Karan Johar: ಬಾಲಿವುಡ್ ಅಂಗಳದಲ್ಲಿ ನಿರ್ದೇಶಕ ಕಂ ನಿರ್ಮಾಪಕ ಕರಣ್ ಜೋಹಾರ್(Karan Johar) ಗೆ ದೊಡ್ಡದಾದ ನೇಮ್ ಇದೆ. ಅವರ ಸಿನಿಮಾಗಳಿಗೆ ದೊಡ್ಡದಾದ ಫ್ಯಾನ್ ಬೇಸ್ ಇದೆ. ಕುಚ್ ಕುಚ್ ಹೋತಾ ಹೇ, ಕಭಿ ಖುಷಿ ಕಭಿ ಗಮ್, ಮೈ ನೇಮ್ ಈಸ್ ಖಾನ್, ಎ ದಿಲ್ ಹೈ ಮುಶ್ಕಿಲ್ ಸೇರಿದಂತೆ ಹಲವು ಹಿಟ್ ಸಿನಿಮಾಗಳು ಇವರಿಗೆ ಭೂಷಣ. ಕರಣ್ ನಿರ್ದೇಶನದ ಸಿನಿಮಾ ಅಂದ್ರೇನೆ ಅದ್ರಲ್ಲೊಂದು ಥ್ರಿಲ್ ಇರುತ್ತೆ. ಆದ್ರಿಂದಾನೆ ಅವರ ಸಿನಿಮಾಗಳಿಗೆ ಕಾಯುವಿಕೆಯೂ ಜೋರಿರುತ್ತೆ.
52ನೇ ವರ್ಷದ ಹುಟ್ಟುಹಬ್ಬವನ್ನು ಕರಣ್ ಜೋಹಾರ್(Karan Johar) ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಸ್ಟಾರ್ ನಟ ನಟಿಯರೆಲ್ಲಾ ನೆರೆದು ಸ್ಟಾರ್ ನಿರ್ದೇಶಕ ಕಂ ನಿರ್ಮಾಪಕರಿನಿಗೆ ವಿಶ್ ಮಾಡಿದ್ದಾರೆ. ಇದೇ ಸಂದರ್ಭದಲಿ ತಮ್ಮ ಮೂಂದಿನ ಸಿನಿಮಾ ನಿರ್ದೇಶನದ ವೆಂಚರ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ ಕರಣ್. ಫ್ಯಾನ್ಸ್ ಶಾರೂಕ್(Sharuk Khan), ಕಾಜಲ್ ಜೊತೆಗೆ ಸಿನಿಮಾ ಮಾಡಿ ಎಂದು ಹಲವು ದಿನಗಳಿಂದ ಬೇಡಿಕೆ ಇಟ್ಟಿದ್ದಾರೆ. ನಿರ್ದೇಶನದ ಬಗ್ಗೆ ಸುಳಿವು ನೀಡಿರುವ ಕರಣ್ ಸಿನಿಮಾ ಯಾರೊಂದಿಗೆ ಎಂದು ರಿವೀಲ್ ಮಾಡಿಲ್ಲ. ಇದನ್ನು ಕಂಡು ಫ್ಯಾನ್ಸ್ ಶಾರೂಕ್, ಕಾಜಲ್ ಜೋಡಿಗೆ ಸಿನಿಮಾ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ.
ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ನಂತರ ಕರಣ್(Karan Johar) ಯಾವ ಸಿನಿಮಾ ಕೈಗೆತ್ತಿಕೊಂಡಿಲ್ಲ. ಈ ವರ್ಷದಲ್ಲಿ ಮೊದಲ ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ಸಿನಿಮಾ ಯಾವ ಸ್ಟಾರ್ ನಟ-ನಟಿಯರೊಂದಿಗೆ ಅನ್ನೋದೇ ಸದ್ಯದ ಕುತೂಹಲ. ಇದೇ ಹೊತ್ತಲ್ಲಿ ಸಿದ್ದಾರ್ಥ್ ಚತುರ್ವೇದಿ ಹಾಗೂ ತೃಪ್ತಿ ದಿಮ್ರಿ ಜೋಡಿಯ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ ಈ ಚಿತ್ರವನ್ನು ಶಾಜಿಯಾ ಇಕ್ಬಾಲ್ ನಿರ್ದೇಶನ ಮಾಡುತ್ತಿದ್ದಾರೆ. ಲವ್ ಸಬ್ಜೆಕ್ಡ್ ಸಿನಿಮಾವಾಗಿದ್ದು, ‘ಧಡಕ್ 2’ ಎಂದು ಟೈಟಲ್ ಇಡಲಾಗಿದೆ. ಜಾತಿ, ಧರ್ಮವನ್ನೂ ಮೀರಿದ ಸುಂದರ ಪ್ರೇಮ್ ಕಹಾನಿಯನ್ನು ಇಲ್ಲಿ ಕಟ್ಟಿಕೊಡಲಾಗುವುದಂತೆ.