Kerrthy Suresh: ನಾಗ್ ಅಶ್ವಿನ್ ನಿರ್ದೇಶನದ ‘ಮಹಾನಟಿ’ ಸಿನಿಮಾ ಮೂಲಕ ಅಪಾರ ಜನಮನ್ನಣೆ ಪಡೆದ ನಟಿ ಕೀರ್ತಿ ಸುರೇಶ್(Kerrthy Suresh). ಮಹಾನಟಿ ಸಿನಿಮಾ ಕೀರ್ತಿ ಸುರೇಶ್ ಸಿನಿ ಕೆರಿಯರ್ನ ಅತಿ ದೊಡ್ಡ ಮೈಲಿಗಲ್ಲು. ಅದ್ಭುತ ನಟನೆ ರಾಷ್ಟ್ರಪ್ರಶಸ್ತಿಯನ್ನೂ ತಂದುಕೊಟ್ಟದೆ ಆ ಖ್ಯಾತಿಯಲ್ಲೇ ಕ್ಯೂಟ್ ಬೆಡಗಿ ಬಿಟೌನ್ ಅಂಗಳಕ್ಕೆ ಹೆಜ್ಜೆ ಇಟ್ಟಿರೋದು ಎಲ್ಲರಿಗೂ ಗೊತ್ತೇ ಇದೆ. ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಕೀರ್ತಿ ಸುರೇಶ್ ಟ್ರೆಂಡಿಂಗ್ನಲ್ಲಿದ್ದಾರೆ.
ಕೀರ್ತಿ ಸುರೇಶ್(Kerrthy Suresh) ನಟನೆಯ ಮೊದಲ ಹಿಂದಿ ಸಿನಿಮಾ ‘ಬೇಬಿ ಜಾನ್’(Baby John). ಬಿಟೌನ್ ಸುಂದರಾಂಗ ವರುಣ್ ಧವನ್(Varun Dhavan) ನಟಿಸುತ್ತಿರುವ ಈ ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ. ಇದು ಬಿಟೌನ್ಗೆ ಮಹಾನಟಿ ಎಂಟ್ರಿ ಕೊಟ್ಟಿರುವ ಮೊದಲ ಸಿನಿಮಾವಾಗಿರೋದ್ರಿಂದ ಈಗ ಎಲ್ಲರ ಕಣ್ಣು ನೆಟ್ಟಿದೆ. ಮೂಲ ಸಿನಿಮಾದಲ್ಲಿ ಸಮಂತ ಈ ಪಾತ್ರಕ್ಕೆ ಜೀವ ತುಂಬಿದ್ದರು. ಹಿಂದಿ ಅವತರಣಿಕೆಯಲ್ಲಿ ಮಲಯಾಳಂ ಬ್ಯೂಟಿ ಬಣ್ಣ ಹಚ್ಚಿದ್ದು, ಕೀರ್ತಿ ಭವಿಷ್ಯ ಬಿಟೌನ್ ಅಂಗಳದಲ್ಲಿ ಹೇಗಿದೆ ಅನ್ನೋದೇ ಎಲ್ಲರ ಲೆಕ್ಕಾಚಾರ. ಒಂದು ವೇಳೆ ‘ಬೇಬಿ ಜಾನ್’ ಗೆದ್ದರೆ ಕೀರ್ತಿ ಖ್ಯಾತಿ ದಕ್ಷಿಣದಿಂದ ಉತ್ತರಕ್ಕೂ ಹಬ್ಬಿ ರಶ್ಳಂತೆ ಬಿಟೌನ್ ಅದೃಷ್ಟ ದೇವತೆಯಾಗುತ್ತಾಳೆ ಎನ್ನುತ್ತಿದೆ ಟಿಟೌನ್ ಪಂಡಿತರು.
ಅಟ್ಲಿ ನಿರ್ದೇಶನದ ಬ್ಲಾಕ್ ಬಸ್ಟರ್ ಸಿನಿಮಾ ಥೆರಿ ಸಿನಿಮಾ ರಿಮೇಕ್ ಇದಾಗಿದ್ದು ಚಾಕ್ಲೇಟ್ ಬಾಯ್ ಆಗಿದ್ದ ವರುಣ್ ರಗಡ್ ಲುಕ್ನಲ್ಲಿ ಮಿಂಚಲಿದ್ದಾರೆ. ಸದ್ಯ ಬೇಬಿ ಜಾನ್(Baby John) ಚಿತ್ರದ ಹಾಡಿನ ಚಿತ್ರೀಕರಣ ನಡೆಯುತ್ತಿದೆ. ಈ ಹಾಡಿಗಾಗಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ ಕೀರ್ತಿ ಸುರೇಶ್(Kerrthy Suresh). ಕೀರ್ತಿ ಸುರೇಶ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಲಾಮರ್ ಗೊಂಬೆ ಹಾಟ್ಕಂ ಅವತಾರಕಂಡು ಬೆರಗಾಗಿದ್ದಾರೆ ನೆಟ್ಟಿಗರು. ನಿರ್ದೇಶಕ ಅಟ್ಲಿ(Atlee) ಸಹಾಯಕ ನಿರ್ದೇಶಕನೇ ‘ಬೇಬಿ ಜಾನ್’ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಮೇ 31 ಚಿತ್ರ ಬಿಡುಗಡೆಯಾಗುತ್ತಿದೆ.