Kichcha Sudeep: ಕಿಚ್ಚ ಸುದೀಪ ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಮ್ಯಾಕ್ಸ್(Max). ಈ ಸಿನಿಮಾಗಾಗಿ ಕಿಚ್ಚನ ಅಪಾರ ಅಭಿಮಾನಿ ಬಳಗ ಕಾಯುತ್ತಿದೆ. ಸಿನಿಮಾ ಫಸ್ಟ್ ಲುಕ್, ಟೀಸರ್ ತುಣುಕು ಬಿಟ್ಟರೆ ಸಿನಿಮಾ ಬಗ್ಗೆ ಬೇರಾವುದೇ ಅಪ್ಡೇಟ್ ಹೊರ ಬೀಳುತ್ತಿಲ್ಲ. ಆದ್ರೆ ಲೇಟೆಸ್ಟ್ ಮಾಹಿತಿಯೊಂದು ಹೊರ ಬಿದ್ದಿದ್ದು, ಶೂಟಿಂಗ್ ಕುಂಬಳಕಾಯಿ ಒಡೆದಿದೆ ಚಿತ್ರತಂಡ.
ಹೌದು, ಮ್ಯಾಕ್ಸ್(Max) ಸಿನಿಮಾ ತಂಡದಿಂದ ಲೇಟೆಸ್ಟ್ ಮಾಹಿತಿ ಹೊರ ಬಿದ್ದಿದೆ. ಚಿತ್ರತಂಡ ಹತ್ತು ತಿಂಗಳ ಶೂಟಿಂಗ್‌ಗೆ ಕುಂಬಳಕಾಯಿ ಒಡೆದಿದೆ. ಹತ್ತು ತಿಂಗಳು ಶೂಟಿಂಗ್ ನಡೆಸಿದ ಮನೆಯಿಂದ ಚಿತ್ರತಂಡ ಹೊರಬರುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಚಿತ್ರೀಕರಣ ಮುಗಿದಿರುವ ಸೂಚನೆ ನೀಡಿದೆ. ಶೂಟಿಂಗ್ ಮುಗಿದ ಸುದ್ದಿ ಕೇಳಿ ಕಿಚ್ಚನ ಅಭಿಮಾನಿ ಬಳಗ ಥ್ರಿಲ್ ಆಗಿದೆ. ಸಿನಿಮಾ ಇದೇ ವರ್ಷ ಬರುಬಹುದೇನೋ ಎಂಬ ಲೆಕ್ಕಾಚಾರ ಹಾಕಲು ಶುರು ಮಾಡಿದ್ದಾರೆ.
ಕಿಚ್ಚ ಸುದೀಪ(Kichcha Sudeep) ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾವಿದು. ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕಾಗಿ ಕಂಪ್ಲೀಟ್ ಚೇಂಜ್ ಓವರ್ ಮಾಡಿಕೊಂಡಿರುವ ಕಿಚ್ಚ ಈ ಸಾರಿ ಗೆದ್ದೇ ಗೆಲ್ಲುವ ಪಣ ತೊಟ್ಟಿದ್ದಾರೆ. ಆಕ್ಷನ್ ಥ್ರಿಲ್ಲರ್ ಸಿನಿಮಾ ಶೂಟಿಂಗ್ ಮಹಾಬಲಿಪುರಂನಲ್ಲಿ ಬಹುತೇಕ ನಡೆದಿದೆ. ಅಜನೀಶ್ ಲೋಕನಾಥ್ ಮ್ಯೂಸಿಕ್ ಮ್ಯಾಜಿಕ್ ಚಿತ್ರಕ್ಕಿದ್ದು, ಕೆಜಿಎಫ್ ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಇದೇ ವರ್ಷ ಮ್ಯಾಕ್ಸ್ ಸಿನಿಮಾ ತೆರೆ ಕಾಣುವ ಸಾಧ್ಯತೆ ಹೆಚ್ಚಿದೆ.