Jahnavi Kapoor: ಬಾಲಿವುಡ್ ಅಂಗಳದಲ್ಲಿ ಪಾಪರಾಜಿಗಳ ಹಾವಳಿ ಜೋರಾಗಿದೆ. ಸೆಲೆಬ್ರಿಟಿಗಳು ಎಲ್ಲೇ ಹೋದ್ರು ಅವ್ರ ಬೆನ್ ಬಿಡದೆ ಫೋಟೋ ವಿಡಿಯೋ ಮಾಡೋದು ಇವರ ಖಯಾಲಿ. ಈ ಕಯಾಲಿ ಇತ್ತೀಚಿನ ದಿನಗಳಲ್ಲಿ ಹದ್ದು ಮೀರಿದೆ. ಸೆಲೆಬ್ರಿಟಿಗಳನ್ನು ತಮ್ಮ ಕ್ಯಾಮೆರಾ ಕಣ್ಣಲ್ಲಿ ಮನಬಂದಂತೆ ತೋರಿಸೋ ಪ್ರವೃತ್ತಿ ಹೆಚ್ಚಾಗಿದೆ. ಇದು ಬಿಟೌನ್ ತಾರೆಯರಿಗೂ ಇರಿಸು ಮುರಿಸು ತರುತ್ತಿದೆ. ಒಬ್ಬೊಬ್ಬರಾಗಿ ಪಾಪಾರಾಜಿಗಳ ಮೇಲೆ ಕೆಂಡ ಕಾರಲು ಶುರು ಮಾಡಿದ್ದಾರೆ. ಆ ಸರದಿಗೆ ಹೊಸ ಸೇರ್ಪಡೆ ಶ್ರೀದೇವಿ ಪುತ್ರಿ.
ಪಾಪರಾಜಿಗಳು ಈ ನಡುವೆ ವೀವ್ಸ್, ಲೈಕ್ಸ್‌ಗೋಸ್ಕರ ಫೋಟೋ ಹೇಗೆಂದರಾಗೆ ತೆಗೆಯೋ ಖಯಾಲಿಗೆ ಬಿದ್ದಿದ್ದಾರೆ. ಈ ಅತಿರೇಕದ ವರ್ತನೆ ಸ್ಟಾರ್‌ಗಳನ್ನು, ನಟಿಮಣಿಯರನ್ನು ಕಿರಿಕರಿಗೆ ತಂದೊಡ್ಡಿದೆ. ಪ್ರೈವೆಸಿ ಅನ್ನೋದು ಇವರ ಮುಂದೆ ಮೂರು ಕಾಸಿಗೂ ಬೆಲೆ ಇಲ್ಲದೇ ಜಗಜ್ಜಾಹೀರಾಗ್ತಿದೆ. ಇತೀಚೆಗೆ ಇವರ ನಡೆ ತೀವ್ರ ಟೀಕೆಗೆ ಗುರಿಯಾಗಿದೆ. ಶ್ರೀದೇವಿ ಪುತ್ರಿ, ಬಿಟೌನ್ ಬ್ಯೂಟಿ ಜಾನ್ವಿ ಕಪೂರ್(Jahnavi Kapoor) ಕೂಡ ಇವರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಕೆಟ್ಟ ಕೆಟ್ಟ ಆಂಗಲ್‌ನಲ್ಲಿ ಫೋಟೋ ತೆಗೆಯಬೇಡಿ ಎಂದು ವಾರ್ನ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಜಾನ್ವಿ(Jahnavi Kapoor) ಪಾಪರಾಜಿಗಳ ನಡೆ ಬಗ್ಗೆ ಆತಂಕ ಹೊರಹಾಕಿದ್ದಾರೆ. ಇದು ಗೌರವಯುವಾತ ನಡೆಯುಲ್ಲ ಎಂದಿದ್ದಾರೆ. ಪಾಪರಾಜಿಗಳ ಕಾರಣದಿಂದ ಈ ನಡುವೆ ಸಾರ್ವಜನಿಕವಾಗಿ ಆತ್ಮಸ್ಥೈರ್ಯದಿಂದ ಓಡಾಡಲು ಆಗ್ತಿಲ್ಲ. ಕೆಟ್ಟ ಆಂಗಲ್‌ನಲ್ಲಿ ಎಲ್ಲಿ ಕ್ಯಾಮೆರಾ ಇಡುತ್ತಾರೆ ಎಂದು ಆತಂಕ ಉಂಟಾಗುತ್ತೆ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ಪ್ರೀತಿ ಜಿಂಟಾ ಕೂಡ ಪಾಪರಾಜಿಗಳಿಗೆ ವಾರ್ನ್ ಮಾಡಿದ್ರು, ತಮ್ಮನ್ನು ಫಾಲೋ ಮಾಡಿಕೊಂಡು ಬಂದಿದ್ದಕ್ಕೆ ಕೆಂಡ ಕಾರಿದ್ರು, ಕಾರ್ ನಂಬರ್ ವಿಡಿಯೋನಲ್ಲಿ ತೋರಿಸಬೇಡಿ ಎಂದು ವಾರ್ನಿಂಗ್ ನೀಡಿದ್ರು. ವಿರಾಟ್- ಅನುಷ್ಕಾ(Virat Kohli) ದಂಪತಿ ಕೂಡ ಮಗುವಿನ ಫೋಟೋ ಕ್ಲಿಕ್ಕಿಸದಂತೆ ರಿಕ್ವೆಸ್ಟ್ ಮಾಡಿಕೊಂಡಿದ್ದು ಇದೇ ಪಾಪರಾಜಿಗಳಿಗೆ. ನಟ ಶಾಹಿದ ಕಪೂರ್(Shahid Kapoor) ಕೂಡ ಇವರ ವರ್ತನೆಗೆ ಕಿಡಿ ಕಾರಿದ್ರು. ವೀವ್ಸ್ ಗಾಗಿ ಕಂಡವರ ಮಕ್ಕಳನ್ನು ಹೇಗೆ ಬೇಕೋ ಹಾಗೆ ಚಿತ್ರಿಸೋ ಪಾಪರಾಜಿಗಳ ಹದ್ದು ಮೀರಿದ ವರ್ತನೆಗೆ ಆದಷ್ಟು ಬೇಗ ಕಡಿವಾಣ ಬೀಳಬೇಕಾಗಿದೆ.