ತಮಿಳು ಚಿತ್ರರಂಗದ ಹೆಸರಾಂತ ತಾರಾ ಜೋಡಿಗಳ ಸೂರ್ಯ ಹಾಗೂ ಜ್ಯೋತಿಕ ಜೋಡಿಯೂ ಒಂದು. ಈ ಪ್ರಖ್ಯಾತ ದಂಪತಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದ್ದು, ಇಬ್ಬರು ಕೂಡ ಬೇರೆ ಬೇರೆಯಾಗಿ ವಾಸಿಸುತ್ತಿದ್ದಾರೆ. ನಟ ಸೂರ್ಯ ಚೆನ್ನೈನಲ್ಲಿ ಬೀಡುಬಿಟ್ಟಿದ್ದರೆ, ನಟಿ ಜ್ಯೋತಿಕಾ ಮಕ್ಕಳ ಸಮೇತ ಮುಂಬೈಗೆ ಹೋಗಿ ಸೆಟಲ್ ಆಗಿದ್ದಾರೆ. ಇನ್ನೇನು ಶೀಘ್ರದಲ್ಲೇ ಈ ಜೋಡಿ ಡಿವೋರ್ಸ್ ಪಡೆಯಲಿದೆ ಎನ್ನುವ ವಿಚಾರ ಬುಗಿಲೆದ್ದಿತ್ತು. ಸೂರ್ಯ ಹಾಗೂ ಜ್ಯೋತಿಕಾ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಆತಂಕ ಸೃಷ್ಟಿ ಮಾಡಿತ್ತು. ಈ ಬಗ್ಗೆ ನಟಿ ಜ್ಯೋತಿಕಾ ಇತ್ತೀಚೆಗಷ್ಟೇ ಕ್ಲ್ಯಾರಿಟಿ ಕೊಡುವ ಕೆಲಸ ಮಾಡಿದ್ದರು. ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಿದೆ, ಸೂರ್ಯ ಚೆನ್ನೈನಲ್ಲಿದ್ದಾರೆ. ಸಿನಿಮಾ ಕಾರಣಕ್ಕಷ್ಟೇ ನಾನು ಮುಂಬೈಗೆ ಹೋಗಿ ನೆಲೆಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸ ಕೂಡ ಮುಂಬೈನಲ್ಲಿ ಆಗ್ತಿರೋದ್ರಿಂದ ಮಕ್ಕಳೊಟ್ಟಿಗೆ ಅಲ್ಲಿಯೇ ಸೆಟಲ್ ಆಗಿದ್ದೇನೆ ಎಂದ್ದಿದ್ದರು. ಇದೀಗ, ಸೂರ್ಯ ಜೊತೆ ಹಾಲಿಡೇ ಟ್ರಿಪ್ ಮಾಡುವ ಮೂಲಕ ಡಿವೋರ್ಸ್ ಸುದ್ದಿಗೆ ಗುದ್ದು ನೀಡಿದ್ದಾರೆ. ಸೂರ್ಯ ಹಾಗೂ ಜ್ಯೋತಿಕಾ ಇಬ್ಬರು ಫಿನ್ಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಆ ವಿಡಿಯೋ ಈಗ ನಿಮ್ಮ ಮುಂದೆ ನೀವು ಒಮ್ಮೆ ನೋಡ್ಬಿಡಿ
ನೋಡಿದ್ರಲ್ಲಿ ಕಾಲಿವುಡ್ನ ಕ್ಯೂಟ್ ಜೋಡಿ ಸೂರ್ಯ ಹಾಗೂ ಜ್ಯೋತಿಕಾ ಎಷ್ಟು ಖುಷಿಯಲ್ಲಿದ್ದಾರೆ ಅಂತ. ಸೋ, ಯಾವ ಡಿವೋರ್ಸ್ ಇಲ್ಲ, ಬ್ರೇಕಪ್ಪು ಇಲ್ಲ. ಇವರಿಬ್ಬರ ಸಂಸಾರ ಸುಗಮವಾಗಿ ಸಾಗ್ತಿದೆ, ಎಲ್ಲವೂ ಸರಿಯಿದೆ ಅನ್ನೋದಕ್ಕೆ ಫಿನ್ಲ್ಯಾಂಡ್ ಟ್ರಿಪ್ ವಿಡಿಯೋನೇ ಸಾಕ್ಷಿ. ಎನಿವೇ ಈ ತಾರಾ ದಂಪತಿಗಳ ಮೇಲೆ ಯಾವ ಕೆಟ್ಟ ಕಣ್ಣು ಬೀಳದಿರಲಿ. ಪ್ರೀತಿಸಿ ಮುದುವೆಯಾಗಿ ಮಕ್ಕಳ ಸಮೇತ ಮಾಧರಿ ದಾಂಪತ್ಯ ಜೀವನ ಸಾಗಿಸ್ತಿರುವ ಈ ಜೋಡಿ ನೂರ್ಕಾಲ ಸುಖವಾಗಿ ಸಂತೋಷವಾಗಿ ಬಾಳಲಿ ಅನ್ನೋದೇ ಮಜ್ಜಾ ಕನ್ನಡದ ಆಶಯ.
ಸದ್ಯ ಈ ಜೋಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದೆ. ನಟಿ ಜ್ಯೋತಿಕಾಗೆ ಬಿಟೌನ್ನಲ್ಲಿ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ಸೂಪರ್ ಸ್ಟಾರ್ ಸೂರ್ಯ ಕಂಗುವ ಸಿನಿಮಾಗಾಗಿ ಎದುರುನೋಡ್ತಿದ್ದಾರೆ. ಅಚ್ಚರಿ ಅಂದರೆ ʻಕಂಗುವʼ ಚಿತ್ರಕ್ಕಾಗಿ ಬರೀ ಕಾಲಿವುಡ್ ಮಾತ್ರವಲ್ಲ ಇಡೀ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯೇ ಕಾತುರದಿಂದ ಕಾಯ್ತಿದೆ. ಕಂಗುವ ಗ್ಲಿಂಪ್ಸ್ ಸಿನಿದುನಿಯಾದಲ್ಲಿ ದೊಡ್ಡ ಮಟ್ಟದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ