ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

international children’s kidnapping mafia: ಮಕ್ಕಳೂ ಈಗ ದಂಧೆಯ ಸರಕು!

Majja Webdeskby Majja Webdesk
23/04/2025
in Majja Special
Reading Time: 1 min read
international children’s kidnapping mafia: ಮಕ್ಕಳೂ ಈಗ ದಂಧೆಯ ಸರಕು!

-ಮನೆಯಲ್ಲಿ ಮಕ್ಕಳಿದ್ರೆ ಮೈ ತುಂಬಾ ಕಣ್ಣಿರಬೇಕು!

-ಮಕ್ಕಳನ್ನು ಕದ್ದು ವಿದೇಶಕ್ಕೆ ಹೊತ್ತೊಯ್ತಾರೆ!  

 

ನೀವೇನಾದರೂ ತೊಂಬತ್ತರ ದಶಕದ ಆಚೀಚೆ ಕಣ್ತೆರೆದ ಮಕ್ಕಳಾಗಿದ್ದರೆ ಆ ಕಾಲದಲ್ಲಿ ಹಬ್ಬಿಕೊಂಡಿದ್ದ ವಿಚಾರವೊಂದು ಈ ಕ್ಷಣಕ್ಕೂ ನಿಮ್ಮಲ್ಲೊಂದು ಭಯದ ಛಳುಕು ಮೂಡಿಸೋದರಲ್ಲಿ ನಯಾವ ಅಚ್ಚರಿಯೂ ಇಲ್ಲ. ಆ ಕಾಲದಲ್ಲಿ ಓಮಿನಿ ವ್ಯಾನಲ್ಲಿ ಬಂದು ಮಕ್ಕಳನ್ನು ಕದ್ದೊಯ್ತಾರೆ ಎಂಬಂಥಾ ರೂಮರೊಂದು ವ್ಯಾಪಕವಾಗಿ ಹಬ್ಬಿಕೊಂಡಿತ್ತು. ಶಾಲಾ ಆವರಣದಾಚೆ ಮಕ್ಕಳು ಒಂಟಿಯಾಗಿ ಓಡಾಡಲೂ ಅಂಜುವಂಥಾ ವಾತಾವರಣ ಸೃಷ್ಟಿಯಾಗಿತ್ತು. ಆದರೆ ನಮ್ಮ ನಮ್ಮ ಪ್ರದೇಶಗಳಲ್ಲಿ ಅಂಥಾ ಯಾವ ಘಟನಾವಳಿಗಳೂ ನಡೆಯದೆ ಶಾಲಾ ಹಂತ ದಾಟಿಕೊಂಡಿದ್ದೆವು. ಆ ನಂತರ ಬುದ್ಧಿ ಬಲಿತು, ಹೊರ ಜಗತ್ತಿಗೆ ಎಂಟ್ರಿ ಕೊಟ್ಟಾದ ಮೇಲೆ ಹಾಗೆ ಹಬ್ಬಿಕೊಂಡಿದ್ದ ಸುದ್ದಿ ಸುಳ್ಳೆಂದು ನಕ್ಕು ನಿರಾಳವಾಗಿದ್ದೆವು. ಆದರೆ, ಆಗ ಹಬ್ಬಿಕೊಂಡಿದ್ದ ಸುದ್ದಿ ನಮ್ಮ ಮಗ್ಗುಲಲ್ಲಿ ನಮಗೇ ಗೊತ್ತಿಲ್ಲದಂತೆ ನಿಜವಾಗಿಯೂ ನಡೆಯುತ್ತಿದೆ. ಮಕ್ಕಳನ್ನು ಕಳವು ಮಾಡಿ ದಂಧೆಗೆ ಬಳಸಿಕೊಳ್ಳುವ ಜಾಲವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಬ್ಬಿಕೊಂಡಿದೆ. ಅಂಥಾದ್ದೊಂದು ಮಕ್ಕಳ ಕಳ್ಳಸಾಗಾಣಿಕೆಯ ಖತರ್‌ನಾಕ್ ಜಾಲವೊಂದನ್ನು ಪೊಲೀಸರು ವರ್ಷದ ಹಿಂದೆ ಬೇಧಿಸಿದ್ದರು. ಆ ಸಂದರ್ಭದಲ್ಲಿ ಕಲೆ ಹಾಕಿದ್ದ ಮಾಹಿತಿ ಇದೆಯಲ್ಲಾ? ಅದು ನಿಜಕ್ಕೂ ಎದೆ ಅದುರಿಸುವಂತಿದೆ!


ಈ ಮಕ್ಕಳ ಕಳುವು ಜಾಲದ ಪ್ರತಾಪ ಅಂತಿಂಥಾದ್ದಲ್ಲ. ಚೆನ್ನೈನ ಪಾಸ್‌ಪೋರ್ಟ್ ಆಫೀಸ್‌ನಿಂದ ಮಕ್ಕಳನ್ನು ಕೊಳ್ಳುವ ಅಮೆರಿಕದ ಗ್ಯಾಂಗ್‌ವರೆಗೆ ಲಿಂಕ್ ಹೊಂದಿದ್ದಾನೆ. ಅಂಡರ್‌ವರ್ಲ್ಡ್ ಡಾನ್‌ಗಳಿಂದ ಅಧಿಕಾರದ ಗದ್ದುಗೆಯಲ್ಲಿರುವವರೆಗೆ ಈ ಹಲಾಲುಕೋರನಿಗೆ ಸಂಪರ್ಕವಿದೆ. ಹೀಗಾಗಿ ಯಾವುದೇ ಭಿಡೆಯಿಲ್ಲದೆ ಮಕ್ಕಳನ್ನೂ ಮಾರಾಟದ ವಸ್ತುವನ್ನಾಗಿ ಮಾಡಿಕೊಂಡಿದ್ದಾನೆ. ಈತನ ಕರಾಳ ದಂಧೆಗ ದೇಶಾದ್ಯಂತ ಏಜೆಂಟರಿದ್ದಾರೆ. ಈ ಐನಾತಿಯ ಜಾತಕ ಹಿಡಿದು, ಜನ್ಮ ಜಾಲಾಡಲು ಗುಜರಾತ್‌ಗೆ ಮತ್ತು ಅಮಾಯಕ ಮಕ್ಕಳನ್ನು ಖರೀದಿ ಮಾಡುತ್ತಿದ್ದ ಆಸಾಮಿಗಳ ಅಂತರಾಳ ಅರಿಯಲು ಅಮೆರಿಕಕ್ಕೆ ತಂಡವನ್ನು ಕಳುಹಿಸಿಕೊಡುವ ಬಗೆಗೆ ಗೃಹ ಇಲಾಖೆ ಚಿಂತಿಸುತ್ತಿದೆ. ಆಘಾತಕರ ಸಂಗತಿಯೆಂದರೆ, ಆ ಮಕ್ಕಳ ಕಳುವು ಜಾಲ ನಮ್ಮ ರಾಜ್ಯವೂ ಸೇರಿದಂತೆ ಈ ದೇಶದ ಉದ್ದಗಲವನ್ನೂ ವ್ಯಾಪಿಸಿಕೊಂಡಿದೆ. ಈ ಕ್ಷಣಕ್ಕೂ ಅದೆಷ್ಟೋ ಪಾಕಕರು ಪುಟ್ಟ್ ಕಂದಮ್ಮಗಳನ್ನು ಕಳೆದುಕೊಂಡು ಕರುಳು ಹಿಂಡುವ ದುಃಖದಿಂದ ಬಸವಳಿಯುತ್ತಿದ್ದಾರೆ. ಆದರೆ, ಮಾಧ್ಯಮ ಮಂದಿ ದೊಡ್ಡ ಸುದ್ದಿಯ ಬೆಂಬಿದ್ದು ಟಿಆರ್‌ಪಿ ರೇಸಿನಲ್ಲಿರೋದರಿಂದ ಹೆತ್ತವರ ಒಡಲ ಆಕ್ರಂದನವಾಗಲಿ, ಪುಟ್ಟ ಮಕ್ಕಳ ಛೀತ್ಕಾರವಾಗಲಿ ಮುಖ್ಯವಾಹಿನಿಯನ್ನು ತಲುಪುತ್ತಿಲ್ಲ.

ಬಾಡಿಗೆ ಅಪ್ಪ-ಅಮ್ಮಂದಿರು!


`ಅಮೆರಿಕದಲ್ಲಿ ವೀಸಾ ಮುಗಿದಿದ್ದರೂ ಅಲ್ಲಿಯೇ ನೆಲೆಸಿರುವ ಪೋಷಕರಿಗೆ ಇಲ್ಲಿರುವ ಅವರ ಮಕ್ಕಳನ್ನು ಅಲ್ಲಿಗೆ ಕಳುಹಿಸಿಕೊಡುತ್ತಿದ್ದೇವೆ ಅಷ್ಟೇ. ಕಳ್ಳಸಾಗಾಣಿಕೆಯಲ್ಲ’ ಎಂದು ಸಿಕ್ಕಿಬಿದ್ದಿರುವ ಖತರ್‌ನಾಕ್ ಆಸಾಮಿಗಳು ಹೇಳುತ್ತಾರೆ. ಈ ‘ಕಳ್ಳನ್ಮಕ್ಕಳ’ ಮಾತನ್ನು ನಂಬಲಾಗದು.
ಭಾರತದಲ್ಲಿ ನಕಲಿ ತಂದೆ-ತಾಯಿಯರನ್ನು ಸೃಷ್ಟಿಸಿ ಅಮೆರಿಕಕ್ಕೆ ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ. ಈ ಹಿಂದೆ ಇದು ಮುಂಬೈನಲ್ಲಿ ಬೃಹದಾಕಾರವಾಗಿ ಬೆಳೆದಿತ್ತು. ಅಲ್ಲಿ ಕಣ್ಗಾವಲು ಬಿಗಿಯಾಗುತ್ತಿದ್ದಂತೆ ಕಳ್ಳಸಾಗಾಣಿಕೆ ಜಾಲದ ನಿರ್ವಹಣೆ ಅಡ್ಡೆ ಬೆಂಗಳೂರಿಗೆ ವರ್ಗವಾಯಿತು. ಬೇರೆಬೇರೆ ರಾಜ್ಯಗಳಿಂದ ೧೦-೧೪ ವರ್ಷ ಒಳಗಿನ ಮಕ್ಕಳನ್ನು ಬೆಂಗಳೂರಿಗೆ ಕರೆತಂದು ಬಾಡಿಗೆ ಅಪ್ಪ-ಅಮ್ಮಂದಿರನ್ನು ಸೃಷ್ಟಿಸುತ್ತಿದ್ದರು. ಈ ಎಲ್ಲವನ್ನೂ ಖದೀಮ ಉದಯ್ ಪ್ರತಾಪ್ ಸಿಂಗ್ ಯಶಸ್ವಿಯಾಗಿ ನಿರ್ವಹಿಸುತ್ತಿದ್ದನಂತೆ.
ಅನುಮಾನ ಬಾರದಂತೆ ವಿಮಾನದಲ್ಲಿ ಅಮೆರಿಕಕ್ಕೆ ತೆರಳುವಾಗ ನಡೆದುಕೊಳ್ಳಬೇಕಾದ ರೀತಿ-ರಿವಾಜುಗಳ ಕುರಿತು ೧ ತಿಂಗಳು ಮಕ್ಕಳು ಮತ್ತು ನಕಲಿ ಪಾಲಕರಿಗೆ ವಿಶೇಷ ತರಬೇತಿ ನೀಡುತ್ತಿದ್ದರು. ಸಾರ್ವಜನಿಕವಾಗಿ ಓಡಾಡಿಸಿ ನಕಲಿ ಪಾಲಕರು-ಮಕ್ಕಳು ಎಂಬುದು ಯಾರಿಗೂ ಅನುಮಾನ ಬರುವುದಿಲ್ಲ ಎಂಬುದು ಖಾತ್ರಿಯಾದ ನಂತರವೇ ಅಮೆರಿಕ ಪ್ರಯಾಣಕ್ಕೆ ಒಯ್ಯುತ್ತಿದರು. ಕಳ್ಳಸಾಗಾಣಿಕೆ ಜಾಲ ಬೆಂಗಳೂರಿಗೆ ಸ್ಥಳಾಂತರವಾಗಲು ಇಲ್ಲಿ ಉತ್ತಮವಾಗಿ ಇಂಗ್ಲಿಷ್ ಮಾತನಾಡುವ ಜನ ಸಿಗುತ್ತಾರೆ. ಇಂಗ್ಲಿಷ್‌ನಲ್ಲಿ ತೊಡಕಿಲ್ಲದೆ ಮಾತನಾಡಿದರೆ ಸುಲಭವಾಗಿ ವೀಸಾ ಸಿಗುತ್ತದೆ. ನಕಲಿ ತಂದೆ, ತಾಯಿಯಾಗಿ ನಟಿಸುವ ಮಂದಿಗೆ ಅಮೆರಿಕಕ್ಕೆ ಹೋಗಲು ಒಬ್ಬರಿಗೆ ೫ ಲಕ್ಷ ರೂಪಾಯಿಗಳು ಜತೆಗೆ ಅಮೆರಿಕ್ಕೆ ತೆರಳಲು ಉಚಿತ ಟಿಕೆಟ್ ಒಂದುವಾರ ಅಲ್ಲಿದ್ದು ಮಕ್ಕಳನ್ನು ಅಲ್ಲಿಯೇ ಬಿಟ್ಟು ಹಿಂತಿರುಗುವ ಅವಕಾಶಗಳಿದ್ದವು. `ಅಮೇರಿಕ ಅಮೆರಿಕಾ’ ಎಂಬ ಬೆಂಗಳೂರಿಗರ ಕ್ರೇಜನ್ನು ಸರಿಯಾಗಿ ಬಳಸಿಕೊಳ್ಳುತ್ತಿದ್ದರು.

ಅಮೆರಿಕ ಸೇರಿದ ಮಕ್ಕಳು ಏನಾಗುತ್ತಿವೆ?


ಈ ಪ್ರಶ್ನೆಗೆ ಉತ್ತರ ಅರ್ಧ ನೀವೇ ಊಹಿಸಬಹುದು! ಹೆಣ್ಣುಮಕ್ಕಳಾದಲ್ಲಿ ಒಂದಷ್ಟು ವರ್ಷ ಭೋಗವಸ್ತು ಆನಂತರ ಪ್ರಯೋಗ ಪಶು, ಗಂಡುಮಕ್ಕಳಾದಲ್ಲಿ ಜೀತಕ್ಕೆ ಬಿದ್ದವರಂತೆ ಕೆಲವು ಕಾಲ ದುಡಿಯಬೇಕು. ಆನಂತರ ಅವರೂ ಅಷ್ಟೇ ಅಮೆರಿಕಿಗಳ ಪ್ರಯೋಗಕ್ಕೆ ಇಡೀ ಬಾಡಿಕೊಟ್ಟು ತೆಪ್ಪಗಾಗಬೇಕು. ಅಂಗಾಂಗ ಬೇಕೆನಿಸಿದಾಗ ಕಠಾವು ಮಾಡಿಕೊಳ್ಳುವ ಮರವಾಗಿರಬೇಕು. ರಕ್ತ ಬೇಕೆನಿಸಿದಾಗ ಬಸಿದುಕೊಡಬೇಕು. ತಯಾರಿಸಿದ ಔಷಧಿಗಳನ್ನು ದೇಹಕ್ಕೆ ತುರುಕಿಕೊಂಡು ಪ್ರಯೋಗ ಪಶುವಾಗಬೇಕು! ಹೀಗೆ ಕೊಂಡವರ ಎಲ್ಲ ಬೇಕುಗಳಿಗೆ ಆಹಾರವಾಗಿ ಬದುಕಬೇಕಾದಂತಹ ಧಾರುಣ ಸ್ಥಿತಿಯಿದೆ. ಮಂಗಳ ಅಂಗಳ ತಲುಪುವ ರಾಕೆಟ್‌ಗಳನ್ನು, ಕ್ಷಿಪಣಿಗಳನ್ನು, ಸರ್ವನಾಶ ಮಾಡುವ ಅಣುಬಾಂಬುಗಳನ್ನು ಉತ್ಪಾದಿಸಬಹುದು. ಆದರೆ ಮನುಷ್ಯನನ್ನು ಉತ್ಪಾದಿಸಲು ಸಾಧ್ಯವೇ? ಅಥವಾ ಮನುಷ್ಯನ ಯಾವುದಾದರೂ ಅಂಗಾಂಗ ವಿಫಲವಾದರೆ ಆ ಭಾಗಗಳನ್ನ ಉತ್ಪಾದಿಸಲು ಸಾಧ್ಯವೇ? ಹಾಗಾಗಿಯೇ ಮಾನವ ದೇಹ ಎನ್ನುವುದನ್ನೇ ದಂಧೆ ಮಾಡಿಕೊಂಡ ಒಂದು ಭೂಗತ ಲೋಕ ತಲೆ ಎತ್ತಿದೆ. ಇವರಿಗೆ ಮಕ್ಕಳನ್ನು ಹಿಡಿದು ಮಾರುವುದೇ ಕಾಯಕ.
ಗುಜರಾತ್‌ನಲ್ಲಿ ಕಳೆದ ೨೦ ವರ್ಷಗಳಿಂದಲೂ ಅಸ್ತಿತ್ವದಲ್ಲಿದೆ. ರಾಜ್ಯದ ಪ್ರತಾಪ್‌ಸಿಂಗನಂತಹವರು ಮಕ್ಕಳ ಘಾತುಕರು. ಹೀಗೆ ಒಬ್ಬರಿಗೊಬ್ಬರೂ ಪೂರಕವಾಗಿ ಕಾರ್ಯನಿರ್ವಹಿಸಿದ್ದರ ಪರಿಣಾಮ ಗುಜರಾತ್‌ನಿಂದ ಸಾವಿರಾರು ಮಕ್ಕಳು ಕಣ್ಮರೆಯಾಗಿವೆ. ಈ ದಂಧೆ ಶರವೇಗದಲ್ಲಿ ಬೆಳೆದು ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶಗಳಿಗು ವ್ಯಾಪಿಸಿತ್ತು. ಕಳೆದ ೨-೩ವರ್ಷಗಳಿಂದ ರಾಜ್ಯಕ್ಕೂ ಕಾಲಿರಿಸಿದೆ. ಇಲ್ಲಿನ ಚಿಕ್ಕಬಳ್ಳಾಪುರ, ರಾಮನಗರ, ಹಾಸನ, ಶಿವಮೊಗ್ಗ, ಗುಲ್ಬರ್ಗ, ರಾಯಚೂರು, ಹೀಗೆ ರಾಜ್ಯದ ಅರ್ಧಕರ್ದ ಜಿಲ್ಲೆಗಳಲ್ಲಿ ಈ ಗ್ಯಾಂಗ್‌ನ ಪಿಂಪ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳ ಕಳ್ಳರೆಂಬ ಪಾಪಿಗಳಿಗೆ ಒಬ್ಬ ಮನುಷ್ಯ ಮನುಷ್ಯನಾಗಿ ಕಾಣುವುದಿಲ್ಲ. ಬದಲಿಗೆ ಹಲವು ಸ್ಪೇರ್ ಪಾರ್ಟ್ ಗಳನ್ನು ಹೊಂದಿಸಿ ತಯಾರು ಮಾಡಿದ ಒಂದು ರಚನೆಯಾಗಿ ಮಾತ್ರ ಕಾಣುತ್ತಾನೆ. ಟಿ.ವಿ. ರಿಪೇರಿ ಅಂಗಡಿಯಲ್ಲಿ ಟಿವಿಯೊಂದನ್ನು ಸಂಪೂರ್ಣವಾಗಿ ಬಿಚ್ಚಿ ಬೇಕಾದದ್ದನ್ನು ರಿಪೇರಿ ಮಾಡಿ ಹೊಚ್ಚಹೊಸದಾಗಿ ಆಚೆ ಕಳಿಸಿಕೊಡುತ್ತಾರಲ್ಲಾ ಹಾಗೆಯೇ ಮಾನವ ದೇಹವನ್ನು ಸಹಾ ರಿಪೇರಿ ಮಾಡುವ ಕರ್ಮಕಾಂಡವಿದು.

ಜೋಪಾನ


ನಿಮ್ಮ ಮನೆಯ ಮಗುವೊಂದು ನಾಪತ್ತೆಯಾಗಿದ್ದರೆ ಹುಷಾರು ಅದನ್ನು ಇದೇ ಕಳ್ಳರು ಕದ್ದೊಯ್ದಿರುವ ಸಾಧ್ಯತೆ ಇದೆ. ನಿಮ್ಮ ಮನೆಯಲ್ಲಿ ಹಿರಿಯರು ಸತ್ತಿದ್ದರೆ ಅವರನ್ನು ಮಣ್ಣು ಮಾಡಿ ಬಂದು ನೀವು ಸುಸ್ತು ಕಳೆದುಕೊಳ್ಳುವ ಮೊದಲೇ ಸಮಾಧಿಯಿಂದ ಆ ಹೆಣವನ್ನೇ ಎಗರಿಸಿರುತ್ತಾರೆ. ಇವತ್ತು ಅಮೆರಿಕಾದಲ್ಲಿ ಯಾವುದೋ ಒಂದು ಸಂಸಾರದಲ್ಲಿರುವ ಕೊರತೆಯನ್ನು ಪೂರ್ಣ ಮಾಡಲು ಇಲ್ಲಿನ ಮಗುವನ್ನು ದತ್ತು ನೀಡಲಾಗುತ್ತಿದೆ. ಆದರೆ ಹಾಗೆ ದತ್ತು ನೀಡಿದ ಮಗುವಿನ ಮುಖವನ್ನು ಮತ್ತೆ ದಾತರು ನೋಡಲು ಸಾಧ್ಯವೇ ಇಲ್ಲ! ಆ ಮಗುವನ್ನು ಕದ್ದೊಯ್ದು ತನ್ನ ಕರಾಳ ಜಾಲಕ್ಕೆ ದಬ್ಬಿ . ಒಳ್ಳೆಯ ತಲೆಬುರುಡೆ, ಒಳ್ಳೆಯ ಅಸ್ತಿ ಪಂಜರ, ಒಳ್ಳೆಯ ಮೂಳೆ ಇವುಗಳಿಗಾಗಿ ಮಕ್ಕಳನ್ನು ಸುಲಿದುಹಾಕಲಾಗುತ್ತದೆ. ಬಾಳೆಹಣ್ಣನ್ನು ಸುಲಿದು ತಿಂದು ಎಸೆಯುವ ಹಾಗೆ ಈ ಮಕ್ಕಳನ್ನು ಸುಲಿದು ಸಿಪ್ಪೆ ಮಾಡಿ ಸಮಾಧಿ ತೋಡುತ್ತಿದ್ದಾರೆ. ‘ಅಪ್ಪಾ ಅಮ್ಮಾ’ ಅಂದರೂ ಬಿಳಿತೊಗಲಿನ ವಿಜ್ಞಾನಿಗಳೆಂಬ ಮಂದಿಗೂ ಕರುಣೆ ಬಾರದು.
ಔಷಧಲೋಕದ ಮಾಫಿಯಾ ವಿಶ್ವವನ್ನೇ ಅಲುಗಾಡಿಸುತ್ತಿದೆ. ಇದರ ಕಬಂಧ ಬಾಹುಗಳಿಗೆ ಸಿಲುಕಿ ಆಫ್ರಿಕಾ ನಲುಗಿ ಹೋಗಿದೆ. ಸಿಡುಬು, ಕಾಮಾಲೆ, ಪೊಲಿಯೋ ಡ್ರಾಪ್ಸ್ ಹಾಕುವ ನೆಪದಲ್ಲಿ ಹೊಸ ಹೊಸ ಔಷಧಿಗಳನ್ನು ಕಗ್ಗತ್ತಲೆಯ ನಾಡಿನ ಜನರಮೇಲೆ ಪ್ರಯೋಗ ಮಾಡುತ್ತಿವೆ. ಔಷಧಿಗಳ ವ್ಯತಿರಿಕ್ತ ಪರಿಣಾಮಗಳಿಂದಾಗಿ ಕಾಲನ ಗರ್ಭದಲ್ಲಿ ಸೇರಿ ಹೋಗಿದ್ದ ಹಕ್ಕಿ ಜ್ವರ, ಹೆಚ್೧ಎನ್೧ ಅಲಿಯಾಸ್ ಹಂದಿ ಜ್ವರ, ಎಬೋಲ, ಝಿಕಾ ಇವೆಲ್ಲವೂ ಮಾರಕವಾಗಿ ವಿಶ್ವವನ್ನು ಕಾಡಲು ಆರಂಭಿಸಿದೆ. ಆಫ್ರಿಕಾದ ಜನರಿಗೂ ಅಮರಿಕದ ಗುಳ್ಳೆ ನರಿಯ ಬುದ್ದಿ ಅರಿವಾಗುತ್ತಿದ್ದು ಅಮೆರಿಕದ ಉಡುಗೊರೆಯ ಔಷಧಿಗಳಿಗೆ ನಕ್ಕೊ ಎನ್ನಲು ಆರಂಭಿಸಿದ್ದಾರೆ. ಪ್ರಯೋಗ ಪಶುಗಳ ಕೊರತೆಯಾಗಿದ್ದು ಏಷ್ಯಾದತ್ತ ಮುಖಮಾಡಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ್, ಶ್ರೀಲಂಕಾ ಇಲ್ಲೆಲಾ ಮಕ್ಕಳ ಅಪಹರಿಸುವ ಬದ್ಮಾಶ್ ಗ್ಯಾಂಗ್‌ಗಳು ಕೆಲಸ ಮಾಡುತ್ತಿವೆ. ಭಾರತದಲ್ಲಿ ಗುಜರಾತಿಬಾಬುಗಳನ್ನು ಅವಲಂಬಿಸಿದ್ದಾರೆ! ಅದರ ಒಂದು ತುಣಕೇ ಉದಯ್‌ಪ್ರತಾಪ್ ಸಿಂಗ್! ಇಲ್ಲಿ ಕಿಂಗ್‌ಪಿನ್ ಆದರೂ ಅಮೆರಿಕಿಗಳ ತಾಳಕ್ಕೆ ತಕ್ಕಂತೆ ಕುಣಿಯುವುದಷ್ಟೇ ಇವನ ಕಾಯಕ. ಸ್ವಲ್ಪ ಯಾಮಾರಿದರು ಅಲ್ಲಿನ ಔಷಧಲೋಕದ ಮಾಫಿಯಾ ಇವನನ್ನೇ ಪ್ರಯೋಗ ಪಶು ಮಾಡಿಕೊಳ್ಳುತ್ತವೆ.!
ಹೊಸ ಹೊಸ ರೋಗಗಳನ್ನು ಸೃಷ್ಟಿಸಿ ಅವುಗಳಿಗೆ ಪ್ರತಿ ಸೃಷ್ಟಿಯಾಗಿ ಔಷಧಗಳ ಆವಿಷ್ಕಾರ ಮಾಡಲಿಕ್ಕೆ ಇದೇ ಮಕ್ಕಳನ್ನು ಬಳಸಿಕೊಳ್ಳಲಾಗುತ್ತದೆ. ಹೀಗಾಗಿಯೇ ಝಿಕಾ ಪತ್ತೆಯಾಯಿತು ಎಂದ ಕೂಡಲೇ ಅಮೆರಿಕದ ಎಂಜಲು ತಿನ್ನುವ ಮಂದಿ ಕೆಲವೇ ದಿನಗಳಲ್ಲಿ ಔಷಧಿ ಸಿದ್ದವಿದೆ ಎನ್ನುತ್ತಾರೆ. ಎಬೋಲಾ ಪ್ರಕಾಂಡವಾಗಿ ಕಾಡಿದ ತಿಂಗಳೊಳಗೆ ಔಷಧಿ/ಲಸಿಕೆ ಸಿದ್ದವೆಂದರು. ನಮ್ಮ ಮಕ್ಕಳ ಮೇಲೆ ಮಾಡಿದ ಪ್ರಯೋಗಗಳ ಫಲದ ಯಶಸ್ಸಿದು. ಅಮೆರಿಕದ ಔಷಧಿ ಕಂಪೆನಿಗಳ ಲಾಭಕೋರ ಬುದ್ಧಿಗೆ ಇಲ್ಲಿಂದಲೇ ಆಪರೇಟ್ ಮಾಡುವ ಕಸಬೂ ನಡೆದಿದೆ. ಆಸ್ಪತ್ರೆಗೆ ಹೋದ ಗರ್ಬಿಣಿ ಹೆಂಗಸಿಗೆ ಬೇಕಾದ ಚುಚ್ಚುಮದ್ದುಗಳ ಜೊತೆ ಈ ರೀತಿಯಲ್ಲಿ ಪ್ರಯೋಗಿಸಬಾರದ ಚುಚ್ಚುಮದ್ದುಗಳನ್ನೂ ಚುಚ್ಚಿ ಕಳಿಸುವ ದುಷ್ಟ ವೈದ್ಯರ ಜಾಲವೂ ನಮ್ಮಲ್ಲುಂಟು.

ಬಾಡಿಯ ಬೆಲೆ ಬಲ್ಲಿರಾ?!


ಮಕ್ಕಳು ಮಾತ್ರವಲ್ಲದೆ ಕಣ್ಣು, ಕಿವಿ, ಮೂಗು, ಹಲ್ಲೂ, ಕೈಕಾಲುಗಳು ಸದೃಢವಾಗಿರುವ ಯಾರೇ ಆದರೂ ಹೃದಯ, ಮೂತ್ರಪಿಂಡ, ಶ್ವಾಸಕೋಶಗಳೆಲ್ಲಾ ನೆಟ್ಟಗೆ ಕೆಲಸ ಮಾಡುತ್ತಿರುವ ಯಾವುದೇ ಬಾಡಿಗಾದರೂ ಮೌಲ್ಯವಿದೆ! ಪ್ರತಿ ವ್ಯಕ್ತಿಯ ಬೆಲೆ ಏನಿಲ್ಲವೆಂದರೂ ೨,೫೦,೦೦೦ ಡಾಲರ್‌ಗಳಿವೆ! ಅಂದರೆ ೧.೩೬ ಕೋಟಿ ರೂಪಾಯಿಗಳು! ಪಾರ್ಟ್ ಪಾರ್ಟ್ ಆಗಿ ಬಿಡಿಭಾಗಗಳಂತೆ ಕೊಯ್ದುಕೊಂಡರೆ ಈ ಬಾಡಿ ಬೆಲೆ ಇನ್ನಷ್ಟು ದುಬಾರಿ! ಹೀಗಾಗಿ ಸುಲಭಕ್ಕೆ ಸಿಗುವ ಮಕ್ಕಳನ್ನು ೫-೬ಸಾವಿರಕ್ಕೆ ಕೊಟ್ಟೋ ಅಥವಾ ಪೋಷಕರಿಗೆ ತಿಳಿಯದಂತೆ ಚಾಕಲೇಟ್, ಐಸ್‌ಕ್ರೀಂನ ಆಸೆ ತೋರಿಸಿಯೋ ಅಥವಾ ಮತ್ತೊಂದು ರೀತಿಯಲ್ಲೋ ಮಕ್ಕಳನ್ನು ಅಪಹರಿಸುವ ನರರೂಪದ ರಕ್ಕಸರ ಗ್ಯಾಂಗ್ ಸಕ್ರಿಯಾಗಿದೆ. ಮಕ್ಕಳ ಹಕ್ಕುಗಳಿಗಾಗಿ ಹೋರಾಡುವುದಾಗಿ ಹೇಳಿ ಅತ್ತ ಯುನೆಸ್ಕೊದಿಂದ, ಇತ್ತ ನಮ್ಮಲ್ಲಿರುವ ಸಾವಿರಾರು ದಾನಿಗಳಿಂದ ಲಕ್ಷಾಂತರ ಡಾಲರ್‌ಗಳನ್ನು ದಾನವಾಗಿ ಪಡೆಯುವ ನೂರಾರು ಎನ್‌ಜಿಒಗಳು, ಸಂಘ, ಸಂಸ್ಥೆಗಳು ನಮ್ಮಲ್ಲಿ ಕಾರ್ಯನಿರ್ವಹಿಸುತ್ತಿವೆ. ಚೈಲ್ಡ್ ರೈಟ್ ಟ್ರಸ್ಟ್, ಮಕ್ಕಳ ಹಕ್ಕುಗಳ ಹಿತರಕ್ಷಣಾ ವೇದಿಕೆ, ಆಸರೆ, ಬಾಸ್ಕೊ, ಮಾನವ…. ಹೀಗೆ ಹಲವಾರು ಸಂಸ್ಥೆಗಳು ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿವೆ.
ಅಫ್‌ಕೋರ್‍ಸ್ ಬಾಲಕಾರ್ಮಿಕ ಪದ್ಧತಿ, ಜೀತ ಮುಂತಾದ ಅನಿಷ್ಠಗಳಿಂದ ಮಕ್ಕಳನ್ನು ಬಚಾವ್ ಮಾಡಿ ಶಿಕ್ಷಣದಹಕ್ಕು ದೊರೆಯುವಂತೆ ಮಾಡಿವೆ. ಅಂಗನವಾಡಿಗಳಲ್ಲಿ ಪೂರೈಸುವ ಆಹಾರ ದೋಷವಾಗಿದ್ದರೆ, ಶಾಲೆಯಲ್ಲಿ ಮಾಸ್ಟರ್ ಹೊಡೆದರೆಂದು, ಆರ್‌ಟಿಇ ಮಕ್ಕಳಿಗೆ ತಲೆಬೋಳಿಸಿದರೆಂದರೂ ಇವರು ‘ಬೀದಿಗೆಬಿದ್ದು’ ಹೋರಾಟಕ್ಕೆ ಇಳಿಯುತ್ತಾರೆ. ಆದರೆ ಮಕ್ಕಳೇ ಸರಕಾಗಿ ಸಾಗರೋತ್ತರ ದೇಶಗಳಿಗೆ ರವಾನೆಯಾಗುತ್ತಿದ್ದರೂ ಇವರು ಸಮರ್ಪಕವಾಗಿ ಹೋರಾಟಕ್ಕೆ ಇಳಿದಿಲ್ಲ. ಮಕ್ಕಳ ಹಕ್ಕುಗಳಿಗಾಗಿ ಶಾಸಕರ ವೇದಿಕೆ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಹರಕೆ ತೀರಿಸುವವರಂತೆ ವಿಧಾನಸೌಧದ ೩ನೇ ಮಹಡಿಯಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಕ್ಕಳನ್ನು ಮುಖಾಮುಖಿ ಕಾರ್ಯಕ್ರಮ ಮಾಡಿಸುತ್ತಾರೆ. ಆದರೆ ಅಲ್ಲೂ ಮಕ್ಕಳ ಅಪಹರಣದ ಕುರಿತಂತೆ ಗಂಭೀರ ಪ್ರಶ್ನೆಯೇ ಮೂಡಿ ಬಂದಿಲ್ಲ. ಕನಿಷ್ಠ ಮಕ್ಕಳಲ್ಲಿ ಜಾಗೃತಿ ಉಂಟುಮಾಡುವ ಕಾರ್ಯವನ್ನೂ ಈ ಎನ್‌ಜಿಒಗಳು ಮಾಡುತ್ತಿಲ್ಲ. ಇದೆಲ್ಲವೂ ಮಕ್ಕಳ ಅಪಹರಣಕಾರರಿಗೆ ವರದಾನವಾಗಿಲ್ಲವೇ?!
ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಲೇ ಡಾ|| ಸತ್ಯಾರ್ಥಿ ನೊಬೆಲ್ ಪ್ರಶಸ್ತಿಗಿಟ್ಟಿಸಿದರು. ಸಾವಿರಾರು ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಯಿಂದ ವಿಮುಕ್ತಿಗೊಳಿಸಿದರು. ನೂರಾರು ಮಕ್ಕಳಿಗೆ ವಿದ್ಯೆ ಕೊಡಿಸಿದ್ದಾರೆ. ಆದರೆ ಅದೇ ಡಾ|| ಸತ್ಯಾರ್ಥಿ ಹುಟ್ಟಿದ ಭವ್ಯಭಾರತದಲ್ಲಿ ಸಾವಿರಾರು ಮಕ್ಕಳು ವರ್ಷಂಪ್ರತಿ ಸರಕಿನ ರೀತಿಯಲ್ಲಿ ಮಾರಾಟವಾಗುತ್ತಿರುವುದು ವಿಪರ್ಯಾಸ!

Tags: #childabuse#childrenskidnapping#india#internationalmafiaamerica

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
china fake medicine mafia: ಚೀನಾ ಕಾಂಡೋಮ್ ಬಳಸಿದ್ರೆ ಏಡ್ಸ್ ಗ್ಯಾರೆಂಟಿ!

china fake medicine mafia: ಚೀನಾ ಕಾಂಡೋಮ್ ಬಳಸಿದ್ರೆ ಏಡ್ಸ್ ಗ್ಯಾರೆಂಟಿ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.