ಟೋಬಿ ಅಂದಾಕ್ಷಣ ನಿಮ್ಮೆಲ್ಲರ ಕಣ್ಮುಂದೆ ಒನ್ ಅಂಡ್ ಓನ್ಲೀ ರಾಜ್ ಬಿ ಶೆಟ್ಟಿ ಬಂದು ನಿಂತುಬಿಡ್ತಾರೆ. ಆದರೆ, ನಾವು ಈ ಕ್ಷಣ ನಿಮ್ಮ ಮುಂದೆ ಪ್ರಸ್ತುತಪಡಿಸ್ತಿರುವುದು ಜೂನಿಯರ್ ಟೋಬಿ ಬಗ್ಗೆ. ಅಂದ್ಹಾಗೇ, ಕರುನಾಡ ಅಂಗಳದಲ್ಲಿ ಟೋಬಿ ಕ್ರೇಜ್ ಹೇಗಿತ್ತು ಅನ್ನೋದನ್ನ ನೀವೆಲ್ಲರೂ ಕಣ್ಣಾರೆ ನೋಡಿದ್ದೀರಿ. ಆದರೆ, ಕರಾವಳಿ ಭಾಗದಲ್ಲಿ ಕಮ್ಮಿದ ಟೋಬಿಯ ಕ್ರೇಜ್ ಹೇಗಿತ್ತು ಅನ್ನೋದನ್ನ ನೀವೆಲ್ಲರೂ ನೋಡಿರಲಿಕ್ಕೆ ಸಾಧ್ಯವಿಲ್ಲ. ಹೀಗಾಗಿ, ಜೂನಿಯರ್ ಟೋಬಿಯ ಸ್ಟೋರಿಯನ್ನು ನಿಮ್ಮ ಮುಂದೆ ಅನಾವರಣ ಮಾಡುತ್ತಿದ್ದೇವೆ.
ಟೋಬಿ ಶೆಟ್ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾಗಿತ್ತು. ಇತ್ತೀಚೆಗಷ್ಟೇ ತೆರೆಕಂಡು ಜನಮನ ಗೆಲ್ಲುವಲ್ಲಿ ಯಶಸ್ವಿಯೂ ಆಗಿತ್ತು. ಹಿಂದೆಂದೂ ಕಾಣದ ಅವತಾರದಲ್ಲಿ ಪ್ರೇಕ್ಷಕರೆದುರು ನಿಂತ ರಾಜ್ ಬಿ ಶೆಟ್ರು, ಕ್ಲೈಮ್ಯಾಕ್ಸ್‍ನಲ್ಲಿ ಕುದುರೆ ಏರಿ ಬಂದು ಕಲಾಭಿಮಾನಿಗಳನ್ನ ಅಚ್ಚರಿಗೊಳಿಸಿದ್ದರು. ಇದೀಗ, ಅವರಂತೆಯೇ ಕುದುರೆ ಏರಿ ಬಂದ ವ್ಯಕ್ತಿಯೊಬ್ಬ ಸಂಚಲನ ಸೃಷ್ಟಿಸಿದ್ದಾರೆ. ಕಮ್ಮಿದ ಟೋಬಿಯಾಗಿ ಸೋಷಿಯಲ್ ಲೋಕದಲ್ಲಿ ಮೆರವಣಿಗೆ ಹೊರಟ ಈ ವ್ಯಕ್ತಿ ಏಕಾಏಕಿ ಸ್ಟಾರ್ ಆಗಿದ್ದಾರೆ.
ರಾಜ್ ಬಿ ಶೆಟ್ಟರಂತೆ ಕಾಣುವ ಈ ವ್ಯಕ್ತಿ ಪ್ರತ್ಯಕ್ಷ ಆಗಿರುವುದು ಉಡುಪಿಯಲ್ಲಿ. ಹೌದು, ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಟ್ಲ ಪಿಂಡಿ ಹಬ್ಬದಲ್ಲಿ ಈತ ಪಾಲ್ಗೊಂಡಿದ್ದಾರೆ. ಟೋಬಿಯಂತೆ ವೇಷಭೂಷಣ ಹಾಕ್ಕೊಂಡು, ಮೂಗುತಿ ಸಿಗಿಸಿಕೊಂಡು ಕುದುರೆ ಏರಿ ಜನರ ಮಧ್ಯೆ ಬಂದ ಈತ, ಉಡುಪಿ ಜನರನ್ನ ಬೆರಗುಗೊಳಿಸಿದ್ದಾರೆ. ಶೆಟ್ರಂತೆ ಸೀರಿಯಸ್ಸಾಗಿ ಫೋಸ್ ಕೊಟ್ಟು ಕೋಸ್ಟಲ್‍ವುಡ್ ಮಂದಿ ಥ್ರಿಲ್ ಆಗುವಂತೆ ಮಾಡಿದ್ದಾರೆ. ಆತನನ್ನು ನೋಡಿ ದಿಲ್ ಖುಷ್ ಆದ ಜನರು ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಕೆಲವರು ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದು, ನೆಟ್ಟಿಗರು ಕಣ್ಣುಜ್ಜಿಕೊಂಡು ವಿಡಿಯೋ ನೋಡ್ತಿದ್ದಾರೆ. ಇದು ಟೋಬಿ ತಮ್ಮ ಗೋಬಿ, ಕಮ್ಮಿದ ಟೋಬಿ ಅಂತ ಕ್ರೇಜಿ ಕಮೆಂಟ್ ಹಾಕ್ತಿದ್ದಾರೆ. ಕೆಲವರು ಮೆಚ್ಚುಗೆಯನ್ನೂ ವ್ಯಕ್ತಪಡಿಸ್ತಿದ್ದಾರೆ.
ಅಷ್ಟಕ್ಕೂ, ಸ್ಟಾರ್ ಗಳನ್ನ ಅನುಕರಣೆ ಮಾಡೋದು ಸುಲಭವಲ್ಲ. ಅವ್ರಂತೆ ಕಾಣಿಸಿಕೊಂಡ ಮಾತ್ರಕ್ಕೆ ಅವರ ಹಾಗೇ ನಟಿಸಿ ಸೈ ಎನಿಸಿಕೊಳ್ಳುವುದು ನೀರು ಕುಡಿದಷ್ಟು ಸುಲಭವೂ ಅಲ್ಲ. ಆದರೆ, ಕೆಲವರು ಅದನ್ನು ಪ್ರೂ ಮಾಡ್ತಾರೆ. ಇದೀಗ, ರಾಜ್ ಬಿ ಶೆಟ್ಟಿಯವರಂತೆಯೇ ಕಾಣುವ ವ್ಯಕ್ತಿಯೊಬ್ಬ ಜೂನಿಯರ್ ಟೋಬಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿರೋ ಈ ವ್ಯಕ್ತಿ ಶೆಟ್ರ ಕಣ್ಣಿಗೆ ಬಿದ್ದರೆ ಅಣ್ತಮ್ಮನ ರೋಲ್ ಸಿಕ್ಕರೂ ಸಿಗಬಹುದು. ಯಾರಿಗೆ ಗೊತ್ತು, ಅವಕಾಶದ ಬಾಗಿಲು, ಅದೃಷ್ಟದ ಅರಮನೆ ಯಾವಾಗ ಬಾಗಿಲು ತೆಗಿಯುತ್ತೆ ಅಂತ? ಸೋ ಅಲ್ಲಿವರೆಗೂ ಕಾಯಬೇಕು, ಕಾಯಕ ಮಾಡಬೇಕು ಅಷ್ಟೇ.