ಸ್ಯಾಂಡಲ್‍ವುಡ್ ಅಂಗಳದಲ್ಲಿ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಹೆಸರು ಮಾಡಿರುವ ಇಂದ್ರಜಿತ್ ಲಂಕೇಶ್ ಅವರು ಈಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲು ಸಜ್ಜಾಗಿದ್ದಾರಂತೆ. ವಿಶೇಷ ಅಂದರೆ ಈ ಭಾರಿ ಮಗನಿಗೋಸ್ಕರ ನಿರ್ದೇಶಕನ ಕುರ್ಚಿ ಮೇಲೆ ಕೂರಲಿದ್ದಾರೆ. ತಮ್ಮ ಮುದ್ದಿನ ಮಗನನ್ನ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಸಿದ್ದತೆ ನಡೆಸಿದ್ದು, ಮಗ ಸಮರ್ಜಿತ್ ಚೊಚ್ಚಲ ಸಿನಿಮಾಗೆ ತಾವೇ ಆ್ಯಕ್ಷನ್ ಕಟ್ ಹೇಳುವ ಮೂಲಕ ಅದ್ದೂರಿಯಾಗಿ ಲಾಂಚ್ ಮಾಡುವ ಯೋಜನೆ ಹಾಕಿಕೊಂಡಿದ್ದಾರಂತೆ. ಸೆಪ್ಟೆಂಬರ್ 04ರಂದು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಮಗನ ಜೊತೆಗೆ ಅಖಾಡಕ್ಕೆ ಇಳಿಯಲಿದ್ದಾರಂತೆ.
ಅಪ್ಪ ಡೈರೆಕ್ಟ್ರು ಎನ್ನುವ ಕಾರಣಕ್ಕೆ, ಕುಟುಂಬಕ್ಕೆ ಸಿನಿಮಾ ಹಿನ್ನಲೆ ಇದೆ ಎನ್ನುವ ಕಾರಣಕ್ಕೆ ಸಮರ್ಜಿತ್ ಚಿತ್ರರಂಗ ಪ್ರವೇಶ ಮಾಡುತ್ತಿಲ್ಲವಂತೆ. ಕಲೆ, ಸಾಹಿತ್ಯ, ನಟನೆಯ ಬಗ್ಗೆ ಒಲವಿರುವ ಸಮರ್ಜಿತ್, ನ್ಯೂಯಾರ್ಕ್ ಆಕಾಡೆಮಿ ಸೇರಿ ಆ್ಯಕ್ಟಿಂಗ್, ಡ್ಯಾನ್ಸು, ಫೈಟು ಸೇರಿದಂತೆ ಪರಿಪೂರ್ಣ ನಟನಾಗಲು ಬೇಕಾದ ಎಲ್ಲಾ ತಯ್ಯಾರಿ ನಡೆಸಿದ್ದಾರಂತೆ. ರಂಗಭೂಮಿಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಅಭಿನಯ ಮೈಗೂಡಿಸಿಕೊಂಡಿದ್ದಾರಂತೆ. ಅಷ್ಟೇ ಅಲ್ಲದೇ ವಿಕಟಕವಿ ಯೋಗರಾಜ್ ಭಟ್ರ ಬಳಿ ಎರಡು ಸಿನಿಮಾಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕೆಲಸ ನಿರ್ವಹಿಸಿದ್ದಾರಂತೆ. ಹೀಗೆ ಒಂದಿಷ್ಟು ಅನುಭವ ಪಡೆದುಕೊಂಡು, ಬೆಳ್ಳಿಭೂಮಿಗೆ ಲಗ್ಗೆ ಇಡುವ ಮುನ್ನ ಮಾಡೆಲಿಂಗ್ ಲೋಕದಲ್ಲೂ ಮಿಂಚಿರುವ ಸಮರ್ಜಿತ್ ಈಗ ಮಾಯಲೋಕಕ್ಕೆ ಎಂಟ್ರಿಕೊಡಲು ಸಜ್ಜಾಗಿದ್ದಾರಂತೆ. ಅಪ್ಪನ ನಿರ್ದೇಶನದಲ್ಲಿ ಡೆಬ್ಯೂ ಮಾಡಲು ಉತ್ಸುಕರಾಗಿದ್ದಾರಂತೆ
ಇನ್ನೂ ಮಗನನ್ನು ಇಂಡಸ್ಟ್ರಿಗೆ ಲಾಂಚ್ ಮಾಡೋದಕ್ಕೆ ಇಂದ್ರಜಿತ್ ಲಂಕೇಶ್ ಅವರು ಕೂಡ ಅಷ್ಟೇ ಕಾತುರರಾಗಿದ್ದಾರೆ ಎನ್ನಲಾಗ್ತಿದೆ. ಸತ್ಯ ಘಟನೆಯೊಂದನ್ನ ಪ್ರೇರಣೆಯಾಗಿಟ್ಟುಕೊಂಡು ಸಿನಿಮಾ ಕಥೆ ಸಿದ್ದಪಡಿಸಿರೋ ಇಂದ್ರಜಿತ್ ನಿರ್ದೇಶನದ ಜವಾಬ್ದಾರಿ ಹೆಗಲಿಗೆ ಹಾಕ್ಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ, ಧ್ಯಾನ್, ಅನಿರುದ್ದ್, ದಿಗಂತ್ ಹೀಗೆ ಕೆಲ ಸೂಪರ್‍ಸ್ಟಾರ್‍ಗಳಿಗೆ ಆ್ಯಕ್ಷನ್ ಕಟ್ ಹೇಳಿ ಸೂಪರ್ ಹಿಟ್ ಸಿನಿಮಾ ನೀಡಿದ್ದ ಇಂದ್ರಜಿತ್ ಅವರು ಈಗ ಮಗನ ಸಿನಿಮಾದ ಮೂಲಕ ಸಂಚಲನ ಮೂಡಿಸಲು ತಯ್ಯಾರಾಗುತ್ತಿದ್ದಾರೆ. ಮಾಸ್ತಿಯವರು ಡೈಲಾಗ್ ಬರೆಯುತ್ತಿದ್ದು, ಸಿನಿಮಾದ ತಾರಾಬಳಗ ಹಾಗೂ ತಂತ್ರಜ್ಞರ ಆಯ್ಕೆ ವಿಚಾರವನ್ನು ಶೀಘ್ರದಲ್ಲೇ ಹಂಚಿಕೊಳ್ಳುವುದಾಗಿ ಖಾಸಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದರೆ, ಇಂದ್ರಜಿತ್ ಮಗ ಸಮರ್ಜಿತ್‍ಗೆ ಸಾನ್ಯಾ ಅಯ್ಯರ್ ಜೋಡಿಯಾಗಲಿದ್ದಾರಂತೆ. ಮಗನ ಜೊತೆಗೆ ಸಾನ್ಯಾ ಅಯ್ಯರ್ ಅವ್ರನ್ನೂ ಇಂದ್ರಜಿತ್ ಗ್ರ್ಯಾಂಡ್ ಲಾಂಚ್ ಮಾಡಲಿದ್ದಾರೆನ್ನುವ ಸುದ್ದಿ ಕೇಳಿಬಂದಿದೆ. ಸದ್ಯ, ಸಾನ್ಯಾ ಕೂಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿಕೊಡಲು ತಯ್ಯಾರಾಗುತ್ತಿದ್ದಾರೆ. ಇತ್ತೀಷೆಗಷ್ಟೇ ಬಾಲಿವುಡ್‍ನ ಫೇಮಸ್ ಫೋಟೋಗ್ರಫರ್ ದಬೂ ರತ್ನಾನಿ ಅವ್ರ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ತಮ್ಮ ಮಾದಕ ಮೈಮಾಟವನ್ನ ಕ್ಯಾಮೆರಾ ಮುಂದೆ ತೆರೆದಿಟ್ಟು ಸುದ್ದಿಯಾಗಿದ್ದರು. ಈಗ ಸಿಲ್ವರ್ ಸ್ಕ್ರೀನ್‍ಗೆ ಎಂಟ್ರಿಕೊಡ್ತಿದ್ದಾರೆನ್ನುವ ಸುದ್ದಿ ಬಿಗ್ ಬ್ರೇಕಿಂಗ್ ನ್ಯೂಸ್ ಆಗಿದೆ. ಈ ಸುದ್ದಿ ನಿಜ ಆದರೆ ಸಾನ್ಯಾಗೆ ಪರ್ಫೆಕ್ಟ್ ಲಾಂಚ್ ಇದಾಗಲಿದೆ. ದೀಪಿಕಾ ಪಡುಕೋಣೆನಾ ಇಂಡಸ್ಟ್ರಿಗೆ ಲಾಂಚ್ ಮಾಡಿದ ನಿರ್ದೇಶಕರಿಂದಲೇ ಬೆಳ್ಳಿತೆರೆ ಪ್ರವೇಶ ಮಾಡುವ ಅದೃಷ್ಟ ಪುಟ್ಟಗೌರಿಗೆ ಸಿಕ್ಕಂತಾಗುತ್ತದೆ. ನೋಡೋಣ ಆ ಲಕ್ಕಿ ಗರ್ಲ್ ಸಾನ್ಯಾನ ಅಂತ