ಗುರುವಾರ, ಜುಲೈ 3, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

ಅಸಿಸ್ಟೆಂಟ್ ಡೈರೆಕ್ಟರ್ಸ್ ಕೈಯಲ್ಲಿ ‘ಜುಗಲ್ ಬಂದಿ’ಟ್ರೇಲರ್ ಅನಾವರಣ! 

Vishalakshi Pby Vishalakshi P
26/02/2024
in Majja Special
Reading Time: 1 min read
ಅಸಿಸ್ಟೆಂಟ್ ಡೈರೆಕ್ಟರ್ಸ್ ಕೈಯಲ್ಲಿ ‘ಜುಗಲ್ ಬಂದಿ’ಟ್ರೇಲರ್ ಅನಾವರಣ! 
ಕನ್ನಡ ಚಿತ್ರರಂಗದಲ್ಲೀಗ ಪ್ರಯೋಗಾತ್ಮಕ ಚಿತ್ರಗಳ ಅಲೆ ಶುರುವಾಗಿದೆ ಕಮರ್ಷಿಯಲ್ ಚಿತ್ರಗಳ ನಡುವೆ ಆಗೊಮ್ಮೆ ಈಗೊಮ್ಮೆ ವಿಭಿನ್ನ ಪ್ರಯತ್ನಗಳು ನಡೆಯುತ್ತಿವೆ. ಜೀವನಕ್ಕೆ ಬಹಳ ಹತ್ತಿರವಾದ ಕಥೆಗಳು ದೃಶ್ಯರೂಪಕ್ಕೆ ಇಳಿಸಲಾಗ್ತಿದೆ. ಅದರ ಮುಂದುವರೆದ ಭಾಗವಾಗಿ ತಯಾರಾಗಿರುವ ಚಿತ್ರ “ಜುಗಲ್ ಬಂದಿ.”ಭಗವದ್ಗೀತೆ, ಕುರಾನ್, ಬೈಬಲ್ನಲ್ಲೂ ಬರ್ದಿಲ್ಲ ದುಡ್ಮಾಡದೆಂಗತ! ಟ್ಯಾಗ್ ಲೈನ್ ಮೂಲಕ ಕುತೂಹಲ ದುಪ್ಪಟ್ಟು ಮಾಡಿರುವ ಜುಗಲ್ ಬಂದಿ ಮೊದಲ ನೋಟ ಬಿಡುಗಡೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಅಸಿಸ್ಟೆಂಡ್ ಡೈರೆಕ್ಟರ್ಸ್ ಗಳಿಂದ ಟ್ರೇಲರ್ ರಿಲೀಸ್ ಮಾಡಿಸಲಾಯಿತು.

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿ ನಿರ್ದೇಶಕ ದಿವಾಕರ್ ಡಿಂಡಿಮ, ಸ್ಕೂಲ್‌ಗೆ ಹೋಗುವಾಗ ಅಮ್ಮ ಕೈ ಹಿಡಿದು ಕರೆದುಕೊಂಡು ಹೋಗಿದ್ದರು,ಆದ್ರೆ ಚಿತ್ರರಂಗಕ್ಕೆ ಒಬ್ಬನೇ ನಡೆದುಕೊಂಡು ಬಂದಿದ್ದೇನೆ.  ದಯವಿಟ್ಟು ತಪ್ಪುಗಳು ಇದ್ದರೆ, ನಮ್ಮಿಂದ ಸಮಸ್ಯೆ ಆಗಿದ್ದರೆ ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಜುಗಲ್ ಬಂದಿ ಸಿನಿಮಾ ವೈಯಕ್ತಿಕವಾಗಿ ಗೆಲ್ಲಲು ಮಾಡಿರುವ ಸಿನಿಮಾವಲ್ಲ, ನಮ್ಮ ಸಿನಿಮಾದಿಂದ ಚಿತ್ರರಂಗಕ್ಕೆ ಕನ್ನಡ ಸಿನಿಮಾ ಪ್ರೇಮಿಗಳನ್ನು ಕೊಡೋಣಾ ಎಂಬ ಉದ್ದೇಶದಿಂದ ಮಾಡಿದ್ದೇವೆ.  ವೈಯಕ್ತಿಕ ಗೆಲುವಿಗಿಂತ  ಚಿತ್ರರಂಗಕ್ಕೆ ಖಾಯಂ ಪ್ರೇಕ್ಷಕರನ್ನು ಹುಟ್ಟಿಸುವ ಕೆಲಸ ಮಾಡೋಣಾ ಅಂತಾ ಮಾಡಿರುವ ಸಿನಿಮಾ. ಜುಗಲ್ ಬಂದಿ ಸಿನಿಮಾವನ್ನು ತುಂಬಾ ಅರ್ಗ್ಯಾನಿಕ್ ಆಗಿ ಮಾಡಿದ್ದೇನೆ. ಯಾವ ಚಿತ್ರದ ರೆಪ್ರೆನ್ಸ್ ಸಿಗಲ್ಲ..ಈ ಚಿತ್ರ ನಿಮ್ಮೊಳಗಿನ ಪ್ರೇಕ್ಷಕರನ್ನು ಟಚ್ ಮಾಡುವುದರಲ್ಲಿ ಡೌಟ್ ಇಲ್ಲ. ಎಲ್ಲರೂ ಚಿತ್ರದಲ್ಲಿ ಎರಡೆರಡಲ್ಲ,  ನಾಲ್ಕು ನಾಲ್ಕು ಕೆಲಸ ಮಾಡಿದ್ದೇವೆ ಎಂದರು.
ಮಾನಸಿ ಸುಧೀರ್ ಮಾತನಾಡಿ, ಇದೊಂದು ವಿನೂತನ ಪ್ರಯತ್ನ. ಜುಗಲ್ ಬಂಧಿ ಒಂದು ಕ್ರಿಯೇಟಿವ್ ಟೀಮ್. ಈ ತಂಡದಲ್ಲಿ ನನಗೊಂದು ಪಾತ್ರ ಮಾಡಲು ಅವಕಾಶ ನೀಡಿದ ಡಿಂಡಿಮ ಸರ್ ಗೆ ಧನ್ಯವಾದ. ನನ್ನ ಪಾತ್ರ ಯಶೋಧ. ಯಶೋಧ ಅಂದ ತಕ್ಷಣ ಕೃಷ್ಣ ನೆನಪು ಆಗುತ್ತಾರೆ.  ತಾಯಿಯ ಪ್ರೀತಿ, ನೆನಪು ವಾತ್ಸಲ್ಯ ಎಲ್ಲವೂ ನೆನಪು ಆಗುತ್ತದೆ. ಇಲ್ಲಿರುವ ಯಶೋಧ ಮಗುವಿಲ್ಲ. ಅಮ್ಮ ಎನಿಸಿಕೊಳ್ಳಲು ಕಾಯುತ್ತಿದ್ದಾಳೆ. ಅಂತಹ ಪಾತ್ರ. ಕಾಂತಾರದ ಕಮಲ ಒಂದು ರೇಂಜಾದರೆ. ಯಶೋಧ ಮತ್ತೊಂದು ರೇಂಜ್. ಕಂಪ್ಲೀಟ್ ವಿಭಿನ್ನ ಪಾತ್ರಗಳು. ಎರಡು ಒಟ್ಟೊಟ್ಟಿಗೆ ಬಂದ ಪಾತ್ರಗಳು. ಎರಡು ಒಟ್ಟಿಗೆ ಶೂಟಿಂಗ್ ಆಗಿದ್ದು, ಜುಗಲ್ ಬಂದಿ ಯನ್ನು ಮೊದಲ ಆರಿಸಿಕೊಂಡಿದ್ದೇನೆ. ನಾನು ಈ ಚಿತ್ರದಲ್ಲಿ ಇರುವುದು ಹೆಮ್ಮೆ ಇದೆ ಎಂದರು.
ಸಂಭಾಷಣೆಗಾರ ಮಾಸ್ತಿ ಮಾತನಾಡಿ, ಯಾವುದೇ ಒಂದು ಸಿನಿಮಾದ ಘಟ್ಟವನ್ನು ದೊಡ್ಡವರಿಂದ ಉದ್ಘಾಟನೆ ಮಾಡಿಸಬೇಕೆಂದು ಆಸೆಪಟ್ಟಿರುತ್ತಾರೆ. ಆದರೆ ಈ ತಂಡ ಅಸಿಸ್ಟೆಂಟ್ ಡೈರೆಕ್ಟರ್ ಗಳಿಂದ ಟ್ರೇಲರ್ ಲಾಂಚ್ ಮಾಡಿಸಿದ್ದು ಖುಷಿ ಕೊಟ್ಟಿತು. ಅಸಿಸ್ಟೆಂಟ್ ಡೈರೆಕ್ಟರ್ ಚಿತ್ರದ ನಿಜವಾದ ಹೀರೋಗಳು. ಯಾವಾಗಲೂ ಕಥೆ ಬರೆಯುವಾಗ ಹೀರೋ ತ್ಯಾಗ ಮಾಡಿಕೊಳ್ತಾರೆ ಅಂತಾ ಬರೆಯುತ್ತೇವೆ. ಆದರೆ ನಿಜವಾದ ತ್ಯಾಗ ಮಾಡಿಕೊಳ್ಳುವವರು ಅಸಿಸ್ಟೆಂಟ್ ಡೈರೆಕ್ಟರ್. ಅವರು ಸಿನಿಮಾ ಕನಸು ಹೊತ್ತು ಊರುಬಿಟ್ಟು ಬೇರೆ ಊರಿಗೆ ಬಂದಿರ್ತಾರೆ. ಅವರೊಳಗಡೆ ಒಂದು ಹಸಿವಿರುತ್ತದೆ. ಜುಗಲ್ ಬಂಧಿ ಚೆನ್ನಾಗಿದೆ ಎಂಬುದು ಕಿವಿಗೆ ಬಿದ್ದರೆ ಹೋಗಿ ಸಿನಿಮಾ ನೋಡಿ. ತುಂಬಾ ಭರವಸೆ ಇಟ್ಟು ಬಂದಿರುವ ಚಿತ್ರ. ಕಂಟೆಂಟ್ ಚೆನ್ನಾಗಿದೆ. ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು.
‘ಜುಗಲ್ ಬಂದಿ’ ಒಂದೇ ಕತೆಯ ಸಿನಿಮಾ ಅಲ್ಲ. ಇದು ಹಲವು ಕಥೆಗಳ ಸಂಗಮ. ಹೀಗಾಗಿ ಕುತೂಹಲ ದುಪ್ಪಟ್ಟು ಮಾಡಿದೆ. ತಾಯಿ ಹೃದಯದ ಮಿಡಿತ, ಪ್ರೀತಿ, ವಂಚನೆಯನ್ನು ಈ ಟ್ರೈಲರ್ ಒಳಗೊಂಡಿದೆ. ಅಲ್ಲದೆ ಕಾಮಿಡಿ ಸನ್ನಿವೇಶಗಳು ಸಾಕಷ್ಟಿವೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಎಲ್ಲಾ ಎಲಿಮೆಂಟ್ಸ್ ಕೂಡ ಟ್ರೇಲರ್ ನಲ್ಲಿ ಹೈಲೆಟ್ ಆಗಿದೆ. ದಿವಾಕರ್ ಡಿಂಡಿಮ ಈ ಚಿತ್ರದ ಸಾರಥಿ. ಅವರಿಗಿದು ಮೊದಲ ಪ್ರಯತ್ನ.  ‘ಕಾಂತಾರ’ ಸಿನಿಮಾದಲ್ಲಿ ರಿಷಬ್ ಶೆಟ್ಟಿಯ ತಾಯಿ ಪಾತ್ರದಲ್ಲಿ ನಟಿಸಿದ್ದ ಮಾನಸಿ ಸುಧೀರ್ ಈ ಸಿನಿಮಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಚನಾ ಕೊಟ್ಟಿಗೆ, ಅಶ್ವಿನ್ ರಾವ್ ಪಲ್ಲಕ್ಕಿ, ಸಂತೋಷ್ ಆಶ್ರಯ್, ಯಶ್ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳು. ಹಾಗೇ ಪ್ರಕಾಶ್ ಬೆಳಗಲ್, ಚಂದ್ರಪ್ರಭಾ ಜಿ ಯುವಕ, ರಂಜನ್, ಯುಕ್ತ ಅಲ್ಲು ಸುಶ್, ಅರವಿಂದ್ ರಾವ್ ‘ಜುಗಲ್ ಬಂದಿ’ ಸಿನಿಮಾದಲ್ಲಿ ನಟಿಸಿದ್ದಾರೆ.
ದಿವಾಕರ ಡಿಂಡಿಮ ನಿರ್ದೇಶನದ ಜೊತೆಗೆ ನಿರ್ಮಾಣ ಜವಾಬ್ದಾರಿ ಕೂಡ ಇವರದ್ದೇ. ಪ್ರದ್ಯೋತ್ತನ್ ಸಂಗೀತ ನೀಡಿದ್ರೆ, ಪ್ರಸಾದ್ ಹೆಚ್ ಎಂ ಸಂಕಲನ ಚಿತ್ರಕ್ಕಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೂರೂ ಹಾಡುಗಳಿಗೆ ನಿರ್ದೇಶಕ ದಿವಾಕರ್ ಡಿಂಡಿಮ ಅವರೇ ಸಾಹಿತ್ಯ ರಚಿಸಿದ್ದಾರೆ. ಸಹ ನಿರ್ದೇಶನ ಬಾಲಕೃಷ್ಣ ಯಾದವ್, ಶ್ರೀನಿವಾಸ್ ಸಿನಿ. ಸಹಾಯಕ ನಿರ್ದೇಶಕರು  ಸಂತೋಷ್ ಆಶ್ರಯ, ಕೊಟ್ರೇಶಿ ಕನಸು. ನಿರ್ದೇಶನ ಟ್ರೈನಿಯಾಗಿ ರಘು ವೈ.ಜಿ. ಕಲೆ – ತಿರುಪತಿ, ಲೈಟಿಂಗ್ ಮಂಜೇಶ, ಯೂನಿಟ್ ಉಲ್ಲಾಸ ಅವರ ಕೆಲಸ ಈ ಚಿತ್ರಕ್ಕಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ವಿಷಿಕಾ ಫಿಲ್ಮ್ಸ್ ರಾಜ್ಯಾದ್ಯಂತ ಸಿನಿಮಾ ವಿತರಣೆ ಜವಾಬ್ದಾರಿ ಹೊತ್ತಿದ್ದು, ಅವರದ್ದೇ ಪ್ರೆಸೆಂಟ್ಸ್ ಮೂಲಕ ತೆರೆಗೆ ಬರಲಿದೆ. ಟ್ರೇಲರ್ ಮೂಲಕ ಪ್ರಚಾರದ ಕಹಳೆ ಮೊಳಗಿಸಿರುವ ಚಿತ್ರತಂಡ ಮಾರ್ಚ್ 1ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಎದುರು ತರ್ತಿದೆ.

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
ಚಿತ್ರರಂಗದಲ್ಲಿ 14 ವರ್ಷ ಪೂರೈಸಿದ ಸೌತ್‌ ಸುಂದರಿ ಸಮಂತಾ!

ಚಿತ್ರರಂಗದಲ್ಲಿ 14 ವರ್ಷ ಪೂರೈಸಿದ ಸೌತ್‌ ಸುಂದರಿ ಸಮಂತಾ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.