Hrithik Roshan: ಬಾಲಿವುಡ್ ಅಂಗಳದ ಸೂಪರ್ ಹಿಟ್ ಸಿನಿಮಾ ಕ್ರಿಶ್(Krrish). ಹೃತಿಕ್ ರೋಶನ್(Hrithik Roshan) ಸೂಪರ್ ಹೀರೋ ಆಗಿ ಮಿಂಚಿದ್ದ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿತ್ತು. ಹೃತಿಕ್ ಕೆರಿಯರ್‌ಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ರಾಕೇಶ್ ರೋಶನ್ ನಿರ್ದೇಶನದಲ್ಲಿ ಬಂದ ಚಿತ್ರದಲ್ಲಿ ಕ್ರಿಶ್ ಅವತಾರದಲ್ಲಿ ಹೃತಿಕ್ ಕಂಡು ಥ್ರಿಲ್ ಆಗಿದ್ರು ಸಿನಿರಸಿಕರು. ಇದೀಗ ಗುಡ್ ನ್ಯೂಸ್ ಈ ತಂಡಡಿಂದ ಸಿಕ್ಕಿದೆ. ಕ್ರಿಶ್ ಮತ್ತೊಂದು ಸೀಕ್ವೆಲ್ ಬರೋದು ಕನ್ಫರ್ಮ್ ಆಗಿದೆ.
ಹೃತಿಕ್(Hrithik Roshan) ರೋಶನ್ ಇಂಡಿಯನ್ ಸೂಪರ್ ಹೀರೋ ಆಗಿ ಮತ್ತೆ ಮಿಂಚಲಿದ್ದಾರೆ. ಬಿಟೌನ್ ಅಂಗಳದ ಆಲ್ ಟೈಂ ಸೂಪರ್ ಹಿಟ್ ಸಿನಿಮಾ ‘ಕ್ರಿಶ್’((Krrish4) ನಾಲ್ಕನೇ ಸೀಕ್ವೆಲ್‌ಗೆ ತೆರೆಮರೆಯಲ್ಲಿ ಸಿದ್ದತೆಗಳು ನಡೆಯುತ್ತಿದೆ. ಈ ಬಗ್ಗೆ ಸುಳಿವು ನೀಡಿದ್ದು ಬಾಲಿವುಡ್ ನಿರ್ದೇಶಕ ಸಿದ್ದಾರ್ತ್ ಆನಂದ್. ಹೃತಿಕ್ ಅಭಿನಯದ ಫೈಟರ್ ಸಿನಿಮಾ ನಿರ್ದೇಶಿಸಿರುವ ಸಿದ್ದಾರ್ಥ್ ಆನಂದ್ ಕ್ರಿಶ್ ನಾಲ್ಕನೇ ಅವತರಣಿಕೆ ಬರೋದು ಕನ್ಫರ್ಮ್ ಎಂದಿದ್ದಾರೆ. ಈ ಸುದ್ದಿ ಬಿಟೌನ್ ಅಂಗಳದಲ್ಲಿ ಸಖತ್ ಬಝ್ ಕ್ರಿಯೇಟ್ ಮಾಡಿದ್ದು, ಹೃತಿಕ್ ಫ್ಯಾನ್ಸ್ ಸುದ್ದಿ ಕೇಳಿ ಎಕ್ಸೈಟ್ ಆಗಿದ್ದಾರೆ.
‘ಕ್ರಿಶ್’(Krrish4)ಸಿನಿಮಾ ಬಾಕ್ಸ್ ಆಫೀಸ್‌ನಲಿ ಸೃಷ್ಟಿಸಿದ ಮ್ಯಾಜಿಕ್ ನಂತರ ಇದರ ಸೀಕ್ವಲ್‌ಗಳು ಬಿಡುಗಡೆಯಾಗಿ ಕಮಾಲ್ ಮಾಡಿದ್ದವು. 2013ರಲ್ಲಿ ‘ಕ್ರಿಶ್3’ ಬಿಡುಗಡೆಯಾಗಿತ್ತು ಹೃತಿಕ್ ಸೂಪರ್ ಹೀರೋ ಆಗಿ ಅಕ್ಷರಶಃ ಎಲ್ಲರನ್ನೂ ಫಿದಾ ಆಗುವಂತೆ ಮಾಡಿದ್ರು. ಆದಾದ ನಂತರ ಕ್ರಿಶ್ ನಾಲ್ಕನೆ ಸೀಕ್ವೆಲ್ ಬರಲಿದೆ ಎಂಬ ಮಾತುಗಳು ಕೇಳಿ ಬಂದಿದ್ವು. ಇದೀಗ ಆ ಸುದ್ದಿಗೆ ಜೀವ ಬಂದಿದೆ. ಹೃತಿಕ್ ಹಾಗೂ ರಾಕೇಶ್ ರೋಶನ್ ಕ್ರಿಶ್ ನಾಲ್ಕನೇ ಸೀಕ್ವೆಲ್‌ಗೆ ಕಥೆಯನ್ನು ಸಿದ್ದ ಪಡಿಸುತ್ತಿದ್ದಾರಂತೆ. ನಿರೀಕ್ಷೆಗೂ ಮೀರಿದ ಸಿನಿಮಾ ಇದಾಗಲಿದ್ದು, ಇಬ್ಬರೂ ಥ್ರಿಲ್ಲಿಂಗ್ ಹಾಗೂ ಎಕ್ಸೈಟ್ ಆಗಿರೋ ಎಳೆಯನ್ನು ಪೊಣಿಸೋದ್ರಲ್ಲಿ ಬ್ಯುಸಿಯಾಗಿದ್ದಾರಂತೆ. ಈ ವರ್ಷ ಕಥೆ ಫೈನಲ್ ಆಗಲಿದ್ದು, ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ಆರಂಭವಾಗಲಿದ ಎಂದು ಬಾಲವುಡ್ ಮೂಲಗಳು ವರದಿ ಮಾಡಿವೆ. ಸದ್ಯ ಹೃತಿಕ್ ‘ವಾರ್2’(War2)ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ನಂತರ ಕ್ರಿಶ್ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲ್ಲಿದ್ದಾರೆ.