-ಜೂಜಿನ ಮರ್ಜಿಗೆ ಸಿಕ್ಕಿ ಮಸಣ ಸೇರಿದವರೆಷ್ಟು?
-ವಿಶ್ವ ಪ್ರಸಿದ್ಧ ಕ್ರಿಕೆಟ್ ಆಟಕ್ಕಂಟಿದ ಸೂತಕ!
ಇದೀಗ ಎಲ್ಲಡೆ ಮತ್ತೆ ಐಪಿಎಲ್ ಮಾದರಿ ಕ್ರಿಕೆಟ್ಟಿನ ಜ್ವರ ಏರಿಕೊಂಡಿದೆ. ಕ್ರಿಕೆಟ್ ಪ್ರೇಮಿಗಳು ನಾಡಿನಾದ್ಯಂತ ಈ ಕ್ರೀಡಾ ಕೂಟವನ್ನು ನೋಡುತ್ತಾ ಸಂಭ್ರಮಿಸುತ್ತಿದ್ದಾರೆ. ತಮ್ಮ ದಿನ ನಿತ್ಯದ ಕೆಲಸ ಕಾರ್ಯ, ಕಷ್ಟ ಕೋಟಲೆಗಳನ್ನು ಮೀರಿ ಈ ಪಂದ್ಯಾಟ ನೋಡುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಅದು ನಿಜವಾದ ಕ್ರೀಡಾ ಪ್ರೇಮ. ಹೀಗೆ ಮಂದಿ ತದೇಕಚಿತ್ತದಿಂದ ಈ ಕ್ರಿಕೆಟ್ ಪಂದ್ಯಾಟ ನೋಡುತ್ತಿದ್ದರೆ, ಅದರ ಮತ್ತೊಂದು ಮಗ್ಗುಲಲ್ಲಿ ಭಯಾನಕ ಬೆಟ್ಟಿಂಗ್ ಮಾಫಿಯಾ ಕೋಟಿ ಕೋಟಿ ದಂಧೆ ನಡೆಸುತ್ತಿದೆ. ಈಗಂತೂ ಆನ್ಲೈನ್ ಮೂಲಕವೇ ಈ ಜೂಜಿನ ಜಾಲ ಹಬ್ಬಿಕೊಂಡಿರೋದರಿಂದಾಗಿ ಅನೇಕ ಮಂದಿ ಕಾಸಿನಾಸೆಗೆ ಬಿದ್ದು ಇರಾಓ ಬರೋ ಕಾಸನ್ನೆಲ್ಲ ಸುರಿದು ಈ ಜೂಜಿಗೆ ದಾಸರಾಗಿದ್ದಾರೆ. ಕೆಲಕ ಮಂದಿಯಂತೂ ರಾತ್ರೋ ರಾತ್ರಿ ನಇದ್ದ ಬದ್ದ ಹಣವನ್ನೆಲ್ಲ ಕಳೆದುಇಕೊಂಡು, ಕೈ ತುಂಬಾ ಸಾಲ ಮಾಡಿಕೊಂಡು ಆತ್ಮಹತ್ಯೆಗೀಡಾಗುತ್ತಿದ್ದಾರೆ. ಈ ಐಪಿಎಲ್ ಶುರುವಾದ ಘಳಿಗೆಯಿಂದಲೇ ಇಂಥಾ ದುರಂತಗಳಿಗೂ ಕೂಡಾ ಚಾಲನೆ ಸಿಕ್ಕಂತಾಗಿದೆ.
ಈ ಸಲವೇ ಕರ್ನಾಟಕದಲ್ಲಿ ಮೂರ್ನಾಲಕ್ಕು ಮಂದಿ ಬೆಟ್ಟಿಂಗ್ ಮಾಫ:ಇಯಾದ ಸೆಳವಿಗೆ ಸಿಕ್ಕು ಜೀವ ಬಿಟ್ಟಿದ್ದಾರೆ. ಅವರನ್ನೇ ನಂಕೊಂಡಿದ್ದ ಹೆಂಡತಿ ಮಕ್ಕಳು ಅನಾಥರಾಗಿದ್ದಾರೆ. ಈ ರೀತಿಯಾಗಿ ಮನೆಯ ಯಜಮಾನನೇ ದುರಂತ ಅಂತ್ಯ ಕಂಣಡ ನೋವಿನಲ್ಲಿರುವ ಮಹಿಳೆಯರು ಬೆಟ್ಟಿಂಗ್ ಜಾಲಕ್ಕೆ ಸಿಲುಕದಂತೆ ಕಣ್ಣೀರುಗರೆಯುತ್ತಾ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅದೇಕೋ ಬೆಟ್ಟಿಂಗ್ ದಂಧೆಯ ಮೋಹಕ್ಕೆ ಸಿಕ್ಕ ಮಂದಿಗೆ ಅಂಥಾ ಕರ್ಣನೀರಿನ ಕರೆ ಕೂಡಾ ಕೇಳಿಸುತ್ತಿಲ್ಲ. ಈ ಕಾರಣದಿಂದಲೇ ಸಾಲ ಮಾಡಿಯಾದರೂ ಈ ಬೆಟ್ಟಿಂಗ್ ಆಡುವ ಹುಟ್ಟಿಗೆ ಅನೇಕರು ಬಿದ್ದು ಬಿಟ್ಟಿದ್ದಾರೆ. ಈ ಕಾರಣದಿಂದಲೇ ಇದೀಕ ಕ್ರಿಕೆಟ್ ಎಂಬ ಆಟಕ್ಕೆ ಸೂತಕ ಮೆತ್ತಿಕೊಂಡಿದೆ. ಅಷ್ಟಕ್ಕೂ ಕ್ರಿಕೆಟ್ ಎಂಬುದೊಂದ ಬಹು ಕೋಟಿ ದಂಧೆಯಾಗಿ ಬಹು ಕಾಲವೇ ಕಳೆದು ಹೋಗಿದೆ. ಈಗಂತೂ ಅಂತಾರಾಷ್ಟೀಯ ಮಾಫಿಯಾ ಡಾನುಗಳ ಸಾರಥ್ಯದಲ್ಲಿ ಬೆಟ್ಟಿಂಗ್ ಮಾಫಿಯಾ ಕೂಡಾ ಅವ್ಯಾಠಹತವಾಗಿ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ. ನಮ್ಮದೇ ಕರ್ನಾಟಕದ ಮಟ್ಟಿಗೆ ಹೇಳೋದಾದರೆ ಈ ಬೆಟ್ಟಿಂಗ್ ದಂಧೆ ಸ್ಥಳೀಯ ಮಟ್ಟದಲ್ಲಿ ಮಾತ್ರವಲ್ಲದೇ ಆನ್ ಲೈನಿನಲ್ಲಿಯೂ ಕೂಡಾ ದೊಡ್ಡ ಮಟ್ಟದಲ್ಲಿಯೇ ನಡೆಯಲಾರಂಭಿಸಿದೆ.
ಬೇಟಿಗಿಳಿದ ಖಾಕಿ ಪಡೆ

ಸಿಸಿಬಿ ಪೊಲೀಸರು ಬೆಟ್ಟಿಂಗ್ ಮಾಫಿಯಾದ ಬೇಟೆಗಿಳಿದಿದ್ದಾರೆ. ಬೆಂಗಳೂರಿನ ಸಂದಿಗೊಂದಿಗಳಲ್ಲಿ ದಂಧೆ ನಡೆಸುತ್ತಿದ್ದ ಖದೀಮರನ್ನೆಲ್ಲ ಒಂದು ಕಡೆಯಿಂದ ಹಿಡಿದು ಜೈಲಿಗೆ ಗದುಮುತ್ತಿದ್ದಾರೆ. ತೀರಾ ಗಲ್ಲಿ ಕ್ರಿಕೆಟ್ ನಡೆದರೂ ಈ ಬೆಟ್ಟಿಂಗ್ ಮಾಫಿಯಾ ವಿಜೃಂಭಿಸಿ ಬಿಡುತ್ತದೆ. ಇನ್ನು ಇಡೀ ಜಗತ್ತಿಗೇ ಜ್ವರ ಹತ್ತಿಸಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಆರಂಭವಾದೇಟಿಗೆ ಈ ದಂಧೆ ಗರಿಗೆದರದಿರೋದುಂಟಾ? ಈ ಬೆಟ್ಟಿಂಗ್ ಮಾಫಿಯಾ ನೆಚ್ಚಿಕೊಂಡೇ ಕೋಟಿ ಕೋಟಿ ಸಂಪಾದಿಸುವ ಬುಕ್ಕಿಗಳು ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿಯೂ ಕಾರ್ಯ ನಿರ್ವಹಿಸುವ ಮಾಹಿತಿಯಿಟ್ಟುಕೊಂಡೇ ಅಖಾಡಕ್ಕಿಳಿದಿರುವ ಸಿಸಿಬಿ ಪೊಲೀಸರು ದಿನಕ್ಕೊಂದೊಂದು ಖತರ್ನಾಕ್ಗಳ ಬುಕ್ಕಿ ಬೆಟಾಲಿಯನ್ ಅನ್ನು ಜೈಲಿಗೆ ಗದುಮುತ್ತಿದ್ದಾರೆ. ಈ ವೇಗದ ಕಾರ್ಯಾಚರಣೆಯಿಂದಾಗಿ ಸದ್ಯ ಬುಕ್ಕಿಗಳ ಹಡಬೇ ಕಾಸಿನ ಖರಾಬು ದುನಿಯಾದ ನೆತ್ತಿದೆ ಸಿಡಿಲು ಬಡಿದಂತಾಗಿರೋದಂತೂ ಸತ್ಯ!
ಐಪಿಎಲ್ ಪಂದ್ಯಾಟ ಆರಂಭವಾಗುವ ತಿಂಗಳ ಮುಂಚೆಯೇ ಇಡೀ ಪೊಲೀಸ್ ಇಲಾಖೆ ಬೆಟ್ಟಿಂಗ್ ಮಾಫಿಯಾವನ್ನು ಮಟ್ಟ ಹಾಕಲು ಸಮಾಲೋಚನೆ ನಡೆಸಿತ್ತು. ಉನ್ನತ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶ್ರಮಿಸಿದ್ದರು. ಆ ಬಳಿಕ ನುರಿತ ಅಧಿಕಾರಿಗಳ ನೇತೃತ್ವದಲ್ಲಿ ಸಕಲ ವಿಭಾಗಗಳನ್ನೂ ತಣ್ಣಗೆ ಅಲರ್ಟ್ ಮಾಡಲಾಗಿತ್ತು. ನಗರದ ಪ್ರತೀ ಠಾಣಾ ವ್ಯಾಪ್ತಿಯಲ್ಲಿಯೂ ಈ ಬೆಟ್ಟಿಂಗ್ ನಡೆಯೋ ಅಡ್ಡೆಗಳನ್ನು ಪತ್ತೆ ಹಚ್ಚುವ ಕೆಲಸಕ್ಕೆ ಚಾಲನೆ ಸಿಕ್ಕಿತ್ತು. ಆದರೆ ಈ ಪ್ರಳಯಾಂತಕ ಬೆಟ್ಟಿಂಗ್ ಮಾಫಿಯಾ ನಗರಾಧ್ಯಂತ ಬಿರುಸಾಗಿತ್ತು. ಇದು ತೀವ್ರಸ್ವರೂಪ ಪಡೆದುಕೊಂಡಿದ್ದು ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾದ ಪಂದ್ಯಾಟದ ಸಂದರ್ಭದಲ್ಲಿ!
ಕೋಟಿ ದಂಧೆ

ಭಾರತ ಮತ್ತು ಪಾಕಿಸ್ತಾನದ ಪಂದ್ಯದ ವೇಳೆ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆದಿದೆ ಎಂಬ ಮಾಹಿತಿಯನ್ನು ಪೊಲೀಸರೇ ಹೊರಗೆಡಹುತ್ತಾರೆ. ಯಾರೋ ಅಬ್ಬೇಪಾರಿಗಳು ತಕ್ಷಣಕ್ಕೆ ಕಾಸು ಮಾಡುವ ಉಮೇದಿನಿಂದ ಈ ದಂಧೆಗಿಳಿಯುತ್ತಾರೆ ಎಂಬಂತೆ ಈ ಬೆಟ್ಟಿಂಗ್ ಕುರಿತು ಹಗುರವಾಗಿ ಆಲೋಚಿಸುವಂತಿಲ್ಲ. ಯಾಕೆಂದರೆ ಇದೊಂದು ಮಾಫಿಯಾ. ಇದರಲ್ಲಿ ಹರಿದಾಡುವ ಹಣದ ಹಿಂದೆ ದಾವೂದ್ ಇಬ್ರಾಹಿಂನಂಥಾ ಭೂಗತಲೋಕದ ಡಾನುಗಳ ನೆರಳಿದೆ. ರವಿಪೂಜಾರಿಯಂಥವರೂ ಈ ದಂಧೆಯ ಹೆಸರಲ್ಲಿ ಜಾಲ ಹೊಂದಿದ್ದಾರೆ. ಈ ನೆಟ್ವರ್ಕ್ ಇದೆಯಲ್ಲಾ? ಅದುವೇ ಬೆಂಗಳೂರಿನ ಇರಿಕ್ಕು ಗಲ್ಲಿಯಲ್ಲಿ ನಡೆಯುವ ಬೆಟ್ಟಿಂಗ್ ದಂಧೆಯವರೆಗೂ ಕೈಚಾಚಿಕೊಂಡಿರುತ್ತದೆ! ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತಮ್ಮ ಜಾಲ ಹೊಂದಿರುವ ಬೆಟ್ಟಿಂಗ್ ದಂಧೆಕೋರರು ಪ್ರತಿ ಬಾಲ್ ಹಾಗೂ ರನ್ಗೆ ಹಣ ಕಟ್ಟಿಸಿಕೊಳ್ಳುವ ಮೂಲಕ ಬೆಟ್ಟಿಂಗ್ ಆಡುವವರನ್ನು ಸರ್ವ ನಾಶ ಮಾಡುತ್ತಿದ್ದಾರೆ. ಮೊಬೈಲ್ ಫೋನ್ ಮೂಲಕ ನಡೆಯುವ ಈ ದಂಧೆಗೆ ತಕ್ಷಣ ಕಡಿವಾಣ ಹಾಕಬೇಕೆಂದು ಪೊಲೀಸ್ ಇಲಾಖೆಯನ್ನು ಆಗ್ರಹಿಸಿರುವ ಸಾರ್ವಜನಿಕರು, ಬೆಟ್ಟಿಂಗ್ ದಂಧೆಕೋರರ ವಿರುದ್ದ ಗೂಂಡಾ ಕಾಯ್ದೆ ಹಾಕಿ ಅವರುಗಳನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಾರೆಂದರೆ ಅದರ ಪರಿಣಾಮ ಇನ್ನೆಂಥಾದ್ದಿರಬಹುದೆಂದು ಯಾರಾದರೂ ಊಹಿಸಬಹುದು.
ಬೆಂಗಳೂರಿನ ಮಟ್ಟಿಗೆ ಈ ಬೆಟ್ಟಿಂಗ್ ಮಾಫಿಯಾ ವಿರುದ್ಧ ಸಮರ ಸಾರಿದ ಪೊಲೀಸರು ಮೊದಲು ಬೇಟೆಯಾಡಿದ್ದು ಬನಶಂಕರಿ ಮೂರನೇ ಹಂತದ ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದ ಏರಿಯಾದಲ್ಲಿ. ಅಪರಾಧ ವಿಭಾಗದ ಜಂಟಿ ಆಯುಕ್ತ ಹಾಗೂ ಡಿಸಿಪಿ, ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಕೆಡವಿಕೊಂಡಿದ್ದಾರೆ. ಇಟ್ಟಮಡುವಿನ ಕೃಷ್ಣಯ್ಯ ಲೇಔಟ್ನಲ್ಲಿ ಈ ಬೆಟ್ಟಿಂಗ್ ದಂಧೆ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರಕಾಶ್, ರಾಘವೇಂದ್ರ ಹಾಗೂ ತುಕಾರಾಂ ಎಂಬ ದಂಧೆಕೋರರನ್ನು ಬಂಧಿಸಿದ್ದಾರೆ. ಇವರಿಂದ ಪೊಲೀಸರು ವಶಪಡಿಸಿಕೊಂಡಿದ್ದು ಬರೋಬ್ಬರಿ ೧೦ ಲಕ್ಷದ ೬೦ ಸಾವಿರ ನಗದು, ಒಂದು ಸೋನಿ ಟಿವಿ, ಲ್ಯಾಪ್ಟಾಪ್ ಹಾಗೂ ಆರು ಮೊಬೈಲ್ ಫೋನ್ಗಳನ್ನು!
ಮಿಂಚಿನ ದಾಳಿ

ಇನ್ನುಳಿದಂತೆ ಕೆಪಿ ಅಗ್ರಹಾರ ಠಾಣೆ ಪೊಲೀಸರು ಭುವನೇಶ್ವರಿ ನಗರದಲ್ಲಿ ಬೆಟ್ಟಿಂಗ್ ನಡೆಯುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಆರು ಮಂದಿ ತಗುಲಿಕೊಂಡಿದ್ದಾರೆ. ಬಸವರಾಜು, ನಾಗಪ್ರಕಾಶ್, ಸೆಲ್ವ ಕುಮಾರ್, ನಾಗೇಂದ್ರ, ರಾಘವೇಂದ್ರ ಮತ್ತು ಕಮಲೇಶ್ ಭುವನೇಶ್ವರಿ ನಗರದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದು, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯುತ್ತಿದ್ದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಸಂಬಂಧ ಬೆಟ್ಟಿಂಗ್ನಲ್ಲಿ ತೊಡಗಿದ್ದರು. ಲಕ್ಷ ರೂಪಾಯಿಗೂ ಹೆಚ್ಚು ನಗದು ಮತ್ತು ಮೊಬೈಲ್, ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಾಗಂತ ಈ ಪೊಲೀಸರು ಅದೇನೇ ಪ್ರಯತ್ನ ಪಟ್ಟರೂ ಈ ಬೆಟ್ಟಿಂಗ್ ಮಾಫಿಯಾವನ್ನು ಸಂಪೂರ್ಣವಾಗಿ ಮಟ್ಟ ಹಾಕುವುದು ಕನಸಿನ ಮಾತು. ಸೂಕ್ಷ್ಮವಾಗಿ ಗಮನಿಸಿದರೆ ಬೆಂಗಳೂರಿನ ಬೆಟ್ಟಿಂಗ್ ಮಾಫಿಯಾದೊಂದಿಗೆ ರೌಡಿಸಂ, ಬಡ್ಡಿ ದಂಧೆ ಸೇರಿದಂತೆ ಅನೇಕಾರು ಸಮಾಜಬಾಹಿರ ದಂಧೆಗಳು ಸೇರಿಕೊಂಡಿವೆ. ಇದರಿಂದ ಅದೆಷ್ಟೋ ಮಂದಿ ಬೀದಿಗೆ ಬಿದ್ದಿದ್ದಾರೆ. ಇನ್ನೆಷ್ಟೋ ಮಂದಿ ಆತ್ಮಹತೈ ಮಾಡಿಕೊಂಡ ಉದಾಹರಣೆಗಳಿದ್ದಾವೆ. ಈಗಂತೂ ಈ ಬುಕ್ಕಿಗಳ ಸ್ಪಾಟುಗಳು ಎಲ್ಲೆಲ್ಲಿಯೋ ಹರಡಿಕೊಂಡಿವೆ. ಕಣ್ಕಟ್ಟು ಮಾಡುವ ಸಲುವಾಗಿಯೇ ಕರೆನ್ಸಿ ಹಾಕುವ, ಸೈಬರ್ ಸೆಂಟರುಗಳ ಬೋರ್ಡು ತಗುಲಿಸಿಕೊಂಡು ಅದರೊಳಗೆ ಪಕ್ಕಾ ಬೆಟ್ಟಿಂಗ್ ನಡೆಸುವ ಕುಳಗಳ ಸಂಖ್ಯೆ ಸಾಕಷ್ಟಿದೆ.
ಇನ್ನೂ ದಿಗಿಲಿನ ವಿಚಾರವೆಂದರೆ, ಈ ಬೆಟ್ಟಿಂಗ್ ದಂಧೆಯೂ ಇದೀಗ ಹೈಟೆಕ್ ಸ್ಪರ್ಷ ಪಡೆದುಕೊಂಡಿದೆ. ಇದೀಗ ಆನ್ಲೈನ್ ಮೂಲಕವೇ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾರೆ. ಇದೇ ಈಗ ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ. ಯಾಕೆಂದರೆ ಎಲ್ಲೆಲ್ಲಿ ಬೆಟ್ಟಿಂಗ್ ದಂಧೆ ನಡೆಸಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ. ಆದರೆ ಇಂಥಾ ಹಲವು ಸವಾಲುಗಳ ಮಧ್ಯೆಯೂ ಕಳೆದ ಒಂದು ವಾರದಲ್ಲಿ ಹೂಟಗಳ್ಳಿ, ಎಸ್ಆರ್ಎಸ್ ಮತ್ತು ಇಟ್ಟಿಗೆಗೂಡು ಬಡಾವಣೆಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದವರ ಮನೆಗಳ ಮೇಲೆ ದಾಳಿ ನಡೆಸಿ ೬೦ಕ್ಕೂ ಹೆಚ್ಚು ಮೊಬೈಲ್, ಲ್ಯಾಪ್ಟಾಪ್, ಸ್ಯಾಂಟ್ರೋಕಾರು, ಭಾರೀ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ. ಇದೆಲ್ಲವೂ ಆನ್ಲೈನ್ ಬೆಟ್ಟಿಂಗ್ ಕೇಸುಗಳೇ.
ಆನ್ ಲೈನ್ ದಂಧೆ

ಈ ಆನ್ಲೈನ್ ದಂಧೆಕೋರರು ಪ್ರತಿಯೊಂದು ತುರುಸಿನ ಪಂದ್ಯಾಟಗಳ ಸಂದರ್ಭದಲ್ಲಿಯೂ ಸಹ ಭಾರೀ ಮೊತ್ತದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಿದ್ದರು. ಂದಹಾಗೆ ಇಂಥವರು ಮನೆಗಳಲ್ಲಿಯೇ ಹೆಚ್ಚಿನದಾಗಿ ಇಂಥಾ ದಂಧೆ ನಡೆಸುತ್ತಾರೆ. ನಗರದಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ಸಕ್ರಿಯರಾಗಿರುವವರನ್ನು ಆನ್ಲೈನ್ ಮೂಲಕ ಈ ಖದೀಮರು ಸಂಪರ್ಕಿಸಿ ಅವರಿಂದ ಬೆಟ್ಟಿಂಗ್ ಕಟ್ಟಿಸಿಕೊಳ್ಳುತ್ತಾರೆ. ಪಂದ್ಯಗಳು ಮುಗಿದ ಬಳಿಕ ಪರಸ್ಪರರು ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿಕೊಳ್ಳುತ್ತಾರೆ. ಇಂಥಾ ದಂಧೆಕೋರರ ವಿರುದ್ಧ ಇದೀಗಲೇ ಚನ್ನಮ್ಮನಕೆರೆ ಅಚ್ಚುಕಟ್ಟು, ಬಸವೇಶ್ವರ ನಗರ ಮತ್ತು ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಈ ಬೆಟ್ಟಿಂಗ್ ದಂಧೆ ಮೇರೆ ಮೀರಿದೆ. ಆದರೆ ಈ ಬುಕ್ಕಿಗಳು ಮಾತ್ರ ಕೈತುಂಬಾ ಕಾಸು ಮಾಡಿಕೊಂಡು ಆರಾಮಾಗಿರುತ್ತಾರೆ. ಆದರೆ ಬೆಟ್ಟಿಂಗ್ ದಂಧೆಯ ಸೆಳೆತಕ್ಕೆ ಸಿಕ್ಕಿ ಕಾಸು ಕಳೆದುಕೊಂಡವರನೇಕರು ಆತ್ಮಹತೈ ಒಂದೇ ದಾರಿ ಎಂಬಂಥಾ ನಿಕೃಷ್ಟ ಸ್ಥಿತಿಗಿಳಿದಿದ್ದಾರೆ. ಅದೆಷ್ಟೋ ಸಂಸಾರಗಳು ಈ ದಂಧೆಯಿಂದಲೇ ಬೀದಿಗೆ ಬಿದ್ದಿವೆ. ಬದುಕುಗಳು ಬೀದಿಗೆ ಬಾರದಿರಲೆಂಬ ಉದ್ದೇಶದಿಂದ ಲಾಟರಿ ಮತ್ತು ಸಾರಾಯಿಯಂಥಾದ್ದನ್ನು ನಿಷೇಧಿಸುವ ಸರ್ಕಾರಗಳು ಈ ಬೆಟ್ಟಿಂಗ್ ಮಾಫಿಯಾ ಮಟ್ಟಹಾಕಲು ಕಟ್ಟುನಿಟ್ಟಾದ ಕ್ರಮಗಳನ್ನು ಅದೇಕೆ ಕೈಗೊಳ್ಳುತ್ತಿಲ್ಲವೋ…
ಸುಂದರಿಯರ ಫಿಕ್ಸಿಂಗ್!

ಕ್ರಿಕೆಟ್ ವಿಚಾರದಲ್ಲಿ ಈ ಬೆಟ್ಟಿಂಗ್ ಮಾಫಿಯಾ ಎಂಬುದು ಒಂದು ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡುವಷ್ಟರ ಮಟ್ಟಿಗೆ ಕೊಬ್ಬಿ ಹೋಗಿದೆ. ತೀರಾ ಪಿಚ್ನಲ್ಲಿರುವ ಆಟಗಾರರನ್ನೇ ತಮ್ಮ ಲಾಭಕ್ಕೆ ತಕ್ಕಂತೆ ವರ್ತಿಸುವಂತೆ ಮಾಡುವಷ್ಟರ ಮಟ್ಟಿಗೆ ಈ ಮಾಫಿಯಾ ಮೇರೆ ಮೀರಿದೆ. ತೀರಾ ನೇರ ಮಾರ್ಗದಲ್ಲಿ ಈ ಕೆಲಸ ಆಗದಿದ್ದರೆ ವಾಮಮಾರ್ಗದ ಮೂಲಕವಾದರೂ ಕಾರ್ಯ ಸಾಧಿಸಿಕೊಳ್ಳಲು ಬೆಟ್ಟಿಂಗ್ ಕುಳಗಳು ಸಜ್ಜಾಗಿವೆ. ಈ ಬಾರಿಯ ವಿಶ್ವಕಪ್ ಕ್ರಿಕೆಟ್ನ್ನು ಆರಂಭದಲ್ಲಿಯೇ ಬೆಟ್ಟಿಂಗ್ ಭೂತ ಆವರಿಸಿಕೊಂಡಿತ್ತು. ಈ ಸ್ಪಾಟ್ ಫಿಕ್ಸಿಂಗ್ ಹಗರಣ ನಡೆದ ನಂತರ ಆಟಗಾರರು ಇಂಥಾದ್ದರಲ್ಲಿ ಪಾಲ್ಗೊಳ್ಳಲು ಹೆದರುತ್ತಾರೆ. ಆದರೆ ಹೇಗಾದರೂ ಮಾಡಿ ಆಟಗಾರರನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಲೇ ಬೇಕೆಂದು ತೀರ್ಮಾನಿಸಿದ್ದ ಅಂತಾರಾಷ್ಟ್ರೀಯ ಬೆಟ್ಟಿಂಗ್ ಡಾನ್ಗಳು ಐನಾತಿ ಕೆಲಸವೊಂದಕ್ಕೆ ಮುಂದಾಗಿದ್ದರು. ಅದು ಸುಂದರಿಯರ ಮೂಲಕ ಆಟಗಾರರನ್ನು ಬಲೆಗೆ ಕೆಡವಿಕೊಳ್ಳುವ ಸ್ಕೆಚ್ಚು!
ಬೇರೆ ಬೇರೆ ದೇಶಗಳ ಸುಂದರ ಯುವತಿಯರನ್ನು ಬೆಟ್ಟಿಂಗ್ ದಂಧೆಗೆ ಈ ಮಾಫಿಯಾ ಮಂದಿ ಬಳಸಿಕೊಂಡಿದ್ದರು. ಅವರ ಮೂಲಕ ಆಟಗಾರರನ್ನು ಬೆಟ್ಟಿಂಗ್ ನಡೆಸುವಂತೆ ಸೆಳೆಯುವ ಪ್ರಯತ್ನವನ್ನು ಬುಕ್ಕಿಗಳು ಮಾqಲು ಶತ ಪ್ರಯತ್ನ ನಡೆಸುತ್ತಿದ್ದಾರೆಂದು ಆಸ್ಟ್ರೇಲಿಯಾ ಪೊಲೀಸರು ಕ್ರಿಕೆಟ್ ಆಟಗಾರರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಈ ಸುಂದರ ಯುವತಿಯರು ಮೊದಲು ಆಟಗಾರರನ್ನು ತಮ್ಮ ಮೋಹಕ್ಕೆ ಬೀಳಿಸುತ್ತಾರೆ. ಬಳಿಕ ಅವರೊಂದಿಗೆ ಅಶ್ಲೀಲ ಪೋಟೊಗಳನ್ನು, ವಿಡಿಯೋಗಳನ್ನು ತೆಗೆಯುತ್ತಾರೆ. ಇದೇ ಪೋಟೋಗಳನ್ನು ಇಟ್ಟುಕೊಂಡು ಬಳಿಕ ಬೆಟ್ಟಿಂಗ್ ನಡೆಸುವಂತೆ ಬ್ಲ್ಯಾಕ್ಮೇಲ್ ಮಾಡುತ್ತಾರೆ- ಇದು ಬೆಟ್ಟಿಂಗ್ ಮಾಫಿಯಾದ ಫ್ಲಾನು. ಈಗಾಗಲೇ ಹಲವು ಬೆಟ್ಟಿಂಗ್ ಪ್ರಕರಣಗಳಿಂದ ಕ್ರಿಕೆಟ್ ಆಟದ ಗೌರವ ಕುಗ್ಗಿದೆ. ಇದೀಗ ಆಸ್ಟ್ರೇಲಿಯಾ ಪೊಲೀಸರು ನೀಡಿರುವ ಎಚ್ಚರಿಕೆ ಕ್ರಿಕೆಟ್ ಪ್ರಿಯರಿಗೆ ಮತ್ತಷ್ಟು ಶಾಕ್ ನೀಡಿದೆ. ಈ ಕ್ರಿಕೆಟ್ ಮಂದಿ ಮೈದಾನದ ಹೊರಗೆ ಆಟವಾಡಲು ಹೋದರೆ ತಗುಲಿಕೊಳ್ಳೋದು ಖಂಡಿತಾ!