ಅಶ್ವಿನಿ ನಕ್ಷತ್ರ ಧಾರಾವಾಹಿಯ ಮೂಲಕ ಕರುನಾಡ ಜನಮನ ಗೆದ್ದು, ಬೆಳ್ಳಿಪರದೆಗೆ ಪಾದಾರ್ಪಣೆ ಮಾಡಿದ್ದ ನಟಿ ಮಯೂರಿ ಕ್ಯಾತರಿ ತಮ್ಮಸಿನಿಪಯಣದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಕೃಷ್ಣ ಲೀಲಾ ಸಿನೆಮಾ ದಲ್ಲಿ ಅಜಯ್ ರಾವ್ ಗೆ ಜೋಡಿಯಾಗಿ ಮಿಂಚಿದ ಮಯೂರಿ, ಇಷ್ಟಕಾಮ್ಯ,ಕರಿಯಾ ೨, ರ್ಯಾಂಬೊ,ರುಸ್ತುಂ ಹೀಗೆ ಹಲವು ಸಿನೆಮಾಗಳಲ್ಲಿ ನಟಿಸಿ,ಕೊನೆಯದಾಗಿ ಪೊಗರು, ವೀಲ್ಚೇರ್ ರೋಮಿಯೊ ದಲ್ಲಿ ಬಣ್ಣ ಹಚ್ಚಿದ್ದರು. ಈ ಮಧ್ಯ ಟಿವಿ ಶೋ ಗಳಲ್ಲಿ ತೀರ್ಪುಗಾರ್ತಿ ಯಾಗಿಯೂ ಭಾಗವಹಿಸಿದ್ದರು.ಆನಂತರ ಮದುವೆ,ಮಗು ಅಂತ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಮಯೂರಿ ಮತ್ತೆ ಕಂ ಬ್ಯಾಕ್ ಆಗಿದ್ದಾರೆ.
ಕಿರುತೆರೆ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಎಂಬ ಸೀರಿಯಲ್ನಲ್ಲಿ ನಟಿ ಬಣ್ಣ ಹಚ್ಚುವ ಮೂಲಕ ಸೆಕೆಂಡ್ ಇನ್ನಿಂಗ್ಸ್ ಪಯಣಕ್ಕೆ ನಾಂದಿ ಹಾಡಿದ್ದಾರೆ. ಹೌದು ಈ ಧಾರಾವಾಹಿಯಲ್ಲಿ ಮಾಟಗಾತಿ ಕನಕಾಂಬರಿ ಎಂಬ ವಿಶೇಷ ಪಾತ್ರಕ್ಕೆ ಮಯೂರಿ ಜೀವತುಂಬಿದ್ದಾರೆ. ಆಗಸ್ಟ್ 6ರಂದು ಸಂಜೆ 6:30ಕ್ಕೆ ಈ ಸೀರಿಯಲ್ ಪ್ರಸಾರವಾಗಲಿದ್ದು, 3 ಗಂಟೆಗಳ ಕಾಲ ಮೂಡಿ ಬರುವ ಮಹಾ ಎಪಿಸೋಡ್ ಆಗಿದೆ.
ಮತ್ತೆ ಅದೇ ಮುದ್ದು ಮುಖ,ಸಜಹ ನಟನೆ,ಜೊತೆಗೆ ಇನ್ನೂ ಫಿಟ್ ಅ್ಯಂಡ್ ಫೈನ್ ಆಗಿ ತಯಾರಾಗಿರುವ ಮಯೂರಿ ಕ್ಯಾತರಿ ಹಿಂದೆಂದೂ ಕಾಣಿಸಿಕೊಂಡಿರದ, ನಟಿಸಿರದ ನ್ಯೂ ಲುಕ್ನಲ್ಲಿ ಎಂಟ್ರಿ ಕೊಡ್ತಿದ್ದಾರೆ.ಕೃಷ್ಣಲೀಲಾ ಬೆಡಗಿಯ ಈ ಹೊಸ ಅವತಾರ ಪ್ರೋಮೋ ನೋಡಿಯೇ ಫ್ಯಾನ್ಸ್ ಈಗಾಗಲೇ ಥ್ರಿಲ್ ಆಗಿದ್ದಾರೆ. ಬ್ರೇಕ್ ತಗೊಂಡು ಮತ್ತೆ ಕ್ಯಾಮೆರಾ ಮುಂದೆ ಮಿಂಚಲು ಬರ್ತಿರೋ ತಮ್ಮ ನೆಚ್ಚಿನ ನಟಿ ನಾ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ ೯ ರಲ್ಲಿ ಭಾಗವಹಿಸಿದ್ದ ಮಯೂರಿ ತಮ್ಮ ವ್ಯಕ್ತಿತ್ವದ ಮೂಲಕ ಇನ್ನಷ್ಟು ಅಭಿಮಾನಿಗಳನ್ನ ಗಳಿಸಿಕೊಂಡು ಜನಪ್ರಿಯರಾಗಿದ್ದರು. ಹಿರಿತೆರೆಗೆ ಕಾಲಿಡುವ ಮೊದಲು ಕಿರುತೆರೆ ಇಂದ ನೇಮು,ಫೇಮಿನ ಫ್ರೇಮಿನ ಮೂಲಕ ಬಂದ ಮಯೂರಿಗೆ, ತಮ್ಮ ೨ ನೇ ಅಧ್ಯಾಯ ಆರಂಭಕ್ಕೂ ಕಿರುತೆರೆ ಮೊದಲ ಮೆಟ್ಟಿಲಾಗಿರೋದು ವಿಶೇಷ. ಹಾಗೇಯೇ ಹೊಸ ಭಿನ್ನ ಬಗೆಯ ಪಾತ್ರಗಳ ನಿರೀಕ್ಷೆಯಲ್ಲಿರುವ ಇವರಿಗೆ ಕಥೆಗಳು ಅರಸಿ ಬರ್ತಿದ್ದು,ಯಾವ ಸಿನೆಮಾದಲ್ಲಿ ಹಿರಿತೆರೆಯ ಮೇಲೆ ಮತ್ತೆ ಪ್ರತ್ಯಕ್ಷರಾಗಲಿದ್ದಾರೋ ಕಾದು ನೋಡ್ಬೇಕಿದೆ.