ಆರ್‌ಆರ್‌ಆರ್(RRR) ಸಿನಿಮಾ ಮೂಲಕ ಆಸ್ಕರ್ ಕೊಳ್ಳೆ ಹೊಡೆದು, ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್ (Juniorntr) ವಿಶ್ವಸಿನಿದುನಿಯಾದಲ್ಲಿ ಸಂಚಲನ ಮೂಡಿಸಿರೋ ವಿಚಾರ ನಿಮಗೆಲ್ಲ ಗೊತ್ತೆಯಿದೆ. ಆರ್‌ಆರ್‌ಆರ್(RRR) ಬರೋವರೆಗೂ ಟಿಟೌನ್‌ಗಷ್ಟೇ ಸೀಮಿತವಾಗಿದ್ದ ತಾರಕ್ (Juniorntr) ಈಗ ವರ್ಲ್ಡ್‌ವೈಡ್ ತಮ್ಮದೇ ಆದ ಮೇನಿಯಾ ಸೃಷ್ಟಿಸಿಕೊಂಡಿದ್ದಾರೆ. ʻದೇವರʼ(Devara) ಚಿತ್ರದ ಮೂಲಕ ಮಗದೊಮ್ಮೆ ಪ್ಯಾನ್ ಇಂಡಿಯಾ ತುಂಬೆಲ್ಲಾ ದಿಬ್ಬಣ ಹೊರಡಲು ಸಜ್ಜಾಗಿರುವ ಟಿಟೌನ್ ಟೈಗರ್ (Juniorntr) ನ ಕನ್ನಡಕ್ಕೆ ಕರೆತರುವ ಪ್ರಯತ್ನಗಳಾಗ್ತಿರುವ ಬಗ್ಗೆ ಧಮಾಕೇದಾರ್ ಸುದ್ದಿಗಳು ಹೊರಬೀಳುತ್ತಿವೆ.
ಯಸ್, ಇತ್ತೀಚೆಗಷ್ಟೇ ಯಂಗ್ ಟೈಗರ್ ಜೂನಿಯರ್ ಎನ್.ಟಿ.ಆರ್(Juniorntr) ಬೆಂಗಳೂರಿಗೆ ಭೇಟಿಕೊಟ್ಟಿದ್ದರು. ಸೆನ್ಸೇಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್(Prashanthneel), ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ(Rishabshetty), ಹಾಗೂ ಹೊಂಬಾಳೆ ಮಾಲೀಕರಾದ ವಿಜಯ್ ಕಿರಗಂದೂರ್(Vijaykirgandur) ಜೊತೆ ಕಾಣಿಸಿಕೊಂಡಿದ್ದರು. ಖುದ್ದು ಜೂ.ಎನ್.ಟಿ.ಆರ್ (Juniorntr) ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ಡೈರೀಸ್ ಹೆಸರಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದರು. ಯಾವಾಗ ಒಂದೇ ಫ್ರೇಮ್ ಫೋಟೋದಲ್ಲಿ ದಿಗ್ಗಜ್ಜರೆಲ್ಲಾ ಕಾಣಿಸಿಕೊಂಡ್ರೋ ಫೀನೀಶ್, ತಾರಕ್ ((Juniorntr) ಕನ್ನಡಕ್ಕೆ ಬರೋದು ಫಿಕ್ಸು ಅಂತ ಎಲ್ಲರು ಮಾತನಾಡಿಕೊಂಡರು. ಶೆಟ್ರು ಹಾಗೂ ಹೊಂಬಾಳೆ(Homabalefilms) ಮಾಲೀಕರು ಕಾಂತಾರ ಚಾಪ್ಟರ್ 1(Kantara: Chapter 1) ಮೂಲಕ ಕೊಮರಮ್ ಭೀಮ್(Juniorntr)ನ ಕನ್ನಡಕ್ಕೆ ಕರ್ಕೊಂಡು ಬರೋದು ಪಕ್ಕಾ ಅಂತ ಷರಾ ಬರೆದರು. ಆದರೆ, ಈ ಬಗ್ಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ರಾಗಲೀ Rishabshetty), ಹೊಂಬಾಳೆ ಸಂಸ್ಥೆಯಾಗಲೀ, ಅಥವಾ ತಾರಕ್ (Juniorntr) ಆಗ್ಲೀ ಎಲ್ಲಿಯೂ ಬಿಟ್ಟುಕೊಟ್ಟಿಲ್ಲ. ಹೀಗಿರುವಾಗಲೇ ಮಗದೊಂದು ಸುದ್ದಿ ಕನ್ನಡ ಚಿತ್ರರಂಗದಲ್ಲಿ ಕೇಕೆ ಹೊಡೆಯುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೊಂಬಾಳೆಯಂತೆ (Homabalefilms) ಜನಪ್ರಿಯ ಸಿನಿಮಾ ವಿತರಣಾ ಹಾಗೂ ನಿರ್ಮಾಣ ಸಂಸ್ಥೆಯಾಗಿ ಗುರ್ತಿಸಿಕೊಂಡಿರುವ ಕೆವಿಎನ್(KVN) ಸಂಸ್ಥೆ, ಆರ್‌ಆರ್‌ಆರ್ (RRR) ಹೀರೋನಾ ಗಂಧದಗುಡಿಗೆ ಕರೆತರಲು ಪ್ಲಾನ್ ರೂಪಿಸಿರೋದಾಗಿ ಸುದ್ದಿ ಕೇಳಿಬಂದಿದೆ.
ಅಷ್ಟಕ್ಕೂ, ಈ ಸುದ್ದಿಯಲ್ಲಿ ಅದೆಷ್ಟು ಹುರುಳಿದೆಯೋ ? ಏನೋ ಗೊತ್ತಿಲ್ಲ. ಆದರೆ, ಕಾಲಿವುಡ್‌ನ ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಗರಾಜ್(Lokesh Kanagaraj) ಜೊತೆ ಕೈ ಜೋಡಿಸಿರೋ ಕೆವಿಎನ್ ಸಂಸ್ಥೆ(KVN), ಮಾಸ್ಟರ್ ಡೈರೆಕ್ಟರ್ ಜೊತೆ ಜೂ.ಎನ್.ಟಿ.ಆರ್(Juniorntr)ಅವ್ರನ್ನು ಒಟ್ಟುಗೂಡಿಸಿ ಅವರಿಬ್ಬರ ಜುಗಲ್‌ಬಂಧಿಯಲ್ಲಿ ಸಿನಿಮಾ ತಯಾರಿಸೋದಕ್ಕೆ ಮುಂದಾಗಿದೆಯಂತೆ. ಹೀಗೊಂದು ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆಯಾಗ್ತಿದೆ. ಈಗಾಗಲೇ ಅಭಿಮಾನಿಗಳು ಲೋಕೇಶ್ ಕನಗರಾಜ್ (Lokesh Kanagaraj)ಹಾಗೂ ಯಂಗ್ ಟೈಗರ್ (Juniorntr ಇಬ್ಬರ ಫೋಟೋಗಳನ್ನ ಕೊಲಾಜ್ ಮಾಡಿ, ಇಬ್ಬರ ಕಾಂಬಿನೇಷನ್ ಬೆಂಕಿ-ಬಿರುಗಾಳಿ, ಇವರಿಬ್ಬರ ಜುಗಲ್‌ಬಂಧಿಯಲ್ಲಿ ಸಿನಿಮಾ ಬಂದರೆ ಸುನಾಮಿ ಗ್ಯಾರಂಟಿ ಅಂತ ಕಮೆಂಟ್ ಹಾಕ್ತಿದ್ದಾರೆ.
ಆರ್‌ಆರ್‌ಆರ್(RRR) ಮೂಲಕ ಟೈಗರ್ (Juniorntr) ಪ್ಯಾನ್ ಇಂಡಿಯಾ ಸ್ಟಾರ್ ಆದಂತೆ, ಲೋಕೇಶ್ ಕನಗರಾಜ್ (Lokesh Kanagaraj), ವಿಕ್ರಮ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಡೈರೆಕ್ಟರ್ ಆಗಿ ಗುರ್ತಿಸಿಕೊಂಡಿದ್ದಾರೆ. ಕಮಲ್ ಹಾಸನ್, ಸೂರ್ಯ, ಕಾರ್ತಿ, ಫಹಾದ್ ಫಾಸಿಲ್, ವಿಜಯ್ ಸೇತುಪತಿ, ವಿಜಯದಳಪತಿ ಹೀಗೆ ಘಟಾನುಘಟಿ ತಾರೆಯರಿಗೆ ಆಕ್ಷನ್ ಕಟ್ ಹೇಳಿ ಸೈ ಎನಿಸಿಕೊಂಡಿದ್ದಾರೆ. ಎಲ್‌ಸಿಯೂ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಮಾಡಿ ಸಿನಿದುನಿಯಾದಲ್ಲಿ ನಯಾ ಸಂಚಲನ ಮೂಡಿಸಿದ್ದಾರೆ. ಇದೀಗ, ಯಂಗ್ ಟೈಗರ್‌ಗೆ ಆಕ್ಷನ್ ಕಟ್ ಹೇಳುವ ಅವಕಾಶ ಕೆವಿಎನ್(KVN) ಕಲ್ಪಿಸಿಕೊಟ್ಟಿದೆ ಎನ್ನುವ ಸುದ್ದಿಯಿದೆ. ಈ ಸುದ್ದಿ ನಿಜ ಆದರೆ ಬೆಳ್ಳಿಭೂಮಿ ಮೇಲೆ ನಯಾ ದಾಖಲೆಯೇ ಸರೀ ಅಂದರೂ ತಪ್ಪಾಗಲ್ಲ
ಸದ್ಯ, ಟೈಗರ್ ʻದೇವರʼ(Devara) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಗೋವಾದಲ್ಲಿ ಚಿತ್ರೀಕರಣ ಭರದಿಂದ ಸಾಗ್ತಿದೆ. ಈ ಚಿತ್ರ ಹೊರತುಪಡಿಸಿದರೆ ಪ್ರಶಾಂತ್ ನೀಲ್(Prashanthneel) ಜೊತೆಗಿನ ಸಿನಿಮಾ ಆರಂಭಿಸಬೇಕಿದೆ. ಆದರೆ, ನೀಲ್ ಸಾಹೇಬ್ರು ಸಲಾರ್ ಪಾರ್ಟ್2(Salaar-2) ಫಸ್ಟ್ ಮುಗಿಸಿಕೊಟ್ಟು ಅನಂತರ ಎನ್‌ಟಿಆರ್ 31(NTR-31) ಅಖಾಡಕ್ಕೆ ಧುಮ್ಕೋಕೆ ನಿರ್ಧಾರ ಮಾಡಿದ್ದಾರಂತೆ. ಹೀಗಾಗಿ, ದೇವರ(Devara) ನಂತರ ತಾರಕ್ ಫ್ರೀ ಆಗಲಿದ್ದಾರೆ. ಹೀಗಾಗಿ, ಆ ಗ್ಯಾಪ್‌ನಲ್ಲಿ ಒಂದು ಸಿನಿಮಾ ಮಾಡಬೇಕು ಅಂತ ಕೆವಿಎನ್ ಸಂಸ್ಥೆ(Kvn) ಟಿಟೌನ್ ಟೈಗರ್‌ಗೆ ಗಾಳ ಹಾಕಿದ್ರೂ ಹಾಕಿರಬಹುದು. ಅದೇನೇ ಇದ್ರೂ ಕೆವಿಎನ್ ಸಂಸ್ಥೆಯೇ ಅಧಿಕೃತವಾಗಿ ಮಾಹಿತಿ ಹೊರಹಾಕಬೇಕು. ಸದ್ಯ, ಟಾಕ್ಸಿಕ್, ಕೆಡಿಯಂತಹ ಪ್ಯಾನ್ ಇಂಡಿಯಾ ಪ್ರಾಜೆಕ್ಟ್‌ಗಳನ್ನ ನಿರ್ಮಿಸ್ತಿದೆ. ಕಾಲಿವುಡ್‌ನ ಸೆನ್ಸೇಷನಲ್ ಕಂಗುವ(Kanguva) ಚಿತ್ರಕ್ಕೂ ಫಂಡಿಂಗ್ ಮಾಡಿದೆ. ಕನ್ನಡ ಮಾತ್ರವಲ್ಲದೇ ಸೌತ್‌ನ ಎಲ್ಲಾ ಭಾಷೆಗಳಲ್ಲೂ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಮಾಡುವತ್ತ ಕೆವಿಎನ್(kvn) ಚಿತ್ತ ನೆಟ್ಟಿದೆ.