ಬಾಲಿವುಡ್ ನ ಪ್ರಖ್ಯಾತ ಸ್ಟ್ಯಾಂಡಪ್ ಕಮಿಡಿಯನ್‌ಗಳಾದ ಕಪಿಲ್ ಹಾಗೂ ಸುನಿಲ್ ಇಬ್ಬರು ಬಡಿದಾಡಿಕೊಂಡಿದ್ದು, ಕಪಿಲ್ ಶೋ ನಿಂದ ಸುನೀಲ್ ಗ್ರೋವರ್ ಎಕ್ಸಿಟ್ ಆಗಿದ್ದು ನಿಮಗೆಲ್ಲ ಗೊತ್ತಿರೋ ಸುದ್ದಿನೇ. ಹೊಸ ಸಮಾಚಾರ ಏನಂದರೆ ಕಪಿಲ್ ಹಾಗೂ ಸುನಿಲ್ ಮತ್ತೆ ಒಂದಾಗಿದ್ದಾರೆ. ʻದಿ ಗ್ರೇಟ್ ಇಂಡಿಯನ್ ಕಪಿಲ್ ಶೋʼ ಗಾಗಿ ಶರ್ಮಾ ಜೊತೆ ಸುನೀಲ್ ಗ್ರೋವರ್ ಕೈ ಜೋಡಿಸಿದ್ದಾರೆ. ಸದ್ಯ ಈ ಶೋ ಟ್ರೇಲರ್ ಹೊರಬಿದ್ದಿದೆ. ವಿಶೇಷ ಅಂದರೆ ಈ ಶೋ ಒಟಿಟಿಯಲ್ಲಿ ಪ್ರಸಾರಗೊಳ್ತಿರುವುದು.
ಯಸ್, ಇಲ್ಲಿತನಕ ಕಪಿಲ್ ಶರ್ಮಾ ಶೋಗಳು ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದವು. ‘ಫ್ಯಾಮಿಲಿ ಟೈಮ್ ವಿತ್ ಕಪಿಲ್ ಶರ್ಮಾ’, ‘ದಿ ಕಪಿಲ್ ಶರ್ಮಾ ಶೋ’ ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಶರ್ಮಾ ತಮ್ಮ ಶೋಗಳನ್ನ ನಡೆಸಿಕೊಡ್ತಿದ್ದರು. ಇದೇ ಮೊದಲ ಭಾರಿಗೆ ಒಟಿಟಿಗೆ ಎಂಟ್ರಿ ಕೊಟ್ಟಿದ್ದಾರೆ. ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ (The Great Indian Kapil Show) ಎಂಬ ಹೆಸರಿನೊಂದಿಗೆ ನಯಾ ಶೋ ಶುರು ಆಗ್ತಿದ್ದು, ಇದೇ ಮಾರ್ಚ್ 30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.
ಕಾರ್ಯಕ್ರಮದಲ್ಲಿ ಕೃಷ್ಣ ಅಭಿಷೇಕ್, ಕಿಕು ಶಾರದಾ, ಅರ್ಚನಾ ಪುರಾಣ್ ಸಿಂಗ್, ಸುನಿಲ್ ಗ್ರೋವರ್ ಮತ್ತು ರಾಜೀವ್ ಠಾಕೂರ್ ಅವರು ಕಪಿಲ್ ಗೆ ಸಾಥ್ ನೀಡಲಿದ್ದಾರೆ. ಈ ಕಾರ್ಯಕ್ರಮದ ಕುರಿತು ಮಾತನಾಡಿರುವ ಕಪಿಲ್ ಶರ್ಮಾ, “‘ಮನೆ ಬದಲಾಗಿದೆ ಆದರೆ ಕುಟುಂಬವಲ್ಲ. ಭಾರತದಲ್ಲಿ ಮಾತ್ರವಲ್ಲದೆ ಜಗತ್ತಿನಾದ್ಯಂತ ನಮ್ಮ ಅಭಿಮಾನಿಗಳನ್ನು ರಂಜಿಸಲು ಎಲ್ಲರೂ ಸಜ್ಜಾಗಿದ್ದೇವೆ. ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಮಾರ್ಚ್ 30 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಮಾತ್ರʼʼ ಎಂದು ಹೇಳಿಕೊಂಡಿದ್ದಾರೆ. ʻಗ್ರೇಟ್ ಇಂಡಿಯನ್ ಕಪಿಲ್ ಶೋʼ ವೈವಿಧ್ಯಮಯ ಚಾಟ್ ಶೋ ಆಗಿದ್ದು. ಪ್ರತಿ ವಾರ ಪ್ರಮುಖ ಸೆಲೆಬ್ರಿಟಿ ಅತಿಥಿಗಳು ಬರುತ್ತಾರೆ. ಈ ಶೋ ಮಾರ್ಚ್ 30ರಿಂದ ಈ ಶೋ ಆರಂಭ ಆಗಲಿದೆ. ಪ್ರತಿ ಶನಿವಾರ ರಾತ್ರಿ 8 ಗಂಟೆಗೆ ಶೋ ಪ್ರಸಾರ ಕಾಣಲಿದೆ.