Mayuri Kyatari: ಕನ್ನಡ ಕಿರುತೆರೆಯಲ್ಲಿ ʻಅಶ್ವಿನಿ-ನಕ್ಷತ್ರʼ ಸಿನಿಮಾ ಮೂಲಕ ಮನೆ ಮಾತಾದವರು ನಟಿ ಮಯೂರಿ ಕ್ಯಾತರಿ(Mayuri Kyatari). ಅಶ್ವಿನಿ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ತಲುಪಿದ ಮಯೂರಿ ಕಿರುತೆರೆಯಂತೆ ಬೆಳ್ಳಿತೆರೆಯಲ್ಲೂ ಮೊದಲ ಪ್ರಯತ್ನದಲ್ಲಿ ಗೆಲುವು ಕಂಡವರು. ಚಿತ್ರರಂಗದಿಂದ ಪರ್ಸನಲ್ ಲೈಫ್‌ಗಾಗಿ ದೂರವಿದ್ದ ಮಯೂರಿ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಿದ್ದಾರೆ.
ಆಫ್ಟರ್ ಮ್ಯಾರೇಜ್ ಬಿಗ್ ಬಾಸ್ ಮನೆಯಂಗಳಕ್ಕೆ ಬಂದ ಮಯೂರಿ(Mayuri Kyatari) ಮುದ್ದಾದ ಗಂಡು ಮಗುವಿನ ತಾಯಿ. ಇದೀಗ ಮತ್ತೆ ಬಣ್ಣ ಹಚ್ಚಲು ರೆಡಿಯಾಗಿದ್ದಾರೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಂಡು ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸಿನಿರಂಗದಲ್ಲಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಮುಂದಾಗಿದ್ದಾರೆ. ಮದುವೆ, ಮಗು ಆದ ಮೇಲೆ ಸಿನಿಮಾದಲ್ಲಿ ನಟಿಸೋದು ಸುಲಭದ ಮಾತಲ್ಲ ಅಂತಾರೆ ಅದೆಲ್ಲ ನಿಜವಲ್ಲ. ನನಗೀಗ ಮೊದಲಗಿಂತಲೂ ಆತ್ಮವಿಶ್ವಾಸ ಹೆಚ್ಚಿದೆ. ಸಿನಿಮಾ, ಸೀರಿಯಲ್‌ನಲ್ಲಿ ಅವಕಾಶಗಳು ಅರಸಿ ಬರ್ತಿವೆ. ಮತ್ತೆ ಚಿತ್ರರಂಗಕ್ಕೆ ಕಂ ಬ್ಯಾಕ್ ಮಾಡ್ತಿರೋ ಬಗ್ಗೆ ಖುಷಿ ಇದೆ ಎಂದು ಹೇಳಿಕೊಂಡಿದ್ದಾರೆ.
ʻಕೃಷ್ಣ-ಲೀಲಾʼ(Krisha leela) ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಸಿನಿ ಪ್ರಿಯರ ಮನಕದ್ದ ಮಯೂರಿ(Mayuri Kyatari) ಮೊದಲ ಸಿನಿಮಾದಲ್ಲೇ ಕಮಾಲ್ ಮಾಡಿದವರು. ಆ ನಂತರ ʻಇಷ್ಟಕಾಮ್ಯʼ, ʻನಟರಾಜ ಸರ್ವಿಸ್ʼ, ʻಕರಿಯಾ-2ʼ ಸಿನಿಮಾಗಳಲ್ಲಿ ನಟಿಸಿದ್ರು. ಸಿನಿ ಕೆರಿಯರ್ ಚೆನ್ನಾಗಿಯೇ ಇರುವಾಗಲೇ, ಹಸಮಣೆ ಏರಿದ ಮಯೂರಿ ಪರ್ಸನಲ್ ಲೈಫ್‌ನಲ್ಲಿ ಬ್ಯುಸಿಯಾಗಿದ್ದರು.