡೆಯಾಗಬೇಕಿತ್ತು, ಹಾಗಾಗಲಿಲ್ಲ. ಆದ್ರೀಗ ದಿಡೀರ್ ಸುದ್ದಿಯಲ್ಲಿದ್ದಾನೆ ʻಅಶ್ವತ್ಥಾಮʻ ಹಾಗಂತ ಶಿವಣ್ಣನೋ ಸುದೀಪೋ ಈ ಚಿತ್ರಕ್ಕೆ ಬಣ್ಣ ಹಚ್ಚುತ್ತಿಲ್ಲ, ಕನ್ನಡದಲ್ಲೂ ಸಿನಿಮಾ ಸಿದ್ದವಾಗ್ತಿಲ್ಲ.
ಹೌದು, ಅಶ್ವತ್ಥಾಮ(Ashwatthama) ಸಿನಿಮಾ ಕನ್ನಡದಲ್ಲಿ ನಿರ್ಮಾಣವಾಗ್ತಿಲ್ಲ. ಸಚಿನ್ ರವಿ(Sachin B. Ravi) ತಮ್ಮ ದಿಕ್ಕು ಬದಲಿಸಿ ಬಿಟೌನ್ ಹಾರಿದ್ದಾರೆ. ಶಿವಣ್ಣನ ಜಾಗಕ್ಕೆ ಬಿಟೌನ್ ಸುಂದರ ಶಾಹಿದ್ ಕಪೂರ್(Shahid Kapoor) ಬಂದಿದ್ದಾರೆ. ಇದೆಲ್ಲ ರಟ್ಟಾಗಿದ್ದು ಮುಂಬೈನಲ್ಲಿ ನಿನ್ನೆ ನಡೆದ ಪ್ರೈಮ್ ವೀಡಿಯೋ ಕಾರ್ಯಕ್ರಮದಲ್ಲಿ. ಕಾರ್ಯಕ್ರಮದಲ್ಲಿ ಸಚಿನ್ ರವಿ(Sachin B. Ravi) ಅಶ್ವತ್ಥಾಮ(Ashwatthama) ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಶಾಹಿದ್ ಕಪೂರ್(Shahid Kapoor) ಜೊತೆ ಕಥೆ ಬಗ್ಗೆ ಟ್ರಾವೆಲ್ ಮಾಡಿರೋದ್ರ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. ಬಾಲ್ಯದಿಂದಲೂ ಕಾಡಿದ್ದ ಕಥೆ ಸಿನಿಮಾವಾಗ್ತಿರೋದಕ್ಕೆ ಸಂಭ್ರಮ ಪಟ್ಟಿದ್ದಾರೆ. ಫೈನಲಿ ಅಶ್ವತ್ಥಾಮ (Ashwatthama) ಬಾಲಿವುಡ್ ಪಾಲಾಗಿದೆ.
ಶಿವಣ್ಣನಿಗೆಂದೇ ʻಅಶ್ವತ್ಥಾಮʼ (Ashwatthama) ಸಿನಿಮಾ ಘೋಷಣೆಯಾದ ಸಮಯದಲ್ಲಿ ಅನೂಪ್ ಭಂಡಾರಿ(Anup Bhandari) ಕೂಡ ಸುದೀಪ್‌ಗೆ(Sudeep) ʻಅಶ್ವತ್ಥಾಮʼ ಸಿನಿಮಾ ಮಾಡೋ ತಯಾರಿಯಲ್ಲಿದ್ರು. ಇದೇ ಕಾರಣಕ್ಕೆ ʻಅಶ್ವತ್ಥಾಮನಿʼಗಾಗಿ ಶಿವಣ್ಣ(Shivanna)- ಸುದೀಪ್(Sudeep) ಅಭಿಮಾನಿಗಳು ಕಿತ್ತಾಟ ನಡೆಸಿದ್ರು. ನಮ್ ಹೀರೋನೇ ಈ ಸಿನಿಮಾ ಮಾಡಬೇಕು ಅಂತ ಕೋಲ್ಡ್ ವಾರ್ ನಡೆಸಿದ್ರು. ಸ್ಟಾರ್ ನಟರ ನಡವಿನ ಶೀತಲ ಸಮರಕ್ಕೆ ಕಾರಣವಾಗಿದ್ದ ಸಿನಿಮಾ ಫೈನಲ್ ಆಗಿ ಶಾಹಿದ್ ಕಪೂರ್(Shahid Kapoor) ಪಾಲಾಗಿದೆ. ಸೋ, ಶಿವಣ್ಣ ಸುದೀಪ್ ಅಭಿಮಾನಿಗಳು ತಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇನ್ಮುಂದೆ ಇರೋದಿಲ್ಲ. ಕೊನೆಗೂ ಶಿವಣ್ಣನನ್ನು ʻಅಶ್ವತ್ಥಾಮʼನಾಗಿ ನೋಡುವ ಅಭಿಮಾನಿಗಳ ಬಯಕೆ ಈಡೇರಲೇ ಇಲ್ಲ.