ರಾಕಿಂಗ್ ಸ್ಟಾರ್ ಯಶ್ ಫಾರಿನ್ ಟೂರ್ ಮಾಡ್ತಿರೋದ್ರ ಬಗ್ಗೆ ನಿಮಗೆಲ್ಲ ಗೊತ್ತೆಯಿದೆ. ಒಂದಾದ್ಮೇಲೊಂದು ಜಾಗಕ್ಕೆ ಹೋಗ್ತಿದ್ದಾರೆ, ಫಾರಿನ್ ಟ್ರಿಪ್‍ನ ಸಖತ್ ಎಂಜಾಯ್ ಮಾಡ್ತಿದ್ದಾರೆ. ಆದರೆ, ಯಶ್ ಪದೇ ಪದೇ ವಿದೇಶಿ ಪ್ರವಾಸ ಕೈಗೊಳ್ಳೋದಕ್ಕೆ ಕಾರಣ ಬರೀ ಎಂಜಾಯ್ ಮಾಡೋದಕ್ಕಲ್ಲ? ರಿಲ್ಯಾಕ್ಸೇಷನ್‍ಗೂ ಅಲ್ಲ, ಮೈಂಡ್ ಫ್ರೀ ಮಾಡಿಕೊಳ್ಳೋದಕ್ಕೂ ಅಲ್ಲ, ಸ್ಟ್ರೆಸ್‍ನ ಕಮ್ಮಿ ಮಾಡಿಕೊಳ್ಳೋದಕ್ಕಂತೂ ಅಲ್ಲವೇ ಅಲ್ಲ? ಹಾಗಾದ್ರೆ ಮತ್ತೇನು? ಅದ್ಯಾಕೆ ಫಾರಿನ್‍ಗೆ ಹೋಗ್ತಾರೆ? ಆ ಇಂಟ್ರೆಸ್ಟಿಂಗ್ ಸುದ್ದಿ ಇಲ್ಲಿದೆ ನೋಡಿ
ಸ್ಯಾಂಡಲ್‍ವುಡ್ ಸುಲ್ತಾನ, ಬಾಕ್ಸ್‍ಆಫೀಸ್ ಸಿಇಓ, ಗೇಮ್ ಚೇಂಜರ್ ಆಫ್ ಇಂಡಿಯನ್ ಸಿನಿಮಾ, ಮಾನ್‍ಸ್ಟರ್ ಅಂತ ಕರೆಸಿಕೊಳ್ಳೋ ರಾಕಿಂಗ್ ಸ್ಟಾರ್ ಯಶ್ ಸದ್ಯ ಫಾರಿನ್ ಪ್ರವಾಸದಲ್ಲಿದ್ದಾರೆ. ಸೈಲೆಂಟಾಗಿ ಶ್ರೀಲಂಕಾಗೆ ತೆರಳಿರೋ ರಾಕಿಭಾಯ್, ಅಲ್ಲಿನ ಅಭಿಮಾನಿಗಳ ಕಣ್ಣಿಗೆ ಬಿದ್ದಿದ್ದಾರೆ. ಹೋಟೆಲ್‍ವೊಂದ್ರಲ್ಲಿ ಕೆಜಿಎಫ್ ಹೀರೋ ಕಂಡಿದ್ದೇ ತಡ ಅಲ್ಲಿನ ಫ್ಯಾನ್ಸ್ ಫೋಟೋ ಕ್ಲಿಕ್ಕಿಸಿಕೊಳ್ಳೋದಕ್ಕೆ ಮುಗಿಬಿದ್ದಿದ್ದಾರೆ. ಎಂದಿನಂತೆ ಯಶ್ ತಮ್ಮ ಭಕ್ತಗಣಕ್ಕೆ ಫೋಟೋ ಫೋಸ್ ಕೊಟ್ಟಿದ್ದಾರೆ. ಅವರನ್ನೆಲ್ಲಾ ಖುಷಿಪಡಿಸಿದ್ದಾರೆ.
ಅಂದ್ಹಾಗೇ, ಯಶ್ ಫಾರಿನ್‍ಗೆ ಹೋಗೋದು ಕಾಮನ್ ಆಗ್ಬಿಟ್ಟಿದೆ. ಕಳೆದೊಂದು ವರ್ಷದಿಂದ ಸಾಕಷ್ಟ್ಟು ಭಾರಿ ವಿದೇಶಿ ಪ್ರವಾಸ ಕೈಗೊಂಡಿದ್ದಾರೆ. ಕೆಜಿಎಫ್ ಚಾಪ್ಟರ್-2 ರಿಲೀಸ್ ಆದಾಗಿಂದ ಇಲ್ಲಿತನಕ ಆಸ್ಟ್ರೇಲಿಯಾ, ಅಮೇರಿಕಾ, ನ್ಯೂಜಿಲ್ಯಾಂಡ್, ಸಿಡ್ನಿ, ಇಟಲಿ, ಲಂಡನ್ ಈಗ ಶ್ರೀಲಂಕಾ ಸೇರಿದಂತೆ ಸಾಕಷ್ಟು ದೇಶಗಳಿಗೆ ಭೇಟಿಕೊಟ್ಟಿರೋ ಯಶ್, ಪಕ್ಕದಲ್ಲಿರೋ ಮುಂಬೈಗೆ, ಚೆನ್ನೈಗೆ, ಹೈದ್ರಬಾದ್‍ಗೆ, ದೆಹಲಿಗೆ ಅದೆಷ್ಟು ಭಾರಿ ವಿಸಿಟ್ ಮಾಡಿದ್ದಾರೆ ಅನ್ನೋದಕ್ಕೆ ಲೆಕ್ಕಾನೇ ಇಲ್ಲ.
ಅಷ್ಟಕ್ಕೂ, ಮಾನ್‍ಸ್ಟರ್ ಇಷ್ಟೊಂದು ವಿದೇಶಿ ಟ್ರಿಪ್ ಯಾಕ್ ಮಾಡ್ತಿದ್ದಾರೆ.? ಎಂಜಾಯ್ಮೆಂಟ್‍ಗಾ? ರಿಲ್ಯಾಕ್ಸೇಷನ್‍ಗಾ? ಮೈಂಡ್ ಫ್ರೀ ಆಗಲಿಕ್ಕಾ? ಸ್ಟ್ರೆಸ್ ಕಡಿಮೆಮಾಡಿಕೊಳ್ಳಲಿಕ್ಕಾ? ದೇಶ ಸುತ್ತಿ ನೋಡು ಎನ್ನುವ ಕುತೂಹಲಕ್ಕಾ ಅಥವಾ? ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದರೆ ಮತ್ತೊಂದೆರಡ್ಮೂರು ವರ್ಷ ಫಾರಿನ್ ಕಡೆ ತಲೆಹಾಕೋಕೆ ಆಗಲ್ಲಾ ಅಂತಾನಾ? ಹೀಗೆ ಒಂದಿಷ್ಟು ಪ್ರಶ್ನೆ ನಿಮ್ಮೊಳಗೆ ಮೂಡೋದು ಸಹಜ. ಆ ಪ್ರಶ್ನೆಗೆ ನಮ್ಮಲ್ಲೂ ಉತ್ತರ ಇಲ್ಲ. ಆದರೆ, ಗಾಸಿಪ್ ಲೋಕದಲ್ಲಿ ಕೇಳಿಬರುತ್ತಿರೋ ಸುದ್ದಿ ಏನಪ್ಪಾ ಅಂದರೆ ಯಶ್ ಫಾರಿನ್ ಟೂರ್ ಮಾಡ್ತಿರೋದು ಮುಂದಿನ ಸಿನಿಮಾದ ಲೋಕೇಷನ್ ಹಂಟಿಂಗ್‍ಗಾಗಿ ಅನ್ನೋ ಮಾತು.
ಈ ಸುದ್ದಿಯಲ್ಲಿ ಅದೆಷ್ಟು ಸತ್ಯವಿದೆಯೋ ಗೊತ್ತಿಲ್ಲ. ಆದರೆ, ಗ್ಲೋಬಲ್ ಸ್ಟಾರ್ ಆಗಿ ಬೆಳೆದಿರೋ ಯಶ್‍ಭಾಯ್, ಇಂಟರ್‍ನ್ಯಾಷನಲ್ ಸಿನಿಮಾ ಮಾಡೋ ಕನಸು ಕಂಡಿರೋದಂತೂ ಸತ್ಯ. ಅದಕ್ಕಾಗಿ ಹಾಲಿವುಡ್ ಟೆಕ್ನಿಷಿಯನ್ಸ್, ಹಾಲಿವುಡ್ ಡೈರೆಕ್ಟರ್‍ಗಳನ್ನ ಮೀಟ್ ಮಾಡ್ತಿದ್ದಾರೆ. ಜೆಜೆ ಪೆರ್ರಿಯಂತಹ ಹಾಲಿವುಡ್ ಆ್ಯಕ್ಷನ್ ಡೈರೆಕ್ಟರ್‍ನ ಭೇಟಿಯಾಗಿ ಗನ್‍ಶಾಟ್ ಪ್ರಾಕ್ಟೀಸ್ ಮಾಡಿದ್ದರು. ಇದನ್ನೆಲ್ಲಾ ನೋಡಿದರೆ ದೇಶ-ವಿದೇಶ ಸುತ್ತೋದು ಬರೀ ಮಜಾ ಮಾಡೋದಕ್ಕಲ್ಲ. ಮೇನಿಯಾ ಸೃಷ್ಟಿಸೋದಕ್ಕೆ ಸ್ಕೆಚ್ ಹಾಕೋಕೆ ಹೋಗೋದು ಅಂತ ಗಾಸಿಪ್ ಲೋಕ ಮಾತನಾಡಿಕೊಳ್ತಿದೆ. ಒಂದ್ವೇಳೆ ಈ ಸುದ್ದಿ ನಿಜ ಆದರೆ ಆದಷ್ಟು ಬೇಗ ರಾಕಿಭಾಯ್ ಸಿನಿಮಾ ಅನೌನ್ಸ್ ಮಾಡ್ತಾರೆ. ಯಶ್19 ಬಗ್ಗೆ ಅವರೇ ಅಪ್‍ಡೇಟ್ ಕೊಡ್ತಾರೆ. ಅಲ್ಲಿವರೆಗೂ ಕಾಯೋಣ. ರೆಸ್ಟ್ ಆಫ್ ದಿ ವಲ್ರ್ಡ್ ನನ್ನ ಕನಸು ಅಂತ ಹೇಳಿಕೊಂಡಿರೋ ಸೆಲ್ಫ್ ಮೇಡ್ ಸೂಪರ್‍ಸ್ಟಾರ್ ಯಶ್, ಅದ್ಯಾರ ಜೊತೆ ಕೈಜೋಡಿಸ್ತಾರೆ, ಅದ್ಯಾವ ಥರ ಸಿನಿಮಾ ಮಾಡ್ತಾರೆ ಕಾದುನೋಡೋಣ.