Kajal Aggarwal: ಸೌತ್ ಸಿನಿರಂಗದ ಸ್ಟಾರ್ ನಟಿ ಕಾಜಲ್ ಅಗರ್ವಾಲ್(Kajal Aggarwal). ಮಗದೀರ ಸಿನಿಮಾ ಮೂಲಕ ಎಲ್ಲರ ಮಸೂರೆಗೊಂಡ ಈಕೆ ನಂತರ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಪಟ್ಟಕ್ಕೇರಿ ಮೆರೆದವರು. ಮದುವೆ ಬಳಿಕ ಚಿತರಂಗದಿಂದ ಬ್ರೇಕ್ ಪಡೆದ ಈಕೆಗೆ ಮುದ್ದಾದ ಮಗುವಿದೆ. ಇದೀಗ ಮತ್ತೆ ಕಲರ್ ಫುಲ್ ದುನಿಯಾಕ್ಕೆ ಮರಳಿರುವ ಕಾಜಲ್ ಅಗರ್ವಾಲ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಕಾಜಲ್ ಅಗರ್ವಾಲ್(Kajal Aggarwal) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಸತ್ಯಭಾಮ(Satyabhama). ತಮ್ಮ ಸಿನಿ ಕೆರಿಯರ್ನಲ್ಲೇ ಮೊದಲ ಬಾರಿ ಖಾಕಿ ತೊಟ್ಟಿರುವ ಕಾಜಲ್ ಪೋಲೀಸ ಅಧಿಕಾರಿಯಾಗಿ ರಂಜಿಸಲು ರೆಡಿಯಾಗಿದ್ದಾರೆ. ಸತ್ಯಭಾಮ ಚಿತ್ರ ಜುಲೈ 7ರಂದು ವರ್ಲ್ ವೈಡ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅನೌನ್ಸ್ ಮಾಡಿದೆ. ಈ ಮೊದಲು ಇದೇ ತಿಂಗಳು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು ಚಿತ್ರತಂಡ. ಇದೀಗ ಸಿನಿಮಾ ರಿಲೀಸ್ ಬಗ್ಗೆ ಅಧೀಕೃತ ಮಾಹಿತಿ ಹೊರಡಿಸಲಾಗಿದೆ.
2020ರಲ್ಲಿ ಮದುವೆಯಾದ ಕಾಜಲ್ ಅಗರ್ವಾಲ್(Kajal Aggarwal) ಸಿನಿಮಾಗಳಿಂದ ದೂರ ಉಳಿದಿದ್ದರು. ತಾಯ್ತನದ ಸಂಭ್ರಮವನ್ನು ಆನಂದಿಸುತ್ತಿದ್ದ ನಟಿಮಣಿ ಇದೀಗ ಮತ್ತೆ ಚಿತ್ರರಂಗ್ಕಕೆ ಕಂಬ್ಯಾಕ್ ಮಾಡಿದ್ದಾರೆ. ಕಾಲಜಲ್ ಅಭಿಮಾನಿಗಳು ಈಕೆಯ ಸಿನಿಮಾಔನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದೆ. ಜೂನ್ನಲ್ಲಿ ಸತ್ಯಭಾಮ ಆಗಿ ರಂಜಿಸಲಿರೋ ಕಾಜಲ್, ಜುಲೈನಲ್ಲಿ ‘ಇಂಡಿಯನ್2’ ಸಿನಿಮಾ ಮೂಲಕ ಮನರಂಜನೆ ನೀಡಲಿದ್ದಾರೆ.