‘ನನ್ನರಸಿ ರಾಧೆ’ ಸೀರಿಯಲ್ ಮೂಲಕ ಕಿರುತೆರೆ ಲೋಕದಲ್ಲಿ ದಿಬ್ಬಣ ಹೊರಟು, ಕರುನಾಡಿನ ಮನೆಮಾತಾದ ಇಂಚರ ಎಂಗೇಜ್ ಆಗಿದ್ದಾರೆ. ಸಿದ್ಧಾಂತ್ ಸತೀಶ್ ಜೊತೆ ಇಂಚರ ಉರುಫ್ ಕೌಸ್ತುಭ ಮಣಿ (kaustubha_mani) ಎಂಗೇಜ್ಮೆಂಟ್ ಮಾಡಿಕೊಂಡಿದ್ದು, ತಮ್ಮ ಸೋಷಿಯಲ್ ಪುಟದಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಹೀಗಾಗಿ. ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ.
ಇತ್ತೀಚೆಗಷ್ಟೇ ಕೌಸ್ತುಭ (kaustubha_mani) ‘ಗೌರಿ ಶಂಕರ’ (Gowri Shankara) ಸೀರಿಯಲ್ನಿಂದ ಹೊರಬಂದಿದ್ದರು. ಇದರ ಬೆನ್ನಲ್ಲೇ ಪರ್ಸನಲ್ ಲೈಫ್ ಕಡೆ ಗಮನಹರಿಸಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಂದ್ಹಾಗೇ, ಕೌಸ್ತುಭ (kaustubha_mani) ಭಾವಿಪತಿಯ ಬಗ್ಗೆ ಹೆಚ್ಚೇನು ಡೀಟೈಲ್ಸ್ ಲಭ್ಯವಾಗಿಲ್ಲ. ನಿಮಗೆಲ್ಲ ಗೊತ್ತಿರೋ ಹಾಗೇ ಕೌಸ್ತುಭ ಸೀರಿಯಲ್ ಮಾತ್ರವಲ್ಲದೇ ಸಿನಿಮಾದಲ್ಲೂ ಮಿಂಚಿದ್ದಾರೆ. ‘ರಾಮಾಚಾರಿ 2.0’ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್ಗೆ ಇಂಟ್ರುಡ್ಯೂಸ್ ಆಗಿದ್ದರು. ಅನಂತರ ಅರ್ಜುನ್ ಜನ್ಯಾ ನಿರ್ದೇಶನದ ʻ45ʼ ಚಿತ್ರದ ಹೀರೋಯಿನ್ ಆದರು. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ನಟಿಸಿದ್ದಾರೆ. ಶಿವಣ್ಣ, ಉಪೇಂದ್ರ, ರಾಜ್ ಬಿ. ಶೆಟ್ಟಿ ಮೂವರು ಲೀಡ್ ರೋಲ್ನಲ್ಲಿದ್ದಾರೆ. ಸದ್ಯ, ಈ ಸಿನಿಮಾದ ಶೂಟಿಂಗ್ ಭರದಿಂದ ಸಾಗಿದ್ದು, ಈ ಚಿತ್ರದ ಹೆಚ್ಚಿನ ಅಪ್ಡೇಟ್ ಹೊರಬರಬೇಕಿದೆ.