Kalki 2898 AD ಡಾರ್ಲಿಂಗ್ ಪ್ರಭಾಸ್ (prabhas) ಅಭಿನಯದ ಮೋಸ್ಟ್ ಅವೈಟೆಡ್ ಚಿತ್ರ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ನಿರ್ದೇಶನದಲ್ಲಿ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತಯಾರಾಗ್ತಿರುವ ಈ ಸಿನಿಮಾಗಾಗಿ ಸೌತ್-ನಾರ್ತ್ ಮಂದಿ ಮಾತ್ರವಲ್ಲ ಇಡೀ ಚಿತ್ರಜಗತ್ತೇ ಕಣ್ಣರಳಿಸಿದೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು ಸದ್ಯ ಫಿಲ್ಮ್ ಟೀಮ್ ಇಟಲಿಗೆ ಹಾರಿದೆ. ಯಸ್, ಇಟಲಿಯಲ್ಲಿ Kalki 2898 AD ಚಿತ್ರೀಕರಣ ನಡೆಯುತ್ತಿದೆ. ಡಾರ್ಲಿಂಗ್ ಪ್ರಭಾಸ್ (prabhas) ಹಾಗೂ ಬಿಟೌನ್ ಬ್ಯೂಟಿ ದಿಶಾ ಪಟಾಣಿ (disha patani) ಕಾಂಬೋದಲ್ಲಿನ ಸ್ಪೆಷಲ್ ಹಾಡಿಗಾಗಿ ಚಿತ್ರತಂಡ ಇಟಲಿಗೆ ಹಾರಿದ್ದು ಚಿತ್ರೀಕರಣದಲ್ಲಿ ನಿರತವಾಗಿದೆ. ಅಚ್ಚರಿ ಅಂದರೆ ಕಲ್ಕಿ ಮೇಯ್ನ್ ಹೀರೋಯಿನ್ ದೀಪಿಕಾ ಪಡುಕೋಣೆ (deepika padukone) ಎನ್ನಲಾಗಿತ್ತು. ಆದ್ರೀಗ ಡಿಪ್ಪಿನಾ ಬಿಟ್ಟು ಬರೇಲಿ ಬ್ಯೂಟಿ ಜೊತೆ ಇಟಲಿಗೆ ಹಾರಿರೋದ್ರಿಂದ ಸಿನಿಮಾ ಪ್ರೇಮಿಗಳು ಲೀಡ್ ಹೀರೋಯಿನ್ ಪಟಾಣಿ ಅಂತ ಪ್ರಶ್ನೆ ಮಾಡ್ತಿದ್ದಾರೆ. ಆದರೆ, ಕಲ್ಕಿನಲ್ಲಿ ದೀಪಿಕಾ ಹಾಗೂ ದಿಶಾ ಇಬ್ಬರು ಕೂಡ ಡಾರ್ಲಿಂಗ್‌ಗೆ ಕೋಸ್ಟಾರ್ ಆಗಿ ಕಾಣಿಸಿಕೊಳ್ತಿದ್ದು, ಪಟಾಣಿ ಜೊತೆಗಿನ ಡ್ಯುಯೆಟ್ ಹಾಡಿಗಾಗಿ ಚಿತ್ರತಂಡ ಇಟಲಿಗೆ ಹಾರಿದೆ ಅಷ್ಟೇ.
ದಿಶಾ ಪಟಾಣಿ ತೆಲುಗು ಸಿನಿಮಾರಂಗದಿಂದನೇ ಬಣ್ಣದ ಲೋಕ ಪ್ರವೇಶಿಸಿದವರು. ಅನಂತರ ಎಂಎಸ್ ಧೋನಿ ಚಿತ್ರದ ಮೂಲಕ ಶೈನ್ ಆದರು. ಬಿಟೌನ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಇದೀಗ ಕಲ್ಕಿ ಹಾಗೂ ಕಂಗುವ ಚಿತ್ರದ ಮೂಲಕ ಮತ್ತೆ ಸೌತ್ ಕಡೆ ಮುಖ ಮಾಡಿದ್ದಾರೆ. ಫಾರ್ ದಿ ಫಸ್ಟ್ ಟೈಮ್ ಪ್ರಭಾಸ್ ಬಗಲಲ್ಲಿ ನಿಂತಿದ್ದು, ಇವರಿಬ್ಬರ ಕೆಮಿಸ್ಟ್ರಿ ನೋಡೋದಕ್ಕೆ ಫ್ಯಾನ್ಸ್ ಕಾತುರರಾಗಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅತೀ ದೊಡ್ಡ ತಾರಾಬಳಗವಿದೆ. ಪ್ರಭಾಸ್, ದೀಪಿಕಾ ಪಡುಕೋಣೆ, ದಿಶಾ ಪಟಾಣಿ, ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿದಂತೆ ಹಲವು ದಿಗ್ಗಜರ ಸಮಾಗಮ ಇಲ್ಲಾಗಿದೆ. ಅಚ್ಚರಿ ಅಂದರೆ 6000 ವರ್ಷಗಳ ಹಿಂದೆ ಮುಗಿದ ಕಥೆನಾ ನಿರ್ದೇಶಕ ನಾಗ್ ಅಶ್ವಿನ್ ರೀಓಪನ್ ಮಾಡಿದ್ದಾರೆ. ಭೂತ-ಭವಿಷ್ಯದ ಅಚ್ಚರಿಯ ಕಥೆನಾ ಬಿಗ್‌ಸ್ಕ್ರೀನ್ ಮೇಲೆ ಕಟ್ಟಿಕೊಡುತ್ತಿದ್ದಾರೆ. ಸಲಾರ್ ದೇವ ಇಲ್ಲಿ ಸೂಪರ್ ಹೀರೋ ಆಗಿ ಮಿಂಚಿದ್ದು, ಕಲ್ಕಿಯಾಗಿ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್ ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.
ಸುಮಾರು 600 ಕೋಟಿ ವೆಚ್ಚದಲ್ಲಿ ಎರಡು ಭಾಗಗಳಲ್ಲಿ ತಯ್ಯಾರಾಗುತ್ತಿರುವ ಈ ಸಿನಿಮಾ, ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ಅತೀ ದುಬಾರಿ ಚಿತ್ರವೆಂಬ ಖ್ಯಾತಿ ಪಡೆದಿದೆ. ತೆಲುಗು ಹಾಗೂ ಹಿಂದಿ ಎರಡು ಭಾಷೆಯಲ್ಲಿ ಏಕಕಾಲಕ್ಕೆ ತಯ್ಯಾರಾಗುತ್ತಿದ್ದು, ಇಂಟರ್ ನ್ಯಾಷನಲ್ ಟೆಕ್ನಿಷಿಯನ್ಸ್‌ಗಳು ಈ ಸಿನಿಮಾಗಾಗಿ ವರ್ಕ್ ಮಾಡ್ತಿದ್ದಾರೆ. ಅಮೆರಿಕದಲ್ಲಿ ಪ್ರತಿಷ್ಠಿತ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಸಮಾರಂಭದಲ್ಲಿ ಫಸ್ಟ್ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿತ್ತು. ಇದೀಗ, ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಸಿನಿಮಾಪ್ರೇಮಿಗಳ ಕಾತುರ ಹೆಚ್ಚಿಸಿದೆ. 2024ರ ಮೇ9ರಂದು ಥಿಯೇಟರ್‌ಗಳಲ್ಲಿ ಲಗ್ಗೆ ಇಡಲಿದೆ. ಜಗದೇಕ ವೀರಡು ಅತಿಲೋಕ ಸುಂದರಿ, ಮಹಾನಟಿಯಂತಹ ಸೂಪರ್ ಡೂಪರ್ ಹಿಟ್ ಚಿತ್ರ ನಿರ್ಮಿಸಿರುವ ವೈಜಯಂತಿ ಮೂವೀಸ್ ಪ್ರಾರಂಭವಾಗೀ ಮೇ 9ಕ್ಕೆ 5 ದಶಕವಾಗಲಿದೆ. ಹೀಗಾಗಿ ಕಲ್ಕಿ 2898 ಸಿನಿಮಾವನ್ನು ಈ ದಿನದಂದೇ ತೆರೆಗೆ ತರ್ತಿದೆ.