ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Toofan: ‘ತೂಫಾನ್’ ಗ್ಲಿಂಪ್ಸ್‌ಗೆ ಅಪಾರ ಮೆಚ್ಚುಗೆ- ರೋಶನ್, ಅನುಷಾ ರೈ ಜೋಡಿಯ ಸಿನಿಮಾ..!

Bharathi Javalliby Bharathi Javalli
15/07/2024
in Majja Special
Reading Time: 1 min read
Toofan: ‘ತೂಫಾನ್’ ಗ್ಲಿಂಪ್ಸ್‌ಗೆ ಅಪಾರ ಮೆಚ್ಚುಗೆ- ರೋಶನ್, ಅನುಷಾ ರೈ ಜೋಡಿಯ ಸಿನಿಮಾ..!

Toofan: ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾವೊಂದು ಸೌಂಡ್‌ ಮಾಡಲು ರೆಡಿಯಾಗಿದೆ. ಈ ಚಿತ್ರದ ಹೆಸರು ತೂಫಾನ್(Toofan)̤‌ ಆರ್‌ ಚಂದ್ರಕಾಂತ್‌ ಚಿತ್ರಕಥೆ,ಸ ಸಂಭಾಷಣೆ ಬರೆದು ಆಕ್ಷನ್‌ ಕಟ್‌ ಹೇಳಿರುವ ಸಿನಿಮಾವಿದು. ಚಿತ್ರದಲ್ಲಿ ರೋಶನ್‌ ನಾಯಕ ನಟನಾಗಿ ನಟಿಸಿದ್ದು, ಚಿತ್ರಕ್ಕೆ ಕಥೆ ಕೂಡ ಬರೆದಿದ್ದಾರೆ. ಸಿನಿಮಾ ಟೀಸರ್‌, ಟ್ರೈಲರ್‌ಗೂ ಮುನ್ನ ತಮ್ಮ ಸಿನಿಮಾ ಕ್ವಾಲಿಟಿ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಬಂದ ಚಿತ್ರತಂಡ ಚಿತ್ರ ಗ್ಲಿಂಪ್ಸ್‌ ತೋರಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಚಿತ್ರದ ನಿರ್ದೇಶಕ ಆರ್.ಚಂದ್ರಕಾಂತ್ ಮಾತನಾಡಿ ಸಿನಿಮಾ ನಂದು ಅನ್ನುವುದಕ್ಕಿಂತ ರೋಷನ್ ಕನಸು ಎಂದು ಹೇಳಬೇಕು. ಅವರು ಕಥೆ ಹೇಳಿ ನಾನೇ ನಿರ್ದೇಶನ ಮಾಡಬೇಕೆಂದು ಕೋರಿಕೊಂಡರು. 1994ರಲ್ಲಿ ಮಗ ತಂದೆಗೋಸ್ಕರ ಸೇಡು ತೀರಿಸಿಕೊಳ್ಳುವ ಏಳೆಯನ್ನು ಹೊಂದಿದೆ. ಶೇಕಡ 50ರಷ್ಟು ಚಿತ್ರೀಕರಣ ಮುಗಿದಿದೆ. ನಿರ್ಮಾಪಕರ ಒತ್ತಾಯದ ಮೇರೆಗೆ ಗ್ಲಿಂಪ್ಸ್‌ನ್ನು ತೋರಿಸಲಾಗಿದೆ. ಇದು ಟೀಸರ್, ಟ್ರೇಲರ್ ಅಲ್ಲ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾದ ತೂಫಾನ್ ಸ್ಪಾರ್ಕ್ ಎನ್ನಬಹುದು. ನಮ್ಮ ಚಿತ್ರ ಹೇಗೆ ಬರುತ್ತಿದೆ, ಯಾವ ತರಹದಲ್ಲಿ ಇದೆ ಎಂಬುದನ್ನು ತೋರಿಸಲು ಇದನ್ನು ಸಿದ್ದಪಡಿಸಲಾಗಿದೆ ಎಂದು ತಿಳಿಸಿದ್ರು.

ನಾಯಕ ರೋಶನ್(Roshan) ಮಾತನಾಡಿ, ಕನ್ನಡ ಸಿನಿಮಾಗಳನ್ನು ನೋಡಲು ಜನರು ಚಿತ್ರಮಂದಿರಕ್ಕೆ ಬರುತ್ತಿಲ್ಲವೆಂಬ ಆಪಾದನೆ ಇದೆ. ಪ್ರತಿಭೆ ಇರುವ ಇಂತಹ ನಿರ್ದೇಶಕರಿಗೆ ಅವಕಾಶ ಕೊಡಬೇಕು. ನಾನು ಯಶ್ ಗರಡಿಯಲ್ಲಿ ಪಳಗಿದವನು. ಅವರು ಸಿನಿಮಾದ ತುಣುಕುಗಳನ್ನು ನೋಡಿಲ್ಲ. ಖಂಡಿತವಾಗಿಯೂ ಅವರಿಗೆ ತೋರಿಸುತೇನೆ. ಒನ್ ಲೈನ್ ನನ್ನದು ಆದರೂ, ಅದಕ್ಕೆ ಸುಂದರವಾದ ಆಕಾರ ಕೊಡುತ್ತಿರುವುದು ನಿರ್ದೇಶಕರು. ವಿದ್ಯಾವಂತರ ಮಕ್ಕಳು ಮುಂದು ಬರುವಂತೆ, ಒಬ್ಬ ಆಟೋ ಚಾಲಕನ ಮಗನಾಗಿ ಪ್ರಮೋಟ್ ಮಾಡಲು ಚಿಕ್ಕ ಕನಸು ಕಂಡಿಲ್ಲ. ಭಾರತದಾದ್ಯಂತ ಸಾವಿರಕ್ಕೂ ಹೆಚ್ಚು ಕೇಂದ್ರಗಳಲ್ಲಿ ತೆರೆಗೆ ತರುವ ಛಲ ಬಂದಿದೆ. ಎರಡು ವರ್ಷದ ಶ್ರಮ ಇಲ್ಲಿಯವರೆಗೂ ತಂದು ನಿಲ್ಲಿಸಿದೆ ಎಂದರು.

ಮುಗ್ದ ಹುಡುಗಿ, ಯಾರಿಗೂ ಹೆದರದ ಹಾಗೂ ಮಹರಾಜನ ಮಗಳು ಯುವರಾಣಿ ಹೀಗೆ ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆಂದು ನಾಯಕಿ ಅನುಷಾ ರೈ(Anusha Rai) ಪಾತ್ರದ ಪರಿಚಯ ಮಾಡಿಕೊಂಡರು. ಮುಖ್ಯ ಖಳನಾಯಕನಾಗಿ ಭೀಷ್ಮರಾಮಯ್ಯ ಉಳಿದಂತೆ ರಂಗಾಯಣರಘು, ಅಶ್ವಿನ್‌ಹಾಸನ್, ಸೂರ್ಯಪ್ರವೀಣ್, ಅಯ್ಯಪ್ಪಶರ್ಮ, ಬಿ.ಸುರೇಶ್,  ಉಗ್ರಂ ರವಿ ಚಿತ್ರದ ತಾರಾಬಳಗದಲ್ಲಿದ್ದಾರೆ.ಸಂಗೀತ ಸಚ್ಚಿನ್‌ಬಸ್ರೂರು, ಛಾಯಾಗ್ರಹಣ ಗಂಗು, ಸಾಹಸ ನರಸಿಂಹ, ಸಂಕಲನ ಉಮೇಶ್.ಆರ್.ಬಿ ಚಿತ್ರಕ್ಕಿದೆ. ಎಸ್.ಆರ್.ಮೂವೀಸ್ ಲಾಂಛನದಲ್ಲಿ ಬೆಳಗಾಂ ಮೂಲದ ಕನ್ನಡ ಅಭಿಮಾನಿ ಷರೀಫ ಬೇಗಂ ನಡಾಫ್ ಬಂಡವಾಳ ಹೂಡಿದ್ದಾರೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Appu Cup: ‘ಅಪ್ಪು ಕಪ್ ಸೀಸನ್ 2’ಗೆ ಚಾಲನೆ – ಟ್ರೋಫಿ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್,  ಶ್ರೀಮುರಳಿ

Appu Cup: ‘ಅಪ್ಪು ಕಪ್ ಸೀಸನ್ 2’ಗೆ ಚಾಲನೆ - ಟ್ರೋಫಿ ಅನಾವರಣ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್, ಶ್ರೀಮುರಳಿ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.