Indian2: ಚಿತ್ರರಂಗ ಎದುರು ನೋಡುತ್ತಿರುವ ‘ಇಂಡಿಯನ್’ ಸಿನಿಮಾ ಸೀಕ್ವೆಲ್ ವರ್ಲ್ಡ್ ವೈಡ್ ತೆರೆ ಕಾಣಲು ರೆಡಿಯಾಗಿದೆ. ಲೋಕಸಭೆ ಚುನಾವಣೆ ಪ್ರಯುಕ್ತ ಚಿತ್ರದ ರಿಲೀಸ್ ಡೇಟ್ ಮುಂದೂಡಿದ್ದ ಚಿತ್ರತಂಡ ಸಿನಿಮಾ ಬಿಡುಗಡೆ ಡೆಟ್ ಜೊತೆಗೆ ಪ್ರಮೋಶನ್ಗೂ ಚಾಲನೆ ಶುರುವಿಟ್ಟಿದೆ. ಸಿನಿಮಾದ ಹಾಡಿನ ಮೆರವಣಿಗೆಗೆ ಚಾಲನೆ ನೀಡಲು ಚಿತ್ರತಂಡ ಮುಹೂರ್ತ ಫಿಕ್ಸ್ ಮಾಡಿದೆ.
ಕಾಲಿವುಡ್ ಮಾಸ್ಟರ್ ಮೈಂಡ್, ಸ್ಟಾರ್ ನಿರ್ದೇಶಕ ಎಸ್. ಶಂಕರ್(S.Shankar). ಈ ವರ್ಷ ಶಂಕರ್ ಸಿನಿ ಅಭಿಮಾನಿಗಳಿಗೆ ಡಬಲ್ ಧಮಾಕ ಕಾದಿದೆ. 2018ರಿಂದ ಇವರ ಸಿನಿಮಾ ಮ್ಯಾಜಿಕ್ ನೋಡದೇ ಕಾದು ಕುಳತಿರುವ ಅಭಿಮಾನಿಗಳಿಗೆ ‘ಇಂಡಿಯನ್’ ಹಾಗೂ ‘ಗೇಮ್ ಚೇಂಜರ್’ ಮೂಲಕ ಮನರಂಜನೆಯ ರಸದೌತಣ ಬಡಿಸಲಿದ್ದಾರೆ. ಮೊದಲು ಕಮಲ್ ಹಾಸನ್ ಇಂಡಿಯನ್2 (Indian2) ಆಗಮನವಾಗಲಿದ್ದು, ಚಿತ್ರದ ಮೊದಲ ಹಾಡು ಇದೇ ತಿಂಗಳ 22ರಂದು ಬಿಡುಗಡೆಯಾಗ್ತಿದೆ. ಖ್ಯಾತ ಸಂಗೀತ ನಿರ್ದೇಶಕ ಅನಿರುದ್ ಮ್ಯೂಸಿಕ್ ಮ್ಯಾಜಿಕ್ ನಲ್ಲಿ ಮೂಡಿ ಬರ್ತಿರುವ ಹಾಡಿನ ಬಗ್ಗೆ ಸಖತ್ ಕ್ಯೂರಿಯಾಸಿಟಿಗೊಂಡಿದೆ ಉಳಗನಾಯಗನ್ ಫ್ಯಾನ್ಸ್.
‘ಇಂಡಿಯನ್-2’(Indian-2) ಸಖತ್ ಕ್ರೇಜ಼್ ಸೃಷ್ಟಿಸಿದೆ. ಜೂನ್ನಲ್ಲಿ ಸಿನಿಮಾ ತೆರೆ ಕಾಣಲಿದೆ ಎಂಬ ಮಾತುಗಳು ಕೇಳಿ ಬಂದಿತ್ತು, ಆದ್ರೀಗ ಸಿನಿಮಾ ಜುಲೈ 12ರಂದು ಸಿನಿಮಾ ತೆರೆಗೆ ಬರ್ತಿದ್ದು, ತೆಲುಗು, ತಮಿಳು, ಹಿಂದಿಯಲ್ಲಿ ಚಿತ್ರ ತೆರೆ ಕಾಣುತ್ತಿದೆ.