ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

history of bird flu: ಹಕ್ಕಿ ಜ್ವರದ ಬೆನ್ನಟ್ಟಿ ಬರಲಿದೆಯಾ ಭಯಾನಕ ವೈರಸ್?

Majja Webdeskby Majja Webdesk
11/03/2025
in Lifestyle, Majja Special
Reading Time: 1 min read
history of bird flu: ಹಕ್ಕಿ ಜ್ವರದ ಬೆನ್ನಟ್ಟಿ ಬರಲಿದೆಯಾ ಭಯಾನಕ ವೈರಸ್?

-ಯಾಮಾರಿದ್ರೆ ಜೀವ ಬಲಿ ಪಡೆಯಬಹುದು!

-ಹಕ್ಕಿ ಜ್ವರಕ್ಕಿದೆ ಎರಡು ಶತಮಾನದ ಇತಿಹಾಸ!  

 

ಮತ್ತೆ ಹಕ್ಕಿ ಜ್ವರ ಭಾರತದಲ್ಲಿ ಉಲ್ಬಣಿಸಲಾರಂಭಿಸಿದೆ. ಆಂರಂಭದಲ್ಲಿ ಆಂಧ್ರ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಈ ಭಯಾನಕ ಜ್ವರವೀಗ ಕರ್ನಾಟಕಕ್ಕೂ ಕಾಲಿಟ್ಟು, ಅತ್ಯಂತ ವೇಗವಾಗಿ ಎಲ್ಲೆಡೆ ಹಬ್ಬಿಕೊಳ್ಳಲಕಾರಂಭಿಸಿದೆ. ಮೇಲು ನೋಟಕ್ಕಿದು ಸಾಮಾನ್ಯ ಜ್ವರದಂತೆ ಭಾಸವಾಗುತ್ತೆ. ಅಷ್ಟಕ್ಕೂ ವರ್ಷಕ್ಕೊಂದು ಬಾರಿ ಈ ಹಕ್ಕಿಜ್ವರ ಇದೇ ರೀತಿಯಲ್ಲಿ ಸದ್ದು ಮಾಡುತ್ತದೆ. ಒಂದಷ್ಟು ಹೈಟೆಕ್ ಕೋಳಿ ಫಾರಂಗಳಲ್ಲಿನ ಸಾವಿರಾರು ಕೋಳಿಗಳನ್ನು ಹೂತು ಹಾಕುವ ಮೂಲಕ, ಸುಟ್ಟು ಹಾಕುವ ಮೂಲಕ ನಾಶ ಮಾಡಲಾಗುತ್ತದೆ. ಏಕಾಏಕಿ ಕೋಳಿ ಮಾಂಸದ ರೇಟು ಇಳಿಮುಖವಾಗಿ, ಈ ದೇಶದ ಪೌಲ್ಟ್ರಿ ಬ್ಯುಸಿನೆಸ್ಸು ನೆಲಕಚ್ಚಿ ಬಿಡುತ್ತದೆ. ಈ ಬಗ್ಗೆ ಜನಸಾಮಾನ್ಯರ ನಡುವೆ ಬೇರೆಯದ್ದೇ ತೆರನಾದ ನಂಬಿಕೆಗಳಿದ್ದಾವೆ. ಆ ಜ್ವರ ಅಂಥಾ ಡೇಂಜರಸ್ ಏನಲ್ಲ ಅಂತ ಮಂದಿ ತಾವೇ ಸಂಶೋಧನೆ ನಡೆಸಿ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ.
ಹಾಗಾದರೆ, ಇದು ವರ್ಷಾ ವರ್ಷ ಬೇಕಂತಲೇ ಸೃಷ್ಟಿಯಾಗುವಂಥಾ ಭ್ರಾಮಕ ಜ್ವರವಾ? ಅಷ್ಟಕ್ಕೂ ಈನ ಜ್ವರ ಸೃಷ್ಟಿಯಾಗಿದ್ದೇ ಇತ್ತೀಚಿನ ದಶಕಗಳಲ್ಲಿಯಾ? ನಮ್ಮ ದೇಶ ಹೊರತು ಪಡಿಸಿದರೆ ಸದರಿ ರೋಗದ ತೀವ್ರತೆ ಎಷ್ಟಿದೆ? ಹೊರ ದೇಶಗಳಲ್ಲಿ ಈ ಜ್ವರಕ್ಕೆ ಜೀವ ಹಾನಿ ಆಗಿದೆಯಾ? ಈ ಜ್ವರ ಆರಂಭದಲ್ಲಿ ಹುಟ್ಟಿದ್ದೆಲ್ಲಿ? ಹೀಗೆ ಅನೇಕಾನೇಕ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ. ಇದಕ್ಕೆ ಸಿಗೋ ಉತ್ತರ ಮಾತ್ರ ನಿಜಕ್ಕೂ ಘನ ಗಂಭೀರವಾಗಿದೆ. ಯಾಕೆಂದರೆ, ಈ ಹಕ್ಕಿ ಜನ್ವರ ಅಲಿಯಾಸ್ ಬರ್ಡ್ ಫ್ಲೂಗೆ ಜಾಗತಿಕ ಮಟ್ಟದಲ್ಲಿ ಹತ್ತತ್ತಿರ ಎರಡು ಶತಮಾನಗಳಷ್ಟು ಸುದೀರ್ಘವಾದ ಇತಿಹಾಸವಿದೆ!

ಕೋಳಿ ಮಾಂಸದಲ್ಲಿ ಇರುತ್ತಾ ವೈರಸ್?


ಸದ್ಯದ ಮಟ್ಟಿಗೆ ಭಾರತದಲ್ಲಿ ಮಾತ್ರವೇ ಹಕ್ಕಿ ಜ್ವರ ತೀವ್ರಗೊಂಡಿದೆ ಅಂದುಕೊಳ್ಳಬೇಕಿಲ್ಲ. ಅದು ದೊಡ್ಡಣ್ಣ ಅಮೆರಿಕಾವನ್ನೂ ಕೂಡಾ ಅದುರಿಸಿ ಹಾಕುತ್ತಿದೆ. ಗಂಭೀರವಾದ ವಿಚಾರವೆಂದರೆ, ಅದು ನಮ್ಮಲ್ಲಿ ಮಾತ್ರ ದಿನೇ ದಿನೆ ಹೆಚ್ಚಿಕೊಳ್ಳುತ್ತಾ ಸಾಗುತ್ತಿದೆ. ಅಲ್ಲದೆ ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಹ ಈ ಹಕ್ಕಿ ಜ್ವರದ ಆರ್ಭಟ ಹೆಚ್ಚಾಗಿದ್ದು, ಈ ನಡುವೆ ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ಯಾವ ರೀತಿ ತಿನ್ನಬೇಕು ಎಂದು ಸಲಹೆ ನೀಡಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಹರಡುತ್ತಿದೆ. ಈ ನಡುವೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಈ ಸಮಯದಲ್ಲಿ ಸಾಕಷ್ಟು ಜನರಿಗೆ ಕೋಳಿ ಅಥವಾ ಮೊಟ್ಟೆ ತಿನ್ನಬೇಕೇ ಅಥವಾ ಬೇಡವೇ ಅನ್ನೋ ಪ್ರಶ್ನೆ ಎಲ್ಲರನ್ನೂ ಜನಸಾಮಾನ್ಯರನ್ನು ಕಾಡುತ್ತಿದೆ. ಈ ಕುರಿತಾಗಿ ಒಂದಷ್ಟು ಕಪೋಲ ಕಲ್ಪಿತ ಸುದ್ದಿಗಳೂ ಕೂಡಾ ಹರಿದಾಡುತ್ತಿವೆ.
ಕೋಳಿ ತಿಂದರೆ ಹಕ್ಕಿ ಜ್ವರ ಬಾಧಿಸುತ್ತದೆಂಬಂಥಾ ನಂಬಿಕೆ ಎಲ್ಲರಲ್ಲಿಯೂ ಇದೆ. ಹಕ್ಕಿ ಜ್ವರದ ಕಾರಣಕ್ಕೆ ಜನರು ಕೋಳಿ ಅಥವಾ ಮೊಟ್ಟೆಗಳನ್ನು ತಿನ್ನುವುದನ್ನು ಬಿಟ್ಟು ಬಿಡುತ್ತಾರೆ. ಹಾಗಾದರೆ, ನಿಜಕ್ಕೂ ಈ ಹಕ್ಕಿ ಜ್ವರ ಕೋಳಿ ತಿಂದರೆ ಬರುತ್ತದಾ? ಮೊಟ್ಟೆಯಲ್ಲಿಯೂ ಈ ವೈರಸ್ಸಿನ ಅಂಶಗಳಿದ್ದಾವಾ? ಇಂಥಾ ಪ್ರಶ್ನೆಗಳಿಗೆಲ್ಲ ತಜ್ಞ ವೈದ್ಯರು ಉತ್ತರ ಕೊಟ್ಟಿದ್ದಾರೆ. ಅದರನ್ವಯ ಹೇಳೋದಾದರೆ, ಖಂಡಿತವಾಗಿಯೂ ಕೋಳಿ ಮಾಂಸ ತಿನ್ನೋದರಿಂದ ಹಕ್ಕಿ ಜ್ವರ ಬರುವುದಿಲ್ಲ. ಹಕ್ಕಿ ಜ್ವರವನ್ನು ಏವಿಯನ್ ಂತಲೂ ಕರೆಯುತ್ತಾರೆ. ಇದು ಪಕ್ಷಿಗಳು, ಹಸುಗಳು ಮತ್ತು ಇತರ ಪ್ರಾಣಿಗಳಿಗೆ ಹರಡುವ ಒಂದು ವೈರಲ್ ಸೋಂಕು. ಇದರ ಕಂಟಕ ಪ್ರಾಣಿ ಪಕ್ಷಿಗಳಿಗೇ ಹೆಚ್ಚು. ಆದರೆ ಕೆಲ ಅಪರೂಪದ ಸಂದರ್ಭಗಳಲ್ಲಿ ಮಾತ್ರವೇ ಸದರಿ ಸೋಂಕು ಮನುಷ್ಯರನ್ನೂ ಕೂಡಾ ಬಾಧಿಸುತ್ತದೆ. ಇದೀಗ ಭಾರತ ಮತ್ತು ಅಮೆರಿಕ ಸೇರಿದಂತೆ ಹಲವು ದೇಶಗಳು ಹಕ್ಕಿ ಜ್ವರದ ಕಾರಣದಿಂದಾಗಿ ಆರ್ಥಿಕವಾಗಿಯೂ ಹಿನ್ನಡೆ ಅನುಭವಿಸಿವೆ.

ಅಮೆರಿಕೆಗೆ ಕಂಟಕ


ಅಮೆರಿಕಾ ಮುಂದುವರೆದಿರೋ ರಾಷ್ಟ್ರ. ಅದೆಂಥಾದ್ದೇ ವಿಪಪತ್ತುಗಳು ಬಂದರೂ ಕೂಡಾ ಆದೇಶ ಸಲೀಸಾಗಿ ಜಗ್ಗೋದಿಲ್ಲ ಎಂಬಂಥಾ ನಂಬಿಕೆ ಇದೆ. ಆದರೆ ಈಗೊಂದು ನಾಲಕ್ಕು ವರ್ಷಗಳಿಂದೀಚೆಗೆ ಅಮೆರಿಕಾದಂಥಾ ಅಮೆರಿಕಾವನ್ನೇ ಈ ಹಕ್ಕಿ ಜ್ವರ ಹೈರಾಣು ಮಾಡಿ ಹಾಕಿದೆ. ಆ ದೇಶ ಒಂದು ಬಗೆಯ ತಳಿಯ ಹಕ್ಕಿ ಜ್ವರವನ್ನು ಎದುರಿಸುತ್ತಾ, ಅದರಿಂದ ಪಾರಾಗುವ ದಾರಿಗಾಗಿ ಹುಡುಕಾಟ ನಡೆಸುತ್ತಿದೆ. ಈ ಹೊತ್ತಿಗೆಲ್ಲ ಈ ವೈರಸ್ಸು ಅಮೆರಿಕಾ ದೇಶದಲ್ಲಿ ನೂರಾ ಐವತ್ತು ದಶಲಕ್ಷಕ್ಕೂ ಹೆಚ್ಚು ಪಕ್ಷಿಗಳ ಮೇಲೆ ಪರಿಣಾಮ ಬೀರಿ, ಬಹಳಷ್ಟನ್ನು ಬಲಿ ಪಡೆದುಕೊಂಡಿದೆ. ಹೀಗೆ ಅಮೆರಿಕವಬನ್ನು ಕಾಡುತ್ತಿರುವ ಈ ವೈರಸ್ ಭಾರತವನ್ನೂ ಕೂಡಾ ಬಹುವಾಗಿ ಕಾಡುತ್ತಿದೆ. ಇದೇ ಹೊತ್ತಿನಲ್ಲಿ ಭಾರತದಲ್ಲಿಯೂ ಕೂಡಾ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವ್ಯಾಪಕವಾಗಿಯೇ ವರದಿಯಾಗುತ್ತಿವೆ. ಹಕ್ಕಿ ಜ್ವರ ಹೆಚ್ಚುತ್ತಿರುವುದನ್ನು ನೋಡಿ ಜನರು ಭೀತರಾಗಿ ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಮುಟ್ಟಲೂ ಭಯಪಡಲಾರಂಭಿಸಿದ್ದಾರೆ.

ಕೋಳಿ ಡೇಂಜರಸ್?


ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳಿಕೆಗಳನ್ನು ದಾಖಲಿಸುತ್ತಿರೋದರಿಂದಾಗಿ ಜನ ಸಾಮಾನ್ಯರು ಗೊಂದಲಕ್ಕೀಡಾಗಿದ್ದಾರೆ. ಇಂಥಾ ಹೊತ್ತಿನಲ್ಲಿ ಆರೋಗ್ಯ ತಜ್ಞರು ರಕ್ಷಣೆಗಾಗಿ ಹಸಿ ಹಾಲು, ಮೊಟ್ಟೆ ಮತ್ತು ಕೋಳಿ ಮಾಂಸದಿಂದ ದೂರವಿರುವಂತೆ ಜನರಿಗೆ ಸಲಹೆ ಕೊಟ್ಟಿದ್ದಾರೆ. ವೈದ್ಯರು ಹೀಗೆ ಹೇಳಿದ ಬೆನ್ನಲ್ಲಿಯೇ ಮಧ್ಯೆ ಪಶು ವೈದ್ಯಕೀಯ ಮತ್ತು ಪಶುಸಂಗೋಪನಾ ಇಲಾಖೆ ಕೋಳಿ ಹಾಗೂ ಮೊಟ್ಟೆಗನ್ನು ತಿಂದರೆ ಏನೂ ತೊಂದರೆ ಇಲ್ಲ ಎಂಬಂತೆ ಸಾರುತ್ತಿದೆ. ಇಂಥಾ ವಿರೋಧಾಭಾಸದ ಹೇಳಿಕೆಗಳಿಂದಾಗಿ ಗೊಂದಲಗಳಿಗೂ ಎಡೆ ಮಾಡಿ ಕೊಟ್ಟಿದೆ. ತೆಲಂಗಾಣದಲ್ಲಿ ಹಕ್ಕಿ ಜ್ವರದ ಬಗ್ಗೆ ಹೆಚ್ಚುತ್ತಿರುವ ಆಘಾತಗಳ ಮಧ್ಯೆ, ಆಂಧ್ರ ಪ್ರದೇಶದಿಂದ ತಂದ ಕೋಳಿ ಉತ್ಪನ್ನಗಳ ಸಾಗಣೆ ಮತ್ತು ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಅದೇ ಹೊತ್ತಿನಲ್ಲಿ ಹೆಚ್ಚುತ್ತಿರುವ ಹಕ್ಕಿ ಜ್ವರದಿಂದಾಗಿ, ಜನರು ಕೋಳಿ ಮಾಂಸ ತಿನ್ನುವುದನ್ನು ಬಿಟ್ಟಿದ್ದಾರೆ.
ಈ ಮೂಲಕ ಪೌಲ್ಟ್ರಿ ಬ್ಯುಸಿನೆಸ್ಸಿಗೂ ಕೂಡಾ ದೊಡ್ಡ ಮಟ್ಟದಲ್ಲಿಕಯೇ ಪೆಟ್ಟು ಬೀಳಲಾರಂಭಿಸಿದೆ. ಒಂದು ಕಡೆಯಿಂದ ಲೆಕ್ಕ ಹಾಕಿದರೆ, ಇದುವರೆಗೂಈ ಬಹು ಕೋಟಿ ನಷ್ಟವಾಗಿದೆ. ಬಂಡವಾಳ ಸುರಿದು ಇನ್ನೇನು ಒಂದಷ್ಟು ಕಾಸು ಕೈ ಸೇರುತ್ತದೆಂಬಂಥಾ ಆಸೆ ಹೊತ್ತಿದ್ದವರೂ ಕೂಡಾ ಇದರಿಂದ ಲುಕ್ಸಾನು ಅನುಭವಿಸುವಂತಾಗಿದೆ. ಕೋಳಿ ಮತ್ತು ಮೊಟ್ಟೆಗಳ ಸೇವನೆ ಸುರಕ್ಷಿತ ಎಂದು ತಜ್ಞರು ಹೇಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಮೊಟ್ಟೆ ಮತ್ತು ಕೋಳಿ ಮಾಂಸವನ್ನು ಸರಿಯಾಗಿ ಬೇಯಿಸುವುದು ಬಹು ಮುಖ್ಯ ಅಂಶ. ಭಾರತ ಸರ್ಕಾರದ ಬುಲೆಟಿನ್ ಒಂದನ್ನು ಬಿಡುಗಡೆಗೊಳಿಸಿ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿದೆ. ಅದರನ್ವಯ ಹೇಳೋದಾದರೆ, ಕನಿಷ್ಠವೆಂದರೂ ಮೂವತ್ತು ನಿಮಿಷಗಳ ಕಾಲ ಎಪ್ಪತ್ತು ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದರೆ ಮಾತ್ರವೇ ಕೋಳಿ ಮಾಂಸ ಮತ್ತು ಮೊಟ್ಟೆ ಇಂಥಾ ವೈರಸ್ಸುಗಳಿಂದ ಮುಕ್ತವಾಗುತ್ತದೆಂದು ಸಲಹೆ ನೀಡಲಾಗಿದೆ.
ವೈದ್ಯಕೀಯ ಕ್ಷೇತ್ರದ ನ ಉರಿತವರು, ಆಹಾರ ತಜ್ಞರೂ ಕೂಡಾ ಜನರಿಗಾಗಿ ಒಂದಷ್ಟು ವಿಚಾರಗಳನ್ನು ಕಂಡುಕೊಂಡು, ಅಧ್ಯಯನಗಳ ಮೂಲಕ ಕೆಲ ಸತ್ಯಗಳನ್ನು ಜಾಹೀರು ಮಾಡಿದ್ದಾರೆ. ಮೊಟ್ಟೆಗಳ ವಿಷಯದಲ್ಲಿ ಯಾವುದೇ ವೈರಸ್, ಬ್ಯಾಕ್ಟೀರಿಯಾ ಸೋಂಕುಗಳನ್ನು ತಡೆಗಟ್ಟಲು ಅವುಗಳನ್ನು ಕನಿಷ್ಠವೆಂದರೂ ನೂರಾ ಎಪ್ಪತೈದು ಡಿಗ್ರಿ ವರೆಗೆ ಕುದಿಸಬೇಕು ಎಂದು ಸಲಹೆ ನೀಡಲಾಗಿದೆ. ಬೇಯಿಸಿದ ಮತ್ತು ಹುರಿದ ಮೊಟ್ಟೆಗಳು ತಿನ್ನಲು ಸುರಕ್ಷಿತವಾದ ಆಹಾರಗಳೆಂಬುದನ್ನು ತಜ್ಞರು ಶಿಫಾರಸ್ಸು ಮಾಡುತ್ತಾರೆ. ಆದರೆ ಅರ್ಧ ಬೇಯಿಸಿದ ಮೊಟ್ಟೆಗಳನ್ನು ತಿಂದರೆ ಈ ಮೂಲಕವೇ ಹಕ್ಕಿ ಜ್ವರದ ವೈರಸ್ಸುಗಳು ದೇಹಕ್ಕೆ ದಾಟಿಕೊಳ್ಳುವ ಅಪಾಯ ಇದ್ದೇ ಇದೆ. ಕೋಳಿ ಮಾಂಸವನ್ನು ಸರಿಯಾಗಿ ಬೇಯಿಸಿದರೆ ಅದನ್ನು ಯಾವುದೇ ಸಂಶಯ, ಗೊಂದಲ, ಭಯವಿಲ್ಲದೆ ತಿನ್ನಬಹುದೆಂದು ಹೇಳಲಾಗುತ್ತಿದೆ. ಯಾವುದೇ ವೈರಸ್‌ಗಳನ್ನು ಕೊಲ್ಲಲು ಅದನ್ನು ಮಾಮೂಲಿಗಿಂತಲೂ ಒಂದಷ್ಟು ಹೆಚ್ಚು ಕಾಲ ಬೇಯಿಸಿ ತಿಂದರೆ ಯಾವ ಅಪಾಯಗಳೂ ಕಾಡಲು ಸಾಧ್ಯವಿಲ್ಲ.

ಚಿಕಿತ್ಸೆ ಹೇಗೆ?


ಹೀಗೆ ವೈದ್ಯರು, ತಜ್ಞರು ಭರವಸೆ ತುಂಬುತ್ತಿದ್ದರೂ ಕೂಡಾ ಈ ಸೋಂಕು ಒಂದಷ್ಟು ಮಂದಿಗೆ ತಗುಲಿಕೊಂಡಿದೆ. ಹಾಗೊಂದು ವೇಳೆ ಹಕ್ಕಿ ಜ್ವರ ಬಾಧಿಸಿದರೂ ಕೂಡಾ ಯಹಾರೂ ಕೂಡಾ ಕಂಗಾಲಾಗುವ ಅಗತ್ಯವೇನಿಲ್ಲ. ಇದೀಗ ರಾಜ್ಯದಲ್ಲಿ ಹಕ್ಕಿಜ್ವರ ಪ್ರಕರಣಗಳು ಹೆಚ್ಚುತ್ತಿದ್ದಾವೆ. ಈ ಬಗ್ಗೆ ಗಂಭೀರವಾಗಿ ಮುನ್ನೆಚ್ಚರಿಕೆ ವಹಿಸಬೇಕಿದೆ. ನಮ್ಮ ರಾಜ್ಯದ ಚಿತ್ರದುರ್ಗ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಕ್ಕಿಜ್ವರದ ಭೀತಿ ಎದುರಾಗಿದೆ. ಇಂಥಾ ಹಕ್ಕಿ ಜ್ವರ ಹೇಗೆ ಹರಡುತ್ತದೆ? ಇದರ ಲಕ್ಷಣಗಳೇನು? ಒಂದು ವೇಳೆ ಅದು ಬಂದರೆ ಹೇಗೆ ಚಿಕಿತ್ಸೆ ಪಡೆಯಬೇಕು? ಇಂಥಾ ಹತ್ತಾರು ಪ್ರಶ್ನೆಗಳು ಗೊಂದಲಗಳು ಬಹುತೇಕರನ್ನು ಕಾಡುತ್ತಿವೆ. ಎಚ್೫ ಎನ್೧ ಥರದ ವೈರಸ್ಸುಗಳನ್ನು ಪಕ್ಷಿ ಜ್ವರ ಎಂದು ಗುರುತಿಸಲಾಗುತ್ತದೆ. ಈ ವೈರಸ್ ಮೊದಲಿಗೆ ಕಳೆದ ಶತಮಾನದ ಅಂಚಿನಲ್ಲಿ ಮೊದಲ ಬಾರಿ ತೊಂಬತ್ತರ ದಶಕದಲ್ಲಿ ಚೀನಾದಲ್ಲಿ ಪತ್ತೆಯಾಗಿತ್ತು. ಆ ಬಳಿಕ ಜಗತ್ತಿನಾದ್ಯಂತ ಹರಡಿತು ಅನ್ನಲಾಗುತ್ತಿದೆ. ಈ ಶತಮಾನದ ಎರಡನೇ ದಶಕದಲ್ಲಿ ಅದು ಮತ್ತಷ್ಟು ತೀವ್ರ ಸ್ವರೂಪದಲ್ಲಿ ಉಲ್ಬಣಿಸಿ ಬಿಟ್ಟಿದೆ.
ಹಕ್ಕಿ ಜ್ವರ ತೀರಾ ಜೀವ ಕಿತ್ತುಕೊಳ್ಳುವಂಥಾ ರೋಗವಲ್ಲ. ಆದರೆ ಕೊಂಚ ಎಚ್ಚರ ತಪ್ಪಿದರೂ ಜೀವಕ್ಕೆ ಎರವಾದರೂ ಅಚ್ಚರಿಯೇನಿಲ್ಲ. ಈ ಹಕ್ಕಿ ಜ್ವರ ಪಕ್ಷಿಗಳು ಮತ್ತು ಅವುಗಳ ಹಿಕ್ಕೆಗಳ ನೇರ ಸಂಪರ್ಕದ ಮೂಲಕ ಹರಡುತ್ತದೆ ಎಂಬ ವಿಚಾರವನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಹಾಗಂತ ನಮ್ಮ ಸುತ್ತಮ,ಉತ್ತ ಹಕ್ಕಿಗಳು ಹಾರಾಡಿದರೂ ಈ ಸೋಂಕು ತಗುಲುತ್ತದೆ ಅಂತ ಭಯ ಪಡಬೇಕಿಲ್ಲ. ಒಂದು ವೇಳೆ ಆ ಹಕ್ಕಿಗಳಲ್ಲಿ ಯಾವುದಕ್ಕಾದರೂ ಈ ಸೋಂಕು ಇದ್ದರೆ ಮಾತ್ರವೇ ಅದು ತಗುಲುವ ಸಾಧ್ಯತೆಗಳಿರುತ್ತವೆ. ಈ ಕಾಯಿಲೆ ಬಗ್ಗೆ ಯಾವುದೇ ರೀತಿಯ ಸ್ಪಷ್ಟ ಮಾಹಿತಿ ಜಾಹೀರು ಮಾಡುವಲ್ಲಿ ಆರೋಗ್ಯ ಇಲಾಖೆ ಹಿಂದೆ ಬಿದ್ದಂತಿದೆ. ಆದರೆ, ಈಗ ಜಾಹೀರಾಗಿರುವ ಕೆಲ ಸಲಹೆ ಸೂಚನೆಗಳನ್ನು ಪಾಲಿಸಿದರೆ ಈ ಕಂಟಕದಿಂದ ಪಾರಾಗಬಹುದು.
ದುರಂತವೆಂದರೆ, ಇದೀಗ ಅಧಿಕೃತ ಮಾಹಿತಿಗಳಿಗಿಂತಲೂ ಅನಧಿಕೃತ, ಸುಳ್ಳು ಸುದ್ದಿಗಳ ಹಾವಳಿಯೇ ಹೆಚ್ಚಾಗಿದೆ. ಹಕ್ಕಿ ಜ್ವರದ ಬಗ್ಗೆ ಭೀತಿ ಮೂಡೆಎಇರೋದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಸುಳ್ಳು ಸುದ್ದಿಗಳ ಮೂಲಕ ಭಯ ಮೂಡಿಸಲು ಮುಂದಾಗಿದ್ದಾರೆ. ಇಂಥಾ ದುರಿತ ಕಾಲದಲ್ಲಿ ಸುಳ್ಳು ಸುದ್ದಿಗಳೂ ಕೂಡ ಹರಡುತ್ತಿರುವುದರಿಂದ ಜನರಿಗೆ ತೀವ್ರಥರವಾದ ಗೊಂದಲಗಳೇ ವ್ಯಾಪಕವಾಗಿ ಕಾಡಲಾರಂಭಿಸಿದೆ. ಈ ಘಳಿಗೆಯಲ್ಲಿ ಸೀಮಿತ ಚೌಕಟ್ಟಿನಲ್ಲಿಯೇ ಈ ಸೋಂಕಿನ ಬಗ್ಗೆ ನಿಖರವಾದ ಅರಿವು ಮೂಡಿಸಿಕೊಳ್ಳೋದು ಒಳಿತು. ತೀವ್ರ ಜ್ವರ, ಕೆಮ್ಮು, ಉಸಿರಾಟದಲ್ಲಿ ತೊಂದರೆ, ಮೂಗು ಸೋರುವಿಕೆ, ತಲೆನೋವು, ಸ್ನಾಯುಗಳ ನೋವು, ಗಂಟಲಿನ ಊತ, ಮೂಗು, ಒಸಡಿನಿಂದ ರಕ್ತ ಸೋರುವಿಕೆಯು ಹಕ್ಕಿ ಜ್ವರದ ಆರಂಭಿಕ ಲಕ್ಷಣಗಳೆಂದು ಗುರುತಿಸಲಾಗಿದೆ.

ಎಚ್ಚರವೊಂದೇ ಪರಿಹಾರ!


ಹಾಗಂತ ಈ ಸೋಂಕು ಎಲ್ಲರಲ್ಲಿಯೂ ಒಂದೇ ತೆರನಾದ ಗುಣ ಲಕ್ಷಣಗಳನ್ನು ತೋರ್ಪಡಿಸೋದಿಲ್ಲ. ಕೆಲವರಲ್ಲಿ ವಾಕರಿಕೆ, ವಾಂತಿ, ಭೇದಿ ಕೂಡಾ ಕಂಡು ಬಂದರೂ ಬರಬಹುದೆಂದು ಹೇಳಲಾಗುತ್ತಿದೆ. ಇನ್ನು ಕೆಲವರಲ್ಲಿ ಕಣ್ಣು ಗಾಢವಾಗಿ ಕೆಂಪು ಬಣ್ಣಕ್ಕೆ ತಿರುಗಿಕೊಳ್ಳುವ ಸಾಧ್ಯತೆಗಳೂ ಇದ್ದಾವೆ. ಈ ಸೋಂಕು ದೇಹದೊಳಗೆ ಪ್ರವ ಏಶ ಪಡೆದ ನಂತರದ ಎರಡ್ಮೂರು ದಿನಗಳಲ್ಲಿ ಹಕ್ಕಿ ಜ್ವರದ ಅಸಲೀ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅಂತ ತಜನ್ಞರು ಹೇಳುತ್ತಾರೆ. ಒಂದು ವೇಳೆ ಇಂಥಾ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣವೇ ಚಿಕಿತ್ಸೆ ಪಡೆದುಕೊಳ್ಳೋದು ಒಳಿತು. ಹಾಗೊಂದು ವೇಳೆ ತಡ ಮಾಡಿದರೆ ಅದು ಕ್ರಮೇಣ ಮಾರಣಾಂತಿಕವಾಗಿ ಬದಲಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಈ ಮೇಲ್ಕಂಡವುಗಳಲ್ಲಿ ಯಾವುದೇ ಲಕ್ಷಣ ಕಂಡು ಬಂದರೂ ಕೂಡಾ ಮುಂದೂಡದೆ ತಕ್ಷಣವೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಂಡರೆ ಯಾವ ತೊಂದರೆಯೂ ಆಗಲಾರದು.
ಇನ್ನುಳಿದಂತೆ ಪಕ್ಷಿ ಪ್ರೇಮಿಗಳು, ಒಂದಷ್ಟು ಪಕ್ಷಿಗಳನ್ನು ಸಾಕುವವವರೂ ಕೂಡಾ ಈ ಜ್ವರದ ಬಗ್ಗೆ ಹೆಚ್ಚಿನದಾಗಿ ಎಚ್ಚರಿಕೆ ವಹಿಸುವ ಅಗತ್ಯವಿದೆ. ಸೋಂಕು ತಗುಲಿರುವ ಹಕ್ಕಿಯನ್ನು ಮುಟ್ಟೋದು, ಅದರ ಹಿಕ್ಕೆಗಳು, ಅವು ಓಡಾಡುವ ಜಾಗವನ್ನು ಮುಟ್ಟುವುದರಿಂದ ಕೂಡಾ ಈ ಸೋಂಕು ಹರಡಬಹುದು. ಇಂಥಾ ಸೋಕಿತ ಹಕ್ಕಿಗಳನ್ನು ತಿನ್ನೋದಕ್ಕೆ ಬಳಸಿದರೆ, ಸರಿಯಾದ ಶಾಖದಲ್ಲಿ ಅರೆ ಬರೆ ಬೇಯಿಸಿ ತಿಂದರಂತೂ ಈ ಸೋಂಕು ಯಾವ ಅಡೆತಡೆಯೂ ಇಲ್ಲದೆ ನೇರವಾಗಿ ದೇಹದೊಳಕ್ಕೆ ಪ್ರವೇಶಿಸುತ್ತದೆ. ಅಈ ಕಾರಣದಿಂದ ಹಕ್ಕಿಗಳನ್ನು ಸಾಕುವವರೂ ಕೂಡಾ ಒಂದಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕಿದೆ. ಅಡುಗೆ ಮಾಡುವ ಸ್ಥಳ ಯಾವಾಗಲೂ ಸ್ವಚ್ಛವಾಗಿರೋದೇ ಇಂಥಾ ಸೋಂಕುಗಳಿಂದ ಪಾರಾಗುವ ಪ್ರಧಾನ ದಾರಿ. ಪ್ರತೀ ಹಂತದಲ್ಲಿಯೂ ಸ್ಯಾನಿಟೈಸರ್ ಅನ್ನು ಬಳಸೋ ಅಭ್ಯಾಸವಿಟ್ಟುಕೊಂಡರೆ ಇನ್ನೂ ಉತ್ತಮ. ಇಂಥಾ ಹಂತದಲ್ಲಿ ಹೊರಗೆಲ್ಲೋ ಹೋದಾಗ ಆದಷ್ಟು ನಾನ್ ವೆಜ್ ತಿನಿಸನ್ನು ತಿನ್ನದಿರೋದೇ ಉತ್ತಮ. ಯಾಕೆಂದರೆ ಹೊಟೇಲುಗಳಲ್ಲಿ ಬೇಕಾದಂಥಾ ಸ್ವಚ್ಛತೆ ಕಾಪಾಡಿಕೊಂಡು, ಸರಿಯಾದ ಪ್ರಮಾಣದಲ್ಲಿ ಮಾಂಸವನ್ನು ಬೇಯಿಸುತ್ತಾರೆಂಬುದಕ್ಕೆ ಯಾವ ಗ್ಯಾರೆಂಟಿಯೂ ಇರೋದಿಲ್ಲ. ಈ ಕಾರಣದಿಂದ ಪ್ರತೀ ಹಂತದಲ್ಲಿಯೂ ಎಚ್ಚರದಿಂದಿರೋದೊಂದೇ ಹಕ್ಕಿ ಜ್ವರದಿಂದ ಬಚಾವಾಗಲು ಇರುವ ಏಕೈಕ ದಾರಿ ಅಂತ ತಜ್ಞ ವೈದ್ಯರೇ ಹೇಳುತ್ತಾರೆ.

ಶತಮಾನದ ಇತಿಹಾಸ

 
ಸಾಮಾನ್ಯವಾಗಿ ಮನುಷ್ಯ ಜನ್ಯವಲ್ಲದ ಯಾವುದೇ ಸಾಂಕ್ರಾಮಿಕ ರೋಗಗಳಾದರೂ ಕೂಡಾ ಅವುಗಳಿಗೆ ಸುದೀರ್ಘವಾದ ಇತಿಹಾಸವಿರುತ್ತದೆ. ನಾವಿರುವ ಶತಮಾನದಲ್ಲಿ ಅದರ ಕುರುಹುಗಳು ಕಾಣದಿದ್ದರೂ ಕೂಡಾ ಇತಿಹಾಸದ ಹುದುಲಿನಲ್ಲಿಯಂತೂ ಅದಕ್ಕೆ ಸಾಕ್ಷಿಗಳು ಸಿಕ್ಕೇ ಸಿಗುತ್ತವೆ. ಮೇಲು ನೋಟಕ್ಕೆ ತೊಂಬತ್ತರ ದಶಕದಲ್ಲಿ ಅಮೆರಿಕಾದಲ್ಲಿ ಮೊದಲು ಹಕ್ಕಿ ಜ್ವರ ಕಾಣಿಸಿಕೊಂಡಿದೆ ಅನ್ನಲಾಗುತ್ತಿದೆ. ಆದರೆ, ಅದು ಸತ್ಯವಲ್ಲ. ಈ ಹಕ್ಕಿ ಜ್ವರದ ಹಿಸ್ಟರಿ ಎಂಟುನೂರರ ಕಾಲಮಾನಕ್ಕೂ ಕರೆದೊಯ್ದು ನಿಲ್ಲಿಸುತ್ತೆ. ೧೮೭೮ರಲ್ಲಿ ಮೊದಲ ಬಾರಿ ಇಟಲಿ ದೇಶದ ಉತ್ತರ ಭಾಗದಲ್ಲಿ ಏವಿಯನ್ ಇನ್ ಫ್ಲೂಯೆನ್ಸಾ ಮೊದಲ ಬಾರಿ ಕಂಡು ಬಂದಿತ್ತೆಂಬ ಉಲ್ಲೇಖವಿದೆ. ಇದನ್ನು ಆಕಾಲಘಟ್ಟದಲ್ಲಿ ಕೋಳಿಗಳಿಂದ ಹರಡುವ ಪ್ಲೇಗ್ ಎಂಬಂತೆ ಬಿಂಬಿಸಲಾಗಿತ್ತು. ವಿಶೇಷವೆಂದರೆ, ಪೌಲ್ಟ್ರಿ ಫಾರಮ್ಮುಗಳು ಹೆಚ್ಚಾಗಿದ್ದ ಇಟಲಿಯ ಉತ್ತರ ಭಾಗದಿಂದಲೇ ಅದು ಹಬ್ಬಿಕೊಂಡಿತ್ತು.


ಹೀಗೆ ಹಬ್ಬಿಕೊಂಡಿದ್ದ ಹಕ್ಕಿ ಜ್ವರಕ್ಕೆ ಸಾವಿರಾರು ಮಂದಿ ಬಲಿಯಾಗಿದ್ದರಂತೆ. ಈ ಕಾಯಿಲೆಯ ಮೂಲ ಪತ್ತೆಹಚ್ಚಲು ಮತ್ತೊಂದು ಶತಮಾನವೇ ಬೇಕಾಗಿತ್ತು. ಇಪ್ಪತ್ತನೇ ಶತಮಾನದ ಆರಂಭ ಕಾಲದಲ್ಲಿ ಈ ಕೋಳಿ ಪ್ಲೇಗ್ ಅನ್ನೋದು ವೈರಸ್ಸಿನಿಂದ ಹಬ್ಬಿಕೊಳ್ಳುತ್ತದೆಂಬ ಸತ್ಯವನ್ನು ಕಂಡುಕೊಳ್ಳಲಾಗಿತ್ತು. ೧೯೫೫ರವರೆಗೂ ಅದನ್ನು ಟೈಪ್ ಎ ಇನ್ ಫ್ಲೂಯೆನ್ಸಾ ಅಂತಲೇ ಗುರುತಿಸಲಾಗಿತ್ತು. ಎಂಬತ್ತರ ದಶಕದ ಹೊತ್ತಿಗೆಲ್ಲ ಈ ವೈರಸ್ಸಿನ ಬಗ್ಗೆ ಮತ್ತೊಂದಷ್ಟು ಮಾಹಿತಿ ಜಾಹೀರಾದರೂ ಕೂಡಾ ಅದಕ್ಕೆ ನಿಖರ ಪರಿಹಾರ ಕಂಡುಕೊಳ್ಳಲಾಗಿಲ್ಲ. ಕಳೆದ ಬಾರಿ ಕೊರೋನಾ ಮತ್ತು ಹಕ್ಕಿ ಜ್ವರಗಳು ಒಂದರ ಹಿಂದೊಂದರಂತೆ ಅಮರಿಕೊಂಡಿದ್ದವು. ಆದರೆ, ಈ ಬಾರಿ ಹಕ್ಕಿ ಜ್ವರ ಮೊದಲು ಬಂದಿದೆ. ಅದರ ಹಿಂದೆಯೇ ಕೊರೋನಾ ಅಥವಾ ಅದರಂಥಾದ್ದೇ ಮತ್ತೊಂದು ವೈರಸ್ಸು ಲಗ್ಗೆ ಇಡಲಿದೆಯಾ ಅನ್ನೋ ಅನುಮಾನ ಜಾಗತಿಕ ಮಟ್ಟದಲ್ಲಿ ವ್ಯಾಪಿಸಿಕೊಂಡಿದೆ!

Tags: #Avianinfluenza#birdflu#H7N9

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
wonderful world of wasps: ಕೀಟ ಲೋಕದ ಅದ್ಭುತ ಕೆಲಸಗಾರ ಕಣಜ!

wonderful world of wasps: ಕೀಟ ಲೋಕದ ಅದ್ಭುತ ಕೆಲಸಗಾರ ಕಣಜ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.