Sapthami Gowda: ಕಾಂತಾರ(Kantara) ಸಿನಿಮಾ ಮೂಲಕ ಲೀಲಾ ಆಗಿ ಚಂದನವನದಲ್ಲಿ ನೇಮು- ಫೇಮು ಮಾಡಿದವರು ಸಪ್ತಮಿ ಗೌಡ(Sapthami Gowda). ಲೀಲಾ ಪಾತ್ರದ ಮೂಲಕ ಮೊದಲ ಸಿನಿಮಾದಲ್ಲೇ ಕನ್ನಡಿಗರ ಮನಗೆದ್ದ ಚೆಲುವೆ ಈಗ ಟಾಲಿವುಡ್ ಅಂಗಳಕ್ಕೆ ಹಾರಿದ್ದಾರೆ. ಇದೇ ವೇಳೆ ಕಾಂತಾರ ಪ್ರೀಕ್ವೆಲ್ನಲ್ಲಿ ಲೀಲಾ ಇರ್ತಾರಾ ಇರೋದಿಲ್ವಾ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
ʼಕಾಂತಾರʼ(Kantara) ಸಿನಿಮಾ ಮೂಲಕ ಖ್ಯಾತಿ ಗಳಿಸಿಕೊಂಡ ನಟಿ ಸಪ್ತಮಿ ಗೌಡ ಸಪ್ತಮಿ ಗೌಡ (Sapthami Gowda) ಸಖತ್ ಬ್ಯುಸಿಯಾಗಿದ್ದಾರೆ. ಸಿನಿಮಾ ಆಫರ್ಗಳು ಲೀಲಾ ಅರಸಿ ಬರುತ್ತಿವೆ. ʻಯುವʼ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಟಾಲಿವುಡ್ ಅಂಗಳದಿಂದಲೂ ಸಪ್ತಮಿಗೆ ಆಫರ್ ಬರುತ್ತಿದ್ದು, ಟಾಲಿವುಡ್ ಸ್ಟಾರ್ ನಟ ನಿತಿನ್(Nithin) ಅಭಿನಯದ ʻತಮ್ಮುಡುʼ(Thammudu)ಸಿನಿಮಾದಲ್ಲಿ ಲೀಲಾ ನಟಿಸುತ್ತಿದ್ದಾರೆ.
ಈ ನಡುವೆ ʼಕಾಂತಾರʼ(Kantara) ಪ್ರೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ. ಈಗಾಗಲೇ ಬೇರೆ ಬೇರೆ ನಟಿಯರ ಹೆಸರು ಪ್ರೀಕ್ವೆಲ್ನಲ್ಲಿ ಕೇಳಿ ಬರ್ತಿದೆ. ಯಾರೇ ಇದ್ರೂ ಕೂಡ ಅವರು ಕನ್ನಡದವರೇ ಆಗಿರಲಿ ಎನ್ನುವುದು ನನ್ನ ಆಸೆ. ಪ್ರೀಕ್ವೆಲ್ ಆಗಿರೋದ್ರಿಂದ ನಾನು ಇರ್ತಿನೋ ಇಲ್ಲವೋ ಗೊತ್ತಿಲ್ಲ. ಯಾವತ್ತಿದ್ರು ಕಾಂತಾರ ನನ್ನ ಸಿನಿಮಾ, ಅದು ನನ್ನ ತಂಡ, ಯಾರೇ ಇದ್ರು ಸಿನಿಮಾ ಚೆನ್ನಾಗಿ ಆಗಬೇಕು. ಯಾರೇ ಆಯ್ಕೆ ಆದ್ರು ಅರ್ಹತೆ ಇದ್ದೇ ಆಯ್ಕೆ ಆಗಿರುತ್ತಾರೆ. ಒಂದೊಳ್ಳೆ ನಟಿಯಾಗಿರೋ ಕಾರಣಕ್ಕೆ ಕಾಂತಾರ ತಂಡಕ್ಕೆ ಹೋಗ್ತಾರೆ. ಒಳ್ಳೆ ನಟಿ ಯಾರೇ ಇದ್ರೂನು ಸಿನಿಮಾ ಚೆನ್ನಾಗಿ ಆಗೇ ಆಗುತ್ತೆ ಎಂದಿದ್ದಾರೆ ಲೀಲಾ.
ಸ್ಯಾಂಡಲ್ ವುಡ್ ಅಂಗಳದಲ್ಲಿ ತೆರೆಗೆ ಬಂದು, ಪ್ಯಾನ್ ವರ್ಲ್ಡ್ ಸಿನಿಮಾವಾಗಿ ಬಹು ದೊಡ್ಡ ಯಶಸ್ಸು ಗಳಿಸಿದ ಸಿನಿಮಾ ʼಕಾಂತಾರʼ(Kantara). ರಿಷಭ್ ಶೆಟ್ಟಿಗೆ(Rishab Shetty) ಹೊಸ ಇಮೇಜ್, ಸ್ಟಾರ್ಡಂ ತಂದುಕೊಟ್ಟ ಸಿನಿಮಾ. ಕ್ಲಾಸ್, ಮಾಸ್ ಸೇರಿದಂತೆ ಎಲ್ಲರ ಮನಸ್ಸುಗಳಿಗೆ ಹಿಡಿಸಿದ, ಎಲ್ಲರೂ ಅಪ್ಪಿಕೊಂಡ ಸಿನಿಮಾ. ಇದೀಗ ಇದರ ಪ್ರೀಕ್ವೆಲ್ ದೊಡ್ಡ ಸ್ಕೇಲ್ ನಲ್ಲಿ ನಿರ್ಮಾಣವಾಗುತ್ತಿದ್ದು, ಮುಹೂರ್ತ ಆಚರಿಸಿಕೊಂಡಿರುವ ಸಿನಿಮಾ ತಂಡ ಪ್ರಿ ಪ್ರೊಡಕ್ಷನ್ ಹಾಗೂ ತಾರಾಬಳಗದ ಆಯ್ಕೆಯಲ್ಲಿ ಬ್ಯುಸಿಯಾಗಿದೆ.