ಭಾನುವಾರ, ಜುಲೈ 6, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಫ್ಯಾನ್ಸ್‌ಗೆ ಬೆಳ್ಳುಳ್ಳಿ ಟಿಪ್ಸ್‌ ಕೊಟ್ಟರು ಹಾಟ್‌ ಬ್ಯೂಟಿ ಜ್ಯೋತಿ ರೈ!

Vishalakshi Pby Vishalakshi P
27/02/2024
in Majja Special
Reading Time: 1 min read
ಫ್ಯಾನ್ಸ್‌ಗೆ ಬೆಳ್ಳುಳ್ಳಿ ಟಿಪ್ಸ್‌ ಕೊಟ್ಟರು ಹಾಟ್‌ ಬ್ಯೂಟಿ ಜ್ಯೋತಿ ರೈ!

ಇತ್ತೀಚೆಗೆ ಸಾಕಷ್ಟು ಜನ ನಟ- ನಟಿಯರು ಸೋಷಿಯಲ್‌ ಮೀಡಿಯಾ ಮೂಲಕ ಫ್ಯಾನ್ಸ್‌ ಜೊತೆ ಕನೆಕ್ಟ್‌ ಆಗ್ತಿದ್ದಾರೆ. ಸಿನ್ಮಾ ಶೂಟಿಂಗ್‌, ಔಟಿಂಗ್‌ ಅಂತ ಬ್ಯುಸಿ ಷೆಡ್ಯೂಲ್ಡ್‌ ಮಧ್ಯೆಯು ಬಿಡುವು ಮಾಡಿಕೊಂಡು ಅಭಿಮಾನಿಗಳ ಜೊತೆ ಸಂವಹನದಲ್ಲಿ ತೊಡಗಿಸಿಕೊಳ್ತಿದ್ದಾರೆ. ಇದಕ್ಕೆ ನಟಿ ಜ್ಯೋತಿ ರೈ ಕೂಡ ಹೊರತಾಗಿಲ್ಲ. ನಟಿ ಜ್ಯೋತಿ ರೈ ಮೂಲತಃ ಕನ್ನಡದವರು. ಕರಾವಳಿ ಭಾಗದವರು. ಆದ್ರೀಗ ಕನ್ನಡ ಸಿನಿಮಾ, ಸೀರಿಯಲ್‌ಗಳಿಗಿಂತ ಹೆಚ್ಚಾಗಿ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ದಿನ ಪಕ್ಕದ್ಮನೆ ಹುಡುಗಿಯಂತಿದ್ದ ಜ್ಯೋತಿ ರೈ ದಿಢೀರ್‌ ಮಾಡ್ರನ್‌ ಬೆಡಗಿಯಾಗಿ ಬದಲಾಗಿದ್ದಾರೆ. ಬೋಲ್ಡ್‌ ಫೋಟೋಶೂಟ್‌ ಮಾಡ್ಸಿ ತನ್ನ ಮಾದಕತೆಯನ್ನ ಹರವಿಡುತ್ತಿದ್ದಾರೆ. ಈ ಮಧ್ಯೆ ಬೆಳ್ಳುಳ್ಳಿ ಟಿಪ್ಸ್‌ ಕೊಟ್ಟು ಜ್ಯೋತಿ ರೈ ಸುದ್ದಿಯಲ್ಲಿದ್ದಾರೆ.

ಹೌದು, ನಟಿ ಜ್ಯೋತಿ ರೈ ತಮ್ಮ ಅಭಿಮಾನಿಗಳಿಗೆ ಹೆಲ್ತ್ ಟಿಪ್ಸ್ ನೀಡಿದ್ದಾರೆ. ಬೆಳ್ಳುಳ್ಳಿ ಸೇವಿಸೋದ್ರಿಂದ ಏನೆಲ್ಲ ಆಗಲಿದೆ ಅನ್ನೋದನ್ನ ತಿಳಿಸಿಕೊಟ್ಟಿದ್ದಾರೆ. ಬೆಳಗ್ಗೆ ಎದ್ದ ಕೂಡಲೇ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆ ಹೆಚ್ಚಾಗುತ್ತೆ ಎಂದು ಜ್ಯೋತಿ ರೈ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಬೆಳ್ಳುಳ್ಳಿ ಫೋಟೋ ಶೇರ್‌ ಮಾಡುವ ಮೂಲಕ ಉತ್ತಮ ಸಲಹೆ ನೀಡಿದ್ದಾರೆ.

ನಾವೀಗಾಗ್ಲೇ ಹೇಳಿದಂತೆ ನಟಿ ಜ್ಯೋತಿ ರೈ ಈಗ ಪಕ್ಕದ್ಮನೆ ಹುಡುಗಿಯಾಗಿಲ್ಲ ಬದಲಾಗಿ ಪ್ರಿಟಿಗರ್ಲ್‌ ಆಗಿ ಬದಲಾಗಿದ್ದಾರೆ. 35ರಲ್ಲೂ 24ರ ಹರೆಯದ ಹುಡುಗಿಯಂತೆ ಕಾಣುತ್ತಿದ್ದಾರೆ. ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರ ಬಗ್ಗೆ ಇತ್ತೀಚೆಗೆ ನಟಿ ಜ್ಯೋತಿ ರೈ ಮಾತನಾಡಿದ್ದರು. ಒಂದೇ ಥರ ಇದ್ದು ಇದ್ದು ನಂಗು ಬೋರಾಗಿದೆ. ಲೈಫ್‍ನಲ್ಲಿ ಚೇಂಜಸ್ ಇರಲಿ ಎನ್ನುವ ಕಾರಣಕ್ಕೆ ಮಾಡ್ರನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದರು. ಅಂದ್ಹಾಗೇ, ಸೀರೆಯುಟ್ಟರೆ ಸಾಕ್ಷಾತ್ ಲಕ್ಷ್ಮಿಯಂತೆ ಕಾಣುವ ಈ ನಟಿ, ಈಗೀಗ ಬಿಗ್ಗಿಬಿಗ್ಗಿ ಜೀನ್ಸ್ ತೊಟ್ಟು, ಸಿಂಗಲ್ ಪೀಸ್ ಹಾಕ್ಕೊಂಡು ಪಡ್ಡೆಹೈಕ್ಳ ಮೈ ಬೆವರಿಳಿಸುತ್ತಿದ್ದಾರೆ. ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ ಬೋಲ್ಡ್ ಲುಕ್ಕಲ್ಲೇ ನೋಡುಗರನ್ನ ಕೆಣಕುತ್ತಿದ್ದಾರೆ. ಕಸ್ತೂರಿ ನಿವಾಸ ಸೀರಿಯಲ್‍ನಲ್ಲಿ, ದೇವಕಿ ಧಾರವಾಹಿಯಲ್ಲಿ, ಸೀತರಾಮ ಕಲ್ಯಾಣ ಸಿನಿಮಾದಲ್ಲಿ ನಾವು ನೋಡಿದ್ದು ಇದೇ ಜ್ಯೋತಿನಾ? ಅಮ್ಮನ ಪಾತ್ರದಲ್ಲಿ ಪಕ್ಕದ್ಮನೆ ಸೀತಮನ್ನಂತೆ ಕಾಣುತ್ತಿದ್ದದ್ದು ಇದೇ ನಾಯಕಿನಾ ಅಂತ ಸಕಲರೂ ಕಣ್ಣುಜ್ಜಿಕೊಂಡು ಅವರನ್ನ ಅವರೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.

ವೈಯಕ್ತಿಕ ಬದುಕಲ್ಲಿ ಏಳುಬೀಳು ಕಂಡಿರುವ ನಟಿ ಜ್ಯೋತಿ ರೈ ಬಣ್ಣದಲೋಕದಲ್ಲಿ ಕನ್ನಡತಿ ಜ್ಯೋತಿ ಬಹುದೊಡ್ಡ ಹೆಸರು ಮಾಡಿದ್ದಾರೆ. 20ನೇ ವಯಸ್ಸಿಗೆ ಮದುವೆಯಾದ್ಮೇಲೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ವಿನು ಬಳಂಜ ಅವರ `ಬಂದೇ ಬರತಾವ ಕಾಲ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಕಿನ್ನರಿ, ಜೋಗುಳ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಸೀರಿಯಲ್ ಗಳಲ್ಲಿ ಮಿಂಚಿದ್ದರು. ಸೀತರಾಮ ಕಲ್ಯಾಣ ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಲ್ಲಿ ಸ್ಕ್ರೀನ್ ಶೇರ್ ಮಾಡಿದರು. ನಡುವೆ ತೆಲುಗಿಗೆ ಹಾರಿ ಅಲ್ಲೂ ಸಿನಿಮಾ, ಸೀರಿಯಲ್ ನಲ್ಲಿ ಮಿಂಚಿ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. `ಗುಪ್ಪೆದಂಥ ಮನಸು’ ಧಾರಾವಾಹಿ ಮೂಲಕ ತೆಲುಗು ಮಂದಿಯ ಮನಸ್ಸು ಗೆದ್ದ ಜ್ಯೋತಿ ರೈ, ಪ್ರಿಟಿಗರ್ಲ್ ವೆಬ್‌ ಸೀರಿಸ್‌ ಮೂಲಕ ಓಟಿಟಿಯಲ್ಲೂ ಜಾದು ಮಾಡಿದರು.

ಈ ಮಧ್ಯೆ ಟಾಲಿವುಡ್ ಯಂಗ್ ಡೈರೆಕ್ಟರ್ ಸುಕು ಪೂರ್ವಜ್ ಜೊತೆ ಎಂಗೇಜ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಮೊದಲ ಪತಿಯಿಂದ ವಿಚ್ಚೇಧನ ಪಡೆದು ಸುಕುಪೂರ್ವಜ್‌ ಜೊತೆ ಸಂಸಾರ ಸಾಗಿಸುತ್ತಿದ್ದಾರೆ. ಈ ಬಗ್ಗೆ ಖುದ್ದು ನಟಿಯೇ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಸುಕು ಪೂರ್ವಜ್‌ ಜೊತೆಗಿನ ಫೋಟೋ ಶೇರ್‌ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಹೊತ್ತಿದ್ದರು.

 

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಭವಿಷ್ಯದ ನಿರ್ದೇಶಕರಿಗೆ ‘ಜುಗಲ್ ಬಂದಿ’ ಅರ್ಪಣೆ…ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಸ್ಪೆಷಲ್ ಶೋ ಆಯೋಜನೆ!

ಭವಿಷ್ಯದ ನಿರ್ದೇಶಕರಿಗೆ 'ಜುಗಲ್ ಬಂದಿ' ಅರ್ಪಣೆ...ಅಸಿಸ್ಟೆಂಟ್ ಡೈರೆಕ್ಟರ್ ಗಳಿಗೆ ಸ್ಪೆಷಲ್ ಶೋ ಆಯೋಜನೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.