ಕನ್ನಡತಿ ಜ್ಯೋತಿ ರೈ ಸರ್ಪೈಸ್ ಕೊಡಲು ಹೊರಟಿದ್ದಾರೆ. ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆಗಿರುವ ಫೋಟೋ ಅಪ್‍ಲೋಡ್ ಮಾಡಿರುವ ಈ ನಟಿಮಣಿ, ಅತೀ ಶೀಘ್ರದಲ್ಲೇ ಗುಡ್‍ನ್ಯೂಸ್ ನೀಡುವುದಾಗಿ ತಿಳಿಸಿದ್ದಾರೆ. ಆ ಸಿಹಿಸುದ್ದಿ ಮರುಮದುವೆಗೆ ಸಂಬಂಧಪಟ್ಟಿದ್ದಾ ಅನ್ನೋದು ಹಲವರ ಪ್ರಶ್ನೆ. ಯಾಕಂದ್ರೆ, ಇತ್ತೀಚೆಗೆ ನಟಿ ಜ್ಯೋತಿ ರೈ ಟಾಲಿವುಡ್ ಡೈರೆಕ್ಟರ್ ಸುಕು ಪೂರ್ವಜ್ ಜೊತೆ ಹೆಚ್ಚಾಗಿ ಕಾಣಿಸಿಕೊಳ್ತಿದ್ದರು. ಅವ್ರೊಟ್ಟಿಗೆ ಸಲಿಗೆಯಿಂದಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡುತ್ತಿದ್ದರು. ಇದನ್ನ ನೋಡಿದಾಗಲೇ ಅವರ ಅಭಿಮಾನಿಗಳಿಗೆ ಪ್ಲಸ್ ನೆಟ್ಟಿಗರಿಗೆ ಅನುಮಾನ ಮೂಡಿತ್ತು. ಜ್ಯೋತಿ ರೈ ಮೊದಲ ದಾಂಪತ್ಯ ಮುರಿದುಬಿದ್ದಿರಬಹುದು. ಈ ನಟಿ ಬಾಳಲ್ಲಿ ಸುಕು ಪೂರ್ವಜ್ ಎಂಟ್ರಿಯಾಗಿರಬಹುದು ಎನ್ನುವ ಸಂಶಯ ಎಲ್ಲರನ್ನೂ ಕಾಡಿತ್ತು. ಈಗ ಸ್ವತಃ ಜ್ಯೋತಿ ರೈಯವರೇ ಸುಕು ಪೂರ್ವಜ್ ಜೊತೆಗಿರುವ ಫೋಟೋ ಹಾಕಿ ಗುಡ್ ನ್ಯೂಸ್ ಕೊಡ್ತೀನಿ ಅಂತೇಳಿದ್ದಾರೆ.
ಹಾಗಾದ್ರೆ, ನಟಿ ಜ್ಯೋತಿ ರೈ ಕೊಡಲಿರುವ ಆ ಗುಡ್ ನ್ಯೂಸ್ ಏನು? ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಸಂಬಂಧ ಬೆಳೆಸಿರುವುದು ನಿಜಾನಾ? ಅವ್ರೊಟ್ಟಿಗೆ ಸಪ್ತಪದಿ ತುಳಿಯೋದು ಸತ್ಯಾನಾ? ಈ ಕುತೂಹಲದ ಪ್ರಶ್ನೆಗೆ ನಮ್ಮ ಬಳಿಯೂ ಉತ್ತರವಿಲ್ಲ. ಯಾಕಂದ್ರೆ, ಇವರಿಬ್ಬರ ಮಧ್ಯೆ ಸ್ನೇಹ ಶುರುವಾಗಿದ್ದು ಸಿನಿಮಾದಿಂದ. ನಿರ್ದೇಶಕ ಸುಕು ಪೂರ್ವಜ್ ಡೈರೆಕ್ಷನ್ ಸಿನಿಮಾಗಳಲ್ಲಿ ಜ್ಯೋತಿ ರೈಯವರು ಮಿಂಚಿದ್ದರಿಂದ. ಸೋ ಈಗ ಒಟ್ಟಿಗೆ ಇರುವ ಫೋಟೋ ಪೋಸ್ಟ್ ಮಾಡಿ ಸರ್ಪೈಸ್ ಎನ್ನುತ್ತಿದ್ದಾರೆ ಅಂದರೆ ಅದು ಅವರಿಬ್ಬರ ಮುಂದಿನ ಸಿನಿಮಾವೂ ಆಗಿರಬಹುದು. ಹೀಗಾಗಿ, ಇವರಿಬ್ಬರು ಅತೀ ಶೀಘ್ರದಲ್ಲೇ ಮದುವೆ ಸುದ್ದಿಯನ್ನೇ ಕೊಡ್ತಾರೆಂದು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.
ಹೌದು, ನಟಿ ಜ್ಯೋತಿ ಹಾಗೂ ಸುಕುಪೂರ್ವಜ್ ಒಟ್ಟಿಗೆ ಕೆಲಸ ಮಾಡಿದ್ದಾರೆ. `ಶುಕ್ರ’, `ಮೌತರಾನಿ ಮೌನಮಿದಿ’, `ಎ ಮಾಸ್ಟರ್ಪೀಸ್’ ಸಿನಿಮಾಗಳನ್ನ ಸುಕುಪೂರ್ವಜ್ ನಿರ್ದೇಶನ ಮಾಡಿದ್ದು, ಮಾಸ್ಟರ್ ಪೀಸ್ ಚಿತ್ರದಲ್ಲಿ ನಟಿ ಜ್ಯೋತಿ ರೈ ಮಿಂಚಿದ್ದಾರೆ. ಅಲ್ಲಿ ಇವರಿಬ್ಬರಿಗೂ ಪರಿಚಯವಾಗಿ, ಆ ಪರಿಚಯ ಸ್ನೇಹಕ್ಕೆ ತಿರುಗಿ ಈಗ ಡೇಟ್ ಮಾಡ್ತಿದ್ದಾರೆನ್ನುವ ಸುದ್ದಿ ತೆಲುಗು ಅಂಗಳದಲ್ಲಿ ಬಿಸಿಬಿಸಿ ಚರ್ಚೆಯಾಗ್ತಿದೆ. ಆದರೆ, ನಟಿ ಜ್ಯೋತಿಯಾಗ್ಲೀ ಅಥವಾ ಸುಕುಪೂರ್ವಜ್ ಆಗ್ಲೀ ತಮ್ಮಿಬ್ಬರ ಲವ್ವಿಡವ್ವಿ ಕಹಾನಿಯನ್ನ ಓಪನ್ನಾಗಿ ಹೇಳಿಕೊಂಡಿಲ್ಲ. ಅಂದ್ಹಾಗೇ, ನಟಿ ಜ್ಯೋತಿ 20ನೇ ವಯಸ್ಸಿಗೆ ಮದುವೆಯಾಗಿದ್ದರು. ಪದ್ಮನಾಭ ರೈ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಗಂಡು ಮಗು ಪಡೆದಿದ್ದರು. ಆ ಮಗು ಆಟಿಸಂ ಎನ್ನುವ ಖಾಯಿಲೆಗೆ ತುತ್ತಾಗಿತ್ತು. ಆಗ ಮಗನನ್ನುನ ಉಳಿಸಿಕೊಳ್ಳುವುದಕ್ಕೆ ತುಂಬಾ ಶ್ರಮಪಟ್ಟಿದ್ದರು. ಈಗ ಮಗ ಎಲ್ಲಿದ್ದಾನೆ? ಹೇಗಿದ್ದಾನೆ? ಈ ಪ್ರಶ್ನೆಗೆ ಉತ್ತರವಿಲ್ಲ. ಜ್ಯೋತಿಯವ್ರ ಸಾಮಾಜಿಕ ಜಾಲತಾಣದಲ್ಲಿ ಮಗನ ಫೋಟೋವೂ ಕಾಣಸಿಗ್ತಿಲ್ಲ. ಮೊದಲ ದಾಂಪತ್ಯ ಜೀವನ ಮುರಿದುಬಿದ್ದಿರುವ ಬಗ್ಗೆ ನಮಗೂ ಮಾಹಿತಿ ಲಭ್ಯವಾಗಿಲ್ಲ.
ವೈಯಕ್ತಿಕ ಬದುಕಲ್ಲಿ ಏಳುಬೀಳು ಕಂಡಿರುವ ನಟಿ ಜ್ಯೋತಿ ರೈ ಬಣ್ಣದಲೋಕದಲ್ಲಿ ಕನ್ನಡತಿ ಜ್ಯೋತಿ ಬಹುದೊಡ್ಡ ಹೆಸರು ಮಾಡಿದ್ದಾರೆ. 20ನೇ ವಯಸ್ಸಿಗೆ ಮದುವೆಯಾದ್ಮೇಲೆ ಮುಖಕ್ಕೆ ಬಣ್ಣ ಹಚ್ಚಿಕೊಂಡು ವಿನು ಬಳಂಜ ಅವರ `ಬಂದೇ ಬರತಾವ ಕಾಲ’ ಸೀರಿಯಲ್ ಮೂಲಕ ಕಿರುತೆರೆ ಪ್ರವೇಶಿಸಿದರು. ಕಿನ್ನರಿ, ಜೋಗುಳ, ಕಸ್ತೂರಿ ನಿವಾಸ, ಜೋ ಜೋ ಲಾಲಿ, ಗೆಜ್ಜೆಪೂಜೆ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಕನ್ನಡ ಸೀರಿಯಲ್ ಗಳಲ್ಲಿ ಮಿಂಚಿದ್ದರು. ಸೀತರಾಮ ಕಲ್ಯಾಣ ಸೇರಿದಂತೆ ಹಲವು ಸೂಪರ್ ಹಿಟ್ ಕನ್ನಡ ಸಿನಿಮಾಗಲ್ಲಿ ಸ್ಕ್ರೀನ್ ಶೇರ್ ಮಾಡಿದರು. ನಡುವೆ ತೆಲುಗಿಗೆ ಹಾರಿ ಅಲ್ಲೂ ಸಿನಿಮಾ, ಸೀರಿಯಲ್ ನಲ್ಲಿ ಮಿಂಚಿ ಟಾಲಿವುಡ್ ಪ್ರೇಕ್ಷಕರಿಗೆ ಹತ್ತಿರವಾದರು. `ಗುಪ್ಪೆದಂಥ ಮನಸು’ ಧಾರಾವಾಹಿ ಮೂಲಕ ತೆಲುಗು ಮಂದಿಯ ಮನಸ್ಸು ಗೆದ್ದ ಜ್ಯೋತಿ ರೈ, ಈಗ ಪ್ರಿಟಿಗರ್ಲ್ ಆಗಿದ್ದಾರೆ. ಇದೇ ಹೆಸರಿನ ವೆಬ್ ಸೀರೀಸ್ ಮೂಲಕ ಕಮಾಲ್ ಮಾಡಲು ಹೊರಟಿದ್ದಾರೆ.
ಅಚ್ಚರಿ ಅಂದರೆ ಜ್ಯೋತಿ ರೈ ತುಂಬಾ ಚೇಂಜ್ ಆಗಿದ್ದಾರೆ. ಇಂಡಸ್ಟ್ರಿಗೆ ಬಂದಾಗಿಂದ ಪಕ್ಕದ್ಮನೆ ಹುಡುಗಿಯಂತಿದ್ದ ಇವರು ಈಗ ಪಡ್ಡೆಹೈಕ್ಳ ಕನಸಿನ ಕನ್ಯೆಯಾಗಿ ಬದಲಾಗಿದ್ದಾರೆ. 35ರಲ್ಲೂ 24ರ ಹರೆಯದ ಹುಡುಗಿಯಂತೆ ಕಾಣುತ್ತಿದ್ದಾರೆ. ಇದ್ದಕ್ಕಿದ್ದಂತೆ ವರಸೆ ಬದಲಿಸಿದ್ದರ ಬಗ್ಗೆ ಮಾತನಾಡಿರುವ ಈ ನಟಿ, ಒಂದೇ ಥರ ಇದ್ದು ಇದ್ದು ನಂಗು ಬೋರಾಗಿದೆ. ಲೈಫ್‍ನಲ್ಲಿ ಚೇಂಜಸ್ ಇರಲಿ ಎನ್ನುವ ಕಾರಣಕ್ಕೆ ಮಾಡ್ರನ್ ಆಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಸೀರೆಯುಟ್ಟರೆ ಸಾಕ್ಷಾತ್ ಲಕ್ಷ್ಮಿಯಂತೆ ಕಾಣುತ್ತಿದ್ದ ಈಕೆ, ಈಗ ಬಿಗ್ಗಿಬಿಗ್ಗಿ ಜೀನ್ಸ್ ತೊಟ್ಟು, ಸಿಂಗಲ್ ಪೀಸ್ ಹಾಕ್ಕೊಂಡು ಪಡ್ಡೆಹೈಕ್ಳ ಮೈ ಬೆವರಿಳಿಸುತ್ತಿದ್ದಾರೆ. ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿ ಬೋಲ್ಡ್ ಲುಕ್ಕಲ್ಲೇ ನೋಡುಗರನ್ನ ಕೆಣಕುತ್ತಿದ್ದಾರೆ. ಕಸ್ತೂರಿ ನಿವಾಸ ಸೀರಿಯಲ್‍ನಲ್ಲಿ, ದೇವಕಿ ಧಾರವಾಹಿಯಲ್ಲಿ, ಸೀತರಾಮ ಕಲ್ಯಾಣ ಸಿನಿಮಾದಲ್ಲಿ ನಾವು ನೋಡಿದ್ದು ಇದೇ ಜ್ಯೋತಿನಾ? ಅಮ್ಮನ ಪಾತ್ರದಲ್ಲಿ ಪಕ್ಕದ್ಮನೆ ಸೀತಮನ್ನಂತೆ ಕಾಣುತ್ತಿದ್ದದ್ದು ಇದೇ ನಾಯಕಿನಾ ಅಂತ ಕಣ್ಣುಜ್ಜಿಕೊಳ್ಳುತ್ತಿದ್ದಾರೆ.