ರಾಕಿಂಗ್ ಸ್ಟಾರ್ ಯಶ್ ಅಷ್ಟೊಂದು ಫಿಟ್ ಅಂಡ್ ಫೈನ್ ಆಗಿದ್ದಾರೆ ಅಂದರೆ ಅದಕ್ಕೆ ಕಾರಣ ಫೇಮಸ್ ಫಿಟ್ನೆಸ್ ಟ್ರೈನರ್ ಪಾನಿಪೂರಿ ಕಿಟ್ಟಿಯವರು. ಯಸ್, ರಾಕಿಭಾಯ್ ಸೇರಿದಂತೆ ಸ್ಯಾಂಡಲ್ವುಡ್ ಬಹುತೇಕ ಸ್ಟಾರ್ ನಟ-ನಟಿಯರ ಫಿಟ್ನೆಸ್ ಟ್ರೈನರ್ ಆಗಿರುವ ಪಾನಿಪೂರಿ ಕಿಟ್ಟಿಯವರು ಯಶ್ ಅವ್ರ ಪರ್ಸನಲ್ ಫಿಟ್ನೆಸ್ ಟ್ರೈನರ್ ಕೂಡ ಹೌದು. ವಿಶೇಷ ಅಂದರೆ ನಿನ್ನೆ ಕಿಟ್ಟಿಯವರ ಹೊಸ ಜಿಮ್ನ ಉದ್ಘಾಟನೆ ಮಾಡಲಾಯ್ತು. ಪ್ರೇಮಿಗಳ ದಿನದಂದು ಹಮ್ಮಿಕೊಳ್ಳಲಾಗಿದ್ದ ʻಕಿಟ್ಟೀಸ್ ಮಸಲ್ ಪ್ಲಾನೆಟ್ʼ ಜಿಮ್ ಉದ್ಘಾಟನೆಗೆ ರಾಕಿಂಗ್ ಸ್ಟಾರ್ ಯಶ್, ನೆನಪಿರಲಿ ಪ್ರೇಮ್, ಅಜಯ್ ರಾವ್ ಆಗಮಿಸಿ ಶುಭಕೋರಿದರು.
ಅಂದ್ಹಾಗೇ, ನಟ ಯಶ್ಗೆ ಕಿಟ್ಟಿ ಬರೀ ಫಿಟ್ನೆಸ್ ಟ್ರೈನರ್ ಅಲ್ಲ ಬದಲಾಗಿ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದಾರೆ. ಇಬ್ಬರ ನಡುವೆ ಸುಮಧುರ ಬಾಂದವ್ಯವಿದ್ದು ಈ ಹಿಂದೆ ಕಿಟ್ಟಿ ಒಡೆತನ ಕೆಲ ಜಿಮ್ಗಳನ್ನ ಉದ್ಘಾಟನೆ ಮಾಡಿಕೊಟ್ಟಿದ್ದರು. ಅದರಂತೇ, ಈ ಬಾರಿ ಕತ್ರಿಗುಪ್ಪೆ ಮುಖ್ಯ ರಸ್ತೆಯಲ್ಲಿ ‘ಕಿಟ್ಟೀಸ್ ಮಸಲ್ ಪ್ಲಾನೆಟ್’ ಎಂಬ ಜಿಮ್ಗೆ ನ್ಯಾಷನಲ್ ಸ್ಟಾರ್ ಯಶ್ ಚಾಲನೆ ನೀಡಿದ್ದಾರೆ.
ಹೊಸ ಬ್ರ್ಯಾಂಚ್ ಉದ್ಘಾಟನೆ ಕಾರ್ಯಕ್ರಮಕ್ಕೆ ಕರೆದಾಗ ವ್ಯಾಲೆಂಟೈನ್ ದಿನ ಎಂಬುದು ನನಗೆ ಗೊತ್ತಿರಲಿಲ್ಲ. ಅವ್ರು ಕರೆದ್ರು ನಾನೂ ಒಪ್ಪಿಕೊಂಡೆ.. ಈಗ ಫ್ಯಾಮಿಲಿ ಜೊತೆ ಹೋಗಿ ಸೆಲೆಬ್ರೇಷನ್ ಮಾಡ್ಬೇಕು ಎಂದರು. ಇದೇ ವೇಳೆ ಮಾತನಾಡಿದ ಯಶ್ಭಾಯ್, ಫ್ಯಾಮಿಲಿ ಜೊತೆಗಿಂತ ಕಿಟ್ಟಿ ಜೊತೆಗೆ ಜಾಸ್ತಿ ಟೈ ಕಳೀತೀನಿ. ಕಿಟ್ಟಿ ತುಂಬಾನೆ ಸ್ಟ್ರಿಕ್ಟ್.. ಶೂಟಿಂಗ್ ಇದ್ದಾಗ ಬೇಗ ಎದ್ದು ವರ್ಕೌಟ್ ಮಾಡ್ತೀನಿ. ಕಿಟ್ಟಿ ಇನ್ ಟೈಂ ಬರ್ತಾರೆ. ನಾನು ಚೆನ್ನಾಗಿ ಕಂಡರೂ ಅವ್ರೇ ಕಾರಣ. ನಾನು ಚೆನ್ನಾಗಿ ಕಾಣದಿದ್ರೂ ಅವರೇ ಕಾರಣ ಅಂತ ತಿಳಿಸಿದರು.