Keerthy Suresh: ಟಾಲಿವುಡ್ ಸಿನಿ ಅಂಗಳದ ಚೆಂದದ ಚೆಲುವೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ನಟಿ ಕೀರ್ತಿ ಸುರೇಶ್(Keerthy Suresh). ʻಮಹಾನಟಿʼ ಮೂಲಕ ಎಲ್ಲರ ಚಿತ್ತ ಕದ್ದ ನಟಿ. ಕಳೆದೆರಡು ವರ್ಷದಿಂದ ಹೇಳಿಕೊಳ್ಳುವಂತ ಸೂಪರ್ ಸಕ್ಸಸ್ ಸಿನಿಮಾ ಕೀರ್ತಿ ಸುರೇಶ್ ಜೋಳಿಗೆಯಿಂದ ಬಂದಿಲ್ಲ. ಈ ಕಾರಣದಿಂದ ಸಿನಿಮಾ ಆಯ್ಕೆ ವಿಚಾರದಲ್ಲಿ ಸಖತ್ ಚ್ಯೂಸಿಯಾಗಿರುವ ಮಹಾನಟಿ ಸೆನ್ಸೇಷನಲ್ ಡೈರೆಕ್ಟರ್ ಸಂದೀಪ್ ರೆಡ್ಡಿ ವಂಗಾಗೆ(Sandeep Reddy Vanga) ಕಾಲ್ ಶೀಟ್ ನೀಡಿದ್ದಾರೆ.
ʻಅನಿಮಲ್ʼ ಸಿನಿಮಾ ಸಕ್ಸಸ್ ಜೋಶ್‌ನಲ್ಲಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ(Sandeep Reddy Vanga) ಬೇಡಿಕೆ ಹೆಚ್ಚಾಗಿದೆ. ಈ ಸಿನಿಮಾ ನಂತರ ಸಂದೀಪ್ ವಂಗಾ ಡಾರ್ಲಿಂಗ್ ಪ್ರಭಾಸ್‌ಗೆ(Prabhas) ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ʻಸ್ಪಿರಿಟ್ʼ(Spirit) ಎಂದು ಟೈಟಲ್ ಇಡಲಾಗಿದೆ. ಈ ಚಿತ್ರಕ್ಕೆ ಪ್ರಭಾಸ್ ಜೋಡಿ ಯಾರಾಗುತ್ತಾರೆ ಎಂಬ ಟಾಕ್ ಜೋರಾಗಿ ಕೇಳಿ ಬಂದಿತ್ತು. ಫೈನಲಿ ಅದಕ್ಕೆ ಉತ್ತರ ಸಿಕ್ಕಿದ್ದು, ಡಾರ್ಲಿಂಗ್ ಜೋಡಿಯಾಗಿ ಕೀರ್ತಿ ಸುರೇಶ್ ಕಾಣಿಸಿಕೊಳ್ಳಲಿದ್ದಾರೆ.
ʻಸರ್ಕಾರು ವಾರಿ ಪಾಟʼ ಸಿನಿಮಾ ನಂತರ ಕೀರ್ತಿ ಸುರೇಶ್(Keerthy Suresh) ನಟಿಸಿದ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿಲ್ಲ. ʻದಸರಾʼ ಸಿನಿಮಾ ಹಿಟ್ ಆದರೂ ಕೀರ್ತಿ ಸುರೇಶ್‌ಗೆ ಹೇಳಿಕೊಳ್ಳೋ ಹೆಸರು ತಂದುಕೊಟ್ಟಿಲ್ಲ. ಕಳೆದ ವರ್ಷ ಬಿಡುಗಡೆಯಾದ ʻಭೋಲಾ ಶಂಕರ್ʼ ಸಿನಿಮಾ ಕೂಡ ಫ್ಲಾಪ್ ಆಗಿದೆ. ಸಿನಿಮಾ ಜೊತೆಗೆ ವೆಬ್ ಸೀರೀಸ್‌ನಲ್ಲೂ ಬ್ಯುಸಿಯಾಗಿರುವ ಕೀರ್ತಿ ಬಿಗ್ ಬ್ರೇಕ್‌ಗಾಗಿ ಕಾಯುತ್ತಿದ್ದಾರೆ. ಸದ್ಯ ಸಂದೀಪ್ ವಂಗಾ ಹಾಗೂ ಪ್ರಭಾಸ್(Prabhas) ಬಿಗ್ ಬಜೆಟ್ ಪ್ರಾಜೆಕ್ಟ್‌ಗೆ ಹೀರೋಯಿನ್ ಆಗಿರುವ ಕೀರ್ತಿಗೆ ಗೆಲುವಿನ ʻಸ್ಪಿರಿಟ್ʼ ಸಿಗುತ್ತಾ ಕಾದು ನೋಡಬೇಕಿದೆ.