Tharun Kishore Sudir: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ(Kateera) ಬಾಕ್ಸ್ ಆಫೀಸ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರೋ ವಿಷ್ಯ. ಈ ಸಿನಿಮಾದ ಸೂತ್ರದಾರ ಒಂದ್ ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ವಿಲನ್ ಆಗಿ ಮಿಂಚಿದ್ದ ಸುಧೀರ್ ಪುತ್ರ ತರುಣ್ ಕಿಶೋರ್ ಸುಧೀರ್(Tharun Kishore Sudir). ಕಾಟೇರ ಸೂಪರ್ ಸಕ್ಸಸ್ ಬಳಿಕ ಸ್ಯಾಂಡಲ್ ವುಡ್ನಲ್ಲಿ ಬಹು ಬೇಡಿಕೆಯ ನಿರ್ದೇಶಕರ ಪಟ್ಟಿಗೆ ಸೇರಿದ್ದಾರೆ. ಖ್ಯಾತಿಯೂ ಹೆಚ್ಚಿದೆ. ಆ ಸಕ್ಸಸ್ ಬೆನ್ನಲ್ಲೇ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ.
ಹೌದು, ಕಾಟೇರ ಸೂಪರ್ ಸಕ್ಸಸ್ ತರುಣ್(Tharun Kishore Sudir) ಖ್ಯಾತಿಯನ್ನೂ ಮತ್ತಷ್ಟು ಹೆಚ್ಚಿಸಿದೆ. ಆಕ್ಷನ್ ಕಟ್ ಹೇಳಿದ ʻಚೌಕʼ, ʻರಾಬರ್ಟ್ʼ, ʻಕಾಟೇರʼ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ಸ್ಯಾಂಡಲ್ವುಡ್ ಅಂಗಳದಲ್ಲಿ ತರುಣ್ ಡಿಮ್ಯಾಂಡ್ ಹೆಚ್ಚಿಸಿದೆ. ಸದ್ಯ ಓಡೋ ಕುದುರೆ ಲಿಸ್ಟ್ನಲ್ಲಿ ತರುಣ್ ಹೆಸರು ಮುಂಚೂಣಿಯಲ್ಲಿದೆ. ಈ ಮೂಲಕ ಇಷ್ಟು ವರ್ಷದ ಪರಿಶ್ರಮಕ್ಕೆ ತರುಣ್ ಕಷ್ಟದ ಜೀವನಕ್ಕೆ ಬ್ರೇಕ್ ಬಿದ್ದಿದ್ದು, ಒಂದೊಂದೇ ಗೆಲುವಿನ ರುಚಿ ನೋಡುತ್ತಿದ್ದಾರೆ. ಅದೇ ಖುಷಿಯಲ್ಲಿ ದುಬಾರಿ ಬೆಲೆಯ BMW ಕಾರ್ ಖರೀದಿ ಮಾಡಿದ್ದಾರೆ. ತಮ್ಮ ಹೊಸ ಕಾರ್ನಲ್ಲಿ ತಾಯಿ ಜೊತೆ ರೈಡ್ ಕೂಡ ಹೋಗಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಕ್ಸಸ್ ಅಂದ್ರೆ ಇದು ಎನ್ನುತ್ತಿದ್ದಾರೆ ನೆಟ್ಟಿಗರು.
ತಂದೆ ಸುಧೀರ್ ಅದ್ಭುತ ಕಲಾವಿದ, ಅಪಾರ ಖ್ಯಾತಿಗಳಿಸಿದ್ರು ಕೂಡ ಮಕ್ಕಳು ಚಿತ್ರರಂಗಕ್ಕೆ ಬಂದಾಗ ಗ್ರ್ಯಾಂಡ್ ವೆಲ್ ಕಂ ಸಿಗಲಿಲ್ಲ. ಆರಂಭದಲ್ಲಿ ಅವಮಾನಗಳು ಇವರನ್ನೂ ಬಿಟ್ಟಿಲ್ಲ. ಕಷ್ಟದ ದಿನಗಳನ್ನು ಪ್ರತಿಭೆ ಮೂಲಕ ಮೆಟ್ಟಿ ನಿಂತ ತರುಣ್(Tharun Kishore Sudir) ಹಾಗೂ ಸಹೋದರ ನಂದಕಿಶೋರ್ ಇಬ್ಬರೂ ಇಂದು ಸ್ಯಾಂಡಲ್ ವುಡ್ ಬೇಡಿಕೆಯ ನಿರ್ದೇಶಕರು. ಒಂದ್ ಕಾಲದಲ್ಲಿ ಅವಕಾಶಗಳಿಗಾಗಿ ಗಾಂದೀನಗರ ಸುತ್ತಿದ್ದ ತರುಣ್ ನಟರಾಗಿ ಗೆಲುವು ಕಾಣದಿದ್ರು, ನಿರ್ದೇಶಕರಾಗಿ ಖ್ಯಾತಿ ಗಳಿಸಿಕೊಂಡಿದ್ದಾರೆ. ಸದ್ಯ ದರ್ಶನ್(Dharshan) ಮುಂದಿನ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿರುವ ತರುಣ್ ಸುಧೀರ್, ರಿಯಾಲಿಟಿ ಶೋ ಒಂದರ ಜಡ್ಜ್ ಕೂಡ ಆಗಿದ್ದಾರೆ.