ಸಂಗೀತ ಮಾಂತ್ರಿಕ ಎಂದೇ ಕರೆಸಿಕೊಳ್ಳೊ ದಿಗ್ಗಜ, ಭಾರತೀಯ ಸಂಗೀತ ಲೋಕದ ಹೆಮ್ಮೆ ಇಳಯರಾಜ(Ilaiyaraaja). ಪದ್ಮ ಭೂಷಣ, ಪದ್ಮ ವಿಭೂಷಣ ಪುರಸ್ಕೃತ ಇಳಯರಾಜ(Ilaiyaraaja) ಸಂಗೀತ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಬಯಸೋ ಸಾವಿರಾರು ಜೀವಗಳಿಗೆ ಸ್ಪೂರ್ತಿಯ ಸೆಲೆ. ಸಾವಿರಕ್ಕೂ ಹೆಚ್ಚು ಸಿನಿಮಾಗಳು, ಏಳು ಸಾವಿರಕ್ಕೂ ಅಧಿಕ ಹಾಡುಗಳು ಇವರ ಸಂಗೀತ ಕ್ಷೇತ್ರದ ಸಾಧನೆಗೆ ಹಿಡಿದ ಕೈಗನ್ನಡಿ. ಇಂತಹ ಅಭೂತ ಪೂರ್ವ ಸಾಧನೆಗೈದ ಮಾಂತ್ರಿಕನ ಜೀವನ ಬೆಳ್ಳಿ ಪರದೆ ಮೇಲೆ ಅನಾವರಣವಾಗುತ್ತಿದೆ.
ಇಳಯರಾಜ(Ilaiyaraaja) ಬಯೋಪಿಕ್ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದ್ದು, ಇಳಯರಾಜ, ಕಮಲ್ ಹಾಸನ್(Kamal Haasan) ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಸೌತ್ ಸಿನಿ ರಂಗದ ಸೂಪರ್ ಸ್ಟಾರ್ ಧನುಷ್(Dhanush) ಇಳಯರಾಜ(Ilaiyaraaja) ಬಯೋಪಿಕ್‌ಗೆ ಜೀವ ತುಂಬುತ್ತಿದ್ದಾರೆ. ಪ್ರತಿ ಭಾರಿ ವಿಭಿನ್ನ ಪಾತ್ರ, ವಿಭಿನ್ನ ಕಥೆ ಹೊತ್ತು ಅಮೋಘ ಅಭಿನಯದ ಮೂಲಕ ಸಿನಿ ಪ್ರೇಕ್ಷಕರ ಮನಸೂರೆಗೊಳ್ಳುವ ನಟ ಧನುಷ್(Dhanush). ಈ ಭಾರಿಯೂ ಅದೇ ಸ್ಪೆಷಾಲಿಟಿ ಹೊತ್ತು ಸಂಗೀತ ಮಾಂತ್ರಿಕನ ಜೀವನ ಕಥೆಗೆ ಭಾವ ತುಂಬಲು ರೆಡಿಯಾಗಿದ್ದಾರೆ.
ಪೋಸ್ಟರ್ ಅನಾವರಣ ಸಮಯದಲ್ಲಿ ಮಾತನಾಡಿರುವ ಧನುಷ್(Dhanush) ನನ್ನ ಬಹು ದಿನದ ಕನಸು ನನಸಾಗಿದೆ. ಇಳಯರಾಜ(Ilaiyaraaja) ಹಾಗೂ ಸೂಪರ್ ಸ್ಟಾರ್ ರಜನಿಕಾಂತ್(Rajijikanth) ಈ ಇಬ್ಬರ ಬಯೋಪಿಕ್ ನಲ್ಲಿ ನಟಿಸಬೇಕು ಎಂದು ಬಯಸಿದ್ದೆ. ಅದರಲ್ಲಿ ಒಂದು ಆಸೆ ಇಂದು ನೆರವೇರಿದೆ. ನಾನು ಇಳಯರಾಜ ಭಕ್ತ, ಅವರ ಹಾಡುಗಳನ್ನು ಕೇಳುವಾಗ ಅವರ ಪಾತ್ರದಲ್ಲಿ ನಟಿಸಿದ್ರೆ ಹೇಗಿರುತ್ತೆ ಎಂದು ಮನಸ್ಸಲ್ಲೇ ಕಲ್ಪಿಸಿಕೊಳ್ಳುತ್ತಿದ್ದೆ. ಕೊನೆಗೆ ಆ ಕಲ್ಪನೆ ನಿಜವಾಗಿದೆ ಎಂದು ಭಾವುಕಗೊಂಡಿದ್ದಾರೆ ಧನುಷ್.
ಧನುಷ್(Dhanush) ಅಭಿನಯದ ʻಕ್ಯಾಪ್ಟನ್ ಮಿಲ್ಲರ್ʼ ಸಿನಿಮಾ ನಿರ್ದೇಶಿಸಿದ್ದ ಅರುಣ್ ಮಟ್ಟೇಶ್ವರನ್(Arun Matthesheswaran) ಇಳಯರಾಜ ಜೀವನಗಾಥೆಯನ್ನು ತೆರೆ ಮೇಲೆ ತರುವ ಜವಾಬ್ದಾರಿ ಹೊತ್ತಿದ್ದಾರೆ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಯಲ್ಲಿ ಬಯೋಪಿಕ್ ನಿರ್ಮಾಣವಾಗುತ್ತಿದೆ. ಒಟ್ನಲ್ಲಿ, ಇಳಯರಾಜ ಬದುಕನ್ನು ಕಣ್ತುಂಬಿಕೊಳ್ಳೊ ಎಷ್ಟೋ ಮನಸ್ಸುಗಳ ಕನಸು ಕೊನೆಗೂ ನನಸಾಗಿದೆ.