Yuva: ಯುವ ರಾಜ್ಕುಮಾರ್ ಅಭಿನಯದ ‘ಯುವ’(Yuva) ಸಿನಿಮಾಗೆ ರಾಜ್ಯಾದ್ಯಂತ ರೆಡ್ ಕಾರ್ಪೆಟ್ ಸ್ವಾಗತ ಸಿಕ್ಕಿದೆ. ಸಿನಿರಸಿಕರು, ದೊಡ್ಮನೆ ಅಭಿಮಾನಿಗಳು ಸಿನಿಮಾ ನೋಡಿ ಮೆಚ್ಚಿ ಕೊಂಡಾಡಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಮೊದಲ ಗೆಲುವಿನ ಸಿಹಿಯುಂಡ ಯುವ ರಾಜ್ಕುಮಾರ್ ಸಖತ್ ಜೋಶ್ನಲ್ಲಿದ್ದಾರೆ. ಅದರ ಖುಷಿಯನ್ನು ಡಬಲ್ ಮಾಡಿದ್ದಾರೆ ಕಿಚ್ಚ ಸುದೀಪ.
ಮೊದಲಿಂದಲೂ ದೊಡ್ಮನೆ ಜೊತೆ ವಿಶೇಷ ಬಾಂದವ್ಯ ಹೊಂದಿರುವ ಅಭಿನಯ ಚಕ್ರವರ್ತಿ ಅದೇ ಪ್ರೀತಿಯಿಂದ ‘ಯುವ’(Yuva) ಸಿನಿಮಾವನ್ನು ನೋಡಿದ್ದಾರೆ. ಚಿತ್ರತಂಡದ ಜೊತೆ ಸ್ಪೆಷಲ್ ಸ್ಕ್ರೀನಿಂಗ್ನಲ್ಲಿ ಸಿನಿಮಾ ನೋಡಿರುವ ಕಿಚ್ಚ(Kichcha Sudeepa)) ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಯುವರಾಜ್ಕುಮಾರ್ಗೆ ‘ತೆರೆ ಮೇಲೆ ತುಂಬಾ ಚೆನ್ನಾಗಿ ಕಾಣುತ್ತೀರ ಎಂದಿರುವ ಕಿಚ್ಚ ಡಾನ್ಸಿಂಗ್ ಸ್ಕಿಲ್ ನಿಮ್ಮ ರಕ್ತದಲ್ಲೇ ಇದೆ ಎಂದಿದ್ದಾರೆ. ಯುವ ರಾಜ್ಕುಮಾರ್(Yuva Rajkumar) ಸಾಮರ್ಥ್ಯವನ್ನು ಈ ಸಿನಿಮಾ ಮೂಲಕ ಹೊರತಂದಿದ್ದಕ್ಕಾಗಿ, ಅವರ ಮೇಲಿದ್ದ ನಿರೀಕ್ಷೆಯನ್ನು ಸರಿಯಾಗಿ ನಿಭಾಯಿಸಿದಕ್ಕೆ ನಿರ್ದೇಶಕ ಸಂತೋಷ್ ಆನಂದ್ರಾಮ್ರನ್ನು ಶ್ಲಾಘಿಸಿದ್ದಾರೆ. ಇಡೀ ಚಿತ್ರತಂಡಕ್ಕೆ ಧನ್ಯವಾದ ಹೇಳಿರುವ ಸುದೀಪ ಯುವನಿಗೆ ‘ನೀವು ಇಲ್ಲಿರಲು ಬಂದಿದ್ದೀರಿ’ ಎಂದು ಶುಭ ಹಾರೈಸಿದ್ದಾರೆ.
ಮಾರ್ಚ್ 29ರಂದು ಯುವ ಸಿನಿಮಾ ತೆರೆಕಂಡಿತ್ತು. ಸಾಕಷ್ಟು ನಿರೀಕ್ಷೆ ಈ ಸಿನಿಮಾ ಹಾಗೂ ಚಿತ್ರದ ನಾಯಕ ಯುವ ರಾಜ್ಕುಮಾರ್(Yuva Rajkumar) ಮೇಲಿತ್ತು. ಕ್ರೇಜ಼್ ಸೃಷ್ಟಿಸಿದ್ದ ಯುವ(Yuva) ನಿರೀಕ್ಷೆಯಂತೆ ಬಾಕ್ಸ್ ಆಫೀಸ್ನಲ್ಲಿ ಗೆಲವು ಕಂಡಿದೆ. ಎಲ್ಲದಕ್ಕೂ ಹೆಚ್ಚಾಗಿ ಮೊದಲ ಸಿನಿಮಾದಲ್ಲೇ ಯುವ ರಾಜ್ಕುಮಾರ್ ಅಭಿನಯ ಎಲ್ಲರ ಗಮನ ಸೆಳೆದಿದೆ. ಚಿತ್ರರಂಗದಲ್ಲಿ ಯುವನಿಗೆ ಉತ್ತಮ ಭವಿಷ್ಯವಿದೆ ಎನ್ನುತ್ತಿದೆ ಗಾಂದೀನಗರ ಹಾಗೂ ದೊಡ್ಮನೆ ಅಭಿಮಾನಿ ಬಳಗ.