Salaar2: ಡಾರ್ಲಿಂಗ್ ಪ್ರಭಾಸ್(Prabhas), ಪ್ರಶಾಂತ್ ನೀಲ್, ಹೊಂಬಾಳೆ ಫಿಲ್ಮ್ಸ್(Hombale Films) ಮೂರು ದೈತ್ಯ ಸಿನಿ ಶಕ್ತಿಗಳು ಒಂದಾದ ಸಿನಿಮಾ ‘ಸಲಾರ್'(Salaar). ಪ್ರಶಾಂತ್ ನೀಲ್ ಡೈರೆಕ್ಷನ್‌ನಲ್ಲಿ ಅಮರೇಂದ್ರ ಬಾಹುಬಲಿ ಅಲಿಯಾಸ್ ಪ್ರಭಾಸ್ ಕಣ್ತುಂಬಿಕೊಳ್ಳೊ ಮಹದಾಸೆ ಅವರ ಅಪಾರ ಅಭಿಮಾನಿಗಳಲ್ಲಿತ್ತು. ಕ್ರೇಜಿ಼ ಕಾಂಬಿನೇಶನ್, ಪ್ಯಾನ್ ಇಂಡಿಯಾ ‘ಸಲಾರ್’ ಸೃಷ್ಟಿಸಿದ್ದ ಕ್ರೇಜ಼್ ಎಲ್ಲರಿಗೂ ಗೊತ್ತೇ ಇದೆ.
ಸಿಕ್ಕಾಪಟ್ಟೆ ಬಝ್‌ನೊಂದಿಗೆ ಬಂದ ‘ಸಲಾರ್’(Salaar) ‘ಉಗ್ರಂ’ ರಿಮೇಕ್ ಎನ್ನುವುದು ಕನ್ನಡ ಪ್ರೇಕ್ಷಕನಿಗೆ ಆಗಲೇ ಅರಿವಾಗಿತ್ತು. ಆದ್ರೆ ಅದು ಹಾಗೆ ಅಚ್ಚಾಗಿರಲಿಲ್ಲ ಆ ಕಥೆಗೊಂದಿಷ್ಟು ಬಣ್ಣಹಚ್ಚಿ, ರೆಕ್ಕೆ ಪುಕ್ಕ ಕಟ್ಟಿ ಎಂದಿನಂತೆ ತಮ್ಮ ಕತ್ತಲ ಜಗತ್ತಿನಲ್ಲಿ ಪ್ರಶಾಂತ್ ನೀಲ್(Prashanth Neel)ಚಿತ್ರವನ್ನು ತೆರೆಗೆ ತಂದಿದ್ರು. ಮಿಶ್ರ ಪ್ರತಿಕ್ರಿಯೆಯೊಂದಿಗೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಎಂದು ಹೊಂಬಾಳೆ(Homabale Films) ಸಂಸ್ಥೆ ಸೆಲೆಬ್ರೇಟ್ ಮಾಡಿತ್ತು.
ಆದ್ರೀಗ ವಿಷ್ಯ ಅದಲ್ಲ. ‘ಸಲಾರ್’(Salar) ಸಿನಿಮಾ ಸೆಟ್ಟೇರುವಾಗಲೇ ಎರಡು ಭಾಗದಲ್ಲಿ ಬರುತ್ತೆ ಎಂದಿತ್ತು ಪ್ರಶಾಂತ್ ನೀಲ್ ಅಂಡ್ ಟೀಂ. ಆದ್ರೀಗ ‘ಸಲಾರ್ 2(Salaar 2)’ ಸುತರಾಂ ಸೆಟ್ಟೇರೋದೇ ಇಲ್ಲ ಅನ್ನೋ ವಿಷ್ಯ ಬಟಾ ಬಯಲಾಗಿದೆ. ಹೊಂಬಾಳೆ ಫಿಲ್ಮ್ಸ್ ‘ಸಲಾರ್ 2’ ನಿರ್ಮಾಣವನ್ನು ಕೈಬಿಟ್ಟಿದೆ ಎಂಬ ಇನ್‌ಸೈಡ್ ಸ್ಟೋರಿ ಜಗಜ್ಜಾಹೀರಾಗಿದೆ. ಇದಕ್ಕೆ ಕಾರಣ ಪ್ರಭಾಸ್, ಪ್ರಶಾಂತ್ ನಡುವೆ ಚಿತ್ರೀಕರಣದಲ್ಲಿ ನಡೆದ ಶೀತಲ ಸಮರವಾ..? ಅಥವಾ ಸಲಾರ್ ಸೇರಿದಂತೆ ಕಳೆದ ವರ್ಷ ನಿರ್ಮಾಣ ಕಂಡ ಹೊಂಬಾಳೆ ಸಿನಿಮಾಗಳ ಸೋಲಿನ ಸುಳಿಯಾ..? ಅನ್ನೋದು ಬೂದಿ ಮುಂಚಿದ ಕೆಂಡದಂತಿದೆ. ಕಾರಣ ಏನೇ ಇರಲಿ ‘ಸಲಾರ್ 2’ ಸೆಟ್ಟೇರೋದಂತೂ ಸದ್ಯದ ಸಂದರ್ಭದಲ್ಲಿ ‘ನೋ ವೇ ಚಾನ್ಸೇ ಇಲ್ಲ’.