Indian2: ‘ವಿಕ್ರಮ್’ ಮೆಗಾ ಬ್ಲಾಕ್ ಬಸ್ಟರ್ ಹಿಟ್ ನಂತರ ಕಮಲ್ ಹಾಸನ್(Kamal Haasan)ಸಿನಿಮಾಗೆ ಎದುರು ನೋಡುತ್ತಿದ್ದ ಪ್ರೇಕ್ಷಕನಿಗೆ ನಿರಾಸೆ ಕಾದಿತ್ತು. 2022ರ ನಂತರ ‘ಉಲಗನಾಯಗನ್’ ಸಿನಿಮಾಗಳು ತೆರೆ ಕಂಡಿರಲಿಲ್ಲ ಆದ್ರೀಗ ಈ ವರ್ಷ ಕಮಲ್ ಹಾಸನ್ ಇಂಡಿಯನ್2 ಸಿನಿಮಾ ಮೂಲಕ ತೆರೆ ಮೇಲೆ ಅಬ್ಬರಿಸಲು ಬರ್ತಿದ್ದಾರೆ.
ಕಾಲಿವುಡ್ ಸ್ಟಾರ್ ನಿರ್ದೇಶಕ ಎಸ್. ಶಂಕರ್(S.Shankar) ನಿರ್ದೇಶನದಲ್ಲಿ ಮೂಡಿ ಬರ್ತಿರುವ ಬಹು ನಿರೀಕ್ಷಿತ ಸಿನಿಮಾ ಇಂಡಿಯನ್-2(Indian2). ಇಂಡಿಯನ್ ಸಿನಿಮಾದ ಸೀಕ್ವೆಲ್ ಇದಾಗಿದ್ದು ಈ ಚಿತ್ರಕ್ಕಾಗಿ ಕಮಲ್(Kamal Haasan) ಹಾಗೂ ಶಂಕರ್ ಸಿನಿಮಾ ಭಕ್ತರು ಕಾತುರದಿಂದ ಕಾಯುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಸಿನಿಮಾ ಯಾವಾಗ ಎನ್ನುತ್ತಿದ್ದ ಕಮಲ್ ಫ್ಯಾನ್ಸ್‌ಗೆ ಚಿತ್ರತಂಡದಿಂದ ಉತ್ತರ ಸಿಕ್ಕಿದೆ. ಶೂಟಿಂಗ್ ಕಂಫ್ಲೀಟ್ ಮಾಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಜೂನ್‌ನಲ್ಲಿ ಗ್ಯಾರೆಂಟಿ ಎಂದು ಈಗಾಗಲೇ ಪೋಸ್ಟರ್ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದೆ.
ಜೂನ್ ತಿಂಗಳಲ್ಲಿ ನಾವ್ ಬಂದೇ ಬರ್ತೀವಿ ಎಂದಿದ್ದ ಚಿತ್ರತಂಡ ಜೂನ್ 11 ಸಿನಿಮಾ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎನ್ನಲಾಗ್ತಿದೆ. ಈ ಕುರಿತ ಸುದ್ದಿಗಳು ಕಾಲಿವುಡ್ ಅಂಗಳದಲ್ಲಿ ಹರಿದಾಡ್ತಿದ್ದು. ಈ ದಿನವೇ ಸಿನಿಮಾ ರಿಲೀಸ್ ಆಗೋದು ಕನ್ಪರ್ಮ್ ಆಗಿದೆ ಎನ್ನಲಾಗ್ತಿದೆ. ರಾಕುಲ್ ಪ್ರೀತ್ ಸಿಂಗ್(Rakul Preeth Sing), ಸಮುದ್ರಖನಿ, ಜೈರಾಮ್, ಕಾಳಿದಾಸ್ ಒಳಗೊಂಡ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ತುಂಬಾ ವರ್ಷಗಳ ಕಾಯುವಿಕೆಯ ನಂತರ ಸಿನಿಮಾ ತೆರೆಗೆ ಬರ್ತಿರೋ ಸುದ್ದಿ ಕೇಳಿ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.