ಕೊರೋನಾ ಮಹಾಮಾರಿ ತಂದಿಟ್ಟಿದ್ದ ಸಂಕಟ, ಸಾವು ನೋವುಗಳನ್ನು ವಿಶ್ವದ ಜನರೆಲ್ಲ ಮರೆತಿಲ್ಲ. ಬಹುಶಃ ಅದನ್ನು ಮರೆಯುವುದು ಅಷ್ಟು ಸಲೀಸಿನ ಸಂಗತಿಯೂ ಅಲ್ಲ. ಇದುಯ ಹೇಳಿಕೇಳಿ ಮುಂದುವರೆದಿರುವ ಜಗತ್ತು. ಒಂದಷ್ಟು ದೇಶಗಳು ಅದೆಂಥಾದ್ದೇ ಸಾಂಕ್ರಾಮಿಕಗಳು ಬಂದರೂ, ಕಾಯಿಲೆಗಳು ಕಾಡಿದರೂ ಜಯಿಸಿಕೊಳ್ಳುವ ತಂತ್ರಜ್ಞಾನ ಮತ್ತು ಆರ್ಥಿಕ ಸದೃಢತೆಯನ್ನು ಹೊಂದಿವೆ. ಒಂದಷ್ಟು ಕಾಯಿಲೆಗಳನ್ನು ಹೊರತು ಪಡಿಸಿದರೆ ಮಿಕ್ಕೆಲ್ಲವಕ್ಕೂ ಔಷಧಿಯೂ ರೆಡಿಯಿದೆ. ಹಾಗಿರುವಾಗ ಯಾವ ಸಾಂಕ್ರಾಮಿಕಗಳು ಬಂದರೂ ಹೆದರುವ ಅವಶ್ಯಕತೆ ಇಲ್ಲ ಅಂತೊಂದು ನಂಬಿಕೆ ಎಲ್ಲರಲ್ಲಿಯೂ ಇತ್ತು. ಆದರೆ, ಅಂಥಾ ನಂಬಿಕೆಗಳೆಲ್ಲ ಶುದ್ಧಾನುಶುದ್ಧ ಭ್ರಮೆ ಅನ್ನೋದು ಕೊರೋನಾ ವೈರಸ್ ದಾಳಿಯ ಸಂದರ್ಭದಲ್ಲಿ ಜಗಜ್ಜಾಹೀರಾಗಿ ಬಿಟ್ಟಿತ್ತು.
ಎಲ್ಲವನ್ನೂ ಜಯಿಸಿಕೊಂಡ ಭ್ರಮೆಯಲ್ಲಿದ್ದ ಮನುಷ್ಯ ಪ್ರಾಣಿಗಳು ಕೊರೋನಾ ಭಯದಿಂದ ಮನೆಯೊಳಗೇ ಬಂಧಿಯಾಗಿದ್ದವು. ಯಾವ ಕಾಯಿಲೆ ಬಂದರೂ ಕೇರು ಮಾಡೋದಿಲ್ಲ ಎಂಬ ಭಂಡತನ ಕೊರೋನಾ ವೈರಸ್ಸಿಗೆ ಲಸಿಕೆ ಕಂಡು ಹಿಡಿಯಲು ಇಡೀ ಜಗತ್ತೇ ತಿಣುಕಾಡುತ್ತಿರುವ ವಾಸ್ತವದ ಮುಂದೆ ಅಕ್ಷರಶಃ ಕರಗಿ ಹೋಗಿತ್ತು. ಕೊರೋನಾ ವೈರಸ್ಸಿನಿಂದ ತತ್ತರಿಸಿ ಹೋಗಿದ್ದ ಜನರೆಲ್ಲ ಈ ಮಾರಿಗೊಂದು ಔಷಧಿ ಸಿಕ್ಕರೆ ಸಾಕೆಂದು ಕಾದಿದ್ದರು. ಈ ಕಾಯುವಿಕೆ ವರ್ಷಗಟ್ಟಲೆ ಜಾರಿಯಲ್ಲಿದ್ದದ್ದೇ ಮನುಷ್ಯನ ನಿಜವಾದ ಮಿತಿಗಳಿಗೆ ಹಿಡಿದ ಕೈಗನ್ನಡಿಯಂತೆ ಕಾಣಿಸುತ್ತದೆ. ಈವತ್ತಿಗೆ ಕೊರೋನಾ ಎಂಬುದೂ ಕೂಡಾ ಮಾಮೂಲಿ ಕಾಯಿಲೆ ಎಂಬಂತೆ ಕಾಣಿಸುಯತ್ತಿದೆ. ಆದರೆ ಅದು ತಂದಿಟ್ಟ ಸಾವು ನೋವುಗಳನ್ನು, ಕಣ್ಣೆದುರೇ ಜೀವದಂಥಾ ಜೀವಗಳನ್ನು ಕಳೆದುಕೊಂಡು ಕಂಗಾಲಾದವರ ಎದೆಯ ಸಂಕಟವನ್ನು ಶಮನ ಗೊಳಿಸುವ ಶಕ್ತಿ ಕಾಲವೆಂಬ ಕಾಲಕ್ಕೂ ಇಲ್ಲವೇನೋ…
ಡೆಡ್ಲಿ ಕೊರೋನಾ
೨೦೧೯ರ ಡಿಸೆಂಬರ್ ಹೊತ್ತಿಗೆಲ್ಲ ಚೀನಾ ದೇಶದ ದಿಕ್ಕಿನಿಂದ ಇಂಥಾದ್ದೊಂದು ಸಾಂಕ್ರಾಮಿಕ ರೋಗ ಹರಡುತ್ತಿರುವ ಮುನ್ಸೂಚನೆ ಸಿಕ್ಕಿತ್ತು. ಆ ವೈರಸ್ಸು ಚೀನಾ ದೇಶವನ್ನು ನಡುಗಿಸಿ ಹಾಕುತ್ತಿರೋ ಸುದ್ದಿ ಬರಲಾರಂಭಿಸಿತ್ತು. ಆ ಕ್ಷಣಕ್ಕೆ ಯಾರೂ ಕೂಡಾ ಆ ವೈರಸ್ಸು ದೇಶದ ಗಡಿ ದಾಟಿ ಬಂದು ಇಡೀ ಜಗತ್ತಿಗೇ ಹಬ್ಬಿಕೊಳ್ಳುತ್ತೆ, ಜೀವಗಳನ್ನೆಲ್ಲ ಕ್ರಿಮಿ ಕೀಟಗಳಿಗಿಂತ ಕಡೆಯಾಗಿ ಹೊಸಕಿ ಹಾಕುತ್ತೆ ಎಂಬಂಥಾ ಸಣ್ಣ ಸೂಚನೆಯೂ ಯಾರಿಗೂ ಇರಲಿಲ್ಲ. ಅಂಥಾದ್ದೊಂದು ಸೂಚನೆ ಈ ಶತಮಾನದ ಯಾರಿಗೂ ಇರಲು ಸಾಧ್ಯವಿರಲಿಲ್ಲ. ಇಂಥಾದ್ದೊಂದು ಮಹಾ ಮಾರಿ ಆಧುನಿಕ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಿ ಹಾಕಿದ ಪರಿ ಇದೆಯಲ್ಲಾ? ಅದು ಇತಿಹಾಸದ ಪುಟಗಳಲ್ಲಿ ಕರಾಳ ನೆನಪಾಗಿ ಶಾಶ್ವತವಾಗಿ ಉಳಿದು ಹೋಗುವಂಥಾದ್ದು.
ಕೊರೋನಾ ವೈರಸ್ಸು ಭಯದಿಂದಲೋ, ದೈಹಿಕ ಕಾಯಿಲೆಯಿಂದಲೋ ಜನರನ್ನು ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿತ್ತು. ಪ್ರತೀ ದೇಶಗಳಲ್ಲಿಯೂ ಕೂಡಾ ಸ್ಮಶಾಣಗಳಿಗೇ ಪರದಾಡುವಷ್ಟು ದೊಡ್ಡ ಸಂಖ್ಯೆಯಲ್ಲಿ ಸಾವು ನೋವುಗಳಾದವು. ಆದರೆ ಬಹುತೇಕ ಎಲ್ಲ ದೇಶಗಳೂ ಕೂಡಾ ಇಂಥಾದ್ದೇ ಪರಿಸ್ಥಿತಿಯನ್ನು ಎದುರಿಸಿದ್ದವು. ಆದರೆ, ತಮ್ಮ ದೇಶದಲ್ಲಿ ವಿಪರೀತ ಸಾವು ನೋವುಗಳಾಗಿವೆ ಅಂತ ತೋರಿಸಿಕೊಂಡರೆ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸಬೇಕಾಗುತ್ತೆ ಎಂಬಂಥಾ ಪ್ರತಿಷ್ಠೆಗೆ ಬಿದ್ದು ಎಲ್ಲ ದೇಶಗಳು ಕೂಡಾ ಅಸಲಿ ಸಾವಿನ ಸಂಖ್ಯೆಯನ್ನು ಮರೆ ಮಾಚಿದ್ದವು. ಇಂಥಾದ್ದೊಂದು ಗಂಭೀರ ಆರೋಪ ಈವತ್ತಿಗೂ ಕೂಡಾ ಬಲವಾಗಿಯೇ ಕೇಳಿ ಬರುತ್ತಿದೆ. ಹಾಗಾದರೆ, ಕೊರೋನಾದಂಥಾ ವೈರಸ್ಸುಗಳು ಯಾಕಿಂಥಾ ಮಾರಣ ಹೋಮ ನಡೆಸುತ್ತವೆ. ಇತಿಹಾಸದಲ್ಲಿ ಈ ಹಿಂದೆ ಎಂದಾದರೂ ಇಂಥಾ ವೈರಸ್ಸುಗಳ ದಾಳಿ ನಡೆದಿದೆಯಾ? ಅದರಿಂದ ಈ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದ ಉದಾಹರಣೆಗಳಿದ್ದಾವಾ? ಇಂಥಾ ಪ್ರಶ್ನೆಗಳನ್ನಿಟ್ಟುಕೊಂಡು ತಲಾಶಿಗಿಳಿದರೆ, ಬೆಚ್ಚಿ ಬೀಳುವಂಥಾ ಒಂದಷ್ಟು ಸತ್ಯಗಳ ಅನಾವರಣವಾಗುತ್ತದೆ.
೧೦೦ ವರ್ಷದ ಕಂಟಕ!
ಇತಿಹಾಸದಿಂದ ಪಾಠ ಕಲಿಯಬೇಕು ಅನ್ನೋದು ನಾಣ್ನುಡಿ. ಆದರೆ ಈ ಜಗತ್ತು ಇತಿಹಾಸದಿಂದಾಗಲೀ, ಈ ಹಿಂದೆ ಮಾಡಿದ ಎಡವಟ್ಟುಗಳ ಪರಿಣಾಮದಿಂದಾಗಲಿ ಪಾಠ ಕಲಿಯೋ ಪರಿಪಾಠವಿಟ್ಟುಕೊಂಡಿಲ್ಲ. ಸಮಯ ಕಳೆಯುತ್ತಿದ್ದಂತೆಯೇ ಮಂದಿ ಹೊಸಾ ತಪ್ಪುಗಳಲ್ಲಿ ಮುಳುಗಿ ಹೋಗುತ್ತಾರೆ. ಈಗಂತೂ ಆಧುನಿಕತೆ, ಆವಿಷ್ಕಾರ ಮತ್ತು ಹಂಣದಿಂದಲೇ ಎಲ್ಲವನ್ನೂ ಜಯಿಸಿಕೊಳ್ಳುವ ತಿಮಿರೊಂದು ಜನರನ್ನು ಆವರಿಸಿಕೊಂಡಿವೆ. ಸೂಕ್ಷ್ಮವಾಗಿ ಗಮನಿಸಿದರೆ, ಈ ಜಗತ್ತಿನ ಇತಿಹಾಸದ ಗರ್ಭದಲ್ಲಿ ಒಂದಷ್ಟು ಎಚ್ಚರಿಕೆಯ ಸಂದೇಶಗಳಿರುತ್ತವೆ. ಇಡೀ ವಿಶ್ವ ಹಂತ ಹಂತವಾಗಿ ಬಲು ಎಚ್ಚರಿಕೆಯಿಂದ ಸಾಗಲೇ ಬೇಕಾದ ಅನೇಕ ಘಟ್ಟಗಳಿದ್ದಾವೆ. ಅಂಥವುಗಳನ್ನು ಜನ ಸಾಮಾನ್ಯರಿರಲಿ ನುರಿತ ತಜ್ಞರೇ ಕೇರು ಮಾಡೆದೆ ತೆಪ್ಪಗಿರುತ್ತಾರೆ. ಅದರ ಫಲವಾಗಿಯೇ ಜಗತ್ತನ್ನು ಆಗಾಗ ದುರಿತ ಕಾಲಗಳು ಭೀಕರವಾಗಿ ಹಾದು ಹೋಗುತ್ತವೆ.
ಇಷ್ಟೆಲ್ಲವನ್ನು ವಿವರಿಸೋದಕ್ಕೆ ಖಂಡಿತವಾಗಿಯೂ ಕಾರಣವಿದೆ. ಈ ಜಗತ್ತು ಇತಿಹಾಸದಿಂದ ಪಾಠ ಕಲಿಯುವ ಗುಣ ಹೊಂದಿದ್ದರೆ, ಖಂಡಿತವಾಗಿಯೂ ಒಂದು ದೊಡ್ಡ ಮಾಟ್ಟದ ವಾಸ್ತವ ಯಾವತ್ತೋ ಅರಿವಾಗುತ್ತಿತ್ತು. ಅದಾಗಿದ್ದರೆ ಸರ್ವ ಸನ್ನದ್ಧವಾಗಿ, ಎಲ್ಲ ರೀತಿಯಿಂದಲೂ ತಯಾರಿ ನಡೆಸಿಕೊಂಡೇ ಕೊರೋನಾ ವೈರಸ್ ಅನ್ನು ಎದುರಿಸುವ ಸಾಧ್ಯತೆಗಳಿದ್ದವು. ನಮ್ಮ ನಡುವೆ ಬದುಕುತ್ತಿದ್ದವರೇ ಹಾದಿ ಬೀದಿಗಳಲ್ಲಿ ಹುಳುಗಳಂತೆ ಸಾಯುವುದನ್ನು, ಅನಾಥ ಹೆಣದಂತಾಗುವ ದುರಂತವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವ ಸಾಧ್ಯತೆಗಳಿದ್ದವು. ಹಾಗಾದರೆ, ಇತಿಹಾಸದ ಗರ್ಭದಲ್ಲಿರೋ ಆ ವಾಸ್ತವಾಂಶ ಏನು? ಈ ಜಗತ್ತು ಈ ಹಿಂದೆಯೂ ಇಂಥಾ ಸಾಂಕ್ರಾಮಿಕಗಳನ್ನು ಎದುರಿಸಿದೆಯಾ? ಇಂಥಾ ಪ್ರಶ್ನೆಗಳು ಕಾಡೋದು ಸಹಜ. ಅದಕ್ಕೆ ಸಿಗುವ ಉಉತ್ತರದಲ್ಲಿಯೇ ಒಂದಿಡೀ ಭೂ ಮಂಡಲಕ್ಕೆ ನೂರು ವರ್ಷಗಳಿಗೊಮ್ಮೆ ಎದುರಾಗೋ ಸಾಂಕ್ರಾಮಿಕ ಕಂಟಕದ ಕಥನವಿದೆ!
ಅದು ಭಯಾನಕ ಅಚ್ಚರಿ
೧೭೦೦ನೇ ಇಸವಿಯ ನಂತರದ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ ಅಚ್ಚರಿದಾಯಕವಾದ ಒಂದಷ್ಟುಯ ಅಂಶಗಳು ಬಯಲಾಗುತ್ತವೆ. ಕೊರೋನಾ ಲಾಕ್ ಡೌನ್ ಆಘಾತದಿಂದ ತತ್ತರಿಸಿ, ಮನೆ ಸೇರಿಕೊಂಡಿದ್ದ ಮಂದಿಗೆಲ್ಲ ಈ ಹಿಂದೆ ಇಂಥಾ ಸಾಂಕ್ರಾಮಿಕಗಳು ಆವರಿಕೊಂಡಿದ್ದವಾ ಅಂತೊಂದು ಕುತೂಹಲ ಕಾಡಿತ್ತು. ಅದಕ್ಕೆ ಪುರಾವೆಗಳು ನಿಖರವಾಗಿಯೇ ಸಿಕ್ಕಿವೆ. ಅದರನ್ವಯ ಹೇಳೋದಾದರೆ, ೧೭೨೦ರಲ್ಲಿ ಯುರೋಪ್ ಖಂಡ ಮಹಾ ಮಾರಿ ಪ್ಲೇಗ್ ನಿಂದ ತತ್ತರಿಸಿ ಹೋಗಿದ್ದ ಉದಾಹರಣೆಗಳು ಸಿಗುತ್ತವೆ. ಪ್ಲೇಗ್ ಅನ್ನೋದು ಆ ಕಾಲಕ್ಕೆ ಕೊರೋನಾ ವೈರಸ್ ಅನ್ನೇ ಮೀರಿಸುವಂಥಾ ಸಾಂಕ್ರಾಮಿಕ ರೋಗವಾಗಿತ್ತು. ಆ ಹಂತದಲ್ಲಿ ಗಿಡ ಮೂಲಿಕೆಗಳು ಬಿಟ್ಟರೆ ಬೇರ್ಯಾವ ಹೇಳಿಕೊಳ್ಳುವಂಥಾ ಔಷಧಿಗಳು ಪ್ಲೇಗ್ ರೋಗಕ್ಕಿರಲಿಲ್ಲ.
ಅಷ್ಟಕ್ಕೂ ಅದು ಫ್ಲೇಗ್ ಅಂತ ಗೊತ್ತಾಗಿದ್ದೇ ಒಂದಷ್ಟು ಸಾವು ನೋವುಗಳು ಸಂಭವಿಸಿದ ನಂತರವಷ್ಟೆ. ೧೭೨೦ರಲ್ಲಿ ಯುರೋಪಿನ ಭಾಗವೊಂದರಲ್ಲಿ ಫ್ಲೇಗ್ ಆವರಿಸಿಕೊಂಡಿತ್ತು. ಅದು ಅದೆಷ್ಟು ವೇಗವಾಗಿತ್ತೆಂದರೆ, ನೋಡ ನೋಡುತ್ತಲೇ ಒಂದಿಡೀ ಯುರೋಪ್ ಖಂಡವನ್ನೇ ಆಪೋಶನ ತೆಗೆದುಕೊಂಡಿತ್ತು. ಅದೇ ವರ್ಷ ಫ್ರಾನ್ಸ್ ನ ಮಾರ್ಸಿಲ್ಲೆಗೂ ಹರಡಿಕೊಂಡಿದ್ದ ಫ್ಲೇಗ್ ಮಹಾ ಮಾರಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ನರಳಿಸಿ ಕೊಂದು ಹಾಕಿತ್ತು. ಕೊರೋನಾ ಕಾಲದಲ್ಲಿ ಕಂಡಿದ್ದಕ್ಕಿಂತಲೂ ಭೀಕರ ದೃಷ್ಯಗಳು ಮಾರ್ಸಿಲ್ಲೆಯ ತುಂಬೆಲ್ಲ ಹಬ್ಬಿಕೊಂಡಿದ್ದವು. ಹಾದಿ ಬೀದಿಯಲ್ಲಿ ಬಿದ್ದ ಶವಗಳು ಕೊಳೆತು, ಅದರಿಂದಲೇ ಮತ್ತಷ್ಟು ರೋಗ ಹಬ್ಬುವ ವಾತಾವರಣವೂ ಸೃಷ್ಟಿಯಾಗಿತ್ತು. ಅಂಥಾ ಹೆಣಗಳನ್ನು ಸೇಫ್ ಆಗಿ ವಿಲೇವಾರಿ ಮಾಡಲು ಬೇಕಾದ ವ್ಯವಸ್ಥೆಗಳೂ ಕೂಡಾ ಆ ಕಾಲದಲ್ಲಿ ಇರಲಿಲ್ಲ.
ಈ ಫ್ಲೇಗ್ ಸಾಂಕ್ರಾಮಿಕ ಹಬ್ಬಿಕೊಂಡ ರೀತಿ ಮತ್ತು ಸಾವು ನೋವುಗಳ ಬಗ್ಗೆ ಒಂದಷ್ಟು ಉಲ್ಲೇಖಗಳಿದ್ದಾವೆ. ಆ ಕಾಲದಲ್ಲಿ ದೂರದಿಂದ ನಿಂತ ಈ ದುರಂತವನ್ನು ದಿಟ್ಟಿಸಿದವರು, ಆ ಭಾಗದೊಂದಿಗೆ ನಿಕಟ ನಂಟು ಹೊಂದಿದ್ದವರೆಲ್ಲ ಫ್ಲೇಗ್ ತಂದಿಟ್ಟ ದುರಂತವನ್ನು ಕಣ್ಣಿಗೆ ಕಟ್ಟಿದಂತೆ ದಾಖಲಿಸಿಟ್ಟಿದ್ದಾರೆ. ಫ್ಲೇಗ್ ಮಹಾ ಮಾರಿ ತಿಂಗಳ ಲೆಕ್ಕದಲ್ಲಿ ಬಂದು ಹೋಗಿಲ್ಲ. ಕೊರೋನಾಕ್ಕಿಂತಲೂ ಹೆಚ್ಚು ಕಾಲ ಠಕಾಣಿ ಹೂಡಿ ಹಂತ ಹಂತವಾಗಿ ಜನ ನರಳಿ ಸಾಯುವಂತೆ ಮಾಡಿತ್ತು. ಸರಿ ಸುಮಾರು ಮೂರು ವರ್ಷಗಳ ಕಾಲ ಯೂರೋಪ್ ಖಂಡ ಸೇರತತಿದಂತೆ ಅನೇಕ ದೇಶಗಳನ್ನು ಆವರಿಸಿಕೊಂಡಿತ್ತು. ಮೂರು ವರ್ಷ ಕಳೆಯುವಷ್ಟರಲ್ಲಿ ದೇಶಕ್ಕೆ ದೇಶವೇ ಸ್ಮಶಾನವಾಗಿ ಮಾರ್ಪಾಟಾಗಿ ಬಿಟ್ಟಿತ್ತು.
ಒಂದೇ ವರ್ಷದಲ್ಲಿ ಒಂದು ಲಕ್ಷದಷ್ಟು ಜನರ ಜೀವ ತೆಗೆದಿದ್ದ ಫ್ಲೇಗ್ ಕಾಯಿಲೆ, ಆ ನಂತರದ ಎರಡ್ಮೂರು ವರ್ಷಗಳಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಇದು ಒಂದು ಅಂದಾಜಿನ ಲೆಕ್ಕವಷ್ಟೇ. ಅದೆಷ್ಟೋ ಜೀವಗಳು ಗುರುತೇ ಇಲ್ಲದಂತೆ ಮಣ್ಣು ಸೇರಿದ್ದವು. ಅದು ಈ ಜಗತ್ತು ಕಂಡ ಅತ್ತಯಂತ ಘೋರ ಸಾಂಕ್ರಾಮಿಕ ಖಾಯಿಲೆಯ ದುರಂತವಾಗಿ ದಾಖಲಾಗಿದೆ. ಆ ಕಾಲಘಟ್ಟದಲ್ಲಿ ಫೋಟೋ ವೀಡಿಯೋದಂಥವುಗಳಿರಲಿಲ್ಲ. ಆ ಕಾರಣದಿಂದಲೇ ಘೋರ ದುರಂತದ ಅಸಲೀ ಛಾಯೆ ಆಧುನಿಕ ಜಗತ್ತನ್ನು ತಲುಪಿಕೊಂಡಿಲ್ಲ. ಕಡೆಗೂ ಅದೊಂದು ಕಲ್ಪನೆಯಾಗಿಯೇ ಉಳಿದುಕೊಂಡಿದೆ. ಆದರೆ, ಆ ದುರಂತವನ್ನು ಕಣ್ಣಾರೆ ಕಂಡಿದ್ದ ಚಿತ್ರ ಕಲಾವಿದ ಮೈಕೆಲ್ ಸೆರ್ರೆ ಎಂಬಾತ ಮಾರ್ಸಿಲ್ಲೆಯ ದುರಂತವನ್ನು ಚಿತ್ರದ ಮೂಲಕ ಸೆರೆ ಹಿಡಿದಿದ್ದಾನೆ. ಅದೊಂದೇ ಈ ಜಗತ್ತನ್ನು ವರ್ಷಗಟ್ಟಲೆ ಕಾಡಿ ಲಕ್ಷಾಂತರ ಮಂದಿಯ ಬಲಿ ಪಡೆದಿದ್ದ ಮಹಾ ಫ್ಲೇಗಿನ ಅಧಿಕೃತ ದಾಖಲೆಯಾಗಿ ಉಳಿದುಕೊಂಡಿದೆ.
ಜಗತ್ತಿನ ಮೊದಲ ಲಾಕ್ಡೌನ್
ಜಗತ್ತು ನಾಗಾಲೋಟದಿಂದ ಮುಂದುವರೆದ ಕಾಲದಲ್ಲಿಯೇ ಕೊರೋನಾದಂಥಾ ಸಾಂಕ್ರಾಮಿಕ ಕಾಯಿಲೆಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ. ಮೆಡಿಕಲ್ ಸೈನ್ಸ್ ಅನ್ನೋದು ವಿರಾಟ್ ರೂಪ ಪ್ರದರ್ಶಿಸುತ್ತಿರುವ ಈ ಘಳಿಗೆಯಲ್ಲಿಯೇ ಕೊರೋನಾ ವೈರಸ್ಸಿನ ನಿಜವಾದ ಸಾಧ್ಯತೆಗಳನ್ನು, ಪರಿಣಾಮಗಳನ್ನು ಪತ್ತೆ ಹಚ್ಚಲು ವರ್ಷಗಟ್ಟಲೆ ಹಿಡಿದಿತ್ತು. ಹಾಗಿರುವಾಗ ಯಾವ ಆಧುನಿಕ ಸೌಲಭ್ಯಗಳೂ ಇಲ್ಲದಿದ್ದ, ಶೀತ ಜ್ವರ ಬಿಟ್ಟರೆ ಬೇರ್ಯಾವ ಕಾಯಿಲೆಗಳಿಗೂ ಔಷಧಿಗೆರರ ತತ್ವಾರವಿದ್ದ ಕಾಲದಲ್ಲಿ ಫ್ಲೇಗ್ ಆವರಿಸಿಕೊಂಡರೆ ಪರಿಸ್ಥಿತಿ ಹೇಗಿರಬೇಡ? ಅಷ್ಟಕ್ಕೂ ೧೭೨೦ರಲ್ಲಿ ಒಂದೇ ಸಮನೆ ಜನ ಸತ್ತು ಬೀಳುವುದನ್ನು ನೋಡಿ ಅಲ್ಲಿನ ಆಳೋ ಮಂದಿ ಕಂಗಾಲಾಗಿದ್ದರು.
ಅದರ ಮೂಲ ಏನೆಂದು ಪತ್ತೆ ಹಚ್ಚುವ ಸರ್ಕಸ್ಸಿನಲ್ಲಿಯೇ ಒಂದಷ್ಟು ತಿಂಗಳುಗಳು ಕಳೆದು ಹೋಗಿದ್ದವು. ಕಡೆಗೂ ಲಕ್ಷಾಂತರ ಮಂದಿ ಸತ್ತು ಬೀಳುತ್ತಿರೋದು ಸಾಂಕ್ರಾಮಿಕ ಕಾಯಿಲೆಯಿಂದ ಅಂತ ಗೊತ್ತಾಗುವಷ್ಟರಲ್ಲಿ ವರ್ಷವೊಂದು ಕಳೆದು ಹೋಗಿತ್ತು. ಅದಾಗಲೇ ಮಹಾ ಮಾರಿ ಫ್ಲೇಗ್ ಬೇರೆ ದೇಶಗಳಿಗೂ ಕೂಡಾ ಹಬ್ಬಿಕೊಂಡಿತ್ತು. ಇದೇ ಹೊತ್ತಿನಲ್ಲಿ ಅಲ್ಲಿನ ಆಡಳಿತಗಾರರ ಈ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆಂಬ ವಿಚಾರವನ್ನು ಕಂಡುಕೊಂಡಿದ್ದರು. ಆ ಕ್ಷಣದಲ್ಲಿ ಫ್ಲೇಗಿಗೆ ಔಷಧ ಹುಡುಕೋದಕ್ಕಿಂತಲೂ ಅದು ಇತರೆ ಭೂ ಭಾಗಗಳಿಗೆ ಹಬ್ಬದಂತೆ ತಡೆಗಟ್ಟುವ ಕ್ರಮವೇ ಮುಖ್ಯವಾಗಿತ್ತು.
ಯಾವ್ಯಾವ ಪ್ರದೇಶಗಳಲ್ಲಿ ಹೆಚ್ಚು ಸಾವಾಗಿದೆ ಅನ್ನೋದನ್ನು ಆಡಳಿತಕಾರರು ಆ ಪ್ರದೇಶಗಳನ್ನು ಲಾಕ್ ಮಾಡುವ ನಿರ್ಧಾರ ತೆಗೆದುಕೊಂಡಿದ್ದರು. ಬಹುಶಃ ಅದು ಈ ಜಗತ್ತು ಕಂಡ ಮೊದಲ ಲಾಕ್ ಡೌನ್ ಆಗಿದ್ದರೂ ಇರಬಹುದು. ಕೊರೋನಾ ಲಾಕ್ ಡೌನ್ ಆದಾಗ ನಿಯಮ ಮೀರಿದರೆ ನಾಲಕ್ಕು ಏಟು ಬಿಗಿದು ಮನೆಗೆ ಕಳಿಸಲಾಗುತ್ತಿತ್ತು. ಆದರೆ, ಆ ಕಾಲದಲ್ಲಿ ಸ್ಥಳೀಯ ಆಡಳಿತ ಅದೆಂಥಾ ಭೀಕರ ಕಾನೂನು ತಂದಿತ್ತೆಂದರೆ, ಒಂದು ವೇಳೆ ಫ್ಲೇಗ್ ಪೀಡಿತ ಪ್ರದೇಶದ ಜನರು ಬೇರೆ ಭಾಗಕ್ಕೆ ತೆರಳಿದರೆ, ಬೇರೆ ಭಾಗದವರು ಫ್ಲೇಗ್ ಪೀಡಿತರನ್ನು ಮಾತಾಡಿಸಲು ಬಂದರೆ ಮರಣ ದಂಡನೆ ವಿಧಿಸುವ ಎಚ್ಚರಿಕೆ ರವಾನಿಸಿತ್ತು.
ಪ್ಲೇಗ್ ಗೋಡೆ
ಅದು ನಿಜಕ್ಕೂ ದಾರುಣ ಸ್ಥಿತಿ. ಒಂದು ಪ್ರದೇಶ ಅಂದ ಮೇಲೆ ಆಸುಪಾಸಿನ ಒಂದಷ್ಟು ಏರಿಯಾಗಳಲ್ಲಿ ಕಳ್ಳು ಬಳ್ಳಿ ಸಂಬಂಧಗಳಿರುತ್ತವೆ. ಪರಸ್ಪರ ನೋವಿಗೆ ಆಗಬೇಕಾದ ಮನುಷ್ಯತ್ವವೂ ಹಾಜರಿರುತ್ತೆ. ಪರಿಚಿತರೇ ಫ್ಲೇಗ್ ಬಂದು ನರಳಾಡುವಾಗ ನೋಡಿಕೊಂಡು ಕೂರಲು ಯಾರಿಗೂ ಮನಸು ಬರುವುದಿಲ್ಲ. ಈ ಕಾರಣದಿಂದಲೇ ಮರಣ ದಂಡನೆಯ ಭಯವನ್ನೂ ಮೀರಿ ಒಂದಷ್ಟು ಮಂದಿ ಫ್ಲೇಗ್ ಪೀಡಿತರ ನೆರವಿಗೆ ಧಾವಿಸಲಾರಂಭಿಸಿದ್ದರು. ತೀರಾ ಮರಣದಂಡನೆಯ ಎಚ್ಚರಿಕೆಯೂ ವರ್ಕಟ್ ಆಗದೇ ಇದ್ದಾಗ ಸ್ಥಳೀಯ ಆಡಳಿತಕಾರರು ಮತ್ತೊಂದು ಐಡಿಯಾ ಪ್ರದರ್ಶಿಸಿದ್ದರು. ಫ್ಲೇಗ್ ವಿಪರೀತವಿದ್ದ ಪ್ರದೇಶಕ್ಕೆ ಸುತ್ತಲೂ ದೊಡ್ಡ ಗೋಡೆಗಳನ್ನು ಕಟ್ಟಲಾರಂಭಿಸಿದ್ದರು. ಆ ಕಾಲದಲ್ಲದು ಪ್ಲೇಗ್ ಗೋಡೆ ಎಂದೇ ಕುಖ್ಯಾತಿ ಗಳಿಸಿಕೊಂಡಿತ್ತು.
ಹೀಗೆ ಮನುಷ್ಯ ಮನುಷ್ಯರ ನಡುವೆ ಯೂರೋಪ್ ಮತ್ತು ಅದರ ಆಸುಪಾಸಿನ ದೇಶಗಳಲ್ಲಿ ಪ್ಲೇಗ್ ಗೋಡೆ ಎದ್ದಿತ್ತು. ಅದರ ಆಚೀಚೆ ಅನಿವಾರ್ಯ ಪರಿಸ್ಥಿತಿಗೆ ಸಿಕ್ಕು ಮನುಷ್ಯತ್ವವೇ ನರಳಲಾರಂಭಿಸಿತ್ತು. ಹೀಗೆ ಹೊರ ಜಗತ್ತಿನ ಯಾರೂ ಕೂಡಾ ಪ್ಲೇಗ್ ಪೀಡಿತರ ನೆರವಿಗೆ ಬಾರದಂಥಾ ವಾತಾವರಣ ನಿರ್ಮಾಣ ಗೊಂಡಿತ್ತು. ಹಾಗೆ ಪ್ಲೇಗ್ ಬಂದವರಿಗೆ ಹೇಳಿಕೊಳ್ಳುವಂಥಾ ಯಾವ ಔಷಧಿಗಳೂ ಕೂಡಾ ಸಿಗುತ್ತಿರಲಿಲ್ಲ. ಒಂದು ಮನೆಯಲ್ಲಿ ಓರ್ವನಿಗೆ ಪ್ಲೇಗ್ ಬಂದರೆ ಮಿಕ್ಕವರು ಆತನನ್ನು ಬಿಟ್ಟು ಗೋಡೆ ಹಾರಿ ಸೇಫಾಗಲು ಸಾಧ್ಯವಿರಲಿಲ್ಲ. ಸೆಂಟಿಮೆಂಟಿಗೆ ಸಿಕ್ಕು ಒಂದಿಡೀ ಕುಟುಂಬವೇ ಸುಶ್ರೂಶೆಗೆ ನಿಲ್ಲುತ್ತಿತ್ತು. ತಿಂಗಳೊಪ್ಪತ್ತಿನಲ್ಲಿಯೇ ಅವರಿಗೆಲ್ಲ ಪ್ಲೇಗ್ ಬಂದು ನರಳಿ ಸಾಯುತ್ತಿದ್ದರು. ನಾಲಕ್ಕು ವರ್ಷ ಕಳೆಯೋದರೊಳಗಾಗಿ ಇಂಥಾ ಪ್ಲೇಗ್ ಗೋಡೆಯೊಳಗೆ ಹೆಣಗಳ ಸಂತೆ ನೆರೆದಿತ್ತು. ಹೀಗೆ ಜನ ಸತ್ತು ಬಿದ್ದರೂ ಆ ಕಾಯಿಲೆ ಹರಡದಂತೆ ತಡೆಯುವ ಔಷಧಿ ಕೊಡಲಾರದೆ ಎಲ್ಲ ದೇಶಗಳೂ ಅಸಹಾಯಕ ಸ್ಥಿತಿ ತಲುಪಿಕೊಂಡಿದ್ದವು. ಈ ಮಹಾ ಪ್ಲೇಗ್ ದುರಂತದ ಮುಂದೆ ನಿಜಕ್ಕೂ ಕೊರೋನಾ ಆಘಾತಗಳ ತೀವ್ರತೆ ಕಡಿಮೆ ಅಂತಲೇ ಅನ್ನಿಸುತ್ತೆ.
ಏಷ್ಯಾಟಿಕ್ ಕಾಲರಾ
ಹೀಗೆ ೧೭೨೦ರಲ್ಲಿ ಪ್ಲೇಗ್ ರೋಗ ದೊಡ್ಡ ಮಟ್ಟದಲ್ಲಿಯೇ ದುರಂತ ಸೃಷ್ಟಿಸಿತ್ತು. ನಾಲಕ್ಕು ವರ್ಷ ಲಕ್ಷಾಂತರ ಮಂದಿಯನ್ನು ಬಲಿಬೀಳಿಸಿ ರಣ ಕೇಕೆ ಹಾಕಿತ್ತು. ಅದರಿಂದ ಕೆಲ ದೇಶಗಳು ಚೇತರಿಸಿಕೊಳ್ಳಲು ಮತೈವತ್ತು ವರ್ಷಗಳೇ ಬೇಕಾಗಿದ್ದವು. ಹಾಗೆ ಆ ಶತಮಾನ ಕಳೆಯುಉವ ಹೊತ್ತಿಗೆಲ್ಲ ಪ್ಲೇಗ್ ಮಹಾ ಮಾರಿಯನ್ನು ವಿಶ್ವದ ಮಂದಿ ಸಂಪೂಊರ್ಣವಾಗಿ ಮರೆತೇ ಬಿಟ್ಟಿದ್ದರು.ಪ್ಲೇಗಿನಿಂದ ಸ್ಮಶಾನದಂತಾಗಿದ್ದ ಊರುಗಳೂ ಕೂಡಾ ಆ ಶತಮಾನದ ಮಧ್ಯ ಭಾಗದ ಹೊತ್ತಿಗೆಲ್ಲ ಚೇತರಿಸಿಕೊಂಡಿದ್ದರು. ಅಲ್ಲಿಯೂ ಜನ ವಸತಿ ಸೃಷ್ಟಿಯಾಗಿ ಜೀವಂತಿಕೆ ಮರಳಿತ್ತು. ಆ ಹೊತ್ತಿನಲ್ಲಿ ಯಾರಿಗೂ ಕೂಡಾ ಮತ್ತೊಂದು ಸಾಂಕ್ರಾಮಿಕ ಮತ್ತೆ ಈ ಜಗತ್ತನ್ನು ಹಿಂಡಿ ಹಿಪ್ಪೆ ಮಾಡಲಿದೆ ಎಂಬ ಸಣ್ಣ ಅಂದಾಜೂ ಇರಲಿಲ್ಲ.
ಸರಿಯಾಗಿ ೧೮೧೮ರ ಹೊತ್ತಿಗೆಲ್ಲ ಜಗತ್ತು ಮತ್ತೊಂದು ಸಾಂಕ್ರಾಮಿಕದಿಂದ ಕಂಗಾಲಾಗಿತ್ತು. ಗಮನಿಸಲೇ ಬೇಕಾದ ಅಂಶವೆಂದರೆ, ಕಾಲರಾ ಎಂಬ ಮತ್ತೊಂದು ಸಾಂಕ್ರಾಮಿಕ ಜಗತ್ತಿನ ನಾನಾ ದೇಶಗಳಲ್ಲಿ ಕಾಣಿಸಿಕೊಂಡಿದ್ದು ನಿಖರವಾಗಿ ನೂರು ವರ್ಷಗಳ ನಂತರ. ಕಾಲರಾ ಮಹಾ ಮಾರಿ ಶುರುವಾದದ್ದು ೧೮೧೭ರಲ್ಲಿ. ವಿಶೇಷವೆಂದರೆ, ಅದು ಶುರುಉವಾಗಿದ್ದು ನಮ್ಮ ದೇಶದ ಕಲ್ಕತ್ತಾದಲ್ಲಿ.ಇಲ್ಲಿನ ಕೆಲ ಭಾಗಗಳಲ್ಲಿ ಕಾಣಿಸಿಕೊಂಡಿದ್ದ ಕಾಲರಾ ನೋಡ ನೋಡುತ್ತಲೇ ಬ್ರಿಟೀಷರ ದರ್ಬಾರಿನಲ್ಲಿ ಮಧ್ಯ ಏಷ್ಯಾ, ಆಫ್ರಿಕಾ, ಮೆಡಿಟರೇನಿಯನ್ ಕರಾವಳಿ ತೀರದುದ್ದಕ್ಕೂ ವ್ಯಾಪಿಸಿಕೊಂಡಿತ್ತು. ಈ ಕಾಲರಾ ಕಾಯಿಲೆ ಏಷ್ಯಾ ಖಂಡದ ಪ್ರತೀ ದೇಶಗಳಿಗೂ ಅಂಟಿಕೊಂಡಿತ್ತು. ಈ ಕಾರಣದಿಂದಲೇ ಅದನ್ನು ಏಷ್ಯಾಟಿಕ್ ಕಾಲರಾ ಅಂತ ಕರೆಯಲಾಗುತ್ತದೆ. ಇದೂ ಕೂಡಾ ದೊಡ್ಡ ಮಟ್ಟದಲ್ಲಿಯೇ ಸಾವು ನೋವುಗಳನ್ನು ಸೃಷ್ಟಿಸಿತ್ತು. ಅದೆಷ್ಟೋ ಮಂದಿ ನರಳಾಡಿ ಸಾಯುವಂತಾಗಿತ್ತು.
ಸ್ಪಾನಿಶ್ ಫ್ಲೂ ಬಾಧೆ
ಹೀಗೆ ೧೮೧೭ರಲ್ಲಿ ಭಾರತದ ಕೊಲ್ಕತ್ತಾದಲ್ಲಿ ಹುಟ್ಟಿಕೊಂಡಿದ್ದ ಕಾಲರಾ ಕಾಯಿಲೆ ಏಷ್ಯಾ ಖಂಡಕ್ಕೆಲ್ಲ ಹಬ್ಬಿಕೊಂಡು ಜೀವ ಬಲಿ ತೆಗೆದುಕೊಂಡಿತ್ತು. ಆ ನಂತರ ನಾಲಕ್ಕು ವರ್ಷಗಳ ಕಾಲ ಅದು ಜೀವ ಬಲಿ ಪಡೆಯುತ್ತಲೇ ಸಾಗಿತ್ತು. ಆ ನಂತರ ಕೊರೋನಾದಂತೆಯೇ ರೂಪಾಂತರವಾಗುತ್ತಾ ಕಾಲರಾ ಕಾಯಿಲೆ ಮರೆಯಾಗಿತ್ತು. ಹಾಗೆ ೧೮೦೦ನೇ ಶತಮಾನ ಕಾಲರಾ ಸಾಂಕ್ರಾಮಿಕದ ಕಹಿ ನೆನಪಿನೊಂದಿಗೆ ಮುಕ್ತಾಯವಾಗಿತ್ತು. ಆ ಬಳಿಕ ಸರಿಯಾಗಿ ೧೯೧೮ರಲ್ಲಿ ಮತ್ತೊಂದು ಮಹಾ ಮಾರಿಯಂಥಾ ಸಾಂಕ್ರಾಮಿಕ ಮತ್ತೆ ಒಂದಿಡೀ ಜಗತ್ತನ್ನು ಕಂಗೆಡಿಸಿ ಹಾಕಿತ್ತು. ಅದನ್ನು ಸ್ಪಾನಿಷ್ ಫ್ಲೂ ಅಂತ ಹೆಸರಿಸಲಾಗುತ್ತದೆ. ಅದಕ್ಕೂ ಮೊದಲು ಬಾಧಿಸಿದ್ದ ಫ್ಲೇಗ್ ಮತ್ತು ಕಾಲರಾಗಳಿಗಿಂತಲೂ ಭೀಕರ ಸ್ವರೂಪದಲ್ಲಿ ಸ್ಪಾನಿಶ್ ಫ್ಲೂ ರಣ ಕೇಕೆ ಹಾಕಿತ್ತು.
ಸ್ಪೇನ್ ದೇಶದಲ್ಲಿ ಆರಂಭದಲ್ಲಿ ಮಈ ಜ್ವರ ಕಾಣಿಸಿಕೊಂಡಿತ್ತು. ಇದು ಮಾಮೂಲುಇಇ ಮಾತ್ರೆಗಳಿಗೆ ಜಗ್ಗದೆ ಏಕಾಏಕಿ ಏರಿಕೊಳ್ಳುತ್ತಾ ಜೀವ ಬಲ;ಇ ಪಡೆಯಲಾರಂಭಿಸಿತ್ತು. ಆರಂಭದಲ್ಲಿ ವೈರಲ್ ಫೀವರಿನಂತೆ ಕಾಣಿಸುತ್ತಿದ್ದ ಈ ಜ್ವರ ನಂತರ ಭೀಕರ ಸಾಂಕ್ರಾಮಿಕ ರೋಗವಾವಾಗಿ ದರ್ಶನ ಕೊಟ್ಟಿತ್ತು. ಇದನ್ನು ಮಟ್ಟ ಹಾಕಲು ನಾನಾ ಕಸರತ್ತುಗಳು ನಡೆದವಾದರೂ ಅದು ವೇಗವಾಗಿ ಆಸುಪಾಸಿನ ದೇಶಗಳಿಗೂ ಹಬ್ಬರಾರಂಭಿಸಿತ್ತು. ೧೯೧೮ರಲ್ಲಿ ಶುರುವಾದ ಈ ಭಯಾನಕ ಸಾಂಕ್ರಾಮಿಕ ಮೂರು ವರ್ಷಗಳ ಕಾಲ ರಣ ಕೇಕೆ ಹಾಕಿತ್ತು. ವಿಶ್ವದ ನಾನಾ ದೇಶಗಳಿಗೂ ವ್ಯಾಪಕವಾಗಿ ಹಬ್ಬಿಕೊಂಡಿತ್ತು. ಆ ಕಾಲಕ್ಕೆ ಐನೂರು ಮಿಲಿಯನ್ ಮಂದಿಗೆ ಈ ರೋಗ ಅಮರಿಕೊಂಡಿತ್ತು. ವಿಶ್ವದ ಒಟ್ಟಾರೆ ಜನಸಂಖ್ಯೆಯ ಕಾಲುಉ ಭಾಗದಷ್ಟು ಮಂದಿ ಇದರಿಂದ ಸತ್ತಿದ್ದರು.
ಈ ಕಾರಣದಿಂದಲೇ ಇದನ್ನು ಆಧುನಿಕ ಜಗತ್ತಿನ ಅತಿ ದೊಡ್ಡ ಸಾಂಕ್ರಾಮಿಕ ದುರಂತ ಅಂತ ಹೆಸರಿಸಲಾಗುತ್ತೆ. ಹೆಚ್ಚೂ ಕಡಿಮೆ ನೂರು ಮಿಲಿಯನ್ ಮಂದಿ ಇದರಿಂದ ಅಸು ನೀಗಿದ್ದರು. ಈ ಕಾರಣದಿಂದಲೇ ಈ ಸಾಂಕ್ರಾಮಿಕ ಕಾಯಲೆಯನ್ನು ಮಾನವ ಜಗತ್ತಿನ ಅತಿ ದೊಡ್ಡ ಸಾಂಕ್ರಾಮಿಕ ಅಂತ ಗುರುತಿಸಲಾಗಿದೆ. ಅದಾಗಿ ಸರಿಯಾಗಿ ನೂರು ವರ್ಷ ಕಳೆದಾಗ ೨೦೧೯ರಲ್ಲಿ ಕೊರೋನಾ ವೈರಸ್ಸು ಜಗತ್ತನ್ನು ಹಿಂಡಿ ಹಾಕಿದೆ. ಅದು ಮಾನವ ನಿರ್ಮಿತವೋ ಮತ್ತೊಂದೋ ಗೊತ್ತಿಲ್ಲ. ಆದರೆ ಸರಿಯಾಗಿ ನೂರು ವರ್ಷಗಳಿಗೊಂದು ಸಾಂಕ್ರಾಮಿಕ ಕಾಯಿಲೆ ಈ ಜಗತ್ತತಿನ ಮೇಲೆ ಪ್ರಹಾರ ನಡೆಡಸುತ್ತದೆಂಬುಉದು ಮಾತ್ರ ಪಕ್ಕಾ ಆಗಿದೆ. ಇನ್ನು ನೂರು ವರ್ಷದ ನಂತರ ಮತ್ತೊಂದು ಸಾಂಕ್ರಾಮಿಕ ಕಾಡಬಹುದಾ? ಆಧುನಿಕತೆಯ ಭರಾಟೆಯಲ್ಲಿ ಆ ಸಾಂಕ್ರಾಮಿಕ ಮತ್ತೊಂದಷ್ಟು ಬೇಗನೆ ಪ್ರತ್ಯಕ್ಷವಾದರೂ ಅಚ್ಚರಿಯೇನಿಲ್ಲ!