ಈ ಬಾರಿ ಟಾಲಿವುಡ್ ಅಂಗಳದಲ್ಲಿ ಬಿಗ್ ಬಜೆಟ್ ಸಿನಿಮಾಗಳೂ ಸಖತ್ ಸೌಂಡ್ ಮಾಡ್ತಿವೆ. ಕಲ್ಕಿ(Kalki), ಪುಷ್ಪ(Pushpa), ಗೇಮ್ ಚೇಂಜರ್ ಸೇರಿದಂತೆ ಹಲವು ಸ್ಟಾರ್ ಸಿನಿಮಾಗಳು ಇದೇ ವರ್ಷ ಮನರಂಜನೆಯ ರಸದೌತಣ ಉಣ ಬಡಿಸಲು ಸಜ್ಜಾಗಿವೆ. ಅದರಲ್ಲೀ ಮ್ಯಾನ್ ಆಫ್ ಮಾಸಸ್ ಜೂ.NTR(Jr.NTR) ‘ದೇವರ’(Devara) ಕೂಡ ಒಂದು.
‘ದೇವರ ಸಿನಿಮಾ ಮೇಲೆ ಈಗಾಗಲೇ ಬೆಟ್ಟದಷ್ಟು ನಿರೀಕ್ಷೆ ಟಾಲಿವುಡ್ ಅಂಗಳದಲ್ಲಿ, ತಾರಕ್ ಅಭಿಮಾನಿ ಬಳಗದದಲ್ಲಿ ಬೆಳೆದಿದೆ. ಅಕ್ಟೋಬರ್ಬಲ್ಲಿ ಸಕಲ ರೀತಿಯಲ್ಲಿ ಪಂಚ ಭಾಷೆಯಲ್ಲಿ ಬೆಳ್ಳಿ ಪರದೆ ಮೇಲೆ ಕಮಾಲ್ ಮಾಡಲು ರೆಡಿಯಾಗಿದೆ ದೇವರ ಮೊದಲ ಭಾಗ. ಇದರ ನಡುವೆ ಸಿನಿಮಾ ಮೊದಲ ಹಾಡಿಗೆ ಬೇಡಿಕೆ ಇಟ್ಟಿದೆ ಜೂ.NTR(Jr.NTR) ಭಕ್ತಗಣ, ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರೇಟ್ ಮಾಡಲು ನಮಗೊಂದು ಸಾಂಗ್ ಬೇಕೆಂದು ಭಕ್ತಗಣ ಬೇಡಿಕೆ ಇಟ್ಟಿದೆ. ಆದ್ರಿಂದ ಚಿತ್ರತಂಡ ಚಿತ್ರದ ಹಾಡನ್ನು ತಾರಕ್ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಲು ತೀರ್ಮಾನಿಸಿದೆ.
ಈ ಹಾಡಿನ ವಿಶೇಷ ಅಂದ್ರೆ ಯಂಗ್, ಟ್ಯಾಲೆಂಟೆಡ್ ಜೊತೆಗೆ ಮೋಸ್ಟ್ ಹ್ಯಾಪನಿಂಗ್ ಸಂಗೀತ ನಿರ್ದೇಶಕ ಅನಿರುದ್ ರವಿಚಂದ್ರನ್. ತನ್ನ ಮ್ಯೂಸಿಕ್ನಿಂದ ಎಂತವರನ್ನು ಕುಣಿಸುವ, ಮ್ಯೂಸಿಕ್ ನಶೆ ಏರಿಸುವ ಶಕ್ತಿ ಈತನ ಸಂಗೀತ ನಿರ್ದೇಶನಕ್ಕಿದೆ. ಸೂಪರ್ ಸ್ಟಾರ್ ನಟರಿಗೆಲ್ಲ ಸೂಪರ್ ಡೂಪರ್ ಹಿಟ್ ಕೊಟ್ಟ ಖ್ಯಾತ ಸಂಗೀತ ನಿರ್ದೇಶಕ ಇದೇ ಮೊದಲ ಬಾರಿಗೆ ಜೂ.NTR ಸಿನಿಮಾಗೆ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಆದ್ರಿಂದ ಸಹಜವಾಗಿಯೇ ಈ ಸಿನಿಮಾದ ಹಾಡುಗಳ ಮೇಲೆ ಇನ್ನಿಲ್ಲದ ನಿರೀಕ್ಷೆ ಕ್ರಿಯೇಟ್ ಆಗಿದೆ. ಅಂದ್ಹಾಗೆ ದೇವರ ಮೊದಲ ಹಾಡು ಮೇ 20 ಅಂದ್ರೆ ಜೂ.NTR ಹುಟ್ಟುಹಬ್ಬದಂದು ಬಿಡುಗಡೆಯಾಗುತ್ತಿದೆ.