ಕಿರುತೆರೆಯಲ್ಲಿ ಪ್ರಸಾರವಾಗ್ತಿರೋ ಜನಪ್ರಿಯ ಧಾರಾವಾಹಿ `ಅಂತರ ಪಟ’ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಸೀರಿಯಲ್ ನ ಪ್ರಮುಖ ಪಾತ್ರದಾರಿ ಆರಾಧನ ಅಂದ್ರೆ ರಿಯಲ್ ಲೈಫ್ ನ ತನ್ವಿ ಬಾಲರಾಜ್ ಪಾತ್ರ ಸಾಕಷ್ಟು ಪ್ರೇಕ್ಷಕ ಮನಗೆದ್ದಿರೋದ್ರ ಜೊತೆಗೆ ಸಿಂಪತಿಯನ್ನೂ ಗಿಟ್ಟಿಸಿಕೊಂಡಿದೆ. ಮಲ ತಂದೆಯ ನೆರಳಲ್ಲಿ ಬೆಳೆಯುವ ನಾಯಕಿ, ತನ್ನ ಅಪ್ಪನ ಕನಸನ್ನು ನನಸು ಮಾಡಲು ಮುಂದಾಗ್ತಾಳೆ. ತನ್ನದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಿ, ನೂರಾರು ಜನರ ಬಾಳಿಗೆ ಬೆಳಕಾಗುವ ನಾಯಕಿಯ ಕಥೆಯನ್ನು ‘ಅಂತರ ಪಟ’ ಧಾರಾವಾಹಿ ಮೂಲಕ ಹೇಳಲಾಗುತ್ತಿದೆ. ಈ ದಾರಿಯಲ್ಲಿ ಅವಳು ಅನುಭವಿಸುವ ಎಡರು ತೊಡರು,ನೋವು ಗಳನ್ನ ನೋಡಿ ಸೀರಿಯಲ್ ಪ್ರಿಯರು ಕಣ್ಣೀರಾಕುತ್ತಿದ್ದಾರೆ
ಇದು ಧಾರಾವಾಹಿಯ ಕಥೆಯಾದ್ರೆ ಇತ್ತ ನಿಜ ಜೀವನದಲ್ಲೂ ತನ್ವಿ ಸಾಕಷ್ಟು ನೋವುಗಳನ್ನ ಅನುಭವಿಸಿದ್ದಾರಂತೆ. ಈ ಬಗ್ಗೆ ಅವರೇ ಯೂಟ್ಯೂಬ್ ಸಂದರ್ಶನವೊಂದಲ್ಲಿ ಹೇಳುವ ಮೂಲಕ ಭಾವುಕರಾಗಿದ್ದಾರೆ. ಇಂದು ಕಿರುತೆರೆಯ ಸ್ಟಾರ್ ನಟಿ ಯಾಗಿ ಬೆಳಿತಿರೋ ಆರಾಧನ ಉರ್ಫ್ ತನ್ವಿಯ ಈ ಸಾಧನೆಯ ಹಿಂದೆ ತನ್ನ ಭಾವಾನೇ ಆಕೆಯನ್ನ ಮಧ್ಯರಾತ್ರಿ ಮನೆಯಿಂದ ಹೊರದಬ್ಬಿದ ನೋವಿನ ಕಥೆಯಿದೆ. ತನ್ವಿ ಬಾಲರಾಜ್ ಆನ್‌ಸ್ಕ್ರೀನ್‌ನಲ್ಲಿ ಎಷ್ಟೆಲ್ಲಾ ಕಷ್ಟಗಳನ್ನು ನೋಡಿದ್ದಾರೆ ಆಫ್‌ಸ್ಕ್ರೀನ್‌ನಲ್ಲೂ ಅಷ್ಟೇ ಕಷ್ಟಗಳನ್ನು ಎದುರಿಸಿದ್ದಾರಾಂತೆ. ಮಂಡ್ಯ ಮತ್ತು ಬೆಂಗಳೂರಿನಲ್ಲಿ ವಾಸವಿರುವ ನಟಿ ಒಮ್ಮೆ ಮಧ್ಯರಾತ್ರಿ ಮನೆಯಿಂದ ಹೊರ ನಡೆದಿರುವ ಘಟನೆಯನ್ನ ಹಂಚಿಕೊಂಡಿದ್ದಾರೆ.
ಒಂದು ವರ್ಷದ ಕೆಳಗೆ ನಾನು ಎರಡನೇ ಅಕ್ಕ ಮನೆಯಲ್ಲಿದ್ದೆ, ನನ್ನ ಭಾವ ಮಂದೆ ಚೆನ್ನಾಗಿ ನಗುತ್ತಾ ಮಾತನಾಡುತ್ತಾ, ಹಿಂದೆ ಇನ್ನೊಂದು ರೀತಿ ರಿಯಾಕ್ಟ್ ಮಾಡುತ್ತಿದ್ದರು. ನಾನು ಅಕ್ಕ ಮತ್ತು ಅವರ ಮಕ್ಕಳ ಜೊತೆ ಕ್ಲೋಸ್ ಆಗಿ ಇರ್ತಾ ಇದ್ದಿದ್ದು ಅವರಿಗೆ ಇಷ್ಟನೇ ಇರಲಿಲ್ಲ. ಒಂದು ವರ್ಷನೂ ಆಗಿಲ್ಲ 10 ತಿಂಗಳ ಹಿಂದೆ ನನ್ನ ಭಾವ ಫುಲ್ ಕುಡಿದು ಮನೆಗೆ ಬಂದ್ರು, ಆಗ ಅಕ್ಕ ಮತ್ತು ನಾನು ಒಂದು ಮದುವೆಗೆ ಹೋಗಿ ಬಂದಿದ್ವಿ. ಆಗ ನೀನು ಮನೆಯಲ್ಲಿ ಇರಬೇಡ ಹಾಗೆ ಹೀಗೆ…ಅವರು ಬಳಸಿರುವ ಪದಗಳನ್ನು ಹೇಳುವುದಕ್ಕೆ ಆಗಲ್ಲ ಅಷ್ಟು ಕೆಟ್ಟದಾಗಿ ಬೈದಿದ್ದಾರೆ. ಈ ಘಟನೆ ನಡೆದಾಗ ಸುಮಾರು ರಾತ್ರಿ 12.30 ಆಗಿತ್ತು. ಅಕ್ಕನ ಮನೆಯಲ್ಲಿ ವಸ್ತುಗಳನ್ನು ತೆಗೆದುಕೊಂಡು ಗೇಟ್ ಬಳಿ ಬಂದೆ ಸೀದಾ ದೊಡ್ಡಕ್ಕ ಮನೆಗೆ ಹೋಗಿರುವೆ’ ಎಂದು ಖಾಸಗಿ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ತನ್ವಿ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ.
‘ಡ್ಯಾನ್ಸ್‌ನ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವುದು ತನ್ವಿ ತಂದೆಗೆ ಇಷ್ಟ ಇರ್ಲಿಲ್ಲಂತೆ. ಆದರೂ ನೈಟ್ ಡ್ಯಾನ್ಸ್ ಶೂಟ್ ಮುಗಿಸಿಕೊಂಡು ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ. ಇನ್ನೂ ಗಿಣಿರಾಮಾ ಸೀರಿಯಲ್‌ನ ವಿಶೇಷ ಎಪಿಡೋಸ್ ಶೂಟಿಂಗ್ ಸಮಯದಲ್ಲಿ ಪ್ರಮುಖ ಪಾತ್ರಧಾರಿಗಳಿಗೆ ತನ್ವಿ ಡ್ಯಾನ್ಸ್ ಹೇಳಿಕೊಡುತ್ತಿದ್ದರಂತೆ. ಆಗ ಸೀರಿಯಲ್ EP ಇವರನ್ನ ನೋಡಿ ಆಡಿಷನ್ ಕೊಡುವಂತೆ ಹೇಳಿದ್ರಂತೆ. ಅದರಿಂದಲೇ ಇಂದು ಅಂತರಪಟಕ್ಕೆ ನಾಯಕಿಯಾಗಿರುವೆ ಎಂದು ತಾವು ಈ ರಾವಾಹಿಗೆ ಸೆಲೆಕ್ಟ್ ಆಗಿದ್ದನ್ನ ನೆನೆಯುತ್ತಾರೆ ತನ್ವಿ ಬಾಲರಾಜ್.
ಇನ್ನು ತನ್ವಿ ಹಿನ್ನಲೆ ನೋಡೋದಾದ್ರೆ, ತಂದೆ ಮಂಡ್ಯದಲ್ಲಿ ಕಾಂಟ್ರ್ಯಾಕ್ಟ್ ಕೆಲಸ ಮಾಡುತ್ತಾರೆ, ತಾಯಿ ಹೂವ ಕಟ್ಟಿ ಕುಟುಂಬ ಸಾಗಿಸುತ್ತಿದ್ದಾರೆ. ಮೂವರು ಹೆಣ್ಣುಮಕ್ಕಳಲ್ಲಿ ತನ್ವಿ ಕೊನೆಯವರು. ಇಬ್ಬರು ಅಕ್ಕಂದಿರು ಮದುವೆಯಾಗಿ ಬೆಂಗಳೂರಿನಲ್ಲಿದ್ದಾರೆ. ತನ್ವಿ ಮೊದಲು ಕಿರಿ ಅಕ್ಕನ ಮನೆಯಲ್ಲಿದ್ದರು ಈಗ ದೊಡ್ಡಕ್ಕನ ಮನೆಯಲ್ಲಿದ್ದಾರೆ. ಶೂಟಿಂಗ್ ಬ್ರೇಕ್ ಸಿಕ್ಕಾಗ ಮಂಡ್ಯದಲ್ಲಿರುತ್ತಾರಂತೆ. ಒಟ್ನಲ್ಲಿ ಜೀವನದಲ್ಲಿ ಸಾಕಷ್ಟು ಕಷ್ಟ ಕಂಡಿರುವ, ಏಳು-ಬೀಳುಗಳನ್ನು ನೋಡಿ ಇಲ್ಲಿತನಕ ಬೆಳೆದು ಬಂದಿರುವ ತನ್ವಿಗೆ ಒಳ್ಳೆದಾಗಬೇಕು. ಆಕೆಯ ಕನಸಿನಂತೆ ನಾಯಕಿಯಾಗಿ ಹೊಳಿಬೇಕು