ಮೆಹಬೂಬ ಮೆಹಬೂಬ ಅಂತಾ ಪವರ್ ಸ್ಟಾರ್ ಜೊತೆ ಬಿಂದಾಸ್ ಆಗಿ ಹೆಜ್ಜೆ ಹಾಕಿ ಕನ್ನಡಿಗರ ದಿಲ್ ಕದ್ದ ದಿಲ್ ರುಭ ತ್ರಿಷಾ ಕೃಷ್ಣನ್.. ಈ ಚೆನ್ನೈ ಚೆಲುವೆ ಕಳೆದೆರೆಡು ದಿನಗಳಿಂದ ಭಾರೀ ಸುದ್ದಿಯಲ್ಲಿದ್ದಾರೆ. ಕಾರಣ ಸಿನಿಮಾ ವಿಚಾರವಲ್ಲ..ಬದಲಾಗಿ ಮನ್ಸೂರ್ ಅಲಿ ಖಾನ್ ಆ ಹೇಳಿಕೆಯಿಂದ ತ್ರಿಷಾ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಯಾರು ಈ ಮನ್ಸೂರ್? ನಿಜ ಜೀವನದಲ್ಲಿಯೂ ಖಳನಾಯಕನಾಗಿ ವರ್ತಿಸಿಬಿಟ್ರಾ ಮನ್ಸೂರ್? ತ್ರಿಷಾ ವಿರುದ್ಧ ಆತ ಹೇಳಿದ್ದೇನು? ಸೌತ್ ಸೆಲಬ್ರಿಟಿಗಳು ಗರಂ ಆಗಿದ್ದೇಕೆ? ಅನ್ನೋದರ ಡೀಟೈಲ್ಡ್ ಇಲ್ಲಿದೆ ನೋಡಿ
ಮನ್ಸೂರ್ ಅಲಿ ಖಾನ್. ವಯಸ್ಸು 62 ವರ್ಷ. ಬರೀ ನಟನಷ್ಟೇ ಅಲ್ಲ, ಸಂಗೀತ ನಿರ್ದೇಶಕ, ಕಥೆಗಾರ ಮತ್ತು ನಿರ್ಮಾಪಕನೂ ಹೌದು. ರಾಜಕಾರಣಿಯೂ ಆಗಿರುವ ಮನ್ಸೂರ್ ಅಲಿ ಖಾನ್, ಮನಸ್ಸಿನೊಳಗಿನ ಅಸಹ್ಯವನ್ನು ಬಹಿರಂಗಪಡಿಸಿದ್ದಾರೆ. ಈತ ಯಾರು ಎಂದರೆ ಕನ್ನಡದಲ್ಲಿ ವಿಷ್ಣು-ಅಂಬಿ ನಟನೆಯ ದಿಗ್ಗಜರು, ಉಪೇಂದ್ರ ಅಭಿನಯದ ಮಾಸ್ತಿ, ಮಾಲಾಶ್ರೀ ನಟಿಸಿದ್ದ ಲೇಡಿ ಕಮಿಷನರ್ ಮೊದಲಾದ ಚಿತ್ರಗಳಲ್ಲಿ ನಟಿಸಿರುವವರು. ಈತನೇ ಈಗ ವಿವಾದದ ಕೇಂದ್ರ ಬಿಂದು. ಲಿಯೋ ಚಿತ್ರದಲ್ಲಿ ವಿಲನ್ ಆಗಿ ನಟಿಸಿದ್ದ ಮನ್ಸೂರ್ ಅಲಿ ಖಾನ್ ‘ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಕೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಕೆಟ್ಟದಾಗಿ ಹೇಳಿಕೊಟ್ಟಿದ್ದಾನೆ.
ಈತನ ಹೇಳಿಕೆ ವೈರಲ್ ಆಗುತ್ತಿದ್ದಂತೆಯೇ ನಟಿ ತ್ರಿಶಾ ಪ್ರತಿಕ್ರಿಯೆ ನೀಡಿದ್ದಾರೆ. ಆ ನಟನ ಮಾತುಗಳೇ ಅಸಹ್ಯ. ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ವಿಕೃತಿ ಹೊಂದಿರುವ ಆತ ನನ್ನೊಂದಿಗೆ ನಟಿಸಲು ಬಯಸಬಹುದು ಆದರೆ ನಾನಂತೂ ಅಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ನಟಿಸುವುದಿಲ್ಲ ಎಂದಿದ್ದಾರೆ. ಈತನ ಹೇಳಿಕೆಗೆ ನಿರ್ದೇಶಕ ಲೋಕೇಶ್ ಕನಗರಾಜ್ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ. ಲಿಯೋ ಡೈರೆಕ್ಟರ್ ನಿರ್ದೆಶಕ ಲೋಕೇಶ್ ತ್ರಿಷಾ ಪರವಾಗಿ ಧ್ವನಿ ಎತ್ತುತ್ತಿದ್ದಂತೆ ತಮಿಳುನಾಡಿನ ತಾರೆಯರು ಅಖಾಡಕ್ಕಿಳಿದಿದ್ದಾರೆ. ಬರೀ ಕಾಲಿವುಡ್ ಮಾತ್ರವಲ್ಲ ಟಾಲಿವುಡ್ ಕೂಡ ಪವರ್ ಬ್ಯೂಟಿ ಪರ ನಿಂತಿದೆ. ಚಿರಂಜೀವಿ, ನಾಗಚೈತನ್ಯ , ಖುಷ್ಭು, ರೋಜಾ ಸೇರಿದಂತೆ ಸೌತ್ ಸಿನಿದಂಡು ಮನ್ಸೂರ್ ಹೇಳಿಕೆಗೆ ಕೆಂಡಮಂಡಲರಾಗಿದ್ದಾರೆ.
நடிகர் சங்கத்திற்கு 4 மணி நேரம் கெடு.. நடிகர் மன்சூர் அலிகான் எச்சரிக்கை..#NewsTamil24x7 | #MansoorAliKhan | #NadigarSangam | #Trisha | #TrishaKrishnan pic.twitter.com/yoaBihpyAC
— News Tamil 24×7 (@NewsTamilTV24x7) November 21, 2023
ಮನ್ಸೂರ್ ಅಲಿ ಖಾನ್ ವಿರುದ್ಧ ಸೆಲೆಬ್ರಿಟಿಗಳು ರಾಂಗ್ ಆಗ್ತಿದ್ದಂತೆ ಆತ ನಾನು ತಮಾಷೆ, ಹಗರುವಾದ ಧಾಟಿಯಲ್ಲಿ ಹೇಳಿರುವ ಮಾತುಗಳನ್ನೇ ಎಡಿಟ್ ಮಾಡಿ ವೈರಲ್ ಮಾಡಲಾಗುತ್ತಿದೆ. ಆ ಕಾಮೆಂಟ್ಗಳನ್ನು ಹಗುರವಾದ ಧಾಟಿಯಲ್ಲಿ ಹೇಳಿದೆ ಎಂದಿದ್ದಾನೆ. ಆದ್ರೆ ಮತ್ತೆ ಪತ್ರಿಕಾಗೋಷ್ಠಿ ನಡೆಸಿ, ನಾನು ಹೇಳಿದ್ರಲ್ಲಿ ತಪ್ಪೇನು ಇಲ್ಲ ಅಂತಾ ಮತ್ತೊಮ್ಮೆ ತನ್ನ ತಪ್ಪನ್ನು ಸರಿ ಎಂದು ಬಿಂಬಿಸಿಕೊಳ್ಳುವ ಮೂರ್ಖ ಪ್ರಯತ್ನಕ್ಕೆ ಕೈಹಾಕಿದ್ದಾನೆ. ತಾನು ಹೇಳಿದ್ದು ಸರಿ ಎಂದು ಮೊಂಡು ವಾದಕ್ಕೆ ಮುಂದಾಗಿರುವ ಮನ್ಸೂರ್ ಅಲಿ ಖಾನ್ ವಿರುದ್ಧ ತ್ರಿಶಾ ಕಾನೂನು ಹೋರಾಟಕ್ಕಿಳಿದಿದ್ದಾರೆ. ಮಹಿಳಾ ಆಯೋಗಕ್ಕೂ ಕಂಪ್ಲೆಂಟ್ ನೀಡಿರುವ ಚೆನ್ನೈ ಚೆಲುವೆ ಜೊತೆ ಮತ್ತೆ ನಟಿಸಲು ನಾನ್ ರೆಡಿ ಎಂದಿದ್ದಾನೆ ಮನ್ಸೂರ್. ಆದ್ರೆ ತ್ರಿಷಾ ಸೇರಿದಂತೆ ದಿಗ್ಗಜರು ಉಗಿದರು ತನ್ನ ಚಾಳಿ ತೋರಿಸಿರುವ ಈತ ಮತ್ತೊಮ್ಮೆ ಯಾರ ವಿರುದ್ಧ ನಾಲಿಗೆ ಹರಿಬಿಡದಂತೆ ಮಾಡ್ಬೇಕು ಎನ್ನುತ್ತಿದ್ದಾರೆ ತ್ರಿಷಾ ಅಭಿಮಾನಿಗಳು.