ಕೆವಿಎನ್…(KVN) ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ವಿತರಣಾ ಹಾಗೂ ನಿರ್ಮಾಣ ಸಂಸ್ಥೆ. ಆರ್ ಆರ್ ಆರ್, ಸೀತರಾಮಂ, ವಿಕ್ರಾಂತ್ ರೋಣ, 777 ಚಾರ್ಲಿ, ಸಪ್ತಸಾಗರದಾಚೆ ಎಲ್ಲೋ ಹೀಗೆ ಅನೇಕ ಬ್ಲಾಕ್ಬಸ್ಟರ್ ಸಿನ್ಮಾಗಳನ್ನ ಡಿಸ್ಟ್ರಿಬ್ಯೂಷನ್ ಮಾಡಿದಂತಹ ಈ ಸಂಸ್ಥೆ ಈಗ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ. ಸೌತ್-ನಾರ್ತ್ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಡೀ ಪ್ಯಾನ್ ವರ್ಲ್ಡ್ ಕಣ್ಣರಳಿಸಿ ನೋಡುವಂತಹ ಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಸದ್ಯ, ಕೆಡಿ ಹಾಗೂ ಮಾರ್ಟಿನ್ ಸಿನಿಮಾಗಳು ಕೆವಿಎನ್ ಪ್ರೊಡಕ್ಷನ್ ಅಡಿಯಲ್ಲಿ ಅದ್ದೂರಿಯಾಗಿ ತಯಾರಾಗುತ್ತಿವೆ. ಹೀಗಿರುವಾಗಲೇ ಈ ಸಂಸ್ಥೆಯ ಅಂಗಳದಿಂದ ದೊಡ್ಡದಾಗೇ ಸಿಗ್ನಲ್ ಸಿಕ್ಕಿದೆ. ಕಾಲಿವುಡ್ನ ಸೆನ್ಸೇಷನಲ್ ಫಿಲ್ಮ್ ಮೇಕರ್ ಲೋಕೇಶ್ ಕನಗರಾಜ್ (Lokesh Kanagaraj) ಜೊತೆ ಕೈ ಜೋಡಿಸಿರೋ ಧಮಾಕೇದಾರ್ ಸಮಾಚಾರ್ ಹೊರಬಿದ್ದಿದೆ.
ಯಸ್, ಇಂದು ತಮಿಳಿನ ಪ್ರಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಜನುಮದಿನ. 38ನೇ ವಸಂತಕ್ಕೆ ಕಾಲಿಟ್ಟಿರೋ ಮಾಸ್ಟರ್ ಡೈರೆಕ್ಟರ್, ಗೆಳೆಯರ ಬಳಗದ ಜೊತೆಗೆ ಅದ್ದೂರಿಯಾಗಿಯೇ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಇತ್ತ ಕೆವಿಎನ್ (KVN) ಸಂಸ್ಥೆ ಬರ್ತ್ಡೇ ಹೀರೋ ಲೋಕೇಶ್ ಕನಗರಾಜ್ಗೆ ಶುಭಾಷಯ ತಿಳಿಸಿದೆ. ತಮ್ಮ ಸೋಷಿಯಲ್ ಪುಟದಲ್ಲಿ ಪೋಟೋ ಶೇರ್ ಮಾಡಿ, ʻಪಾತ್ ಬ್ರೇಕಿಂಗ್ ಸ್ಟೋರಿ ಟೆಲ್ಲಿಂಗ್ʼ ಮೂಲಕ ಸಕಲರನ್ನೂ ಥ್ರಿಲ್ಲಾಗಿಸಿದ್ದೀರಿ ಅಂತ ಟ್ವೀಟ್ ಮಾಡಿದೆ. ಈ ಟ್ವೀಟ್ ನೋಡಿ ಸಿನಿಮಾ ಮಂದಿ ಹಾಗೂ ಕಲಾಭಿಮಾನಿಗಳು ಫುಲ್ ಎಕ್ಸೈಟ್ ಆಗಿದ್ದಾರೆ. ಕಾಲಿವುಡ್ನ ಸೆನ್ಸೇಷನ್ ಡೈರೆಕ್ಟರ್ ಜೊತೆ ಕೆವಿಎನ್ ಸಂಸ್ಥೆ ಕೈ ಜೋಡಿಸಿರೋದು ಪಕ್ಕಾ ಅಂತ ಷರಾ ಬರೆಯುತ್ತಿದ್ದಾರೆ.
ಸದ್ಯ, ಕೆವಿಎನ್ ಸಂಸ್ಥೆ ದೊಡ್ಡ ದೊಡ್ಡ ಸೂಪರ್ ಸ್ಟಾರ್ಗಳಿಗೆ ಸಿನಿಮಾ ಮಾಡ್ತಿದೆ. ನ್ಯಾಷನಲ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ (Toxic) ಚಿತ್ರಕ್ಕೆ ಬಂಡವಾಳ ಹೂಡಿದೆ. ಅದರ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಹಾಗೂ ಪ್ರೇಮ್ (Prem) ಕಾಂಬಿನೇಷನ್ ಸಿನಿಮಾಗೂ ಖಜಾನೆ ತೆರೆದಿಡಲು ಸಿದ್ದವಾಗಿದೆ. ಈ ನಡುವೆ ಲೋಕೇಶ್ ಕನಗರಾಜ್ ಜೊತೆ ಕೈ ಜೋಡಿಸೋ ಸೂಚನೆ ಕೊಟ್ಟಿದ್ದು, ಮಾಸ್ಟರ್ ಡೈರೆಕ್ಟರ್ ಕನ್ನಡಕ್ಕೆ ಬರ್ತಾರಾ ಅಥವಾ ಕೆವಿಎನ್ ಸಂಸ್ಥೆಯೇ ಕಾಲಿವುಡ್ ಸಿನಿಮಾ ನಿರ್ಮಾಣ ಮಾಡುತ್ತಾ? ಹೀಗೊಂದೆರಡು ಪ್ರಶ್ನೆಗಳು ಈಗಾಗಲೇ ಪ್ರೇಕ್ಷಕರ ಮನದಲ್ಲಿ ಹುಟ್ಟಿಕೊಂಡಿವೆ.
ಲಿಯೋ ಸಿನಿಮಾ ಒಂದು ಅಂದುಕೊಂಡ ಮಟ್ಟಿಗೆ ರೀಚ್ ಆಗಲಿಲ್ಲ ಅನ್ನೋದನ್ನ ಬಿಟ್ರೆ ಲೋಕೇಶ್ ಕನಗರಾಜ್ (Lokesh Kanagaraj) ನಿರ್ದೇಶನದ ಸಿನಿಮಾಗಳು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿವೆ. ಹೀಗಾಗಿಯೇ, ಇವತ್ತು ಸೌತ್ ಸಿನಿಮಾ ಇಂಡಸ್ಟ್ರಿಯಿಂದ ನಾರ್ತ್ ವರೆಗೆ ದೊಡ್ಡ ದೊಡ್ಡ ಸೂಪರ್ಸ್ಟಾರ್ಗಳು ಲೋಕೇಶ್ ಕನಗರಾಜ್ (Lokesh Kanagaraj) ಜೊತೆ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಮಾಸ್ಟರ್ ಡೈರೆಕ್ಟರ್ ಮೇಲೆ ಕೋಟಿ ಕೋಟಿ ಬಂಡವಾಳ ಹೂಡಲು ಮುಂದೆ ಬರುತ್ತಿವೆ.ಇದಕ್ಕೆ ಕೆವಿಎನ್ ಸಂಸ್ಥೆ ಕೂಡ ಹೊರತಾಗಿಲ್ಲ ಅಂದರೆ ತಪ್ಪಾಗಲ್ಲ.
ಕೆವಿಎನ್ ಸಂಸ್ಥೆಯಂತೆ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಕೂಡ ದೊಡ್ಡ ದೊಡ್ಡ ಸ್ಟಾರ್ಗಳ ಸಿನಿಮಾಗೆ ಬುಕ್ ಆಗಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ನಟನೆಯ 171ನೇ ಸಿನಿಮಾ ಡೈರೆಕ್ಟ್ ಮಾಡುವ ಚಾನ್ಸ್ ಲೋಕೇಶ್ಗೆ ಸಿಕ್ಕಿದೆ. ಕೈಥಿ, ಮಾಸ್ಟರ್, ವಿಕ್ರಮ್ ನಂತಹ ಬ್ಲಾಕ್ಬಸ್ಟರ್ ಹಿಟ್ ಚಿತ್ರ ಕೊಟ್ಟಿರುವ ಲೋಕೇಶ್ ಗೆ ಶಿವಾಜಿ ಕಾಲ್ಶೀಟ್ ದಕ್ಕಿದೆ. ಪಡೆಯಪ್ಪನಿಗೆ ಆ್ಯಕ್ಷನ್ ಕಟ್ ಹೇಳುವ ಮಹತ್ತರ ಕನಗರಾಜ್ ಕನಸು ನನಸಾಗಿದೆ. ಕಾರ್ತಿ, ದಳಪತಿ ವಿಜಯ್, ಕಮಲ್ ಹಾಸನ್, ಸೂರ್ಯ, ಫಹಾದ್ ಫಾಸಿಲ್ ರನ್ನು ನಯಾ ಅವತಾರದಲ್ಲಿ ತೋರಿಸಿ ಸಂಚಲನ ಮೂಡಿಸಿದ ಲೋಕೇಶ್ ಕನಗರಾಜ್, ಭಾಷಾನಾ ಅದೆಷ್ಟು ವಿಭಿನ್ನವಾಗಿ ತೋರಿಸಬಹುದು ಎನ್ನುವ ಲೆಕ್ಕಚ್ಚಾರ ಅಭಿಮಾನಿ ವಲಯದಲ್ಲಿ ಈಗಾಗಲೇ ಶುರುವಾಗಿದೆ. ಈ ಡೆಡ್ಲಿ ಕಾಂಬಿನೇಷನ್ ಚಿತ್ರಕ್ಕೆ ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ಸಂಸ್ಥೆ ಬಂಡವಾಳ ಹೂಡ್ತಿದೆ. ತಲೈವರ್ 171 ಜೊತೆಗೆ ಕೈಥಿ-2, ವಿಕ್ರಮ್ 2, ಮತ್ತು `ರೋಲೆಕ್ಸ್ ಸ್ಪಿನ್ ಆಫ್’ ಸೇರಿದಂತೆ ಡಾರ್ಲಿಂಗ್ ಪ್ರಭಾಸ್ಗೆ(Prabhas) ಡೈರೆಕ್ಟ್ ಮಾಡುವ ಚಾನ್ಸ್ ಕೂಡ ಲಿಯೋ ಸಾರಥಿಗೆ ಸಿಕ್ಕಿದೆ. ಈ ನಡುವೆ ಕೆವಿಎನ್ ಜೊತೆ ಕೈ ಜೋಡಿಸಿರೋ ಸುದ್ದಿ ಕೇಳಿಬಂದಿದೆ. ಈ ಸಿನಿಮಾಗೆ ಹೀರೋ ಯಾರಾಗ್ತಾರೆ? ಹೇಗರಲಿದೆ ಆ ಸಿನಿಮಾ? ಜಸ್ಟ್ ವೇಯ್ಟ್ ಅಂಡ್ ವಾಚ್ ಅಷ್ಟೇ.