ಸೌತ್ ಸಿನಿಮಾ ಇಂಡಸ್ಟ್ರಿಯ ಸಖತ್ ಬ್ಯೂಟಿ, ನಮ್ಮೆಲ್ಲರ ಸ್ವೀಟಿ ಸಪ್ತಪದಿ ತುಳಿಯೋದು ಯಾವಾಗ? ಆಲ್ ರೆಡಿ 40ಕ್ರಾಸ್ ಆಯ್ತು ಹಸೆಮಣೆ ಏರುವ ಬಗ್ಗೆ ಸುದ್ದಿನೇ ಇಲ್ಲ. ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳಿ, ದಾಂಪತ್ಯ ಜೀವನಕ್ಕೆ ಅಡಿಯಿಡುವ ಬಗ್ಗೆ ದೇವಸೇನಾ ಮಾತೇ ಆಡ್ತಿಲ್ಲ. ಅಷ್ಟಕ್ಕೂ, ಏನಾಗ್ತಿದೆ ಅರುಂಧತಿ ಬಾಳಲ್ಲಿ? ಭಾಗಮತಿ ಸೌಭಾಗ್ಯವತಿಯಾಗೋದು ಯಾವಾಗ? ಜೇಜಮ್ಮನಿಗೆ ಕಂಕಣ ಬಲ ಕೂಡಿಬರುವುದೆಂದು? ಹೀಗೆ ಇನ್ನೂ ಅನೇಕ ಪ್ರಶ್ನೆಗಳು ಅವರ ಕುಟುಂಬವನ್ನ ಕಾಡಿವೆಯೋ ಬಿಟ್ಟಿವೆಯೋ ಆದರೆ, ಅಭಿಮಾನಿಗಳಂತೂ ಕಾಡಿವೆ ಈಗಲೂ ಕಾಡುತ್ತಿವೆ. ಈ ಮಧ್ಯೆಯೇ ಸ್ವೀಟಿ ಬಾಂಬ್ ಸಿಡಿಸಿದ್ದಾರೆ. ಲವ್ವು, ರಿಲೇಷನ್ಶಿಪ್ಪು, ಮ್ಯಾರೇಜ್ ಈ ಮೂರಲ್ಲೂ ನನಗೆ ನಂಬಿಕೆಯಿಲ್ಲ ಅಂತೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.
ಅಷ್ಟಕ್ಕೂ, ಸ್ವೀಟಿ ಹಿಂಗ್ಯಾಕೆ ಹೇಳಿದ್ರು? ಯಾರ ಮುಂದೆ ಹೇಳಿದ್ರು ಮತ್ತು ಎಲ್ಲಿ ಹೇಳಿದ್ರು ಅನ್ನೋದನ್ನ ನಿಮ್ಮ ಮುಂದೆ ಹರವಿಡುವುದಕ್ಕೆ ಮೊದಲೇ ಸ್ವೀಟಿ ರಿಲೇಷನ್ ಶಿಪ್ ಬಗ್ಗೆ ಹೇಳಿಬಿಡ್ತೀವಿ. ಕೋಸ್ಟಲ್ವುಡ್ ಬ್ಯೂಟಿ ಅನುಷ್ಕಾ ರಿಯಲ್ ಲೈಫ್ನಲ್ಲಿ ಯಾರನ್ನಾದ್ರೂ ಲವ್ ಮಾಡಿದ್ದಾರಾ? ಯಾರೊಟ್ಟಿಗಾದ್ರೂ ರಿಲೇಷನ್ಶಿಪ್ನಲ್ಲಿದ್ದಾರಾ? ಈಗಲೂ ಆ ಪ್ರೀತಿ ಮತ್ತು ಸಂಬಂಧ ಸುಮಧುರವಾಗಿದೆಯಾ ಅಥವಾ ಮುರಿದುಬಿದ್ದಿದೆಯಾ? ಇದ್ಯಾವ ಪ್ರಶ್ನೆಗೂ ಉತ್ತರವಿಲ್ಲ. ಆದರೆ, ಡಾರ್ಲಿಂಗ್ ಪ್ರಭಾಸ್ ಜೊತೆಗೆ ಸ್ವೀಟಿ ಹೆಸರು ತಳುಕು ಹಾಕಿಕೊಂಡಿರುವುದೇನೋ ನಿಜ. ಇಬ್ಬರು ಆನ್ಸ್ಕ್ರೀನ್ ನಲ್ಲಿ ಒಂದಾಗಿ ಮೂರ್ನಾಲ್ಕು ಪಿಕ್ಚರ್ ಮಾಡಿದ್ದರಿಂದ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಆ ಸ್ನೇಹ ಪ್ರೀತಿಯಾಗಿ ರೂಪಾಂತರಗೊಂಡಿದೆಯಾ? ಆ ಸ್ನೇಹ ಸಲುಗೆಗೆ ಕಾರಣವಾಗಿದೆಯಾ? ಆ ಸ್ನೇಹ ಸಪ್ತಪದಿ ತುಳಿಯುವವರೆಗೂ ಕರೆದುಕೊಂಡು ಹೋಗಲಿದೆಯಾ? ಸದ್ಯಕ್ಕಿವು ಉತ್ತರ ಇಲ್ಲದ ಪ್ರಶ್ನೆಗಳು.
ಹಾಗಾದ್ರೆ, ಸ್ವೀಟಿ ಲವ್ವು, ರಿಲೇಷನ್ ಶಿಪ್ಪು, ಮ್ಯಾರೇಜ್ ಈ ಮೂರಲ್ಲೂ ನನಗೆ ನಂಬಿಕೆಯಿಲ್ಲ ಅಂತ ಯಾಕ್ ಹೇಳಿದ್ರು? ಹೀಗೊಂದು ಪ್ರಶ್ನೆ ಮೂಡುತ್ತೆ. ಅದಕ್ಕೆ ಉತ್ತರ ಕೊಡಬೇಕು ಅಂದರೆ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಬಗ್ಗೆ ಹೇಳಲೇಬೇಕು. ಅಂದ್ಹಾಗೇ, `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಸ್ವೀಟಿ ಅನುಷ್ಕಾ ನಟನೆಯ ಅಪ್ಕಮ್ಮಿಂಗ್ ಸಿನಿಮಾ. ಇದೇ ಸೆಪ್ಟೆಂಬರ್ 07ರಂದು ತೆರೆಗೆ ಬರ್ತಿದೆ. ಕಳೆದ ಮೂರು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವಿದ್ದ ಕರಾವಳಿ ಬೆಡಗಿ, `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಮೂಲಕ ಬಿಗ್ಸ್ಕ್ರೀನ್ಗೆ ಕಂಬ್ಯಾಕ್ ಮಾಡ್ತಿದ್ದಾರೆ. ನಟ ನವೀನ್ ಪೋಲಿಶೆಟ್ಟಿಗೆ ಜೋಡಿಯಾಗಿದ್ದು, ಸದ್ಯ ರಿಲೀಸ್ ಆಗಿರುವ ಟ್ರೇಲರ್ ಸಿನಿಮಾ ಪ್ರೇಮಿಗಳನ್ನ ಹುಚ್ಚೆಬ್ಬಿಸಿದೆ. ಇಬ್ಬರ ಕೆಮಿಸ್ಟ್ರಿ ಭರ್ಜರಿಯಾಗಿ ವರ್ಕೌಟ್ ಆಗುವ ಸೂಚನೆ ಸಿಕ್ಕಿದೆ. ಮಿಸ್ಟರ್ ಪೋಲಿಶೆಟ್ಟಿ ಮುಂದೆ ನಿಂತು ಸ್ವೀಟಿ ಹೊಡೆದಿರುವ ಲವ್ವು, ರಿಲೇಷನ್ ಶಿಪ್ಪು, ಮ್ಯಾರೇಜ್ ಇದ್ರಲ್ಲಿ ನನಗೆ ನಂಬಿಕೆಯಿಲ್ಲ ಎನ್ನುವ ಡೈಲಾಗ್, ಡಾರ್ಲಿಂಗ್ ಅಭಿಮಾನಿಗಳನ್ನ ಕೊಂಚ ಅಪ್ಸೆಟ್ ಮಾಡಿದೆ.
ಹೌದು, ಡಾರ್ಲಿಂಗ್ ಫ್ಯಾನ್ಸ್ ದೇವಸೇನಾ ಹಾಗೂ ಪ್ರಭಾಸ್ ಇಬ್ಬರು ಒಂದಾಗಬೇಕು ಅಂತ ಬಯಸ್ತಿದ್ದಾರೆ. ರೀಲ್ ಲೈಫ್ ನಲ್ಲಿ ದಿ ಬೆಸ್ಟ್ ಜೋಡಿ ಎನಿಸಿಕೊಂಡಿರೋ ಸ್ವೀಟಿ ಹಾಗೂ ಡಾರ್ಲಿಂಗ್, ರಿಯಲ್ ಲೈಫ್ ನಲ್ಲಿ ಮಾಧರಿ ಜೋಡಿಯಾಗಬೇಕು ಅಂತ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಅಷ್ಟಕ್ಕೂ, ಅಭಿಮಾನಿಗಳ ಈ ಬಯಕೆ ಈಡೇರುತ್ತೋ? ಇಲ್ಲವೋ ಗೊತ್ತಿಲ್ಲ. ಬಟ್, ಚಿತ್ರಪ್ರೇಮಿಗಳಿಂದ ಹಿಡಿದು ಡೈಹಾರ್ಡ್ ಫ್ಯಾನ್ಸ್ ತನಕ ಎಲ್ಲರೂ ಕೂಡ ಬಾಹುಬಲಿ ಜೋಡಿ ಒಂದಾಗಿ ದಿಬ್ಬಣ ಹೋಗುವುದನ್ನ ಕಾಯ್ತಿದ್ದಾರೆ. `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ಟ್ರೇಲರ್ ನೋಡಿ ಖುಷಿಪಟ್ಟಿರೋ ಪ್ರಭಾಸ್, ನಗುನಾ ಕಂಟ್ರೋಲ್ ಮಾಡೋಕೆ ಆಗಲಿಲ್ಲ. ಫೆಂಟ್ಯಾಸ್ಟಿಕ್ ಅಂಡ್ ಆಲ್ ದಿ ಬೆಸ್ಟ್ ಅಂತ ಫಿಲ್ಮ್ ಟೀಮ್ಗೆ ಶುಭಕೋರಿದ್ದಾರೆ. ಅಲ್ಲಿಗೆ, ಸ್ವೀಟಿ ಹಾಗೂ ಡಾರ್ಲಿಂಗ್ ನಡುವೆ ಸ್ನೇಹವಂತೂ ಇದೆ. ಆ ಸ್ನೇಹ ಪ್ರೀತಿಯಾಗಿ ಕನ್ವರ್ಟ್ ಆಗುತ್ತಾ? ಆಲ್ರೆಡಿ ಆಗಿದೆಯಾ ಎಂಬುದು ಮಾತ್ರ ಗುಟ್ಟಾಗಿರೋ ಸತ್ಯ. ಎನಿವೇ ಕಾದು ನೋಡೋಣ.
3 ವರ್ಷದ ನಂತರ ಸಿಲ್ವರ್ ಸ್ಕ್ರೀನ್ಗೆ ಬರ್ತಿರೋ ಸ್ವೀಟಿನಾ ಸ್ವಾಗತಿಸೋಣ. ಟೀಸರ್ ನಿಂದಲೇ ಹಲ್ ಚಲ್ ಎಬ್ಬಿಸಿರೋ `ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ’ ನಾ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡೋಣ. ಅಚ್ಚರಿ ಅಂದರೆ ಕಿಂಗ್ ಖಾನ್ ಜವಾನ್ ಎದುರು ತಮ್ಮ ಚಿತ್ರ ರಿಲೀಸ್ ಮಾಡ್ತಿದ್ದಾರೆ. ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರ ಇದಾಗಿದ್ದು, ಮಹೇಶ್ ಬಾಬು ಡೈರೆಕ್ಷನ್ ಮಾಡಿದ್ದಾರೆ. ಯು.ವಿ ಕ್ರಿಯೇಷನ್ ಸಂಸ್ಥೆ ಈ ಸಿನಿಮಾ ನಿರ್ಮಿಸಿದ್ದು, ಸ್ಟ್ಯಾಂಡಪ್ ಕಾಮಿಡಿಯನ್ ಪಾತ್ರದಲ್ಲಿ ನವೀನ್ ಪೋಲಿಶೆಟ್ಟಿ, ಮಾಸ್ಟರ್ ಚೆಫ್ ಆಗಿ ಅನುಷ್ಕಾ ಶೆಟ್ಟಿ ಮಿಂಚಿದ್ದಾರೆ. ಜೀವನದ ಬಗ್ಗೆ ಡಿಫರೆಂಟ್ ಆಫ್ ಒಪಿನಿಯನ್ ಇರುವ ಎರಡು ಪಾತ್ರಗಳನ್ನು ನಿರ್ದೇಶಕ ಮಹೇಶ್ಬಾಬು ಅದ್ಭುತವಾಗಿ ತೆರೆಮೇಲೆ ತೋರಿಸಿದ್ದಾರೆ. ಹ್ಯೂಮರ್ ಜೊತೆ ಎಮೋಷನ್ ನ ಬ್ಲೆಂಡ್ ಮಾಡಿ ಸಿನಿಮಾ ತಯ್ಯಾರಿಸಿದ್ದಾರೆ. ತುಳಸಿ, ಜಯಸುಧಾ, ಮುರುಳಿ ಶರ್ಮಾ, ಅಭಿನವ್ ಗೌತಮ್ ಸೇರಿದಂತೆ ಹಲವರು ಪಾತ್ರ ವರ್ಗದಲ್ಲಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲೆಯಾಳಂಗೆ ಡಬ್ ಆಗಿ ಪ್ಯಾನ್ ಇಂಡಿಯಾ ರಿಲೀಸ್ ಆಗ್ತಿದೆ.