Kubera: ಕಾಲಿವುಡ್ ಸ್ಟಾರ್ ನಟ ಧನುಷ್(Dhanush), ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ(Rashmika Mandanna) ಅಭಿನಯದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಕುಬೇರ’(Kubera). ಟೈಟಲ್, ಧನುಷ್ ಅವತಾರ ಎಲ್ಲವೂ ಈ ಸಿನಿಮಾ ಮೇಲಿನ ಕ್ಯೂರಿಯಾಸಿಟಿ ಹೆಚ್ಚು ಮಾಡಿದೆ. ಧನುಷ್ ಬರ್ತ್‌ಡೇಗೆ ಫಸ್ಟ್ ಲುಕ್ ಬಿಡುಗಡೆಯಾಗಿ ಬಝ್ ಕ್ರಿಯೇಟ್ ಮಾಡಿತ್ತು ಚಿತ್ರತಂಡ. ಸಿನಿಮಾ ಯಾವಾಗ ಆರಂಭವಾಗುತ್ತೆ ಅನ್ನೋದಕ್ಕೆ ಉತ್ತರ ನೀಡಿದ್ದಾರೆ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ.
‘ಕುಬೇರ’(Kubera) ಸಿನಿಮಾ ಶೂಟಿಂಗ್ ಮುಂಬೈನಲ್ಲಿ ಆರಂಭವಾಗಿದೆ. ನಿನ್ನೆಯಿಂದ ಚಿತ್ರೀಕರಣ ಆರಂಭವಾಗಿದ್ದು, ರಶ್ಮಿಕಾ ಮಂದಣ್ಣ(Rashmika Mandanna) ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಬೆಳ್ಳಂಬೆಳಿಗ್ಗೆ ಮೊದಲ ದಿನದ ಶೂಟಿಂಗ್ ಕಂಪ್ಲೀಟ್ ಆಗಿರುವ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದಾರೆ. ಧನುಷ್ (Dhanush), ರಶ್ಮಿಕಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಚಿತ್ರದಲ್ಲಿ ಧನುಷ್ ಮಾಫಿಯಾ ಲಾರ್ಡ್ ಹಾಗೂ ಕಡುಬಡತನದ ರೋಲ್ ಎರಡು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ರಶ್ ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಕಾಣಸಿಗಲಿದ್ದಾರೆ ಎನ್ನುವುದೇ ಈಗ ಎಲ್ಲರ ಕುತೂಹಲ.
ಅಕ್ಕಿನೇನಿ ನಾಗಾರ್ಜುನ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚುತ್ತಿರೋದು ಸಿನಿಮಾ ಮೇಲಿನ ಹೈಪ್‌ಗೆ ಮತ್ತೊಂದು ಕಾರಣ. ಫಿಧಾ ಸಿನಿಮಾ ಮೂಲಕ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದ ನಿರ್ದೇಶಕ ಶೇಖರ್ ಕಮ್ಮುಲ ಲವ್ ಸ್ಟೋರಿ ಬಿಟ್ಟು ಡಿಫ್ರೆಂಟ್ ಸಬ್ಜೆಕ್ಟ್ ಕೈಗೆತ್ತಿಕೊಂಡಿದ್ದಾರೆ. ದೇವಿ ಪ್ರಸಾದ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ‘ಕುಬೇರ’(Kubera) ತೆರೆ ಕಾಣಲಿದೆ.