ಅತಿಲೋಕ ಸುಂದರಿ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ (Janhvi Kapoor) ಬಿಟೌನ್ ಹಾಟ್‌ಬ್ಯೂಟಿ ಮಾತ್ರವಲ್ಲ ಅಪ್ಪಟ ದೈವಭಕ್ತೆ ಕೂಡ. ಹೌದು, ನಟಿ ಜಾಹ್ನವಿ ಕಪೂರ್ (Janhvi Kapoor) ದೇವರು-ದೈವಗಳಲ್ಲಿ ನಂಬಿಕೆ ಇಟ್ಟಿದ್ದಾರೆ. ಶೂಟಿಂಗ್, ಡಬ್ಬಿಂಗ್ ಇಲ್ಲ ಎಂದರೇ ಸಾಕು ಟೆಂಪಲ್ ರನ್ ಶುರು ಹಂಚಿಕೊಂಡುಬಿಡ್ತಾರೆ. ಅದರಲ್ಲೂ ಹೆಚ್ಚು ಭೇಟಿಕೊಡುವುದು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ. ಹೌದು, ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಪುತ್ರಿಗೆ ಏಳುಕೊಂಡಲವಾಡ ಶ್ರೀನಿವಾಸನ ಮೇಲೆ ಅಪಾರ ನಂಬಿಕೆ. ಮನೆಯಲ್ಲೂ ಶ್ರದ್ಧಾ-ಭಕ್ತಿಯಿಂದ ಶ್ರೀನಿವಾಸನಿಗೆ ಕೈ ಮುಗಿಯೋ ಜಾಹ್ನವಿ ಕಪೂರ್ (Janhvi Kapoor), ಬಿಡುವು ಸಿಕ್ಕಾಗಲೆಲ್ಲಾ ವೆಂಕಟರಮಣನ ದರ್ಶನ ಪಡೆಯದೇ ಪಡೀತಾರೆ. ಅದರಂತೇ, ಮೊನ್ನೆ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿಗೆ ತೆರಳಿದ್ದು, ಮಂಡಿ ಸೇವೆ ನೆರವೇರಿಸಿ ಬಂದಿದ್ದಾರೆ.
ನಟಿ ಜಾಹ್ನವಿ ಕಪೂರ್ (Janhvi Kapoor) ಇಲ್ಲಿತನಕ ಸುಮಾರು 50 ಭಾರಿ ಮಂಡಿ ಸೇವೆ ಮಾಡಿದ್ದಾರಂತೆ. ಶ್ರೀನಿವಾಸನ ದರ್ಶನಕ್ಕೆ ಹೋದಾಗಲೆಲ್ಲಾ ಮೊಣಕಾಲಿನಿಂದಲೇ ಮೆಟ್ಟಿಲುಗಳನ್ನು ಏರಿ ದರುಶನ ಪಡೆಯುವ ಅಭ್ಯಾಸ ರೂಡಿಸಿಕೊಂಡಿದ್ದಾರಂತೆ. ಅದರಂತೇ, ಈ ಭಾರಿಯೂ ಮಂಡಿಯಲ್ಲೇ ಮೆಟ್ಟಿಲುಗಳನ್ನೇರಿ ಹೋಗಿ ತಿಮ್ಮಪ್ಪನಿಗೆ ಅಡ್ಡಬಿದ್ದು ನಮಸ್ಕರಿಸಿದ್ದಾರೆ. ತಮ್ಮ ಮನದ ಬಯಕೆಗಳನ್ನ, ಕೋರಿಕೆಗಳನ್ನ ಈಡೇರಿಸು ಭಗವಂತ ಅಂತ ತಿಮ್ಮಪ್ಪನಲ್ಲಿ ಬೇಡಿಕೊಂಡಿದ್ದಾರೆ. ಇಷ್ಟೊಂದು ಭಕ್ತ-ಭಾವದಿಂದ ನಡೆದುಕೊಳ್ಳುತ್ತಿರುವ, ಕಠಿಣ ವೃತ ಮಾಡಿ ತಿಮ್ಮಪ್ಪನ ದರ್ಶನ ಪಡೆಯುತ್ತಿರುವ ಜಾಹ್ನವಿಗೆ ಅಭಿಮಾನಿಗಳು ಒಳ್ಳೆದಾಗಲಿ ಅಂತ ಕೇಳಿಕೊಳ್ತಿದ್ದಾರೆ. ಅಂದ್ಹಾಗೇ, ನಟಿ ಜಾಹ್ನವಿಗೆ (Janhvi Kapoor) ಶ್ರೀನಿವಾಸನ ಸನ್ನಿಧಿಯಲ್ಲೇ ಸಪ್ತಪದಿ ತುಳಿಯುವ ಆಸೆಯಿದೆಯಂತೆ, ಈ ಬಗ್ಗೆ ಹಿಂದೊಮ್ಮೆ ಖುದ್ದು ದಢಕ್ ಬ್ಯೂಟಿಯೇ ಮೀಡಿಯಾ ಮುಂದೆ ಹೇಳಿಕೊಂಡಿದ್ದರು.
ಸದ್ಯ ಜಾಹ್ನವಿ (Janhvi Kapoor) ಕಪೂರ್ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಬ್ಯೂಟಿಯಾಗಿದ್ರೂ ಕೂಡ ಹಿಂದಿಗಿಂತ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಶ್ರೀದೇವಿ ಪುತ್ರಿಗೆ ಆಫರ್‌ಗಳು ಸಿಗುತ್ತಿವೆ. ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್(JuniorNTR) ಜೊತೆ ʻದೇವರʼ(Devara) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಶೂಟಿಂಗ್ ಹಂತದಲ್ಲಿರುವಾಗಲೇ ರಾಮ್‌ಚರಣ್(RamCharan) ನಟನೆಯ 16ನೇ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೇ ಈ ಸಿನಿಮಾದ ಮಹೂರ್ತ ಹೈದ್ರಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಮೆಗಾಸ್ಟಾರ್ ಚಿರಂಜೀವಿ ಫಸ್ಟ್ ಕ್ಲಾಪ್ ಮಾಡೋ ಮೂಲಕ ಆರ್-16 (RC-16) ಸಿನಿಮಾಗೆ ಶುಭಹಾರೈಸಿದ್ದಾರೆ. ಫಸ್ಟ್ ಟೈಮ್ ಚೆರ್ರಿ-ಜಾಹ್ನವಿ ಜೋಡಿಯಾಗಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಬ್ಯಾಕ್ ಟು ಬ್ಯಾಕ್ ಸೌತ್ ಸಿನಿಮಾಗೆ ಜಾಹ್ನವಿ ಆಯ್ಕೆ ಆಗ್ತಿರೋದು ನೋಡಿದರೆ ಸೌತ್‌ನಲ್ಲೇ ಸ್ಟಾರ್ ನಟಿಯಾಗಿ ಸೆಟ್ಲ್ ಆಗುವ ಸೂಚನೆ ಕಂಡುಬರುತ್ತಿದೆ. ಎನಿವೇ, ಆಲ್ ದಿ ಬೆಸ್ಟ್ ಜಾಹ್ನವಿ (Janhvi Kapoor)