ಅರುಣ್ ಕುಮಾರ್ ಅಲಿಯಾಸ್ ಆಟ್ಲೀ (Atlee Kumar) ಈ ಹೆಸರು ಈಗ ಬರೀ ಹೆಸರಲ್ಲ. ಇದೊಂದು ಬ್ರ್ಯಾಂಡ್. 2023 ತನಕ ಕಾಲಿವುಡ್ ಅಂಗಳದ ಸೆನ್ಸೇಷನಲ್ ಡೈರೆಕ್ಟರ್ ಆಗಿ ಗುರ್ತಿಸಿಕೊಂಡಿದ್ದ ಆಟ್ಲೀ, ಕಿಂಗ್ ಖಾನ್ ಶಾರುಖ್‌ಗೆ (Sharukh Khan) ಜವಾನ್ (Jawan) ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಡೈರೆಕ್ಟರ್ ಪಟ್ಟಕ್ಕೇರಿದ್ದಾರೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳ ಜೊತೆಗೆ ಸ್ಟಾರ್ ನಟರುಗಳು ಕೂಡ ಕಾಲ್‌ಶೀಟ್‌ಗಾಗಿ ಕ್ಯೂ ನಿಲ್ಲುವಂತೆ ಮಾಡಿದ್ದಾರೆ. ಇದೆಲ್ಲಾ ವಿಚಾರ ಹಳೆಯದ್ದೇ. ಲೇಟೆಸ್ಟ್ ಸಮಾಚಾರ ಏನಂದರೆ ಆಟ್ಲೀ ಸಂಭಾವನೆ ಸರ್ರನೇ ಏರಿಕೊಂಡಿದೆ. ಅದು ಕೋಟಿ ಕೋಟಿ ಲೆಕ್ಕದಲ್ಲಿ ಅನ್ನೋದು ಅಚ್ಚರಿಯ ವಿಷ್ಯ. ಯಸ್, ಜವಾನ್ ಸಾರಥಿ ಈಗ 60 ಕೋಟಿ ಡಿಮ್ಯಾಂಡ್ ಮಾಡ್ತಿದ್ದಾರಂತೆ. ಅದು ಪುಷ್ಪರಾಜ್ ಉರುಫ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಸಿನಿಮಾಗೆ ಅನ್ನೋದು ಇಂಟ್ರೆಸ್ಟಿಂಗ್ ವಿಚಾರ.
ಆಟ್ಲೀ ಹಾಗೂ ಅಲ್ಲು (Allu Arjun) ಕಾಂಬಿನೇಷನ್‌ನಲ್ಲಿ ಸಿನ್ಮಾ ಬರುತ್ತೆ ಅನ್ನೋದು ಎಲ್ರಿಗೂ ಗೊತ್ತಿರೋ ವಿಚಾರ. ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿರೋ ಪುಷ್ಪ-2 (pushpa̲2) ಸಿನಿಮಾ ಮುಗಿಸಿಕೊಟ್ಟು ಅಲ್ಲು ಅರ್ಜುನ್ ಆಟ್ಲಿ ಜೊತೆ ಕೈ ಜೋಡಿಸ್ತಾರೆ, ಪುಷ್ಪ-2 ಬೆನ್ನಲ್ಲೇ ಬಿಗಿಲ್ ಡೈರೆಕ್ಟರ್ ಜೊತೆ ಸಿನ್ಮಾ ಮಾಡ್ತಾರೆ ಅನ್ನೋ ಸುದ್ದಿ ಈಗಾಗಲೇ ಹೊರಬಿದ್ದಿದೆ. ಸದ್ಯ ಟಿಟೌನ್ ಅಂಗಳದಲ್ಲಿ ಕೇಳಿಬರ್ತಿರೋ ನಯಾ ಸಮಾಚಾರ ಅಂದರೆ ಈ ಸಿನಿಮಾಗಾಗಿ ಆಟ್ಲಿ 60 ಕೋಟಿ ಸಂಭಾವನೆ ಕೇಳಿದ್ದಾರೆನ್ನುವುದು. ಅಷ್ಟಕ್ಕೂ, ಈ ಸುದ್ದಿಯಲ್ಲಿ ಅದೆಷ್ಟು ಹುರುಳಿದೆಯೋ ಗೊತ್ತಿಲ್ಲ. ಹಾಗಂತ, ಈ ಸುದ್ದಿ ಸುಳ್ಳು ಎಂತ್ಲೂ ಹೇಳೋಕೆ ಆಗಲ್ಲ. ಯಾಕಂದ್ರೆ, ಆಟ್ಲೀ (Atlee Kumar) ಡೈರೆಕ್ಟ್ ಮಾಡಿರೋ ಸಿನ್ಮಾಗಳು ಬಾಕ್ಸ್ ಆಫೀಸ್‌ನಲ್ಲಿ ಟ್ರ್ಯಾಕ್ಟ್ ರೆಕಾರ್ಡ್ ಓಪನ್ ಮಾಡಿವೆ. ಅದರಲ್ಲೂ ಜವಾನ್ ಸಿನ್ಮಾ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ಲೂಟಿ ಮಾಡಿ ಗಹಗಹಿಸಿದ್ದು ಕಣ್ಣಮುಂದಿರೋ ಸತ್ಯ. ಹೀಗಿರುವಾಗ, ಆಟ್ಲೀ 60 ಕೋಟಿ ಕೊಟ್ಟರೆ ಡೈರೆಕ್ಟ್ ಮಾಡೋದು ಅಂತ ಬೇಡಿಕೆ ಇಟ್ಟಿದ್ರೂ ಇಟ್ಟಿರಬಹುದು. ಸ್ಟಾರ್ ನಟರು ಮಾತ್ರವಲ್ಲದೇ ಕೆಲವು ನಿರ್ದೇಶಕರು ಕೂಡ ಬಹುಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈಗ ಆಟ್ಲೀ ಆ ಲಿಸ್ಟ್‌ಗೆ ಸೇರಿಕೊಳ್ಳುವ ಹಾದಿಯಲ್ಲಿದ್ದಾರೆ.
ಕಾಲಿವುಡ್ ಅಂಗಳದಲ್ಲಿ ಸೋಲೇ ಕಾಣದ ನಿರ್ದೇಶಕರ ಪೈಕಿ ಆಟ್ಲೀ (Atlee Kumar) ಕೂಡ ಒಬ್ಬರು. `ರಾಜರಾಣಿ’ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟ ಆಟ್ಲೀಯವರು, ದಳಪತಿ ವಿಜಯ್ ಜೊತೆ ಬ್ಯಾಕ್ ಟು ಬ್ಯಾಕ್ ಸಿನ್ಮಾ ಮಾಡಿದರು. ಥೇರಿ, ಮರ್ಸಲ್, ಬಿಗಿಲ್‍ನಂತಹ ಬ್ಲಾಕ್‍ಬಸ್ಟರ್ ಚಿತ್ರಗಳನ್ನ ಕಾಲಿವುಡ್‍ಗೆ ಕಾಣಿಕೆಯನ್ನಾಗಿ ನೀಡಿದರು. ಬಿಗಿಲ್ ನಂತರ ಸುಮಾರು 3 ವರ್ಷಗಳ ಕಾಲ ನಿರ್ದೇಶನದಿಂದ ದೂರ ಉಳಿದಿದ್ದ ಆಟ್ಲೀ, ಜವಾನ್ ಚಿತ್ರದ ಮೂಲಕ ಬಿಗ್ ಕಂಬ್ಯಾಕ್ ಮಾಡಿದರು. ಸೌತ್ ಮಾತ್ರವಲ್ಲ ನಾರ್ತ್ ಸಿನಿಮಾ ಲೋಕವನ್ನು ಬೆಕ್ಕಸ ಬೆರಗಾಗಿಸಿದರು. ಬಾಲಿವುಡ್ ಬಾದ್‌ಷಾ ಆಲ್ವೇಸ್ ಬಾಕ್ಸ್ ಆಫೀಸ್ ಕಿಂಗ್ (Sharukh Khan) ಅಂತ ಪ್ರೂ ಮಾಡೋದಕ್ಕೆ ಆಟ್ಲಿ ಸಾಥ್ ಕೊಟ್ಟರು. ಒಂದ್ಕಾಲಕ್ಕೆ ಶಾರುಖ್ ಖಾನ್ ಅವರ ಮನ್ನತ್ ಮನೆಮುಂದೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಆಟ್ಲೀ, ಇವತ್ತು ಅದೇ ಮನ್ನತ್ ಮನೆಗೆ ಗೆಸ್ಟ್ ಆಗಿ ಹೋಗ್ತಿದ್ದಾರೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಜೀ ಸಿನಿ ಅವಾರ್ಡ್ಸ್ ನೆರವೇರಿದ್ದು, ನಿರ್ದೇಶಕ ಅಟ್ಲಿ ಅವರಿಗೆ ಜವಾನ್ ಸಿನಿಮಾಗಾಗಿ ‘ಅತ್ಯುತ್ತಮ ನಿರ್ದೇಶಕ’ ಪ್ರಶಸ್ತಿ ದೊರಕಿದೆ. ಅವಾರ್ಡ್ ಸ್ವೀಕರಿಸುವುದಕ್ಕೂ ಮುನ್ನ ಅಟ್ಲಿ ಅವರು ಶಾರುಖ್ ಖಾನ್ (Sharukh Khan) ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.