ಈಗಂತೂ ಬಹುತೇಕ ಎಲ್ಲ ಆಹಾರಗಳೂ ಕೂಡಾ ವಿಷಮಯವಾಗಿವೆ. ಒಂದು ಕಡೆಯಿಂದ ಬೆಂಗಳೂರಿನಂಥಾ ಮಹಾ ನಗರಗಳಲ್ಲಿ ಆಹಾರ ಮಾರುವ ಕಸುಬು ಜೋರಾಗಿದೆ. ಇಂಥಾ ನಗರಗಳ ಒತ್ತಡದ ಬದುಕಿನಲ್ಲಿ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ತಿನ್ನಬಹುದಾದಂಥಾ ಯಾವ ವ್ಯವಧಾನವಾಗಲಿ, ಪುರಸೊತ್ತಾಗಲಿ ಬಹುತೇಕರಿಗೆ ಇಲ್ಲ. ಈ ಕಾರಣ ದಿಂದಲೇ ಮುಕ್ಕಾಲು ಭಾಗ ನಗರ ವಾಸಿಗಳು ಹೊಟೇಲು, ಬೀದಿ ಬದಿಯ ದುಕಾನುಗಳನ್ನೇ ಅನ್ನಾಹಾರದ ಮೂಲವಾಗಿಸಿಕೊಂಡಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡ ಅದೆಷ್ಟೋ ಮಂದಿ ಅನ್ನಾಹಾರಗಳನ್ನು ತಯಾರಿಸಿ ಮಾರುವ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ. ಸಾಮಾನ್ಯವಾಗಿ, ಬೆಂಗಳೂರಿನಂಥಾ ನಗರಗಳಲ್ಲಿ ಬೆಳಗಿನ ಫೇವರಿಟ್ ಉಪಹಾರವಾಗಿ ಇಡ್ಲಿ ಬಳಕೆಯಲ್ಲಿದೆ. ಈ ಜಗತ್ತಿನಲ್ಲಿ ಸಹಸ್ರಾರು ಮಂದಿಗಿದು ಫೇವರಿಟ್ ಆಹಾರವಾಗಿದೆ.
ವಿಶ್ವಾದ್ಯಂತ ಹಬ್ಬಿಕೊಂಡಿರುವ ಇಡ್ಲಿ ಪ್ರಿಯರಿಗೆಲ್ಲ ಇದೀಗ ಅಕ್ಷರಶಃ ಶಾಕ್‌ನಂಥಾ ಸುದ್ದಿಯೊಂದು ಹೊರೆ ಬಿದ್ದಿದೆ. ಬೆಂಗಳೂರಿನ ಬೀದಿ ಬದಿ ವ್ಯಾಪಾರಿಗಳಿಂದ ಸಂಗ್ರಹಿಸಿದ ಇಡ್ಲಿಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಈ ಸಂಬಂಧವಾಗಿ ಪ್ರತೀ ದಿನ ಇಡ್ಲಿ ತಿಂದರೆ ಕ್ಯಾನ್ಸರ್ ಗ್ಯಾರೆಂಟಿ ಎಂಬಂಥಾ ಸುದ್ದಿಗಳು ಹರಿದಾಡುತ್ತಿದ್ದಾವೆ. ಸಾಮಾನ್ಯವಾಗಿ ಇಂಥಾದ್ದೊಂದು ಸುದ್ದಿ ಬಂದರೆ ಸೋಶಿಯಲ್ ಮೀಡಿಯಾ ಮೂಲಕ ಭಯ ಹುಟ್ಟಿಸುವಂಥಾ ಥರಾವರಿ ಪೋಸ್ಟುಗಳು ಹರಿದಾಡಲಾರಂಭಿಸುತ್ತವೆ. ಕಪೋಲ ಕಲ್ಪಿತವಾದ ಸುಳ್ಳು ಸುದ್ದಿಗಳನ್ನು ಹರಡುವ ಮೂಲಕ ಜನಸಾಮಾನ್ಯರನ್ನು ಬೆಚ್ಚಿ ಬೀಳಿಸುತ್ತಲೇ, ಇಡ್ಲಿಯಂಥಾದ್ದನ್ನು ಮಾರಾಟ ಮಾಡುತ್ತಾ ಬದುಕು ಕಟ್ಟಿಒಕೊಂಡಿರುವ ಅದೆಷ್ಟೋ ಜನರ ಹೊಟ್ಟೆಗೆ ಹೊಡೆಯುವಂಥಾ ಪ್ರಯತ್ನಗಳೂ ನಡೆಯುತ್ತವೆ. ಹಾಗಾದರೆ ನಿಜಕ್ಕೂ ನಡೆದದ್ದೇನು? ಇಡ್ಲಿ ತಿಂದರೆ ನಿಜಕ್ಕೂ ಕ್ಯಾನ್ಸರ್ ಬರುತ್ತಾ? ಈ ದಿಕ್ಕಿನಲ್ಲಿ ನೋಡ ಹೋದರೆ ಒಂದಷ್ಟು ಸೂಕ್ಷ್ಮ ಸಂಗತಿಗಳು ಜಾಹೀರಾಗುತ್ತವೆ!
ಸರ್ವಾಂತರ್ಯಾಮಿ ತಿನಿಸು
ಇದೀಗ ಇಡ್ಲಿಯನ್ನು ಇಷ್ಟದ ಆಹಾರವಾಗಿಸಿಕೊಂಡವರೆಲ್ಲ ಕಂಗಾಲಾಗಿದ್ದಾರೆ. ಯಾಕೆಂದರೆ, ಇಡ್ಲಿ ಅನ್ನೋದು ಈವತ್ತಿಗೆ ಸರ್ವಾಂತರ್ಯಾಮಿ ಆಗಿಬಿಟ್ಟಿದೆ. ವೈದ್ಯರು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಚಿಕಿತ್ಸೆಯ ಸಂದರ್ಭದಲ್ಲಿಯೂ ಕೂಡಾ ಇಡ್ಲಿ ತಿನ್ನಲು ಹೇಳುತ್ತಾರೆ. ಹಾಗಿರುವಾಗ, ಇಡ್ಲಿ ತಿನ್ನುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬ ವಿಷಯ ಕೇಳಿದಾಗ ಆಚ್ಚರಿ ಸೇರಿದ ಆಘಾತವಾಗೋದರಲ್ಲಿ ವಿಶೇಷವೇನೂ ಇಲ್ಲ. ಆದರೆ, ಇತ್ತೀಚೆಗೆ ಆಹಾರ ಮತ್ತು ಗುಣಮಟ್ಟ ಇಲಾಖೆ ರಾಜ್ಯಾದ್ಯಂತ ಕಾರ್ಯಾಚರಣೆ ನಡೆಸಿದೆ. ಹೋಟೇಲ್ ಹಾಗೂ ರಸ್ತೆ ಬದಿಯಲ್ಲಿ ಮಾರಾಟ ಮಾಡುವವರಿಂದ ಇಡ್ಲಿಯನ್ನು ಸಂಗ್ರಹಿಸಿದ್ದಾರೆ. ಬಳಿಕ ಅದನ್ನು ಅದನ್ನು ನಾನಾ ಸ್ವರೂಪಗಳಲ್ಲಿ ಪರೀಕ್ಷೆಗಳಿಗೆ ಒಳಪಡಿಸಿದ್ದಾರೆ. ಇದೆಲ್ಲದರ ಫಲವಾಗಿ ಇಡ್ಲಿಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ. ಈ ವಿಚಾರ ಕೇಳಿದದಿಡ್ಲಿ ಪ್ರಿಯರೆಲ್ಲ ಅಕ್ಷರಶಃ ಕಂಗಾಲಾಗಿದ್ದಾರೆ.
ಇಂದು ಇಡ್ಲಿ ಎಂಬುದು ರಾಜ್ಯಗಳ ಗಡಿ ದಾಟಿ ದೇಶಾದ್ಯಂತ ಹಬ್ಬಿಕೊಂಡಿದೆ. ಇಡ್ಲಿ ಈವತ್ತಿಗೆ ಕೇವಲ ದಕ್ಷಿಣ ಭಾರತದ ಕರ್ನಾಟಕ, ಕೇರಳ, ತಮಿಳುನಾಡು, ಮುಂತಾದ ರಾಜ್ಯಗಳ ಬೆಳಗಿನ ಉಪಹಾರವಾಗಿಯಷ್ಟೇ ಉಳಿದುಕೊಂಡಿಲ್ಲ. ಅದು ಈಗ ಅಂತರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆದು ಪ್ರಖ್ಯಾತಿ ಗಳಿಸಿಕೊಂಡಿದೆ. ಪ್ರಪಂಚದ ಮೂಲೆ ಮೂಲೆಯಲ್ಲಿರುವವರು ಇಡ್ಲಿ ಸಾಂಬಾರಿನ ಮೋಡಿಗೆ ಮರುಳಾಗಿದ್ದಾರೆ. ಇಡ್ಲಿ ಸಾಂಬಾರ್ ಹಾಗೂ ಚಟ್ನಿಯ ಮೋಡಿಗೆ ಜಗತ್ತಿನ ಅತೀ ಹೆಚ್ಚು ಮಂದಿ ಮಾರುಹೋಗಿದ್ದಾರೆ. ಈ ಕಾರಣದಿಂದಲೇ ಇಡ್ಲಿ ಅನ್ನೋದು ಈವತ್ತಿಗೇ ಅತೀ ಹೆಚ್ಚು ಜನರ ಅತ್ಯಂತ ಪ್ರಿಯವಾದ ಬೆಳಗಿನ ಉಪಹಾರವಾಗಿ ದಾಖಲಾಗಿದೆ. ಕೇವಲ ಹೊಟೇಲುಗಳಿಗೆ ಮಾತ್ರವಲ್ಲದೆ ಮನೆಯಲ್ಲೇ ತಯಾರಿಸಲು ಕೂಡಾ ಇಡ್ಲಿ ಹೇಳಿ ಮಾಡಿಸಿದಂತಿದೆ. ಅಂಥಾ ಗುಣವೇ ಇಡ್ಲಿಗೆ ಸರ್ವಾಂತರ್ಯಾಮಿಯಾಗುವ ಅವಕಾಶ ಕಲ್ಪಿಸಿದೆ!
ತಯಾರಿಸೋದೂ ಸುಲಭ
ಸಾಮಾನ್ಯವಾಗಿ ಒಂದಷ್ಟು ಬೆಳಗಿನ ಆಹಾರಗಳು ಇಷ್ಟವಾದರೂ ಅದನ್ನು ತಯಾರಿಸೋ ಕಷ್ಟ ಕಂಡರೆ ಬೆಚ್ಚಿ ಬೀಳುವಂತಾಗುತ್ತದೆ. ಆದರೆ, ಇಡ್ಲಿ ಅನ್ನೋದು ತುಂಬಾನೇ ಸುಲಭವಾಗಿ ತಯಾರಿಸಬಹುದಾದ ತಿನಿಸು. ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ಒಂದು ನಿರ್ಧಿಷ್ಟ ಪ್ರಮಾಣದಲ್ಲಿ ನೆನೆಸಿ, ನಿಗಧಿತ ಕಾಲಾವಧಿಯವರೆಗೂ ನೆನೆ ಹಾಕಿ ನಂತರ ಅದನ್ನು ಹದವಾಗಿ ರುಬ್ಬಿ ರಾತ್ರಿಯಿಡೀ ಹಾಗೇ ಇಟ್ಟಾಗ ಅದರಲ್ಲಿ ಪ್ರಾಕೃತಿಕವಾಗಿಯೇ ಈಸ್ಟ್ ಫಂಗಸ್ಸಿನ ಅಂಶ ಉತ್ಪತ್ತಿಯಾಗುತ್ತೆ. ಹಾಗೆ ಹುದುಗು ಬಂದು ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪನ್ನು ಬೆರೆಸಿ ಆ ನಂತರ ಬಟ್ಟಲು ಅಥವಾ ತಟ್ಟೆಗಳಲ್ಲಿ ಹಾಕಿ, ಪಾತ್ರೆಯಲ್ಲಿಟ್ಟು ಹಬೆಯಲ್ಲಿ ಬೇಯಿಸಿದರೆ ನಿಮ್ಮಿಷ್ಟದ ಇಡ್ಲಿ ರೆಡಿಯಾಗುತ್ತೆ. ತುಂಬಾನೇ ರುಚಿ ರುಚಿಯಾದ, ಹೆಚ್ಚಿನ ಪೌಷ್ಠಿಕಾಂಶ ಹೊಂದಿರುವ ಇಡ್ಲಿ ಆರೋಗ್ಯಕರವಾದ ತಿನಿಸೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಇಂಝಥಾ ಇಡ್ಲಿಗೆ ಚಟ್ನಿ ಅಥವಾ ಸಾಂಬಾರೇ ಆಗಬೇಕೆಂಬ ಬೇಡಿಕೆಯನ್ನೇನೂ ಹೊಂದಿರೋದಿಲ್ಲ. ಅವರವರ ಇಷ್ಟಕ್ಕೆ ತಕ್ಕಂತೆ ಯಾವುದರೊಂದಿಗೆ ನೆಂಟಿಕೊಂಡರೂ ರುಚಿಕಟ್ಟಾಗುವ ಗುಣದ ಇಡ್ಲಿ ಅಂದರೆ ಎಲ್ಲರಿಗೂ ಇಷ್ಟ.
ಇಡ್ಲಿ ಹುಟ್ಟಿದ ಬಗೆ
ಇಡ್ಲಿ ಈವತ್ತಿಗೆ ವಿಶ್ವರೂಪಿ ಖಾದ್ಯವಾಗಿ ಬದಲಾಗಿದೆ. ಇಂಥಾ ಇಡ್ಲಿ ಹುಟ್ಟಿದ್ದು ಹೇಗೆ? ಅದು ಆರಂಭದಲ್ಲಿ ಯಾವ ದೇಶದಲ್ಲಿ ತಿನಿಸಾಗಿ ಗುರುತಿಸಿಕೊಂಡಿತ್ತು? ಇಂಥಾ ಪ್ರಶ್ನೆಗಳನ್ನಿಟ್ಟು ಹುಡುಕ ಹೋದರೆ ಇಡ್ಲಿಗೂ ಕೂಡಾ ಒಂದು ರೋಚಕ ಇತಿಹಾಸವಿರೋದು ಅರಿವಿಗೆ ಬರುತ್ತದೆ. ಇಡ್ಲಿಯ ಹುಟ್ಟಿನ ಕುರಿತಾಗಿ ಅನೇಕ ಜಿಜ್ಞಾಸೆಗಳಿದ್ದಾವೆ. ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಸೇರಿದಂತೆ ಅನೇಕ ವಿದೇಶಿಗರೂ ಸಹಾ ಇದು ನಮ್ಮದೇ ಅವಿಷ್ಕಾರ ಅಂತ ಎದೆಯುಬ್ಬಿಸಿ ಹೇಳಿಕೊಳ್ಳುತ್ತಿದ್ದಾರೆ. ಇದರ ಉಲ್ಲೇಕ ಐತಿಹಾಸಿಕವಾಗಿದೆ. ೧೯೨೦ರಲ್ಲಿ ಶಿವಕೋಟ್ಯಾಚಾರ್ಯರು ರಚಿಸಿದ್ದ ವಡ್ಡಾರಾಧನೆ ಎಂಬ ಕೃತಿಯಲ್ಲಿಯೂ ಇಡ್ಲಿಯ ಬಗ್ಗೆ ಉಲ್ಲೇಖವಿದೆ. ೧೧೩೦ರಲ್ಲಿ ಬಂದಿದ್ದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿ ಕೂಡಾ ಇಡ್ಲಿಯ ಬಗ್ಗೆ ಪ್ರಸ್ತಾಪವಿದೆ. ಇದೆಲ್ಲದರಾಚೆಗೆ ನಮ್ಮ ನಾಡಿನಲ್ಲಿ ಇಡ್ಲಿ ಅನ್ನೋದೊಂದು ಸಾಂಪ್ರದಾಯಿಕ ತಿಂಡಿಯಾಗಿ ಗುರುತಿಸಿಕೊಂಡಿದೆ. ಈ ಎಲ್ಲ ಕಾರಣದಿಂದ ಇದು ಕರ್ನಾಟಕದ ತಿಒಂಡಿ ಅಂತ ಹೇಳಲಾದರೂ, ಈ ವಿಚಾರದಲ್ಲಿ ತಮಿಳು ನಾಡಿನ ಮಂದಿ ಕೂಡಾ ಸ್ಪರ್ಧೆಗೆ ಬಿದ್ದಿದ್ದಾರೆ.
ಇನ್ನುಳಿದಂತೆ ಎರಡನೇ ಮಹಾ ಯುದ್ಧದ ಕಾಲದಲ್ಲಿಯೂ ಕೂಡಾ ಇಡ್ಲಿಯ ಸುತ್ತಾ ಒಂದಷ್ಟುಉ ಚರ್ಚೆ ಹುಟ್ಟು ಹಾಕುವಂಥಾ ವಿದ್ಯಮಾನಗಳು ಘಟಿಸಿದ್ದವು. ಇಡ್ಲಿಯಲ್ಲಿ ಬಳಸುವ ಪ್ರಮುಖ ವಸ್ತು. ಯುದ್ಧ ಕಾರಣದಿಂದ ಎಲ್ಲದಕ್ಕೂ ಹಾಹಾಕಾರ ಎದ್ದಾಗ ಅಕ್ಕಿಯ ಆಮದು ಕುಂಠಿತಗೊಂಡು ಅಕ್ಕಿ ಬಳಕೆಯ ಮೇಲೆ ಸರ್ಕಾರವೇ ನಿರ್ಬಂಧ ಹೇರಿತ್ತು. ಇದುವೇ ಹೊಸತೊಂದು ಆವಿಷ್ಕಾರಕ್ಕೂ ಕೂಡಾ ಕಾರಣವಾಗಿತ್ತು. ಅದನ್ನು ಸಾಧ್ಯವಾಗಿಸಿದವರುಜ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್ ಆದ ಸರಣಿ ಮಾವಳ್ಳಿ ಟಿಫಿನ್ ರೂಮ್ಸ್ ಮಾಲಿಕರರಾದ ಮಯ್ಯ ಅಕ್ಕಿಗೆ ಬದಲಾಗಿ ರವೆ ಬಳಸಿ ಇಡ್ಲಿ ತಯಾರಿಸುವ ಮೂಲಕ ಸಂಚಲನ ಸೃಷ್ಟಿಸಿದರು. ಈ ಪ್ರಯೋಗದಿಂದಾಗಿ ಇಡ್ಲಿ ಎಂಬ ತಿನಿಸಿಗೆ ಮತ್ತಷ್ಟು ರುಚಿ ಬಂದಿತ್ತು. ಅದಕ್ಕೆ ಮತ್ತಷ್ಟು ಮೃದುತನವೂ ಸಿಕ್ಕಿ ಅದರ ಗ್ರಾಹಕ ವರ್ಗ ಹಿಗ್ಗಲಿಸಿಕೊಂಡಿತ್ತು.
ಎರಡನೇ ಮಹಾ ಯುದ್ಧದ ನಂತರದಲ್ಲಿ ಮಯ್ಯ ಅವರು ಆವಿಷ್ಕರಿಸಿದ್ದ ರವೆ ಇಡ್ಲಿ ವ್ಯಾಪಕ ಮನ್ನಣೆ ಪಡೆದುಕೊಂಡಿತ್ತು. ಬಹುತೇಕ ಹೊಟೇಲ್ಲುಗಳವರು ತಯಾರಿಕೆಯಲ್ಲಿ ಅದೇ ಫಾರ್ಮುಲಾವನ್ನು ಪ್ರಯೋಗಿಸಲಾರಂಭಿಸಿದ್ದರು. ರವೆ ಇಡ್ಲಿ, ಸಾಗು, ಸಾಂಬಾರ್, ಚಟ್ನಿ ಹಾಗೂ ತುಪ್ಪದ ಮೂಲಕ ಮಯ್ಯ ಇಡ್ಲಿಗೆ ಮತ್ತಷ್ಟು ರುಚಿ ಕೊಟ್ಟಿದ್ದರು. ಈ ಎಲ್ಲ ಕಾರಣದಿಂದ ಇಡ್ಲಿಯ ಆವಿಷ್ಕಾರದ ಸಂಪೂರ್ಣ ಹಕ್ಕುದಾರಿಕೆ ಇರೋದು ಕನ್ನಡಿಗರಿಗೆ ಮಾತ್ರ ಎಂಬಂಥಾ ವಾದ ಹಬ್ಬಿಕೊಂಡಿದೆ. ಹೀಗೆ ಕನ್ನಡ ನಾಡಿನಲ್ಲಿ ರೂಪಾಂತರ ಹೊಂದಿರುವ ಇಡ್ಲಿ ಈಗ ವಿಶ್ವ ಮಾನ್ಯತೆ ಪಡೆದುಕೊಂಡಿದೆ. ಪ್ರತಿ ವರ್ಷ ಮಾರ್ಚ್ ಮೂವತ್ತರಂದು ವಿಶ್ವ ಇಡ್ಲಿ ದಿನವನ್ನಾಗಿ ಆಚರಿಸಲಾಗುತ್ತೆ. ಆ ಮಟ್ಟಿಗೆ ಇಡ್ಲಿಯ ಖ್ಯಾತಿ ಬೆಳೆದು ನಿಂತಿದೆ. ಈವತ್ತಿಗೆ ಹೆಚ್ಚಿನ ಮನೆಗಳಲ್ಲಿ ಬೆಳಿಗ್ಗೆ ಮತ್ತು ಸಂಜೆಗೆ ಇಡ್ಲಿ ಬಳಸಲಾಗುತ್ತದೆ. ದಕ್ಷಿಣ ಭಾರತ ಮಾತ್ರವಲ್ಲದೇ ಭಾರತದ ತುಂಬೆಲ್ಲ ಇಡ್ಲಿ ಸಿಗದ ಹೊಟೇಲ್ಲುಗಳೆ ಇಲ್ಲದಂತಾಗಿ ಬಿಟ್ಟಿದೆ.
ಹೀಗೆ ನೂರಾರು ವರ್ಷದ ಇತಿಹಾಸ ಇರುವ ಇಡ್ಲಿ ತಿಂದರೆ ಕ್ಯಾನ್ಸರ್ ಬರುತ್ತದೆ ಎನ್ನುವ ವಿಷಯ ಹೇಗೆ ಚಾಲ್ತಿಗೆ ಬಂದಿತು ಎಂಬುದನ್ನು ಪರಾಮರ್ಶೇ ನಡೆಸಿದರೆಇತ್ತೀಚೆಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಹಾಗೂ ಆಹಾರ ಇಲಾಖೆ ಜಂಟಿಯಾಗಿ ಬೆಂಗಳೂರಿನ ವಿವಿದೆಡೆ ಆಹಾರ ಮಳಿಗೆಗಳ ಮೇಲೆ ಹದಿನೈದು ದಿನಗಳ ಕಾಲ ಭೇಟಿ ನೀಡಿ ಅಲ್ಲಿಂದ ಸುಮಾರು ಐದುನೂರು ಇಡ್ಲಿಗಳ ಮಾದರಿಯನ್ನು ಸಂಗ್ರಹಿಸಿ ಅದನ್ನು ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ಕಳುಸಿಕೊಟ್ಟಿದೆ. ಅಲ್ಲಿಂದ ಬಂದ ವರದಿ ನಿಜಕ್ಕೂ ಎಲ್ಲರೂ ಬೆವರಾಡುವಂತಿದೆ. ಯಾಕೆಂದರೆ ಆ ಐನೂರು ಇಡ್ಲಿಗಳಲ್ಲಿ ಮೂವತೈದಕ್ಕು ಹೆಚ್ಚು ಇಡ್ಲಿಗಳ ಗುಣಮಟ್ಟ ಅಪಾಯಕಾರಿಯಾಗಿರೋದನ್ನು ಪರೀಕ್ಷೆಗಳು ದೃಢಪಡಿಸಿವೆ. ಆ ರೀತಿಯ ಇಡ್ಲಿಗಳನ್ನು ತಿನ್ನುವುದರಿಂದ ಕ್ಯಾನ್ಸರ್ ಬರಬಹುದು ಂತ ಎಚ್ಚರಿಸಲಾಗಿದೆಯಷ್ಟೆ. ಶುಚಿ ರುಚಿಯಾಗಿ ತಯಾರಿಸಿದ ಇಡ್ಲಿಗಳನ್ನು ತಿನ್ನುವರಿಂದ ಯಾವ ರೋಗಗಳೂ ಬರೋದಿಲ್ಲ. ಅದು ಒಂದಷ್ಟು ರೋಗಗಳಿಗೆ ಮದ್ದಾಗಬಹುದಷ್ಟೆ!
ಕ್ಯಾನ್ಸರ್ ಪುಕಾರು ನಿಜವೇ?
ಇಂಥಾ ವಿಶ್ವರೂಪೀ ಇಡ್ಲಿಯಲ್ಲೂ ಕ್ಯಾನ್ಸರ್ ಕಾರಕ ಅಂಶ ಅಡಗಿರೋದು ನಿಜಕ್ಕೂ ಆಘಾತಕರ ಅಂಶ. ಹಾಗಾದರೆ ಚೆಂದದ ತಿಂಡಿಯಲ್ಲಿ ಡೆದ್ಲಿ ಕ್ಯಾನ್ಸರ್ ಯಾಕೆ ಪ್ರವೇಶಿಸುತ್ತೆ? ಅದಕ್ಕೆ ಕಾರಣಗಳೇನು ಅಂತ ಹುಡುಕ ಹೋದರೆ ವಾಸ್ತವದ ಮತ್ತೊಂದು ಮಜಲಿನ ಅನಾವರಣವಾಗುತ್ತೆ. ಇಡ್ಲಿ ತಯಾರಿಸುವಾಗ ಪಾತ್ರೆಗೆ ಹಿಟ್ಟು ಅಂಟಿಕೊಳ್ಳದೇ ಇರುವಂತೆ ನೋಡಿಕೊಳ್ಳಲು ಪಾರಂಪರಿಕವಾದ ಅನೇಕ ವಿಧಾನಗಳಿದ್ದಾವೆ. ಇಡ್ಲಿ ಬೆಂದ ನಂತರ ಸುಲಭವಾಗಿ ತೆಗೆಯಲು ಅನುವಾಗುವಂತೆ ಹಿಂದಿನಿಂದಲೂ ತೆಳುವಾದ, ಶುಚಿಯಾದ ಬಟ್ಟೆಯನ್ನು ಬಳುಸುವ ಪರಿಪಾಠವಿದೆ. ಆ ರೀತಿ ಬಳಸುವ ಬಟ್ಟೆ ಹತ್ತಿಯಿಂದ ಮಾಡಿದ ಹಳೆಯ ಪಂಚೆಯಾಗಲಿ ಇಲ್ಲವೇ ಕೋರಾ ಬಟ್ಟೆಯನ್ನು ಮೂರ್ನಾಲ್ಕು ಬಾರಿ ತೊಳೆದು ಬಳಸಲಾಗುತ್ತಿತ್ತು.
ಹೀಗೆ ಒಂದು ಬಾರಿ ಇಡ್ಲಿಗಳನ್ನು ಮಾಡಿದ ನಂತರ ಅಂಥಾ ಬಟ್ಟೆಗಳನ್ನು ಮತ್ತೆ ತೊಳೆದು ಶುಚಿ ಮಾಡಲಾಗುತ್ತಿತ್ತು. ಆದರೆ ಇಂದಿಗೆ ಅಂಥಾ ಶುಚಿತ್ವ ಸಂಪೂರ್ಣವಾಗಿ ಮಾಯವಾಗಿದೆ. ಹೆಚ್ಚೂ ಕಡಿಮೆ ಎಲ್ಲಾ ಇಡ್ಲಿ ತಯಾರಕರು ಈಗ ಬಟ್ಟೆಯ ಬದಲಾಗಿ ಪ್ಲ್ಯಾಸ್ಟಿಕ್ ಬಳಸುತ್ತತಿದ್ದಾರೆ. ಕೊತಗುಡುವ ಇಡ್ಲಿಯನ್ನು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಹಾಳೆಗಳ ಮೇಲೆ ತಿನ್ನಲು ಬಳಸುವ ಕಾರಣದಿಂದಾಗಿ ಬಿಸಿಯಾದ ಪ್ಲಾಸ್ಟಿಕ್ ನಲ್ಲಿರುವ ವಿಷಕಾರಿ ಅಂಶಗಳು ಇಡ್ಲಿಯ ಜೊತೆ ಸೇರಿಕೊಳ್ಳುತ್ತವೆ. ಅವುಗಳು ಆರೋಗ್ಯಕ್ಕೆ ಹಾನಿಯುಂಟು ಮಾಡೋದರಲ್ಲಿ ಯಾವ ಅಚ್ಚರಿಯೂ ಇಲ್ಲ. ಇಷ್ಟು ಮಾತ್ರವಲ್ಲದೇ ಅವುಗಳು ಭಯಾನಕ ಕ್ಯಾನ್ಸರ್ ಕಾಯಿಲೆಯನ್ನು ಹಬ್ಬಿಸಬಲ್ಲವೆಂಬ ವಿಚಾರ ಇತ್ತೀಚೆಗೆ ಜಾಹೀರಾದ ವರದಿಯಿಂದ ತಿಳಿದು ಬಂದಿದೆ.ದೀಗಾಗಲೇ ಪ್ರಯೋಗಾಲಯಕ್ಕೆ ಐನೂರುಯ ಇಡ್ಲಿಗನ್ನು ಕಳಿಸಲಾಗಿತ್ತು. ಅರ್ಧದಷ್ಟು ಪರೀಕ್ಷೆಗಳು ನಡೆದಿವೆ. ಅದು ಪೂರ್ಣಗೊಂಡ ನಂತರ ಅತ್ಯಂತ ನಿಖರವಾದ ವರದಿ ಬಯಲಾಗುವ ನಿರೀಕ್ಷೆಗಳಿದ್ದಾವೆ.
ಎಲ್ಲ ತಿನಿಸುಗಳೂ ಡೇಂಜರಸ್
ಹಾಗಂತ ಇದು ಬರೀ ಇಡ್ಲಿಗೆ ಮಾತ್ರವೇ ಸಂಬಂಧಿಸಿಉದ ವಿಚಾರವಲ್ಲ. ಈವತ್ತಿನ ವಾತಾವರಣದಲ್ಲಿ ಇದು ರಸ್ತೆ ಬದಿಯಲ್ಲಿ, ಬೀದಿ ಬದಿಯ ಸಣ್ಣ ಸಣ್ಣ ಹೋಟೆಲ್ಲುಗಳಲ್ಲಿ ತಯಾರಿಸಿ ಮಾರಾಟ ಮಾಡಲಾಗುವ ಕಬಾಬು ಸೇರಿದಂತೆ ಎಲ್ಲವಕ್ಕೂ ಅನ್ವಯಿಸೋದರಲ್ಲಿ ಅಚ್ಚರಿಯೇನಿಲ್ಲ. ನಗರ ಪ್ರದೇಶಗಳಖಖಲ್ಲಿ ಅವ್ಯಾಹತವಾಗಿರುವ ಪಾನಿಪೂರಿ ಮುಂತಾದ ತಿನಿಸುಗಳ ಗುಣಮಟ್ಟವನ್ನು ಕೆಲ ತಿಂಗಳುಗಳ ಹಿಂದೆ ಪರಿಶೀಲನೆ ನಡೆಸಲಾಗಿತ್ತು. ಆಹಾರ ಮತ್ತು ಗುಣಮಟ್ಟ ಇಲಾಖೆ ಇಂಥಾ ಖಾದ್ಯಗಳನ್ನು ತಯಾರಿಸಲು ಬಳಸುವ ಬಣ್ಣ, ಎಣ್ಣೆಯಂಥವುಗಳು ಕಲಬೆರಕೆಯಿಂದ ಕೂಡಿವೆ ಅಂತ ವರದಿ ನೀಡಿತ್ತು. ಇಂಥಾ ಖ್ಯಾದ್ಯಗಳಿಗೆ ಹೆಚ್ಚಿನ ಸ್ವಾದಕ್ಕಾಗಿ ಬಳಸಲಾಗುವ ಅಜಿನೋಮೋಟೋ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು. ಇದೀಗ ಇಡ್ಲಿಯ ಸುತ್ತಾ ವಿಮಕರ್ಶೆಗಳು ನಡೆಯುತ್ತಿವೆ. ಇಡ್ಲಿ ತಯಾರಿಸುವ ಮಂದಿ ಪಾರಂಪರಿಕ ವಿಧಾನಗಳನ್ನ ಆಯ್ಕೆ ಮಾಡಿಕೊಂಡು, ಪ್ರತೀ ಹಂತದಲ್ಲಿಯೂ ಶುಚಿತ್ವಕ್ಕೆ ಆದ್ಯತೆ ಕೊಟ್ಟರೆ ಇಡ್ಲಿಯ ಘನತೆ ಹಾಗೆಯೇ ಉಳಿದುಕೊಳ್ಳುತ್ತೆ.
ಇಡ್ಲಿಯ ಬಗ್ಗೆ ಇಂಥಾಠದ್ದದೊಂದುಉ ಸುದ್ದಿ ಹಬ್ಬುತ್ತಲೇ ಅದರಲ್ಲಿಯೂ ರಾಜಕೀಯ ಮಾಡುವ ಸನ್ನಿವೇಶಗಳು ಸೃಷ್ಟಿಯಾಗಲಾರಂಭಿಸಿವೆ. ಗೋವಾದ ಶಾಸಕನೋರ್ವ ತನ್ನ ರಾಜ್ಯಕ್ಕೆ ಪ್ರವಾಸಿಗರು ಕಡಿಮೆಯಾಗಲು ಇಡ್ಲಿಸಾಂಬಾರ್ ಕಾರಣ ಎಂದು ದೂರುತ್ತಿರೋದೂ ಕೂಡಾ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರವಾಸೋದ್ಯಮಕ್ಕೆ ಹೆಸರಾಗಿರುವ ಗೋವಾ ರಾಜ್ಯದಲ್ಲಿ ಇತ್ತೀಚಿಗೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿರುವ ಕುರಿತಾಗಿ ಚರ್ಚೆ ನಡೆಯುತ್ತಿದ್ದ ಹಂತದಲ್ಲಿ ಬಿಜೆಪಿ ಶಾಸಕ ಮೈಕೆಲ್ ಲೋಬೊ ಇಂಥಾದ್ದೊಂದು ವಿಚಿತ್ರ ವಾದ ಮಂಡಿಸಿದ್ದಾರೆ. ಗೋವಾದ ಪ್ರವಾಸೋದ್ಯಮ ಉದ್ಯಮ ಸ್ಥಳೀಯ ಸಂಸ್ಕೃತಿ ಮತ್ತು ತಿನಿಸುಗಳ ಬದಲು ಬೀಚ್‌ಗಳಲ್ಲಿ ಇಡ್ಲಿ ಸಾಂಬಾರ್ ಮಾರಾಟ ಮಾಡುತ್ತಿರುವ ಕಾರಣದಿಂದ ಹೊಡೆತ ಬಿದ್ದಿದೆ ಅನ್ನೋದು ಲೋಬೋ ಅಳಲು. ಹೀಗೆ ಇಡ್ಲಿಯ ಕಾರಣದಿಂದಲೇ ವಿದೇಶಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ ಅಂದಿದ್ದಾರೆ. ಇದನ್ನು ಕೇಳಿ ಇಡ್ಲಿ ಪ್ರಿಯರು ನಕ್ಕು ಸುಮ್ಮನಾಗಿದ್ದಾರಂಷ್ಟೆ.
ಆದರೆ, ಗೋವಾದಲ್ಲಿ ಹೀಗಾಗುತ್ತಿರೋದಕ್ಕೆ ಕಾರಣ ಅಲ್ಲಿನ ನೀತಿ ನಿಯಮಾವಳಿಗಳೇ ಹೊರತು ಇಡ್ಲಿಯಲ್ಲ. ಗೋವಾದ ಹೋಟೆಲ್ ಮಾಲೀಕರು ದಕ್ಷಿಣ ಭಾರತೀಯ ಖಾದ್ಯ ತಯಾರಿಸುವವರಿಗೆ ಸಬ್‌ಲೀಸ್ ಮಾಡುತ್ತಿರುವ ಕಾರಣ ಇಲ್ಲಿ ಇಡ್ಲೀ ಸಾಂಬಾರ್ ದೋಸೆಗಳು ವಿಜೃಂಭಿಸುತ್ತಿದ್ದಾವೆ. ಗೋವಾ ಪಾಕ ಪದ್ದತಿಯನ್ನು ಅರಸಿ ಬರುವ ವಿದೇಶೀ ಪ್ರವಾಸಿಗರಿಗೆ ಬೇಸರವಾಗುತ್ತಿದೆ. ಗೋವಾ ಬೀಚುಗಳಲ್ಲಿ ಮೋಜು ಮಸ್ತಿಯ ಜೊತೆಗೆ ಗೋವಾ ಖ್ಯಾದ ದೊರೆಯುತ್ತದೆ ಬನ್ನಿ ಂತ ಭರವಸೆ ನೀಡಿ ಅದರಂತೆ ನಡೆದುಕೊಂಡರೆ ದೇಸೀಯತೆ ಉಳಿದುಕೊಳ್ಳುತ್ತೆ. ಆದರೆ, ಈ ಇಡ್ಲಿ ಇಂದು ಗೋವಾ ಸಡೇಋರಿದಂತೆ ಎಲ್ಲ ರಾಜ್ಯಗಳನ್ನೂ ಕೂಡಾ ವ್ಯಾಪಕವಾಗಿ ಆವರಿಸಿಕೊಂಡಿದೆ. ಅಲ್ಲೆಲ್ಲ ತಯಾರಿಕೆಯಲ್ಲಿ ಶುಚಿತ್ವ ಕಾಪಾಡಿಕೊಂಡರೆ ಯಾವ ಕಂಟಕಗಳೂ ಇರೋದಿಲ್ಲ!
ಇದೆಲ್ಲದರಾಚೆಗೆ ಈವತ್ತಿಗೆ ಬೆಂಗಳೂರಿನಲ್ಲಿ ಹಲವು ಹೋಟೆಲ್ ಗಳಲ್ಲಿ ಇಡ್ಲಿಯನ್ನು ತಯಾರಿಸೋದರಿಂದ ಮೊದಲ್ಗೊಂಡು ಪ್ಯಾಕಿಂಗ್, ಬಡಿಸುವವರೆಗೆ ಎಲ್ಲದಕ್ಕು ಪ್ಲಾಸ್ಟಿಕ್ಕಿಗೆ ಅಂಟಿಕೊಂಡಿದ್ದಾರೆ. ಹೀಗೆ ಬಿಸಿಯಾಗುವ ಹಂತದಲ್ಲಿ ಪ್ಲಾಸ್ಟಿಕ್ ಬಳಸಿದರೆ ಸಹಜವಾಗಿಯೇ ಅದರ ವಿಷಕಾರಿ ಅಂಶಗಳು ಆಹಾರಗಳಿಗೂ ಕೂಡಾ ಮೆತ್ತಿಕೊಳ್ಳುತರ್‍ತವೆ. ಇದು ನಿಜವಾಗಿಯೂ ಕಾಮನ್ ಸೆನ್ಸ್ ಮ್ಯಾಟರ್. ಅದನ್ನು ತಿಳಿಯಲು ಯಾವ ಪ್ರಯೋಗ, ಪರೀಕ್ಷೆಗಳೂ ಬೇಕಿಲ್ಲ. ಈವತ್ತಿಗೆ ಹೋಟೆಕಲ್ ಉದ್ಯಮ ಒಂದು ದಂಧೆಯಾಗಿದೆ. ಮೊದ ಮೊದಲು ಗ್ರಾಹಕರನ್ನೇ ದೇವರೆಂದುಕೊಂಡಿದ್ದವರೆಉ ಮನೆಯಂತೆಯೇ ಶುಚಿತ್ವಕ್ಕೆ ಆದ್ಯತೆ ಕೊಟ್ಟು ತಯಾರಿಸುತ್ತಿದ್ದರುಉ. ಆದರೀಗ ಗ್ರಾಹಕರ ಆರೋಗ್ಯದ ಮೇಲೆ ಯಾವ ಕಾಳಜಿಯೂ ಇಲ್ಲ. ಇದು ಹೀಗೆಯೇ ಮುಂದುವರೆದರೆ ಖಮಡಿತವಾಗಿಯೂ ಇಡ್ಲಿ ಸೇರಿದಂತೆ ಬಹುತೇಕ ಆಹಾರಗಳು ವಿಷಮಯವಾಗುತ್ತವೆ!