ಬುಧವಾರ, ಜುಲೈ 2, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

Jr.NTR: ‘ದೇವರ’ ಸಿನಿಮಾಗೆ ಬ್ರೇಕ್-‌ ವಾರ್‌2ನತ್ತ ಜೂ.ಎನ್‌ಟಿಆರ್..!‌

Bharathi Javalliby Bharathi Javalli
11/04/2024
in Majja Special
Reading Time: 1 min read
Jr.NTR: ‘ದೇವರ’ ಸಿನಿಮಾಗೆ ಬ್ರೇಕ್-‌ ವಾರ್‌2ನತ್ತ ಜೂ.ಎನ್‌ಟಿಆರ್..!‌

Jr.NTR: ಟಾಲಿವುಡ್‌ ಸೂಪರ್‌ ಸ್ಟಾರ್‌, ‘ಮ್ಯಾನ್‌ ಆಫ್‌ ಮಾಸಸ್’ ನಟ ಜೂ.ಎನ್‌ಟಿಆರ್(Jr̤NTR).‌ ಆರ್‌ಆರ್‌ಆರ್‌(RRR) ಸೂಪರ್‌ ಸಕ್ಷಸ್‌ ಬಳಿಕ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ದೇವರ’ ಹಾಗೂ ‘ವಾರ್‌-2’ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಇದೀಗ ‘ದೇವರ’ ಸಿನಿಮಾಗೇ ಬ್ರೇಕ್‌ ಹೇಳಿ ಮುಂಬೈ ಫ್ಲೈಟ್‌ ಹತ್ತಿದ್ದಾರೆ.

ಜೂ.ಎನ್‌ಟಿಆರ್‌(Jr̤NTR) ನಟಿಸುತ್ತಿರುವ ಮೊದಲ ಹಿಂದಿ ಸಿನಿಮಾ ‘ವಾರ್-2’. ವಾರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ಬೆನ್ನಲ್ಲೇ ವಾರ್ ಸೀಕ್ವೆಲ್‌ ಬಿಟೌನ್‌ನಲ್ಲಿ ನಿರ್ಮಾಣವಾಗುತ್ತಿದೆ. ಹೈ ವೋಲ್ಟೇಜ್‌ ಆಕ್ಷನ್‌ ಸೀಕ್ವೆನ್ಸ್‌ ಚಿತ್ರೀಕರಣದಲ್ಲಿ ಜೂ.ಎನ್‌ಟಿಆರ್‌ ಪಾಲ್ಗೊಳ್ಳಲು ಮುಂಬೈನತ್ತ ಪಯಣ ಬೆಳೆಸಿದ್ದಾರೆ. ಸದ್ಯದ ಮಟ್ಟಿಗೆ ದೇವರ ಚಿತ್ರೀಕಣದಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ.

‘ವಾರ್-2’ಚಿತ್ರದಲ್ಲಿ ಬಿಟೌನ್‌ ಸೂಪರ್‌ ಸ್ಟಾರ್‌ ನಟ ಹೃತಿಕ್‌ ರೋಷನ್‌(Hrithik Roshan) ಜೊತೆ ‘ಮ್ಯಾನ್‌ ಆಫ್‌ ಮಾಸಸ್‌’ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರ ಕಾಂಬಿನೇಶನ್‌ ಕೇಳಿಯೇ ಥ್ರಿಲ್‌ ಆಗಿರೋ ಅಭಿಮಾನಿಗಳು ತೆರೆ ಮೇಲೆ ಇಬ್ಬರ ಹೈ ವೋಲ್ಟೇಜ್‌ ಎನರ್ಜಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. ಅಯನ್‌ ಮುಖರ್ಜಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಸಿನಿಮಾವಿದು.

ಸದ್ಯದಲ್ಲೇ ಕೊರಟಾಲ ಶಿವ ನಿರ್ದೇಶನದ ‘ದೇವರ’(Devara) ಚಿತ್ರೀಕರಣಕ್ಕೆ ಜೂ.ಎನ್‌ಟಿಆರ್‌(Jr.NTR) ಮರಳಲಿದ್ದು, ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ‘ಜನತಾ ಗ್ಯಾರೇಜ್‌’ ಸಿನಿಮಾ ನಂತರ ಇಬ್ಬರ ಕಾಂಬಿನೇಶನ್‌ನಲ್ಲಿ ಮೂಡಿ ಬರ್ತಿರೋ ಎರಡನೇ ಸಿನಿಮಾವಿದು. ಚಿತ್ರದಲ್ಲಿ ಜಾನ್ವಿ ಕಪೂರ್‌(Janhvi Kapoor) ನಾಯಕಿಯಾಗಿ ನಟಿಸುತ್ತಿದ್ದಾರೆ..‌

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
Thalapathy Vijay: ದಳಪತಿ ವಿಜಯ್‌ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್-‌ ಸೆಪ್ಟಂಬರ್‌ 5ಕ್ಕೆ ‘ಗೋಟ್‌’ ಬಿಡುಗಡೆ

Thalapathy Vijay: ದಳಪತಿ ವಿಜಯ್‌ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್-‌ ಸೆಪ್ಟಂಬರ್‌ 5ಕ್ಕೆ 'ಗೋಟ್‌' ಬಿಡುಗಡೆ

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.